Tuesday 20th, August 2019
canara news

ಶಿಕ್ಷಕರ ನಡವಳಿಕೆ ವಿದ್ಯಾಥಿ೯ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ ವರ್ಲ್ಡ್ ಗಿನ್ನೆಸ್ ರೆಕಾರ್ಡ್ ಮಾನ್ಯತಾ ಸಾಧಕ ಶಿಕ್ಷಕಿ ಮೇಡಂ ಪಿಂಟೋ

Published On : 04 Sep 2016   |  Reported By : Rons Bantwal


ಮುಂಬಯಿ, ಸೆ.04: `ಶಿಕ್ಷಕರೊಬ್ಬರ ಪ್ರಭಾವ ನಿತ್ಯನೂತನ, ಶಿಕ್ಷಕರ ಪ್ರಾಬಲ್ಯ ಎಲ್ಲಿ ಅಂತ್ಯವಾಗುತ್ತದೆ ಎಂದು ಹೇಳುವುದು ಅಸಾಧ್ಯ' ಹೆನ್ರಿ ಆ್ಯಡಮ್ಸ್‍ನ ಈ ಸುಂದರವಾದ ವಾಕ್ಯ ಸಮಾಜದಲ್ಲಿ ಶಿಕ್ಷಕರ ಪಾತ್ರದ ಮಹತ್ವವನ್ನು ತೋರಿಸುತ್ತದೆ. ಶಿಕ್ಷಕರು ಸಮಾಜದ ಮೇಲೆ ಬೀರಿದ ಪ್ರಭಾವ, ಅವರು ತೊಟ್ಟಿಕ್ಕಿದ ಮೌಲ್ಯಗಳು ಮತ್ತು ಅವರ ನಡವಳಿಕೆ ನೇರವಾಗಿ ವಿದ್ಯಾಥಿರ್üಗಳ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಶಿಕ್ಷಕರು ವಿದ್ಯಾಥಿರ್sಗಳಲ್ಲಿ ನಿಶ್ಚಿತಾಭಿಪ್ರಾಯ ಮತ್ತು ಜ್ಞಾನ ಶಕ್ತಿಯನ್ನು ತುಂಬುತ್ತಾರೆ. ಶಿಕ್ಷಕರು ಬೀರಿದ ಪ್ರಭಾವ ವಿದ್ಯಾಥಿರ್sಗಳ ಮೇಲೆ ಕೊನೆಯ ತನಕ ಉಳಿದುಕೊಳ್ಳುತ್ತದೆ ಎಂದು ಶೈಕ್ಷಣಿಕ ಕ್ಷೇತ್ರದ ಮಹಾನ್ ಸಾಧಕಿ, ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ ಹಾಗೂ ಆಡಳಿತ ನಿರ್ದೇಶಕಿ ಸಾಧಕಿ ಮೇಡಂ ಗ್ರೇಸ್ ಪಿಂಟೋ ನುಡಿದರು.

ಇಂದಿಲ್ಲಿ ಶುಕ್ರವಾರ ಕಾಂದಿವಿಲಿ ಪೂರ್ವದಲ್ಲಿನ ರಾಯನ್'ಸ್ ಶಿಕ್ಷಣ ಸಮೂಹವು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕವರ್ಗವನ್ನುದ್ದೇಶಿಸಿ ಮೇಡಂ ಪಿಂಟೋ ಮಾತನಾಡಿ ಸಮಾಜ ಮತ್ತು ಜೀವನದ ದೊಡ್ಡ ಮಟ್ಟಿನ ಬದಲಾವಣೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಸೇವೆ ಮತ್ತು ತ್ಯಾಗದ ಮುಖಾಂತರ ಅವರು ಭಾವೀ ಪ್ರಜೆಗಳು ಮತ್ತು ಭಾವೀ ರಾಷ್ಟ್ರವನ್ನು ಕಟ್ಟುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶೇಷವಾದ ಪ್ರತಿಭೆ, ಸಾಮಥ್ರ್ಯ ಎಂಬ ಸಂಪತ್ತು ಇದೆ. ಒಬ್ಬ ಉತ್ತಮ ಶಿಕ್ಷಕ ಈ ಪ್ರತಿಭಾ ಸಂಪತ್ತನ್ನು ಅನಾವರಣ ಗೊಳಿಸುತ್ತಾರೆ ಎಂದರು.

ಎಜ್ಯುಕೇಶನ್ ಎಂಬ ಶಬ್ದ ಉತ್ಪತ್ತಿ ಲ್ಯಾಟಿನ್ ಭಾಷೆಯ ಎಜ್ಯುಕೇರ್ ಎಂಬ ಪದದಿಂದ ಸಿದ್ಧಿಯಾಗಿದ್ದು, ಇದರರ್ಥ `ಹೊರತರು' ಎಂದು. ಜೀವನವೇ ಒಂದು ಪಾಠಶಾಲೆ ಮತ್ತು ಇದರಲ್ಲಿ ಕಲಿಯುವ ಪ್ರಕ್ರಿಯೆಯಲ್ಲಿ ಕಲಿಸುವ ಶಿಕ್ಷಕರು ಜೀವನಪರ್ಯಂತ ಕಲಿಯುತ್ತಿರುತ್ತಾರೆ ಮತ್ತು ಪ್ರತಿ ವಿದ್ಯಾರ್ಥಿಯ ಉತ್ತಮತೆಯನ್ನು ಹೊರತರಲು ಆಧಾರ ಮತ್ತು ಸಹಾಯಕರಾಗಿದ್ದಾರೆ. ಅದಕ್ಕಾಗಿಯೇ ಮಾರ್ಕ್ ವ್ಯಾನ್ ಡೊರೆನ್ `ಕಲಿಸುವ ಕಲೆ, ಸಂಶೋಧನೆಯ ನೆರವಿನ ಕಲೆಯೂ ಆಗಿದೆ'ಎಂದು ಬಹಳ ಅರ್ಥಗರ್ಭಿತವಾಗಿ ಹೇಳಿದ್ದಾರೆ. ಭಾರತ ದೇಶದ ದ್ವಿತೀಯ ರಾಷ್ಟ್ರಪತಿ ಆಗಿದ್ದ ಡಾ| ಸರ್ವಪಳ್ಳಿ ರಾಧಾಕೃಷ್ಣ ಶ್ರೇಷ್ಟ ವಿದ್ವಾಂಸ, ಒಬ್ಬ ಶ್ರೇಷ್ಟ ಶಿಕ್ಷಕ ಮತ್ತು ಒಬ್ಬ ಅದ್ಭುತ ಶೈಕ್ಷಣಿಕ ತಜ್ಞ, ಒಬ್ಬ ಶಿಕ್ಷಕರಾಗಿ ಅವರು ದೇಶದ ಸಮಾಜದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಇಂತಹ ಒಬ್ಬ ಶ್ರೇಷ್ಟ ವ್ಯಕ್ತಿಗಾಗಿ ನಾವು ಸೆಪ್ಟೆಂಬರ್ 5 ದಿನವನ್ನು ಅರ್ಪಿಸಿದ್ದೇವೆ. ಒಬ್ಬ ಶಿಕ್ಷಕರಾಗಿ ಅವರು ನೀಡಿದ ಅಪ್ರತಿಮ ಸೇವೆಯ ಸವಿನೆನಪಿಗಾಗಿ ಡಾ| ರಾಧಾಕೃಷ್ಣರ ಹುಟ್ಟಿದ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆ ಎಂದು ಮನವರಿಸಿದರು.

ಸ್ವಾಮಿ ವಿವೇಕಾನಂದ ಹೇಳಿಕೆಯ ಪ್ರಕಾರ ಶಿಕ್ಷಣ ಎಂದರೆ ಪಾತ್ರ ರಚನೆ, ಮನಸ್ಸಿನ ಸಾಮಥ್ರ್ಯ ಹೆಚ್ಚಿಸುವುದು ಮತ್ತು ಬೌದ್ದಿಕ ಮಟ್ಟ ಚುರುಕುಗೊಳಿಸುವುದು, ಪರಿಣಾಮ ಒಬ್ಬ ವ್ಯಕ್ತಿಯನ್ನು ಅವನ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಿಸುವುದಾಗಿದೆ. ವಿದ್ಯಾಥಿರ್sಗಳ ಪರಿಶೀಲನಾ ಪ್ರವೃತ್ತಿಯನ್ನು ಉತ್ತೇಜಿಸುವುದು ಇದು ಒಬ್ಬ ಶಿಕ್ಷಕನ ಪವಿತ್ರ ಕೆಲಸವಾಗಿದೆ. ಹಾಗಾಗಿ ಒಬ್ಬ ನಿಜವಾದ ಶಿಕ್ಷಕ ಬೋಧನೆ ಮಾತ್ರ ಮಾಡುವುದಲ್ಲದೆ ವಿದ್ಯಾಥಿರ್sಗಳನ್ನು ಉನ್ನತ ಮಟ್ಟದತ್ತ ಬೆಳೆಯಲು ಮಾರ್ಗದರ್ಶನ ನೀಡುತ್ತಾರೆ. ಶಿಕ್ಷಕರ ಮಾರ್ಗದರ್ಶನವಿಲ್ಲದೆ ಹೋದರೆ ಯಾವುದೇ ಸಾಧಕರು ವಿಶ್ವದಲ್ಲಿ ಶ್ರೇಷ್ಟತೆಯನ್ನು ಸಾಧಿಸಲು ಸಾಧ್ಯವಿಲ್ಲ.

ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದು, ಶಿಕ್ಷಕರ ಪಾತ್ರ ಅಮೂಲಾಗ್ರವಾಗಿ ಬದಲಾಗುತ್ತಾ ಇದೆ. ಶೈಕ್ಷಣಿಕ ಪ್ರಕ್ರಿಯೆಯ ಉದ್ದೇಶ ಹಲವು ವರ್ಷಗಳಿಂದ ವಿಕಸನಗೊಳ್ಳುತ್ತಾ ಬಂದಿದೆ ಅದೇ ರೀತಿ ಶಿಕ್ಷಿತರ ಪಾತ್ರವೂ ವಿಕಸನಗೊಂಡಿದೆ. ಇದೇ ಬದಲೀ ವ್ಯವಸ್ಥೆಗಳಿಂದ ಅಥವಾ ತಂತ್ರಜ್ಞಾನಗಳಿಂದ ಮತ್ತು ಇಂದು ಮುನ್ನಡೆಯುತ್ತಿರುವ ಕಲಿಕೆಯ ಪ್ರಯಾಣವಾಗಲೀ ಶಿಕ್ಷಕರ ಮಹತ್ವವನ್ನು ಕಡಿಮೆಗೊಳಿಸಿಲ್ಲ, ಇಂದು ವಿದ್ಯಾಥಿರ್sಗಳಲ್ಲಿ ಅರ್ಥಪೂರ್ಣ ಜ್ಞಾನ ಭಂಢಾರವನ್ನು ನಿರ್ಮಾಣಗೊಳಿಸುವಲ್ಲಿ ಶಿಕ್ಷಕರ ಅವಶ್ಯಕತೆ ಪರಿಣಾಮಕಾರಿಯಾಗಿದೆ. ಕಲಿಯುವಿಕೆಯಲ್ಲಿ ಸಮರ್ಪಕ ಸಮಗ್ರ ತಂತ್ರಜ್ಞಾನ ಬಳಕೆಗೆ ಶಿಕ್ಷಕನ ಪೆÇ್ರೀತ್ಸ್ಸಹ ಅಗತ್ಯವಾಗಿದೆ. ತಂತ್ರಜ್ಞಾನಗಳು ಅದರ ಕೆಲಸ ನಿರ್ವಹಿಸಲು ಶಿಕ್ಷಕರು ಪಾತ್ರ ನಿರ್ಣಾಯಕವಾದುದು, ಇದಕ್ಕೆ ಸಮರ್ಪಕ ಸ್ಥಳಗಳಲ್ಲಿ ಮಾನವನ ಸ್ಪರ್ಶ ಅಗತ್ಯ.

ಈ ಸ್ಪರ್ಶಕ್ಕೆ ಸಲಹೆ ಅತ್ಯಗತ್ಯ. ವಿದ್ಯಾಥಿರ್sಗಳಿಗೆ ಅವಕಾಶಗಳನ್ನು ಒದಗಿಸುತ್ತಾ ಕ್ಲಿಷ್ಟಕರ ಚಿಂತನೆಗಳ ಕೌಶಲ್ಯವನ್ನು ಅಭಿವೃದ್ದಿ ಪಡಿಸಲು ಮತ್ತು ಮೌಲ್ಯಗಳನ್ನು ಹುಟ್ಟುಹಾಕಲು ಜವಾಬ್ದಾರಿಯುತ ಶಿಕ್ಷಕರು ನೆರವಾಗುವರು' ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕರು ಒಂದು ಅವಿಭಾಜ್ಯ ಅಂಗ. ಈ ಸಂದರ್ಭದಲ್ಲಿ ನಾನು ಅನೇಕ ಎಲೆಮರೆಯ ಹೀರೋಗಳ ಕೊಡುಗೆಗಳನ್ನು ಗೌರವಿಸಲು ಇಷ್ಟಪಡುತ್ತೇನೆ. ಈ ಮಹಾನುಭಾವರು ಬಡ, ದುರ್ಬಲ, ಅನಾಥ ಮತ್ತು ಶಿಕ್ಷಣದ ಅವಶ್ಯಕತೆಯಿರುವವರಿಗೆ ವ್ಯಯುಕ್ತಿಕ ಜವಾಬ್ದಾರಿಯಿಂದ ಸಹಾಯ ಮಾಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳನ್ನು ಸವಾಲಿಗೆ ಎದುರಾಗಿ ಬೆಳೆಸುವ, ವಿದ್ಯಾಥಿರ್üಗಳ ಪ್ರಗತಿ ಮತ್ತು ಅಭಿವೃದ್ದಿಯ ಅರಿವು ಹೊಂದಿರುವ ಮತ್ತು ಪೆÇ್ರ್ರೀತ್ಸಾಹ ಮತ್ತು ನೆರವು ನೀಡುವ ಮೂಲಕ ವಿದ್ಯಾಥಿರ್üಗಳನ್ನು ಮುಂದಿನ ಜೀವನಕ್ಕೆ ಸಿದ್ದಗೊಳಿಸುವ ಮತ್ತು ಚಲನಾತ್ಮಕ ಭವಿಷ್ಯಕ್ಕೆ ಸಿದ್ಧರಾಗಲು ಆತ್ಮವಿಶ್ವಾಸ ತುಂಬಿಸುವ ಶಿಕ್ಷಕರ ಅಭಿವೃದ್ದಿ ನಮ್ಮ ದೇಶದ ಇಂದಿನ ಅತಿ ಮುಖ್ಯವಾದ ಅವಶ್ಯಕತೆಯಾಗಿದೆ.

ಪ್ರತಿಯೊಬ್ಬ ವ್ಯಕ್ತಿಗೂ ದೇವರು ಒಂದು ನಿರ್ಧಿಷ್ಟವಾದ ಕೊಡುಗೆಯನ್ನು ಆಶಿರ್ವಾದಿಸಿರುತ್ತಾನೆ ಎಂಬುದನ್ನು ಶಿಕ್ಷಕರು ಅರ್ಥೈಸಬೇಕು. ಆ ಕೊಡುಗೆಯನ್ನು ಗುರುತಿಸಲು, ಪೆÇೀಷಿಸಲು ಮತ್ತು ಅಥೈಸಲು ಸಂಪೂರ್ಣ ಸಲಹೆ ಶಿಕ್ಷಕರು ನೀಡಬೇಕು. ನನ್ನ ಒಲವಿನ ಶಿಕ್ಷಕರೇ. ದೇವರು ನಿಮಗೆ ಅತ್ಯಂತ ಮಹತ್ವದ ಪಾತ್ರವನ್ನು ಕೊಟ್ಟಿದ್ದಾರೆ, ಇದಕ್ಕೆ ಬಹುಮಟ್ಟಿನ ತ್ಯಾಗ ಬೇಕು, ಆದರೆ ದೇವರು ನಿಷ್ಕರುಣಿ ಅಲ್ಲ. ಅವನು ನಿಮ್ಮ ಕೆಲಸವನ್ನು ಮರೆಯುವುದಿಲ್ಲ. ದೇವರ ಮಕ್ಕಳಿಗೆ ಸಹಾಯ ಮಾಡಿದ ವ್ಯಕ್ತಿಯೆಂದು ನಿಮ್ಮನ್ನು ದೇವರು ಕಾಣುತ್ತಾನೆ. ನಿಮ್ಮ ಸಹಾಯವನ್ನು ಮುಂದುವರಿಸಿರಿ. ಶಾಶ್ವತ ಪ್ರಾಬಲ್ಯತೆ ಹೊಂದಿರುವ ನಿಮ್ಮನ್ನು ನಾವು ವಿಶೇಷವಾಗಿ ಶಿಕ್ಷಕ ಎಂದು ಕರೆಯಲು ಹೆಮ್ಮೆಪಡುತ್ತೇವೆ ಎನ್ನುತ್ತಾ ಮೇಡಂ ಗ್ರೇಸ್ ಪಿಂಟೋ ನಾಡಿನ ಸಮಸ್ತ ಅಧ್ಯಾಪಕ ವೃಂದಕ್ಕೆ ಶಿಕ್ಷಕ ದಿನಾಚರಣೆಯ ಹಾರ್ದಿಕ ಶುಭಾಶಯ ಹಾರೈಸಿದರು.

 
More News

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ

Comment Here