Thursday 28th, March 2024
canara news

ಸೌರಭ್ ಭಂಡಾರಿ ಮಾಲಕತ್ವದ ಫೆದರ್'ಸ್ ಹೈಜೀನ್ ಉದ್ಘಾಟನೆ

Published On : 24 Aug 2016   |  Reported By : Rons Bantwal


ಮುಂಬಯಿ, ಆ.24: ಭಂಡಾರಿ ಸಮಾಜದ ಯುವ ನಾಯಕ, ಸರಳ ವ್ಯಕ್ತಿತ್ವದ ಉದಯೋನ್ಮುಖ ಯುವ ಉದ್ಯಮಿ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಮಾಲಕತ್ವದ ಫೆದರ್'ಸ್ ಹೈಜೀನ್ ಇಂದಿಲ್ಲಿ ಉದ್ಘಾಟಿಸಲ್ಪಟ್ಟಿತು. ಥಾಣೆ ಜಿಲ್ಲೆಯ ಭಿವಂಡಿ ನಗರದ ಮಾಣ್ಕೊಲಿ ಅಲ್ಲಿನ ದಾಪೆÇೀಡೆ ಅಂಜೂರ್‍ಪಾಟ ರಸ್ತೆಯಲ್ಲಿನ ಹರಿಹರ ಕಾಂಪ್ಲೆಕ್ಸ್‍ನಲ್ಲಿ ನೂತನವಾಗಿ ರಚಿಸಲ್ಪಟ್ಟ ಆಹಾರ ಸಂಸ್ಕರಣಾ ಹಾಗೂ ಸ್ವಚ್ಛತಾ ನಿರ್ವಹಣಾ ಫೆದರ್'ಸ್ ಹೈಜೀನ್ ಸಂಸ್ಥೆಯನ್ನು ಭಿವಂಡಿ ನಿಜ್ಹಾಮಪುರ ಸಿಟಿ ಮುನ್ಸಿಪಾಲ್ ಕಾಪೆರ್Çೀರೇಶನ್‍ನ ಮಾಜಿ ನಗರಸೇವಕ, ಬಿಜೆಪಿ ನೇತಾರ ಸಂತೋಷ್ ಮಂಜಯ್ಯ ಶೆಟ್ಟಿ ಯಂತ್ರದ ಬಟನ್ ಒತ್ತಿ ಭಿವಂಡಿ ಉದ್ಘಾಟಿಸಿದರು.

ಅತಿಥಿüಗಳಾಗಿ ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಉಡುಪಿ ನಗರಸಭಾ ಸದಸ್ಯ ಹಾಗೂ ಲೀಡ್ಸ್ ಬ್ಯೂಟಿ ಪಾರ್ಲರ್ ಉಡುಪಿ ಇದರ ಮಾಲೀಕ ಎನ್.ನವೀನ್ ಭಂಡಾರಿ, ಯುವ ನೇತಾರರುಗಳಾದ ಸುಮಿತ್ ಕಪಿಲ್ ಪಾಟೀಲ್ ಮತ್ತು ಸ್ವಪ್ನಿಲ್ ಪಾಟೀಲ್, ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ ಡಾ| ಶಿವರಾಮ ಕೆ.ಭಂಡಾರಿ, ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಶೋಭಾ ಎಸ್.ಭಂಡಾರಿ, ಶ್ರೀಮತಿ ಗುಲಾಬಿ ಕೆ.ಭಂಡಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭೇಚ್ಛ ಸಲ್ಲಿಸಿದರು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಶೋಭಾ ಎಸ್.ಭಂಡಾರಿ ದಂಪತಿ ಸುಪುತ್ರನಾಗಿರುವ ಸೌರಭ್ ಭಂಡಾರಿ ಇತ್ತೀಚೆಗಷ್ಟೇ ಕರಾಟೆ `ಬ್ಲ್ಯಾಕ್ ಬೆಲ್ಟ್' ಚ್ಯಾಂಪಿಯನ್‍ನೊಂದಿಗೆ ಸ್ವರ್ಣ ಪದಕಕ್ಕೆ ಪಾತ್ರರಾಗಿದ್ದು ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರಮಿಸುತ್ತಿದ್ದಾರೆ.

ಲಕ್ಷ್ಮೀನಾರಾಯಣ ಭಟ್ ಅವರು ಸುದರ್ಶನ ಹೋಮ, ವಾಸ್ತುಪೂಜೆ ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಗಣಪತಿ ಹಾಗೂ ಮಹಾಲಕ್ಷ್ಮೀ ಪೂಜೆ ನೆರವೇರಿಸಿ ಆಶೀರ್ವಚಿಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಸೌರಭ್ ಭಂಡಾರಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದು, ಸಮಾರಂಭದಲ್ಲಿ ಉಪಸ್ಥಿತ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಪ್ರಭಾಕರ್ ಪಿ.ಭಂಡಾರಿ ಥಾಣೆ, ಕರುಣಾಕರ ಜಿ.ಭಂಡಾರಿ, ಪದ್ಮನಾಭ ಭಂಡಾರಿ, ವಿಶ್ವನಾಥ ಭಂಡಾರಿ ಮಲಾಡ್, ಅಣ್ಣಿ ಭಂಡಾರಿ ನೂತನ ಸಂಸ್ಥೆಗೆ ಯಶ ಕೋರಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here