Thursday 25th, April 2024
canara news

ಯುವಜನತೆ ದಿಟ್ಟತನದಿಂದ ಸ್ವಂತ ಉದ್ದಿಮೆಯಲ್ಲಿ ತೊಡಗಿಸಿ ಕೊಳ್ಳಬೇಕು

Published On : 27 Aug 2016   |  Reported By : Rons Bantwal


ಗುಜರಾತ್‍ನಲ್ಲಿ ಬಿಲ್ಲವರ ಸಂಘದಲ್ಲಿ : ಗಂಗಾಧರ ಅಮೀನ್ ನಾಸಿಕ್

ಮುಂಬಯಿ, ಆ.27: ಕಾಯಕವೇ ಕೈಲಾಸ ಎಂದು ನಂಬಿಕೆಯನ್ನುಹೊತ್ತು ಕೊಂಡು ಹೊರನಾಡಿಗೆ ಬರುವ ಯುವಕರು ಪ್ರಾಮಾಣಿಕವಾಗಿ ದುಡಿದು ಹಣ ಸಂಪಾನೆ ಮಾಡಿ ಯಾವುದೇ ವ್ಯಸನಗಳಿಗೆ ಬಲಿಯಾಗದೆ ಬುದ್ಧಿವಂತರಾಗಿ ಆದರ್ಶ ಜೀವನ ನಡೆಸುವ ಮೂಲಕ ಹೆತ್ತ ತಂದೆ ತಾಯಿಯರ ಯೋಗ ಕ್ಷೇಮಕ್ಕೆ ಒತ್ತು ನೀಡಬೇಕು. ಜೊತೆಗೆ ಸ್ವಂತ ಚಿಕ್ಕ ಪುಟ್ಟ ಉದ್ದಿಮೆ ವ್ಯವಹಾರಗಳಿಗೆ ದಿಟ್ಟತನದಿಂದ ಮುಂದಾಗಬೇಕು. ಗುಜರಾತ್ ಸ್ವಂತ ಉದ್ದಿಮೆಗಳಿಗೆ ಪ್ರಶಸ್ತಿ ರಾಜ್ಯವಾಗಿದೆ. ಇಲ್ಲಿ ನೆಲೆಸಿರುವ ತುಳು ಕನ್ನಡಿಗರು ಇದರ ಲಾಭವನ್ನು ಪಡೆಯಬೇಕು ಎಂದು ನಾಸಿಕ್‍ನ ಉದ್ಯಮಿ ಹಾಗೂ ಬಿಲ್ಲವರ ಸಂಘ ನಾಸಿಕ್ ಇದರ ಸ್ಥಾಪಕ ಅಧ್ಯಕ್ಷ ಗಂಗಾಧರ ಕೆ.ಅಮೀನ್ ಹೇಳಿದರು.

ಅವರು ಕಳೆದ ಮಂಗಳವಾರ ಗುಜರಾತ್ ಬಿಲ್ಲವರ ಸಂಘವು ಸಲ್ಲಿಸಿದ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದರು. ಗುಜರಾತ್ ಬಿಲ್ಲವರ ಸಂಘದ ಸ್ಥಾಪಕರಲ್ಲೋರ್ವರಾದ ಎಸ್.ಕೆ.ಹಳೆಯಂಗಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸ್ಥಾಪಕಾಧ್ಯಕ್ಷ ದಯಾನಂದ ಬೋಂಟ್ರಾ ಅತಿಥಿsಗಳನ್ನು ಸ್ವಾಗತಿಸಿ ಗಂಗಾಧರ್ ಅಮೀನ್ ಅವರು ಸಮಾಜಕ್ಕೆ ನೀಡುತ್ತಿರುವ ಮಹತ್ವದ ಸೇವೆಗಳನ್ನು ಮುಕ್ತಕಂಠದಿಂದ ಪ್ರಶಂಸಿ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಕೋಶಾಧಿಕಾರಿ ವಾಸು ಪೂಜಾರಿ ಮತ್ತು ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಂಘದ ಪ್ರ| ಕಾರ್ಯದರ್ಶಿ ವಿ.ವಿ ಸುವರ್ಣ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here