Friday 29th, March 2024
canara news

ಪೊಳಲಿ: ಬಾವಿಯಲ್ಲಿ ಬಿಸಿ ನೀರು ಪತ್ತೆ

Published On : 30 Aug 2016   |  Reported By : Canaranews Network


ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹಿಂಬದಿಯ ಮೋಹನ್‌ ದೇವಾಡಿಗ ಅವರ ಮನೆಯ ಬಾವಿಯಲ್ಲಿ ಸೋಮವಾರ ಬಿಸಿ ನೀರು ಮತ್ತು ಹೊಗೆ ಸೂಸುವ ವಾತಾವರಣ ಕಾಣಿಸಿಕೊಂಡಿದ್ದು, ಜನರಿಗೆ ಅಚ್ಚರಿ ಉಂಟು ಮಾಡಿದೆ. ಮೋಹನ್‌ ದೇವಾಡಿಗ ಅವರ ಪಕ್ಕದ ಮನೆಯ ರಾಜೇಶ್‌ ಅವರು ಬೆಳಗ್ಗೆ ತಮ್ಮ ಮನೆ ದೈವದ ಪೂಜಾ ಕೈಂಕರ್ಯಕ್ಕೆ ಈ ಬಾವಿಯಿಂದ ನೀರನ್ನು ಕೊಡಪಾನದಲ್ಲಿ ಸೇದಿದಾಗ ಅದು ಬಹಳಷ್ಟು ಬಿಸಿ ಇರುವುದು ಕಂಡು ಬಂತು. ಬಳಿಕ ಬಾವಿಗೆ ಇಣುಕಿದಾಗ ಹೊಗೆಯಾಡುತ್ತಿರುವುದು ಗೋಚರವಾಯಿತು.

ಕೂಡಲೇ ಅವರು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದು, ಬಾವಿಯಲ್ಲಿದ್ದ ಬಿಸಿ ನೀರು ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಬೆಳಗ್ಗಿನ ವೇಳೆ ನೀರು ತುಂಬಾ ಬಿಸಿ ಇತ್ತು. ಮಧ್ಯಾಹ್ನದ ವೇಳೆಗೆ ಬಿಸಿ ಪ್ರಮಾಣ ತುಸು ಕಡಿಮೆಯಾಗಿದ್ದು, ಸಂಜೆ ಮತ್ತಷ್ಟು ಬಿಸಿ ಕಡಿಮೆಯಾಗಿ 32 ಡಿಗ್ರಿ ಸೆಲ್ಸಿಯಸ್‌ ಇತ್ತು ಎಂದು ಪೊಳಲಿ ಸಹಕಾರಿ ಸಂಸ್ಥೆಯ ಉಪಾಧಿಧ್ಯಕ್ಷ ವೆಂಕಟೇಶ ನಾವಡ ಮಾಹಿತಿ ನೀಡಿದ್ದಾರೆ. ಬಾವಿ ನೀರು ಬಿಸಿ ಆಗಿದ್ದರೂ ಅದರಲ್ಲಿರುವ ಮೀನುಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಇದೇ ಮೊದಲ ಬಾರಿಗೆ ಈ ಬಾವಿಧಿಯಲ್ಲಿ ಬಿಸಿ ನೀರು ಕಾಣಿಸಿದೆ; ದೇವಸ್ಥಾನದ ಅಥವಾ ಪಕ್ಕದ ಬೇರೆ ಯಾವುದೇ ಬಾವಿಗಳ ನೀರು ಬಿಸಿಯಾಗಿರುವುದು ಕಂಡು ಬಂದಿಲ್ಲ.

ಮೋಹನ್‌ ದೇವಾಡಿಗರ ಬಾವಿಯಲ್ಲಿ ಮಾತ್ರ ಬಿಸಿ ನೀರು ಕಂಡುಬರಲು ಕಾರಣವೇನೆಂದು ತಿಳಿದಿಲ್ಲ. ಸಾಮಾನ್ಯವಾಗಿ ಬಾವಿಯಲ್ಲಿ ಗಂಧಕದ ಪ್ರಮಾಣ ಇದ್ದರೆ ನೀರು ಬಿಸಿ ಆಗುತ್ತದೆ. ಹಾಗೆ ಈ ಬಾವಿಯಲ್ಲಿ ಗಂಧಕದ ಅಂಶವೇನಾದರೂ ಇದೆಯೇ ಎನ್ನುವುದು ಪರೀಕ್ಷೆಯಿಂದ ಗೊತ್ತಾಗಬೇಕಾಗಿದೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here