Friday 19th, April 2024
canara news

ಕಾರ್ಮಿಕ ನೇತಾರ, ಮಾಜಿ ನಗರ ಸೇವಕ ಶರದ್ ರಾವ್ ನಿಧನ

Published On : 02 Sep 2016   |  Reported By : Rons Bantwal


ಮುಂಬಯಿ, ಸೆ.01: ಮಹಾರಾಷ್ಟ್ರ ರಾಜ್ಯದ ಧೀರ ಕನ್ನಡಿಗ ಕಾರ್ಮಿಕ ನಾಯಕ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ-ಕಣ್ಣೂರು ಅಲ್ಲಿನ ಶರದ್ ರಾವ್ (76.) ಇಂದಿಲ್ಲಿ ಅನಾರೋಗ್ಯದಿಂದ ನಿಧನರಾದರು.

ಮಹಾರಾಷ್ಟ್ರ ರಾಜ್ಯದ ಕನ್ನಡಿಗ ಧೀರ ಕಾರ್ಮಿಕ ನಾಯಕರಾಗಿದ್ದ ಶರದ್ ರಾವ್ ಮುಂಬಯಿಯಲ್ಲಿನ ಬಿಇಎಸ್‍ಟಿ (ಬೃಹನ್ಮುಂಬಯಿ ಇಲೆಕ್ಟ್ರಿಕ್ ಸಪ್ಲೈ ಎಂಡ್ ಟ್ರಾನ್ಸ್‍ಫೆÇೀರ್ಟ್) ಟ್ಯಾಕ್ಸಿ, ಆಟೋ ಹಾಗೂ ಅನೇಕ ಕಾರ್ಮಿಕ ಸಂಘಟನೆಗಳ ಯೂನಿಯನ್‍ಗಳಲ್ಲಿ ಸಂಘರ್ಷದಾಯಕ ನೇತಾರರಾಗಿದ್ದರು. 1957-1967ರ ತನಕ ಹಿಂದೂಸ್ಥಾನ್ ಲಿವರ್ ಲಿಮಿಟೆಡ್‍ನಲ್ಲಿ ಯೂನಿಯನ್, ನಂತರ ಟ್ರೇಡ್ ಯೂನಿಯನ್ ಮೂವ್‍ಮೆಂಟ್, 1970ಯಲ್ಲಿ ಬಾಂಬೇ ಗುಮಾಸ್ತ ಯೂನಿಯನ್, ಸೇವ್ ಆಕ್ಟ್ರಾಯ್ ಚಳುವಳಿಯ ಮುಂಚೂಣಿ ವಹಿಸಿದ್ದರು. 1978ನಲ್ಲಿ ಬಿಎಂಸಿ (ಬೃಹನ್ಮುಂಬಯಿ ಮಹಾನಗರ ಪಾಲಿಕೆ) ಯಲ್ಲಿ ನಗರ ಸೇವಕರಾಗಿ ಸ್ಥಾಯೀ ಸಮಿತಿ ಸದಸ್ಯರಾಗಿದ್ದರು. ಬೋಂಬೇ ಪೆÇೀರ್ಟ್ ಟ್ರಸ್ಟ್ ಸೇರಿದಂತೆ ಹತ್ತುಹಲವಾರು ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.

ಗೋರೆಗಾಂವ್ ಪಶ್ಚಿಮದ ಬಂಗೂರು ನಗರದಲ್ಲಿ ವಾಸವಾಗಿದ್ದ ರಾವ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ-ಎನ್‍ಸಿಪಿ)ಯಿಂದ ಮಹಾರಾಷ್ಟ್ರ ರಾಜ್ಯದ ವಿಧಾನ ಸಭಾ ಚುನಾವಣೆ 2005 ಮತ್ತು 2009ರಲ್ಲಿ ಗೋರೆಗಾಂವ್ ಪಶ್ಚಿಮದ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಶರದ್ ರಾವ್ ಅವರು ಮಹಾನಗರಿಯಲ್ಲಿ ಕಳೆದ ಐದು ದಶಕಗಳಿಂದ ಕಾರ್ಮಿಕ ನೇತಾರರಾಗಿ ಪ್ರಸಿದ್ಧಿಯಲ್ಲಿದ್ದರು. ಶರದ್ ಅವರ ಪತ್ನಿ ಶಾಂತಾ ರಾವ್ ಉಡುಪಿ ಜಿಲ್ಲೆಯ ಹಿರಿಯಡ್ಕ ಮೂಲದವರಾಗಿದ್ದು, ಓರ್ವ ಪುತ್ರ (ಶಸಾಂಕ್) ಹಾಗೂ ಒಬ್ಬಳು ಸುಪುತ್ರಿ (ಕೆನಡಾದಲ್ಲಿರ್) ಅಂತ್ಯಕ್ರಿಯೆಯು ಪುತ್ರಿಯ ಆಗಮನದ ಬಳಿಕವಷ್ಟೇ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. (ಚಿತ್ರ / ವರದಿ : ರೋನ್ಸ್ ಬಂಟ್ವಾಳ್)




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here