Wednesday 24th, April 2024
canara news

ತೆಂಕ ನೀಡಿಯೂರಿನ ಕುಳವಾರಿಗಳು-ಸಾಹಿತ್ಯ ವಿಜ್ಞಾನ ಸಮನ್ವಯಕ ಡಾ| ವ್ಯಾಸರಾವ್ ಕೃತಿಗಳ ಬಿಡುಗಡೆ

Published On : 05 Sep 2016   |  Reported By : Rons Bantwal


ನಿಂಜೂರು ಸಾಹಿತ್ಯ ಧ್ಯಾನಾತ್ಮಕತೆ ಅನಾವರಣವಾಗಲಿ-ಡಾ| ಸುರೇಶ್ ರಾವ್ ಕಟೀಲು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.05: ಕನ್ನಡಿಗ ನಿಪುಣ ಸಾಹಿತಿಗಳೊಬ್ಬರಾದ ನಿಂಜೂರು ಅವರ ಸಾಹಿತ್ಯ ಸಂಘರ್ಷದ ಬದುಕು ಇನ್ನೂ ತೆರೆಮರೆಯಲ್ಲೇ ಇದೆ. ವಿಜ್ಞಾನಕ್ಕಿಂತಲೂ ಸಾಹಿತ್ಯ ಸೇವೆಗೈದ ಹಿರಿಯ ಸಾಹಿತಿ ಆಗಿದ್ದಾರೆ. ಆದುದರಿಂದ ಅವರ ಒಟ್ಟು ಸಾಹಿತ್ಯ ಧ್ಯಾನಾತ್ಮಕ ಜೀವನ ಅನಾವರಣ ಆಗಬೇಕಾಗಿದೆ ಎಂದು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮುಂಬಯಿ ಮತ್ತು ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷÀ, ಅಂಧೇರಿ ಪೂರ್ವದ ಸಂಜೀವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್ ಕಲೀನಾ ಕ್ಯಾಂಪಸ್‍ನಲ್ಲಿನ ಜೆ.ಪಿ ನಾಯಕ್ ಭವನದಲ್ಲಿ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕೃತಿ ಅನಾವರಣಾ ಕಾರ್ಯಕ್ರಮದಲ್ಲಿ ಗೋಕುಲವಾಣಿ ಮಾಸಿಕದ ಸಂಪಾದಕ, ವಿಜ್ಞಾನಿ, ಸಂಶೋಧಕ, ಹಿರಿಯ ಸಾಹಿತಿ ಡಾ| ವ್ಯಾಸರಾವ್ ನಿಂಜೂರು ಅವರ `ತೆಂಕ ನೀಡಿಯೂರಿನ ಕುಳವಾರಿಗಳು' ಕೃತಿ ಬಿಡುಗಡೆ ಗೊಳಿಸಿ ಡಾ| ಸುರೇಶ್ ಕಟೀಲು ಮಾತನಾಡಿದರು.

ನಿಂಜೂರು ಮತ್ತು ನಾವು ಸಂಸ್ಥೆಕ್ಕಿಂತ ವೈಯಕ್ತಿಕ ಸಂಬಂಧ ಬಲಯುತವಾಗಿದೆ. ನಮ್ಮ ಪರಿವಾರದ ವಿಶ್ವಾಸನೀಯ ಸಂಬಂಧ ಹೇಳಲಸಾಧ್ಯ. ಬಿಎಸ್‍ಕೆಬಿ ಅಸೋಸಿಯೇಶನ್‍ನ ಮುಖವಾಣಿ ಗೋಕುಲವಾಣಿ ಇದರ ಸಂಪಾದಕರಾಗಿ ಹುದ್ದೆಯನ್ನಲಂಕರಿಸಿದ ಬಳಿಕ 30ಪುಟಗಳಿಂದ 100 ಪುಟದ ಮಾಸಿಕವನ್ನು ಪ್ರಕಾಶಿಸಿ ಗೋಕುಲವನ್ನು ಗೋಪುರವಾಗಿ ಬೆಳೆಸಿದ ರೂವಾರಿ ಇವರಾಗಿದ್ದಾರೆ. ಅವರ ಅನುಪಮ ಸೇವೆ ನಮ್ಮಲ್ಲಿ ಪ್ರೆಶ್ನಾತೀತವಾಗಿದ್ದು ಅವರೋರ್ವ ದೇವರ ಸರ್ವೋತ್ಕೃಷ್ಟ ಕೊಡುಗೆ ಎಂದೂ ಡಾ| ಸುರೇಶ್ ಅವರು ನಿಂಜೂರು ಅವರ ಸದ್ಗುಣತೆ ವರ್ಣಿಸಿದರು.

ನಿವೃತ್ತ ಪ್ರಾಧ್ಯಾಪಕಿ, ಕನ್ನಡ ವಿಭಾಗದ ಸಂಶೋಧಕಿ ರಮಾ ಉಡುಪ ರಚಿತ `ಸಾಹಿತ್ಯ ವಿಜ್ಞಾನ ಸಮನ್ವಯಕ ಡಾ| ವ್ಯಾಸರಾವ್' ಕೃತಿಯನ್ನು ಸೃಜನಶೀಲ ಸಾಹಿತಿ, ವಿಮರ್ಶಕ ಡಾ| ಬಿ.ಜನಾರ್ಧನ ಭಟ್ ಬಿಡುಗಡೆ ಗೊಳಿಸಿದರು. ರಂಗ ಕಲಾವಿದ ಅಹಲ್ಯಾ ಬಲ್ಲಾಳ್ ನಿಂಜೂರುರ ಕೃತಿಯನ್ನೂ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ರಮಾ ಅವರ ಕೃತಿಯನ್ನು ಕ್ರಮವಾಗಿ ಪರಿಚಯಿಸಿದರು.

ಕನ್ನಡ ಸಾಹಿತ್ಯಕ್ಕೆ ಮುಂಬಯಿಗರ ಅತ್ಯಾದ್ಭುತ ಕೊಡುಗೆಯಿದೆ. ಇಂದು ಬಿಡುಗಡೆಗೊಂಡ ಎರಡೂ ಕೃತಿಗಳು ಹಾಸ್ಯ ಬರವಣಿಕಾ ಶೈಲಿಯಲ್ಲಿದೆ. ಎರಡರಲ್ಲೂ ಪ್ರಾದೇಶಿಕತಾ ಮಾನ್ಯತೆಗಳಿದ್ದು ರಾಮಾಯಾಣವನ್ನೇ ಹೋಲುತ್ತಿವೆ. ಕೃತಿಗಳ ನಿರೂಪಣಾ ಶೈಲಿ ವಿಶೇಷತೆ ಹೊಂದಿದ್ದು, ವಿಚಿತ್ರ ನಿರೂಪಣೆ ಗಳನ್ನೊಳಗೊಂಡು ಅತೀ ಕಲ್ಪನಾಮಯವಾಗಿ ಮೂಡಿವೆ ಎಂದು ಡಾ| ಜನಾರ್ಧನ ಭಟ್ ನುಡಿದರು.

ಡಾ| ವ್ಯಾಸರಾವ್ ನಿಂಜೂರು ಮಾತನಾಡಿ ನಾನೋರ್ವ ಅನುಭವ ಹಂಚಿಕೊಂಡು ಸಾಹಿತಿಗಳ ಸಾಲಲ್ಲಿ ಗುರುತಿಸಿ ಕೊಳ್ಳುವಂತಾಗಿದೆ. ಹಿರಿಕಿರಿಯರ ಬರವಣಿಕಾ ಪೆÇ್ರೀತ್ಸಾಹ ನನ್ನನ್ನು ಪ್ರೇರೆಪಿಸಿದ್ದು, ಶ್ರದ್ಧಾಭರಿತ ಬರವಣಿಗೆ ಮೈಗೂಡಿಸಿದ್ದರಿಂದ ಇಷ್ಟರ ಮಟ್ಟಿಗೆ ಬೆಳೆದಿದ್ದೇನೆ ಎಂದು ತನ್ನ ಸಾಹಿತ್ಯ ಬಾಳಿನ ಅಭಿಪ್ರಾಯ ವ್ಯಕ್ತ ಪಡಿಸಿರು.

ಈ ಹಿರಿ ವಯಸ್ಸಿನಲ್ಲೂ ಕನ್ನಡ ವಿಭಾಗದ ವಿದ್ಯಾಥಿರ್s ಜೀವನವನ್ನು ನಾನು ತುಂಬಾ ಭಿನ್ನವಾಗಿ ಅನುಭವಿಸಿ ಆನಂದಿಸುತ್ತಿದ್ದೇನೆ. ಇಲ್ಲಿನ ವಾತಾವರಣ ನನಗೆ ಹೊಸ ದಿಗಂತ ತೋರಿಸಿದೆ ಎಂದು ಕೃತಿ ರಚನೆ ಹಿನ್ನೆಲೆಯನ್ನು ರಮಾ ಉಡುಪ ಸ್ಥೂಲವಾಗಿ ತೆರೆದಿಟ್ಟರು

ವ್ಯಾಸರಾಯ ನಿಂಜೂರು ವಾಲ್ಮೀಕಿ, ಪಂಪ, ಕುಮಾರವ್ಯಾಸರಂತಿದ್ದು ಈ ನಿಂಜೂರು ನಮ್ಮೆಲ್ಲರ ಪಾಲಿನ ವ್ಯಾಸರು. ಕನ್ನಡದ ಅಭಿಮಾನಿ ಸೇನಾನಿ ನಿಂಜೂರು ಆಗಿದ್ದು ಅವರ ಸಾಹಿತ್ಯ ಸಾಧನೆ ಇತಿಹಾಸ ಪುಟಗಳನ್ನು ಸೇರಬೇಕಾಗಿದೆ. ಬಹುಶಃ ವಿಭಾಗಕ್ಕೆ ಈ ವಾರ ಶುಭವಾರ, ಸಂಭ್ರಮದ ಕ್ಷಣ. ಕಾರಣಗಳನೇಕಗಳಿವೆ. ಮುಂಬಯಿ ವಿಶ್ವವಿದ್ಯಾಲಯದÀವು 160ರ ಹೊಸ್ತಿಲಲ್ಲಿದ್ದರೆ ಕೇಂದ್ರ ಸಾಹಿತ್ಯ ಅಕಾಡೆಮಿ 60ರ ಸಂಭ್ರಮದಲ್ಲಿದೆ. ಇದು ನಮ್ಮೆಲ್ಲರ ಯೋಗಾನುಯೋಗ. ಸಾಹಿತ್ಯ ಬಲವರ್ಧನೆಗೆ ಮುಂಬಯಿ ಕನ್ನಡ ಲೇಖಕರ ಕೊಡುಗೆ ಅನನ್ಯವಾಗಿದ್ದು, ಅದರಲ್ಲೂ ನಿಂಜೂರು ಮುಂಬಯಿ ಕನ್ನಡಿಗರ ಮುಖವಾಣಿ ಇದ್ದಂತೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ| ಜನಾರ್ಧನ ಭಟ್ ಅವರು ಮಧುಸೂದನ್ ರಾವ್ ಅವರಿಗೆ ವರದರಾಜ ಪದವಿ ಪ್ರದಾನಿಸಿ ಶುಭಾರೈಸಿದರು. ಡಾ| ಸುರೇಶ್ ರಾವ್, ಡಾ| ನಿಂಜೂರು, ರಮಾ ಉಡುಪ ಮತ್ತು ಅಹಲ್ಯಾ ಬಲ್ಲಾಳ್ ಅವರಿಗೆ ಕೃತಿ ಗೌರವಗಳನ್ನಿತ್ತು ಅಭಿವಂದಿಸಿದರು.

ವಾಣಿಶ್ರೀ ನಿಂಜೂರು, ಭಾರÀಥಿü ನಿಂಜೂರು, ಕೆ.ಪ್ರಸಾದ್ ನಿಂಜೂರು, ಉದಯಕುಮಾರ್ ವಿ.ನಿಂಜೂರು, ಹರ್ಷ ಉದಯ್, ರೋಹಿಣಿ ಆರ್.ಬೈರಿ, ಎಸ್.ನಳಿನಾ ಪ್ರಸಾದ್, ಡಾ| ಸುನೀತಾ ಎಂ.ಶೆಟ್ಟಿ, ಹೆಚ್.ಬಿ. ಎಲ್ ರಾವ್, ಡಾ| ಜಿ.ವಿ ಕುಲಕರ್ಣಿ, ಡಾ| ಕರುಣಾಕರ ಶೆಟ್ಟಿ, ಡಾ| ಮಮತಾ ರಾವ್, ಮನೋಹರ ನಾಯಕ್, ಡಾ| ಎಸ್.ಕೆ ಭವಾನಿ, ಡಾ| ವಿಶ್ವನಾಥ ಕಾರ್ನಾಡ್, ನ್ಯಾ| ಅಮಿತಾ ಭಾಗ್ವತ್, ಡಾ| ಕೆ.ರಘುನಾಥ್, ಡಾ| ಗಿರಿಜಾ ಶಾಸ್ತ್ರಿ, ಬಿ.ಬಾಲಚಂದ್ರ ರಾವ್, ಪಿ.ಸಿ ಎನ್ ರಾವ್, ಬಿ.ರಮಾನಂದ ರಾವ್, ಚಂದ್ರಶೇಖರ ಭಟ್, ಗೀತಾ ಎಲ್.ಭಟ್, ಶೈಲಿನಿ ರಾವ್, ಶ್ರೀನಿವಾಸ ಜೋಕಟ್ಟೆ, ರಾಜೀವ ನಾಯಕ್ ಎಸ್.ಕೆ ಸುಂದರ್, ನ್ಯಾ| ಸತೀಶ್ ಎನ್.ಬಂಗೇರಾ, ಜಿ.ಟಿ ಆಚಾರ್ಯ, ಮೋಹನ್ ಮಾರ್ನಾಡ್, ಕುಸುಮಾ ಬಳ್ಳಾಲ್, ಕೆ.ನಾರಾಯಣ ಶೆಟ್ಟಿ, ಯಜ್ಞನಾರಾಯಣ ಕೆ.ಸುವರ್ಣ, ಎಂ.ಶ್ರೀಕಾಂತ ಪ್ರಭು ಮತ್ತಿತರÀರು ಉಪಸ್ಥಿತರಿದ್ದರು.

ಸುಶೀಲಾ ಎಸ್.ದೇವಾಡಿಗ ಸ್ವಾಗತ ಗೀತೆಯನ್ನಾಡಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಗೀತಾ ಆರ್.ಎಸ್ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here