Tuesday 20th, August 2019
canara news

ಅಜೆಕಾರು ಕಲಾಭಿಮಾನಿ ಬಳಗದಿಂದ ಪಂಚದಶ ವರ್ಷದ ಹರ್ಷ ಸಂಭ್ರಮ

Published On : 01 Sep 2016   |  Reported By : Rons Bantwal


ಯಕ್ಷಗಾನ ವಿಶ್ವದ ಸಾಂಸ್ಕೃತಿಕ ಅಭಿಮಾನ : ಲಕ್ಷ್ಮೀ ನಾರಾಯಣ ಅಸ್ರಣ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.31: ಪ್ರಸಕ್ತ ಯುಗದಲ್ಲಿ ಧರ್ಮಬೋಧನೆಗಳನ್ನು ಕೇಳಲು ಜನತೆಗೆ ಪುರುಷೊತ್ತು, ಆಸಕ್ತಿ, ತಾಳ್ಮೆಯಿಲ್ಲ. ಆದರೆ ಮುಂಬಯಿಗರಲ್ಲಿ ಇದರ ಕೊರತೆಯಿಲ್ಲ. ಇಲ್ಲಿ ಕಲಾರಾಧನೆ ನಿತ್ಯ ನಡೆಯುತ್ತಿದೆ. ಅದರಲ್ಲೂ ಮುಂಬಯಿಯಲ್ಲಿ ಯಕ್ಷಗಾನಕ್ಕೆ ಮಹತ್ವವಿದೆ. ಯಕ್ಷಗಾನ ಕಲಾವಿದನೆಂದರೆ ಧರ್ಮಗುರುವಿದ್ದಂತೆ ಆದುದರಿಂದ ಯಕ್ಷಗಾನ ವಿಶ್ವದ ಸಾಂಸ್ಕೃತಿಕ ಅಭಿಮಾನ ಎಂದು ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಕ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ನುಡಿದರು.

ಕಳೆದ ಶನಿವಾರ ಅಪರಾಹ್ನ ಕುರ್ಲಾ ಪಶ್ಚಿಮದ ಬಂಟರ ಭವನದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸಂಸ್ಥೆಯ ಮಹಾನಗರದಲ್ಲಿನ ವಾರ್ಷಿಕ ತಾಳಮದ್ದಳೆ ಕಾರ್ಯಕ್ರಮ ಸಮಾರೋಪ, ಯಕ್ಷಗಾನ ಬಯಲಾಟ, ಯಕ್ಷರಾಕ್ಷ್ಷ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳೊಂದಿಗೆ ಬಳಗದ ಪಂಚದಶ ವರ್ಷದ ಹರ್ಷೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ನುಡಿದÀರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಬಂಟ್ಸ್ ಸಂಘ ಮುಂಬಯಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಸಾಂತಿಜ ಜನಾರ್ಧನ ಭಟ್ ಮೀರಾರೋಡ್, ಮಹಿಳಾ ವಿಭಾಗಧ್ಯಕ್ಷೆ ಶ್ರೀಮತಿ ಲತಾ ಜಯರಾಮ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉದ್ಯಮಿಗಳಾದ ಪ್ರೇಮನಾಥ ಶೆಟ್ಟಿ ದುಬಾಯಿ, ಸಿಎ| ಸದಾಶಿವ ಶೆಟ್ಟಿ, ಅಮರನಾಥ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಅರುಣೋದಯ ಎಸ್.ರೈ, ಸಿಎ| ಸುರೇಂದ್ರ ಕೆ.ಶೆಟ್ಟಿ, ಲಕ್ಷ್ಮಣ ಮಣಿಯಣಿ, ಪ್ರವೀಣ್ ಬಿ.ಶೆಟ್ಟಿ ಅತಿಥಿüಗಣ್ಯರಾಗಿ ಮತ್ತು ಬಳಗದ ಗೌರವಾಧ್ಯಕ್ಷ ಶಿವರಾಮ ಜಿ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸುಧಾಕರ ಶೆಟ್ಟಿ ಎಣ್ಣೆಹೊಳೆ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಮಾರಂಭದಲ್ಲಿ ಎಸ್.ಬಿ ರಿಯಾಲಿಟಿ ಆಡಳಿತ ನಿರ್ದೇಶಕ, ಸಮಾಜ ಸೇವಕ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರಿಗೆ `ಗೌರವ ಯಕ್ಷರಾಕ್ಷ್ಷ ಪ್ರಶಸ್ತಿ', ಯಕ್ಷಧ್ರುವ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಶ್ರೀ ಕಟೀಲು ಯಕ್ಷಗಾನ ಮೇಳದ ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರಿಗೆ `ಪಂಚದಶ ಯಕ್ಷರಾಕ್ಷ ಪ್ರಶಸ್ತಿ' ಹಾಗೂ ಶ್ರೀಮತಿ ಸಂಪಾ ಎಸ್.ಶೆಟ್ಟಿ ಸ್ಮರಣಾರ್ಥ `ಯಕ್ಷಮಾತಾ ರಾಕ್ಷ ಪ್ರಶಸ್ತಿ'ಯನ್ನು ಹೆಸರಾಂತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮತ್ತು `ಯಕ್ಷರಾಕ್ಷ ಪ್ರಶಸಿ ಪುರಸ್ಕೃತ ಕಲಾ ಕುಲತಿಲಕರು' ಗೌರವವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಅರ್ಥಧಾರಿಗಳಾದ ಕೆ.ಕೆ ಶೆಟ್ಟಿ, ಶ್ಯಾಮ ಭಟ್, ರಂಗ ನಿರ್ದೇಶಕ ಬೈಲೂರು ಬಾಲಚಂದ್ರ ರಾವ್, ಕಲಾ ಸಂಘಟಕ ಸಂಜೀವ.ಡಿ ಕಾಂಚನ್ ಮೂಳೂರು, ವೇಷಧಾರಿಗಳಾದ ಕೆ.ಹೆಚ್ ದಾಸಪ್ಪ ರೈ, ಮೋಹನ್ ಶೆಟ್ಟಿ ಬಾಯಾರು, ಬಾಲಕೃಷ್ಣ ಗೌಡ ದೇಲಂಪಾಡಿ, ಪುಂಡಲಿಕ ಶೆಣೈ, ಪ್ರಕಾಶ್ ಪಣಿಯೂರು, ರಮೇಶ್ ಸುವರ್ಣ, ಮದ್ದಲೆ ವಾದಕ ದಿನೇಶ್ ಪ್ರಭು, ಹಾಸ್ಯ ಯಕ್ಷಕಲಾವಿದರುಗಳಾದ ಗಂಗಾಧರ ಸಾಲಿಯಾನ್, ವಿಶ್ವನಾಥ ಸಾಲಿಯಾನ್ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.

ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಹೆಸರಾಂತ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳಿ ಪುರಸ್ಕೃತರ ಅಭಿನಂದನಾ ಭಾಷಣಗೈದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿದÀರು. ಕರ್ನೂರು ಮೋಹನ್ ರೈ ಅಭಾರ ಮನ್ನಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀ ಕಟೀಲು, ಹೊಸನಗರ, ಬಪ್ಪನಾಡು ಮೇಳದ ಕೂಡು ಕಲಾವಿದರು ಪೌರಾಣಿಕ ಪುಣ್ಯಕಥಾನಕದ `ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸಿದರು.
More News

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ

Comment Here