Wednesday 24th, April 2024
canara news

ಸಾಂತಕ್ರೂಜ್‍ನ ಪೇಜಾವರ ಮಠದಲ್ಲಿ ಶ್ರೀಕೃಷ್ಣಾಷ್ಟಮಿ ಸಂಭ್ರಮಕ್ಕೆ ಚಾಲನೆ

Published On : 24 Aug 2016   |  Reported By : Rons Bantwal


ಪೇಜಾವರ ಭಕ್ತ ಬಳಗ ತಾಳಮದ್ದಳೆ ವೃಂದವನ್ನು ಉದ್ಘಾಟನೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.24: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಪೇಜಾವರ ಮಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಸಂಸ್ಥೆಯು ಸಾಂತಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ ಇಂದಿಲ್ಲಿ ಬುಧವಾರ ಸಂಜೆ ವಾರ್ಷಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಚಾಲನೆಯನ್ನೀಡಿತು.

ಆ ನಿಮಿತ್ತ ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪರ್ಯಾಯ ಪೀಠಾರೋಹಣದ ಶುಭಾವಸರದಲ್ಲಿ ಶ್ರೀಗಳ ಆಶೀರ್ವಚನಗಳೊಂದಿಗೆ ಮುಂಬಯಿಯಲ್ಲಿನ ಶ್ರೀಪೇಜಾವರ ಮಠದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶಿಲಾಮಯ ಮಂದಿರದಲ್ಲಿನ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ಹಾಗೂ ಮಹಾಗಣಪತಿ ದೆÉೀವರಿಗೆ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಎಸ್.ರಾವ್ ದಂಪತಿ ಸೇವಾರ್ಪಿತ ರಜಕಕವಚಾರ್ಪಣೆ ಗೊಳಿಸಿ ಶ್ರೀದೇವರಿಗೆ ಪೂಜೆ ನೆರವೇರಿಸಲಾಯಿತು.

ಇದೇ ಶುಭಾವಸರದಲ್ಲಿ ಪೇಜಾವರ ಭಕ್ತ ಬಳಗ ತಾಳಮದ್ದಳೆ ವೃಂದವನ್ನು ಉದ್ಘಾಟಿಸಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಲಾಯಿತು. ನಂತರ ಮಾಳ ರಾಘವೇಂದ್ರ ಭಟ್ ಭಾಗವತಿಕೆಯಲ್ಲಿ `ಸುಧಾನ್ವಮೋಕ್ಷ' (ಹರಿ ಕಾರುಣ್ಯ) ತಾಳಮದ್ದಳೆ ನಡೆಯಿತು. ಸಹ ಭಾಗವತಿಕೆಯಲ್ಲಿ ಕಿರಣ್ ಹೆಗ್ಡೆ, ಅರ್ಥಧಾರಿಗಳಾಗಿ ಕೈರಬೆಟ್ಟು ವಿಶ್ವನಾಥ್ ಭಟ್, ರಾಮದಾಸ ಉಪಾಧ್ಯಾಯ, ಸುರೇಶ್ ಶೆಟ್ಟಿ ಭಾಗವಹಿಸಿದ್ದÀರು. ಶ್ರೀನಿವಾಸ ಭಟ್ ಶ್ರೀಕೃಷ್ಣ ಚರಿತ್ರೆ ಹರಿಕಥೆ, ಪಂಡಿತ್ ರಾಘವೇಂದ್ರ ಬಾಳಿಗ ಅವರು ಕೊಳಲು ವಾದನ, ತುಳಸೀ ಅರ್ಚನೆ, ಮಹಾಪೂಜೆ, ಅರ್ಘ್ಯ, ಪ್ರಸಾದ ವಿತರಣೆ ನಡೆಸಲ್ಪಟ್ಟಿತು.

ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಆಡಳಿತಾಧಿಕಾರಿ ರಾಮದಾಸ ಉಪಾಧ್ಯಾಯ ರೇಂಜಳ ಅವರು ತಮ್ಮ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ.ಎಸ್ ರಾವ್, ಗೌ| ಕಾರ್ಯದರ್ಶಿ ಅವಿನಾಶ್ ಶಾಸ್ತ್ರಿ, ವಿಶ್ವಸ್ಥರು, ಪದಾಧಿಕಾರಿಗಳು ಮತ್ತು ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಆಡಳಿತಾಧಿಕಾರಿಗಳಾದ ಶ್ರೀಹರಿ ಭಟ್, ಪ್ರಕಾಶ್ ಆಚಾರ್ಯ ರಾಮಕುಂಜ, ನಿರಂಜನ್ ಗೋಗ್ಟೆ, ಪುರೋಹಿತರು, ಭಕ್ತರು ಉಪಸ್ಥಿತರಿದ್ದರು.

ಇಂದು (ಆ.25.) ಗುರುವಾರ ಸಂಜೆ 6.00 ಗಂಟೆಯಿಂದ ಕೃಷ್ಣ ವೇಷಸ್ಪರ್ಧೆ, 7.00 ಗಂಟೆಯಿಂದ ಪ್ರಸಿದ್ಧÀ ಸಂಗೀತಕಾರ ಶ್ರೀ ವಿದ್ಯಾಭೂಷಣ ಬಳಗದ ಭಕ್ತಿ ಲಹರಿ ಹಾಗೂ 8.30 ಗಂಟೆಗೆ ಶ್ರೀ ರಾಮದಾಸ ಕೋಟ್ಯಾನ್ ಬಳಗವು ವಾದ್ಯ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ. ರಾತ್ರಿ 10.00 ಗಂಟೆಯಿಂದ ಮಹಾಪೂಜೆ, ಅರ್ಘ್ಯ, ಪ್ರಸಾದ ವಿತರಣೆ ನಡೆಯಲಿದೆ. ಮಹಾನಗರದಲ್ಲಿನ ಸಮಸ್ತ ಭಕ್ತಾಭಿಮಾನಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಕೃಷ್ಣ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ರಾಮದಾಸ ಉಪಾಧ್ಯಾಯ ತಿಳಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here