Thursday 23rd, May 2019
canara news

ಇಂದು ವಾಸುದೇವ ಮಾರ್ನಾಡ್ ಅವರಿಗೆ `ಯಕ್ಷಗಾನ ಕಲಾ ಪ್ರಶಸ್ತಿ 2016' ಪ್ರದಾನ

Published On : 03 Sep 2016   |  Reported By : Rons Bantwal


ಮುಂಬಯಿ, ಸೆ.03: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ, ಮೂಲ್ಕಿ ಇದರ ಅಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರೂ ಆದ ಶ್ರೀಯುತ ಜಯ ಸಿ. ಸುವರ್ಣರ ಮಾತೃಶ್ರೀ ದಿ| ಅಚ್ಚು ಚಂದು ಸುವರ್ಣರ ಸ್ಮರಣಾರ್ಥ ಸ್ಥಾಪಿತ ಶಾಶ್ವತ ನಿಧಿಯಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕೊಡಮಾಡುವ `ಯಕ್ಷಗಾನ ಕಲಾ ಪ್ರಶಸ್ತಿ 2016' ಇಂದು ಹೆಸರಾಂತ ಯಕ್ಷಗಾನ ಕಲಾವಿದ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ವಾಸುದೇವ ಶೆಟ್ಟಿ ಮಾರ್ನಾಡ್ ಅವರಿಗೆ ಪ್ರದಾನಿಸಲಾಗುವುದು ಎಂದು ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಮೂಡಬಿದಿರೆ ಸಮೀಪದ ಮಾರ್ನಾಡ್ ಗ್ರಾಮದಲ್ಲಿ ದಿ| ಪೆÇನ್ನಪ್ಪ ಶೆಟ್ಟಿ ಹಾಗೂ ಸರಸ್ವತಿ ಶೆಟ್ಟಿ ದಂಪತಿಗಳಿಗೆ ಜನಿಸಿರುವ ವಾಸುದೇವ ಶೆಟ್ಟಿ ಮಾರ್ನಾಡು ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿರುವ ಮೂರುವರೆ ದಶಕಗಳ ಸೇವೆಯನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗುವುದು. ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭವು ಇಂಸು ಸೆ.03 ಶನಿವಾರ ಸಂಜೆ 4.00 ಗಂಟೆಗೆ ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಜರಗಲಿದೆ.
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here