Friday 29th, March 2024
canara news

ಭಾರತ್ ಬ್ಯಾಂಕ್‍ನ ಸಂಸ್ಥಾಪಣಾ ದಿನಾಚರಣೆ-ಶತಶಾಖೆಯ ಸಂಭ್ರಮ

Published On : 22 Aug 2016   |  Reported By : Rons Bantwal


ಭಾರತ ಕಂಡ ಬೃಹತ್ ಸಹಕಾರಿ ಬ್ಯಾಂಕು: ವಿನಯ ಕುಮಾರ್ ಸೊರಕೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.21: ಬಿಲ್ಲವರ ಮತ್ತು ಭಾರತ್ ಬ್ಯಾಂಕ್‍ನ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ದಿನ. ಸ್ವರ್ಣಕ್ಷರಗಳಲ್ಲಿ ಬರೆಯುವ ಸುದಿನ. ಸುಮಾರು 40 ವರ್ಷಗಳ ಅವಧಿಯಲ್ಲಿ ಎಲ್ಲವನ್ನೂ ಮೀರಿ 100 ಶಾಖೆಗಳ ಸೇವಾರ್ಪಣೆ ಸಹಕಾರಿರಂಗದ ಹಿರಿಮೆಯಾಗಿದೆ. ಸಾವಿರಾರು ಕೋಟಿ ವಹಿವಾಟು ನಡೆಸಿ, ಪ್ರತಿಷ್ಠೆಗೆ ಪಾತ್ರವಾದದ್ದು ನÀಮ್ಮೆಲ್ಲರ ಸ್ವಾಭಿಮಾನವಾಗಿದೆ. ತುಳುನಾಡು ರಾಷ್ಟ್ರಕ್ಕೆ ಹಲವು ಬ್ಯಾಂಕುಗಳನ್ನು ನೀಡಿದೆ. ಆದ್ದÀರಿಂದ ಆಥಿರ್sಕ ವಹಿವಾಟಿಗೆ ತುಳುನಾಡ ಕೊಡುಗೆ ಸ್ತುತ್ಯರ್ಹ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಸಹಕಾರ ರಂಗಕ್ಕೆ ಅದರಲ್ಲೂ ಗ್ರಾಮೀಣಾಭಿವೃದ್ಧಿ ಪ್ರದೇಶಗಳ ಜನತೆಗೆ ಬದುಕು ಕಟ್ಟಲು ಈ ಬ್ಯಾಂಕ್ ಪ್ರಾಮಾಣಿಕ ಸೇವೆ ಸಲ್ಲಿಸಿರುವುದು ಅಭಿನಂದನೀಯ. ಇದು ಭಾರತ ಕಂಡ ಬೃಹತ್ ಸಹಕಾರಿ ಬ್ಯಾಂಕು. ಒಂದು ಆಥಿರ್sಕ ಸಂಸ್ಥೆ ಸಂಸ್ಕೃತಿಕವಾಗಿ ಮತ್ತು ಸಾಮರಸ್ಯತ್ವದಿಂದ ಮೆರೆದಿರುವುದು ಪ್ರಶಂಸನೀಯ. ಬಹುಶ: ಭಾರತ್ ಬ್ಯಾಂಕ್‍ನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುತಿಸಲು ಬಿಲ್ಲವ ಧುರೀಣ ಜನಾರ್ದನ ಪೂಜಾರಿ ಅವರೇ ಕಾರಣ. ಅಂತೆಯೇ ಸಮಾಜ ನನಗೇನು ಕೊಡುತ್ತದೆ ಎನ್ನುವುದುಕ್ಕಿಂತ ನಾನೇನು ಸಮಾಜಕ್ಕೆ ಕೊಡಬಲ್ಲೆ ಎನ್ನುವ ಉದಾರತ್ವ ಮನೋಭಾವಿ ಜಯ ಸಿ.ಸುವರ್ಣರ ಸಾರಥ್ಯ ಬ್ಯಾಂಕ್ ಈ ಮಟ್ಟಕ್ಕೆ ಬೆಳೆಯಲು ಮೂಲ ಕಾರಣ. ಆದುದರಿಂದ ಸಾಧನೆ ಸಿದ್ಧಿಗೆ ಜಯ ಸುವರ್ಣರು ಪ್ರೇರಕರು. ಸಾಧ್ಯವೆನ್ನುವ ಅರ್ಥಕ್ಕೆ ಜಯ ಸುವರ್ಣ ಅನ್ವರ್ಥಕರು. ಆಥಿರ್sಕತೆಗೆ ಅರ್ಹತೆ ಹೊಂದಿದ ಬ್ಯಾಂಕು. ನಿಮ್ಮದು ಎನ್ನುವ ಕೊರತೆ ನೀಗಿಸಿ ನಮ್ಮದು ಎನ್ನುವ ಇಚ್ಛಾಶಕ್ತಿ ಬೆಳೆಸಿ ಮುನ್ನಡೆಯುತ್ತಿರುವ ಈ ಬ್ಯಾಂಕ್ ಮುಂದಿನ ವರ್ಷದೊಳಗೆ ಎಲ್ಲಾ ರಾಜ್ಯಗಳಲ್ಲಿ ಶಾಖೆಗಳನ್ನು ತೆರೆದು ದೇಶವ್ಯಾಪಿ ಪಸರಿಸಲಿ ಎಂದು ಕರ್ನಾಟಕದ ಮಾಜಿ ಸಚಿವ, ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು.

ದಾದರ್ ಪೂರ್ವದ ಸ್ವಾಮಿನಾರಾಯಣ ಮಂದಿರದ ಯೋಗಿ ಸಭಾಗೃಹದಲ್ಲಿ ಇಂದಿಲ್ಲಿ ಆದಿತ್ಯವಾರ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 38ನೇ ಸಂಸ್ಥಾಪಣಾ ದಿನಾಚರಣೆ ಮತ್ತು ಶತಶಾಖೆಯ ಸಂಭ್ರಮ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದು ಶಾಸಕ ಸೊರಕೆ ಮಾತನಾಡಿದರು.

ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನೀಡಿ ತನ್ನ ಘನಾಧ್ಯಕ್ಷತೆಯಲ್ಲಿ ಭವ್ಯ ಸಮಾರಂಭ ನಡೆಸಿದ್ದು, ಮುಖ್ಯ ಅತಿಥಿüಯಾಗಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲಿಯಾನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ವೇದಿಕೆಯಲ್ಲಿ ಆಸೀನರಾಗಿದ್ದರು.

ಗೋಪಾಲ ಶೆಟ್ಟಿ ಮಾತನಾಡಿ ಬಿಸಿಬಿ ತನ್ನ ನೂರರ ಶಾಖೆಯನ್ನು ನನ್ನ ಹಸ್ತದಿಂದಲೇ ಸೇವಾರ್ಪಣೆಗೊಳಿಸಿದ್ದು ನನ್ನ ಸೌಭಾಗ್ಯ. ಆರು ಲಕ್ಷದಿಂದ ಹದಿನೈದು ಕೋಟಿ ಪ್ರಗತಿ ಸಾಧಿಸಿರುವುದೇ ಬಿಸಿಬಿ ಸಾರ್ಥಕತೆ. ರಾಷ್ಟ್ರೀಕೃತ ಬ್ಯಾಂಕ್‍ಗಳು ಸರಕಾರದ ಎಲ್ಲಾ ಸೌಲತ್ತುಗಳನ್ನು ಪಡೆದು ಕಾಯಕ ನಿರ್ವಾಹಿಸುತ್ತಿದ್ದರೂ ಆ ಬ್ಯಾಂಕುಗಳು ಭರಿಸಲಾಗದ ನಷ್ಟವನ್ನು ಅನುಭವಿಸುತ್ತಿವೆ. ಆದರೆ ಸಾರ್ವಜನಿಕ ರಂಗದಲ್ಲಿ ತೊಡಗಿಸಿ ಕೊಂಡಿರುವ ಸಹಕಾರಿ ಬ್ಯಾಂಕುಗಳು ಸರಕಾರಿ ಸವಲತ್ತುಗಳಿಂದ ವಂಚಿತವಾಗಿಯೂ ಕೋಟ್ಯಾಂತರ ಲಾಭಗಳಿಸುತ್ತಿರುವುದು ಸ್ತುತ್ಯರ್ಹ. ಕಾರಣ ಇಲ್ಲಿ ನಿಸ್ವಾರ್ಥ, ಪ್ರಾಮಾಣಿಕತೆ, ನಿಷ್ಠೆ ಕೆಲಸ ಮಾಡುತ್ತದೆ. ಪ್ರಥಮ ಗ್ರಾಹಕ, ಪ್ರಥಮ ನೌಕರ, ಆರಂಭದಿಂದ ಇಂದಿನ ತನಕದ ನಿರ್ದೇಶಕರ ಸಮ್ಮಾನ ಇವೆಲ್ಲವೂ ಬ್ಯಾಂಕ್‍ನ ದೊಡ್ಡತನ. ಇದರಿಂದಲೇ ಬ್ಯಾಂಕ್ ಪ್ರಥಮವಾಗಿ ಮುನ್ನಡೆಯುತ್ತಿದೆ. ಬಿಲ್ಲವರ ಭಿಷ್ಮ ಪಿತಾಮಹಾ ಅನಿಸಿಕೊಂಡ ಜಯ ಸುವರ್ಣರು ಓರ್ವ ಹೊಟೇಲ್ ಉದ್ಯಮಿ, ಸಮಾಜ ಸೇವಕ, ಬ್ಯಾಂಕ್ ಕಾರ್ಯಾಧ್ಯಕ್ಷರಾಗಿ ಜಗತ್ತಿನ ಇಡೀ ಬಿಲ್ಲವ ಸಮಾಜಕ್ಕೆ ಗೌರವ ತಂದೋಗಿಸಿದ್ದಾರೆ. ಅವರು ನಿಮ್ಮನ್ನೊಳಗೊಂಡು ಬರೇ ಸಮಾಜದ ಸೇವೆ ಮಾಡಿಲ್ಲ ಬದಲಾಗಿ ರಾಷ್ಟ್ರ ಸೇವೆಗೈದು ಸಮಾಜದ ಋಣ ಸಂದಾಯ ಮಾಡಿದ್ದಾರೆ. ಅವರ ಸೇವಾವೈಖರಿ ರಾಷ್ಟ್ರಕ್ಕೇ ಮಾದರಿ ಎಂದರು.

ರೋಹಿಣಿ ಸಾಲಿಯಾನ್ ಮಾತನಾಡಿ ಈ ಬ್ಯಾಂಕ್‍ನಲ್ಲಿ ಸುಮಾರು ಎರಡು ದಶಕಗಳ ಸಂಬಂಧ. ಬ್ಯಾಂಕ್‍ನ ಬೆಳವಣಿಗೆ ಅದರ ಅವಿರತ ಶ್ರಮ ಮತ್ತು ಪ್ರಾಮಾಣಿಕ ಸೇವೆಯಾಗಿದೆ. ನಿಷ್ಠಾವಂತಿಕೆ, ಹಸನ್ಮುಖದ ದುಡಿಮೆ ಮತ್ತು ತನ್ನತನ ಈ ಮಟ್ಟಕ್ಕೇರಲು ಕಾರಣ. ಗ್ರಾಹಕರು ಬ್ಯಾಂಕ್‍ನ ಸೇವೆಯನ್ನು ಕೊಂಡಾಡಿದರೆ ಅದೇ ಬ್ಯಾಂಕ್‍ನ ಮುನ್ನಡೆಯಾಗಿದೆ. ಗ್ರಾಹಕರ ನೆಮ್ಮದಿಕ್ಕಿಂತ ಸಂಭ್ರಮ ಬೇರೊಂದಿಲ್ಲ. ಇದೊಂದ್ದಿದ್ದರೆ ಎಲ್ಲವೂ ಸುಗಮವಾಗಿ ಸಾಗುವುದು. ಮುಂದೆಯೂ ಸಿಬ್ಬಂದಿ ವರ್ಗವು ತಮ್ಮ ಪಾರದರ್ಶಕತ್ವದ ನಿಷ್ಠಾವಂತಿಕೆ ಮತ್ತು ನಂಬಿಕೆಗೆ ಪಾತ್ರವಾಗಿ ಬ್ಯಾಂಕನ್ನು ಮುನ್ನಡೆಸಬೇಕು ಎಂದು ಸಲಹಿದರು.

ಜಯ ಸಿ.ಸುವರ್ಣರು ಅಧ್ಯಕ್ಷೀಯ ನುಡಿಗಳನ್ನಾಡಿ ಕೇಂದ್ರ ವಿತ್ತ ಹಾಗೂ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಪ್ರೇರಣೆ ಮತ್ತು ದಕ್ಷ ಮಾರ್ಗದರ್ಶನ ಬ್ಯಾಂಕ್‍ನ ಶತ ಶಾಖೆಯ ಸೇವಾರ್ಪಣೆಗೆ ಪೂರಕವಾಗಿದೆ. ಜನರ ಹಣಕಾಸು ವ್ಯವಸ್ಥಿತವಾಗಿ ನಿಭಾಹಿಸುವುದೇ ನಮ್ಮ ಉದ್ದೇಶವಾಗಿದೆ. ನಾರಾಯಣ ಗುರುಗಳ ತತ್ವಾನುಸಾರವೇ ಸಮಾಜವನ್ನು ಕಟ್ಟುತ್ತಾ ಸರ್ವರ ಸಮಬಾಳಿಗೆ ಈ ಬ್ಯಾಂಕ್ ಬದ್ದವಾಗಿ ಶ್ರಮಿಸಲಿದೆ ಎಂದರು.

ಬ್ಯಾಂಕ್‍ನ ಸ್ಥಾಪನಾರಂಭದಲ್ಲಿ ನಮ್ಮಾ ಜೀವನಮಟ್ಟ ಎಷ್ಟು ಕಷ್ಟವಾಗಿತ್ತು ಎಂದು ಕಂಡಾಗ ನಮ್ಮ ಪೂರ್ವಜರ ಬದುಕು ಮನವರಿಸಬೇಕು. ಅವರ ಸಹೋದರಕತ್ವದ ಮತ್ತು ದೂರದೃಷ್ಠಿತ್ವದ ಬದುಕು ಇಂತಹ ಪಥಸಂಸ್ಥೆಯ ಉದಯಕ್ಕೆ ಪ್ರೇರಣೆ. ಒಗ್ಗಟ್ಟಿಗದಿದ್ದರೆ ಎಲ್ಲವನ್ನೂ ಸಾಧಿಸಲಾಗದು ಎನ್ನುವುದಕ್ಕೆ ಈ ಸಂಭ್ರಮ ಸಾಕ್ಷಿಯಾಗಿದೆ. ತ್ಯಾಗ ಪರಿಶ್ರಮ, ನಿಷ್ಠೆ ಇತ್ಯಾದಿಗಳು ಈ ಸಂಭ್ರಮದ ಹಿಂದೆ ಅಡಗಿವೆ. ಯುವಾವಸ್ಥೆಯಲ್ಲೇ ಅಸೋಸಿಯೇಶನ್‍ನ 25ನೇ ಅಧ್ಯಕ್ಷನಾಗಿದ್ದು, ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕನಾಗಿ ಈ ಗೌರವಕ್ಕೆ ಪಾತ್ರನಾಗಲು ಅಸೋಸಿಯೇಶನ್‍ನ ಹಿರಿಕಿರಿಯರ ಪ್ರೇರಣಯೇ ಕಾರಣ. ಇಲ್ಲಿಗಾಗಮಿಸಿದವರೂ ವೇದಿಕೆ, ಪುಷ್ಪಗುಚ್ಛದ ಆಸೆಯನ್ನಿರಿಸದೆ ಸಹೋದರತ್ವ, ಬಂಧುತ್ವವನ್ನು ಮೈಗೂಡಿಕೊಂಡವರೇ ಇದ್ದಿರಿ. ನಿಮ್ಮೆಲ್ಲರ ಪೆÇ್ರೀತ್ಸಹಕ್ಕೆ ಅಭಾರಿಯಾಗಿರುವೆ ಎಂದು ನಿತ್ಯಾನಂದ ಕೋಟ್ಯಾನ್ ನುಡಿದರು.

ಬ್ಯಾಂಕ್‍ನ ಆಡಳಿತ ನಿರ್ದೇಶಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಪ್ರಸ್ತಾವಿಕ ನುಡಿಗಳನ್ನಾಡಿ ನೂರರ ಶಾಖೆ ದೀರ್ಘಾವಧಿಯ ಬ್ಯಾಂಕ್‍ನ ಸೇವಾ ಪಯಣಕ್ಕೆ ಮೈಲಿಗಲ್ಲಾಗಿದೆ. ಗ್ರಾಹಕರ ಸ್ನೇಹಮಯಿ ಮತ್ತು ಭರವಸೆಯ ಸಂಬಧ, ಏಕತಾಮಂತ್ರ ಬಿಸಿಬಿ ವೈಶಿಷ್ಟ್ಯವಾಗಿದ್ದು ಮುಂದೆಯೂ ಗ್ರಾಹಕರಿಗೆ ಸೇವಾಬದ್ಧವಾಗಿ ಶ್ರಮಿಸಲಿದೆ ಎಂದರು.

ಸಮಾರಂಭದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ರುಗಳಾದ ಆರ್.ವಿ ಅವಿೂನ್, ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ, ಬ್ಯಾಂಕ್‍ನ ಸಂಸ್ಥಾಪಕರನ್ನು ಸ್ಮರಿಸಿ, ಮಾಜಿ ಅಧ್ಯಕ್ಷರುಗಳಾದ ವರದ ಉಳ್ಳಾಲ್ (ಸ್ಥಾಪಕಾಧ್ಯಕ್ಷ), ವಿ.ಆರ್ ಕೋಟ್ಯಾನ್, ಡಿ.ಬಿ ಅವಿೂನ್, ಡಿ.ಕೆ ಅಂಚನ್, ಸೂರು ಸಿ.ಕರ್ಕೇರ, ಡಿ.ಯು ಸಾಲ್ಯಾನ್ ಹಾಗೂ ಮೊತ್ತಮೊದಲ ಚಾಲ್ತಿಖಾತೆ ಗ್ರಾಹಕ ಉದಯ್‍ಭಾೈ ಚಿನೊಯ್ (ಪರವಾಗಿ ಪುತ್ರ ಬಿ.ವಿ ಚಿನೊಯ್ ಸ್ವೀಕರಿಸಿದರು), ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆಸಲ್ಲಿಸಿ ಉಪಸ್ಥಿತ ಬಿ.ಆರ್ ಸುವರ್ಣ, ಬಿ.ಕೆ ಅವಿೂನ್, ಮಾಜಿ ನಿರ್ದೇಶಕರುಗಳಾದ ಚಂದಯ್ಯ ಪಿ. ಕರ್ನಿರೆ, ದಿನೇಶ್ ಸಿ.ಸಾಲ್ಯಾನ್, ನ್ಯಾ| ಶಶಿಧರ್ ಕಾಪು, ಆರ್.ಕೆ ಪಾಲನ್, ನ್ಯಾ| ರಾಜಾ ವಿ.ಸಾಲ್ಯಾನ್, ದಿನೇಶ್ ಸಿ.ಸಾಲ್ಯಾನ್, ಎಸ್.ಕೆ ಸಾಲ್ಯಾನ್, ಶಂಕರ್ ಡಿ.ಪೂಜಾರಿ, ಕೇಶವ ಎಸ್.ಪೂಜಾರಿ, ಜೆ.ವಿ ಕೋಟ್ಯಾನ್, ರತನ್ ಯು.ಸನೀಲ್, ಎಲ್.ವಿ. ಅವಿೂನ್, ಎಂ.ಬಿ ಸನೀಲ್, ಮೋಹನ್ ಜಿ.ಪೂಜಾರಿ, ಎನ್.ಎಂ ಸನೀಲ್, ಸುರೇಶ್ ಆರ್.ಅಂಚನ್ ಹಾಗೂ ಬ್ಯಾಂಕ್‍ನ ಪ್ರಪ್ರಥಮ ಕರ್ಮಚಾರಿ ಸದಾನಂದ ಕೆ.ಪೂಜಾರಿ ಅವರನ್ನು ಅತಿಥಿüಗಳು ಸನ್ಮಾನಿಸಿ ಗೌರವಿಸಿದರು. ಸ್ವರ್ಗಸ್ಥ ಮತ್ತು ಸದ್ಯ ಅಸ್ವಸ್ಥರಾಗಿದ್ದು ಆಗಮಿಸಲಾಗದ ಸರ್ವ ನಿರ್ದೇಶಕರ ಸೇವೆ ಪ್ರಸ್ತಾಪಿಸಿ ಅಭಿವಂದಿಸಲಾಯಿತು.

ಸಮಾರಂಭದ ಆದಿಯಲ್ಲಿ ನಿನ್ನೆ ಸಾರಂಗ್‍ಪುರದಲ್ಲಿ ದೈವಕ್ಯರಾದ ಶ್ರೀ ಶ್ರೀ ಪ್ರಮುಖ ಸ್ವಾಮೀಜಿ ಮಹಾರಾಜ್, ಷೇರುದಾರರು, ಗ್ರಾಹಕರು, ಹಿತೈಷಿಗಳ ಆತ್ಮಕ್ಕೆ ಮೌನ ಪ್ರಾರ್ಥನೆಗೈದು ಸದ್ಗತಿ ಕೋರಲಾಯಿತು. ಸಿ.ಆರ್ ಮೂಲ್ಕಿ ಸ್ವಾಗತಿಸಿ ಮೊಬಾಯ್ಲ್ ಮುಖೇನ ಬ್ಯಾಂಕ್‍ನ ಶ್ಲೋಗನ್ `ಸಿಗ್ನೇಚರ್ ಟ್ಯೂನ್'ಗೆ ಚಾಲನೆಯನ್ನೀಡಿದರು. ಬಳಿಕ ಬ್ಯಾಂಕ್‍ನ ಗ್ರಾಹಕ ಸಾಕ್ಷಾ ್ಯಧಾರಿತ ಡಾಕ್ಯುಮೆಂಟ್ರಿ ಪ್ರಸ್ತುತ ಪಡಿಸಲ್ಪಟ್ಟಿತು.

ಬ್ಯಾಂಕ್‍ನ ಪ್ರಸಕ್ತ ಆಡಳಿತ ಮಂಡಳಿ ಜಯ ಸಿ.ಸುವರ್ಣ (ಕಾರ್ಯಾಧ್ಯಕ್ಷ), ನ್ಯಾ| ರೋಹಿಣಿ ಜೆ.ಸಾಲಿಯಾನ್ (ಉಪ ಕಾರ್ಯಾಧ್ಯಕ್ಷೆ) ನಿರ್ದೇಶಕರುಗಳಾದ ಎಂ.ಬಿ ಕುಕ್ಯಾನ್, ವಾಸುದೇವ ಆರ್.ಕೋಟ್ಯಾನ್, ಶ್ರೀಮತಿ ಪುಷ್ಫಲತಾ ಎನ್.ಸಾಲ್ಯಾನ್, ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ. ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ.ಕೋಟ್ಯಾನ್, ಅನ್ಬಲಗನ್ ಸಿ.ಹರಿಜನ, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್ ಅವರನ್ನು ಪರಿಚಯಿಸಲಾಯಿತು.

ತುಳುನಾಡಿನ ದೈವದೇವರುಗಳ ನೆನಹು, ಪಾವಿತ್ರ ್ಯತೆಯ ಭವ್ಯ ಸಂಸ್ಕೃತಿ ಅನಾವರಣದೊಂದಿಗೆ, ಕಲಶ-ದೀಪಗಳ ಪ್ರಕಾಶಮಾನದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಆರಾಧನೆ ನಡೆಸುತ್ತಾ, ವರ್ಣರಂಜಿತ ರಂಗೋಳಿಯ ಮೇಲೈಕೆ ಹಾಗೂ ಚೆಂಡೆ ವಾದ್ಯ, ತಾಳಗಳ ಅಬ್ಬರದಿಂದ ಅತಿಥಿüವರ್ಯರ ಆಹ್ವಾನದೊಂದಿಗೆ ಸಮಾರಂಭ ವಿಧ್ಯುಕ್ತವಾಗಿ ಆದಿಗೊಂಡಿತು. ಕು| ವಿಧಿತಾ ಪೂಜಾರಿ ಪ್ರಾರ್ಥನೆಗೈದರು. ಕು| ಕೃತಿಕಾ ಡಿ.ಕೋಟ್ಯಾನ್, ನೈನಾ ಎಂ.ಸಾಲ್ಯಾನ್ ಹಾಗೂ ಗೀತಾ ಡಿ.ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಕರ್ಕೇರ ಧನ್ಯವದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ಐಶ್ವರ್ಯ ಮೋಹನ್‍ದಾಸ್ ಹೆಜ್ಮಾಡಿ ಶಿವಸ್ತಕಂ ನೃತ್ಯ, ಬ್ಯಾಂಕ್‍ನ ವೆಲ್ಫೇರ್ ಕ್ಲಬ್‍ನ ಸದಸ್ಯರು ಮರಾಠಿ ವಿಚಾರಿತ `ಗೋಂಧಳ್' ನೃತ್ಯ, `ವಂದೇ ಮಾತರಂ' ಐಹಿಕತಾ ಯಕ್ಷಗಾನ ನೃತ್ಯ, `ಗರ್ಬ' ಗುಜರಾತಿ ನೃತ್ಯ, `ಕೈಕೊಟ್ಟಿಕಲಿ' ಕೇರಳ ನೃತ್ಯ, `ಮಾ ತುಜೇ ಸಲಾಂ' ರಾಷ್ಟ್ರೀಯ ಏಕತಾ ನೃತ್ಯ ಪ್ರದರ್ಶಿಸಿದರು. ಕೊನೆಯಲ್ಲಿ ಜಿಂಗಲ್ ಟ್ಯೂನ್ ಪ್ರಹಸನ ಸಾದರ ಪಡಿಸಿದರು. ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ ಹಾಗೂ ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್, ಸೇವಾದಳದ ಸಹಯೋಗದೊ ಂದಿಗೆ ಅದ್ದೂರಿಯಾಗಿ ಜರುಗಿದ ಸಂಭ್ರಮವು ರಾಷ್ಟ್ರಗೀತೆಯೊಂದಿಗೆ ಸಮಾಪನ ಗೊಂಡಿತು.

ಲೀಲಾವತಿ ಜಯ ಸುವರ್ಣ, ಉದ್ಯಮಿಗಳಾದ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ಗಂಗಾಧರ್ ಕೆ.ಅವಿೂನ್ ನಾಸಿಕ್, ಹರೀಶ್ ಮೂಲ್ಕಿ (ಬೆಂಗಳೂರು), ಸುರೇಶ್ ಎಸ್.ಪೂಜಾರಿ, ಸುಧಾ ಎಲ್.ವಿ ಅವಿೂನ್, ಶಶಿ ನಿತ್ಯಾನಂದ ಕೋಟ್ಯಾನ್, ರಘು ಎಲ್.ಶೆಟ್ಟಿ (ಪ್ಯಾಪಿಲಾನ್), ಚಂದ್ರಶೇಖರ ಆರ್.ಬೆಳ್ಚಡ, ಕೃಪಾ ಭೋಜರಾಜ್, ರಾಜಶೇಖರ್ ಆರ್.ಕೋಟ್ಯಾನ್, ರಘುರಾಮ ಕೆ.ಶೆಟ್ಟಿ ಬೆಳಗಾಂ, ಗ್ರೇಗೋರಿ ಡಿ'ಅಲ್ಮೇಡಾ, ಎಂ.ಡಿ ಶೆಟ್ಟಿ, ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ಆದರ್ಶ್ ಶೆಟ್ಟಿ ಮತ್ತು ಚಂದ್ರಹಾಸ ಕೆ.ಶೆಟ್ಟಿ (ಆಹಾರ್), ಹರೀಶ್ ಜಿ.ಅವಿೂನ್, ಸುರೇಂದ್ರ ಎಸ್.ಪೂಜಾರಿ, ಮೋಹನ್ ಆರ್.ಕೋಟ್ಯಾನ್, ಲೋಹಿತ್ ಎಂ.ಕೋಟ್ಯಾನ್, ವಿ.ಕೆ ಶೆಟ್ಟಿ (ಟೆಂಡರ್‍ಫ್ರೆಶ್), ಗಣೇಶ್ ಬಂಗೇರ ಮಂಗಳೂರು, ಪುರುಷೋತ್ತಮ ಎಸ್.ಕೋಟ್ಯಾನ್, ಎನ್.ಪಿ ಸುವರ್ಣ, ನೂತನ ಶ್ಯಾಮ ಸುವರ್ಣ ಪುಣೆ, ಸಿಎ| ಅಶ್ವಜಿತ್ ಸುವರ್ಣ, ನಿಲೇಶ್ ಪೂಜಾರಿ ಪಲಿಮಾರು, ಮಾಜಿ ನಿರ್ದೇಶಕÀ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದು ಶುಭಾರೈಸಿದರು.

* ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‍ನಾದ್ಯಂತದ ನೂರು ಶಾಖೆಗಳ ಎಲ್ಲಾ ಪ್ರಬಂಧಕರು ಏಕಸಮಾನವಾದ ಟೈ-ಕೋಟ್ ಧರಿಸಿ ಬ್ಯಾಂಕ್‍ನ ಸಮವಸ್ತ್ರ ಶಿಸ್ತಿನ ಶಿಪಾಯಿಗಳಂತೆ ಮಿಂಚುತ್ತಿದ್ದರು.
* ಜನ್ಮಭೂಮಿ ತುಳುನಾಡನ್ನು ಮರೆಯದೆ, ಕರ್ಮಭೂಮಿ ಮಹಾರಾಷ್ಟ್ರಕ್ಕೆ ಮೆರಗುನೀಡಿ, ವಿಸ್ತೃತ ವ್ಯವಹಾರ ಭೂಮಿ ಗುಜರಾತ್‍ನ್ನು ನೆನಪಿಸಿ ಅಖಂಡ ಭಾರತವನ್ನು ಸುತ್ತಾಡಿಸಿದ ಸಾಂಸ್ಕೃತಿಕ
ಕಾರ್ಯಕ್ರಮ ನೆರೆದವರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸಿತು.
* ಕಿಕ್ಕಿರಿದ ಸಭಿಕರಿಂದ ಸಭಾಗೃಹದ ಮೂರು ಅಂತಸ್ತುಗಳೂ ತುಂಬಿ ತುಳುಕುತ್ತಾ ಬ್ಯಾಂಕ್‍ನ ಅನನ್ಯ ಸೇವೆಗೆ ಸಭೆಯೇ ಸಾಕ್ಷಿಯಾಯಿತು.
* ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್ (ನಿವೃತ್ತ), ಮಹಾ ಪ್ರಂಬಧಕಿ ಶೋಭಾ ದಯಾನಂದ್ (ನಿವೃತ್ತ), ಡಿಜಿಎಂ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ, ಅಭಿವೃದ್ಧಿ ಇಲಾಖಾಧಿಕಾರಿ ಸುನೀಲ್ ಗುಜರನ್, ಅವೀಶ್ ಪೂಜಾರಿ ಮತ್ತಿತರರ ಮಾರ್ಗದರ್ಶನದಲ್ಲಿ ಸಮಾರಂಭವು ಸಾಂಗವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಯಿತು




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here