Thursday 28th, March 2024
canara news

ಎಲ್ಲ ಧರ್ಮದ ಪುಣ್ಯಸ್ಥಳಗಳ ಅಭಿವೃದ್ಧಿಗೆ ಕೈಲಾಸ ಯತ್ನ : ಬಾವಾ

Published On : 23 Aug 2016   |  Reported By : Rons Bantwal


ಗುರುಪುರ ಬಿಲ್ಲವ ಸಮಾಜದ ಸಭಾಗೃಹಕ್ಕೆ ಶಿಲಾನ್ಯಾಸ

ಗುರುಪುರ(ಮಂಗಳೂರು) : ಗುರುಪುರ ಅಹಲ್ಯಾವನದಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಆಗಸ್ಟ್ 21ರಂದು ನೂತನ ಸಭಾಗೃಹಕ್ಕೆ ಶಿಲಾನ್ಯಾಸ ನಡೆಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಬಿ ಎ ಮೊೈದಿನ್ ಬಾವಾ ಮಾತನಾಡುತ್ತ, ಎಲ್ಲ ಧರ್ಮದ ಪುಣ್ಯ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಸಿಗುವ ಅನುದಾನ ಕೈಸೇರುವಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಈ ಸಂಘದ ನೂತನ ಸಭಾಗೃಹಕ್ಕೆ ಸರ್ಕಾರದಿಂದ 35 ಲಕ್ಷ ರೂ ಲಭಿಸುವಂತೆ ಮಾಡಿದ್ದೇನೆ. ಈ ಹಣ ಸದ್ಯವೇ ಸಿಗಲಿದೆ. ಈ ಸರ್ಕಾರ ಎಲ್ಲ ವರ್ಗದವರ ಏಳ್ಗೆ ಬಯಸಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೃಷ್ಣ ಪಾಲೆಮಾರ್ ಸಂಘದ ನೂತನ ಸಭಾಗೃಹ ನಿರ್ಮಾಣ ಕ್ಕಾರ್ಯಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾಜಿ ಸಚಿವ ಕೃಷ್ಣ ಪಾಲೆಮಾರ್, ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ತಾ ಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾ ಪಂ ಉಪಾಧ್ಯಕ್ಷ ಉದಯ ಭಟ್, ಕೃಷ್ಣ ಪೂಜಾರಿ, ಗಂಗಾಧರ ಅಮೀನ್, ನಾರಾಯಣ ಪೂಜಾರಿ, ಪುರುಷೋತ್ತಮ ವಾಮಂಜೂರು, ಸುನಿಲ್ ಕುಮಾರ್, ಗುರುವಪ್ಪ ಪೂಜಾರಿ, ಸಂಘದ ಅಧ್ಯಕ್ಷ ಸುಧಾಕರ ಅಮೀನ್ ಮೊದಲಾದವರಿದ್ದರು. ಬಳಿಕ ಗುರುಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

ನಂತರ ನಡೆದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ 29 ಮಂದಿ ಬಿಲ್ಲವ ಮಕ್ಕಳಿಗೆ ವಿದ್ಯಾರ್ಥಿ ವೇತಯನ ಹಂಚಲಾಯಿತು. ``ಅಜ್ಞಾನವೆಂಬ ಅಂಧಕಾರದಿಂದ ಜ್ಞಾನದತ್ತ ಕೊಂಡೊಯ್ಯುವವರೇ ಗುರು. ಅಂತಹ ಮಹಾನ್ ಶಕ್ತಿ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುವಿನ ತತ್ವಾದರ್ಶದಲ್ಲಿ ಅಡಕವಾಗಿದೆ. ಅಸ್ಪøಶ್ಯತೆ ಹೋಗಲಾಡಿಸುವಲ್ಲಿ ಅವರು ಮಾಡಿರುವ ಕೆಲಸ ಅವಿಸ್ಮರಣೀಯ'' ಎಂದು ಈ ಸಂದರ್ಭದಲ್ಲಿ ಮಾತನಾಡಿದ ಗಂಗಾಧರ ಮಾಸ್ತರ್ ಅಭಿಪ್ರಾಯಪಟ್ಟರು.

ಸಮಾಜಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದಲೇ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ಮುಂದೆ ಈ ಮಕ್ಕಳು ಸಮಾಜದ ಉನ್ನತಿಗೆ ಕೆಲಸ ಮಾಡುವಂತರಾಗಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ದೇವದಾಸ ಅಂಚನ್ ಮನದಟ್ಟು ಮಾಡಿದರು.

ಕೆಲವರಿಗೆ ವಿದ್ವತ್ತಿದ್ದರೂ, ಸಾಕಷ್ಟು ಅಂಕವಿದ್ದರೂ ಬಡತನದಿಂದ ಶಿಕ್ಷಣ ಕಷ್ಟವಾಗುತ್ತದೆ. ಅಂತಹವರ ಶಿಕ್ಷಣಕ್ಕೆ ಈ ಕಿಂಚಿತ್ ಮೊತ್ತ ವರದಾನವಾಗಲಿದೆ ಎಂದ ಉಪನ್ಯಾಸಕ ಕೇಶವ ಪೂಜಾರಿ, ಬಿಲ್ಲವರಲ್ಲಿ ಮದ್ಯಪಾನಿಗಳು ಅಥವಾ ದುಶ್ಚಟಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ನಮ್ಮ ಸಮಾಜ ಈ ಪಿಡುಗಿಂದ ದೂರವಾಗಬೇಕೆಂದರು. ಅಖಿಲ ಭಾರತ ಏಕೀಕರಣ ಸಮಿತಿಯ ಸ್ಥಳೀಯ ಮುಖಂಡ ದೀಪಕ್ ಕೋಟ್ಯಾನ್ ಸಂದರ್ಭೋಚಿತ ಮಾತನಾಡಿದರು. ಈ ಸಂದರ್ಭದಲ್ಲಿ ವಿನೋದಾ ಡಿ ಅಂಚನ್, ಶೇಖರ ಪೂಜಾರಿ ಬೆಳ್ಳಿಬೆಟ್ಟು, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ ಪೂಜಾರಿ ಧನ್ಯವಾದಗೈದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here