Friday 19th, April 2024
canara news

ಸೆ.11: ಸಾಂತಾಕ್ರೂಜ್‍ನಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೋರೆಗಾಂವ್ ಸ್ಥಳೀಯ ಸಮಿತಿಯ 14ನೇ ವಾರ್ಷಿಕೋತ್ಸವ

Published On : 06 Sep 2016   |  Reported By : Rons Bantwal


ಮುಂಬಯಿ, ಸೆ.06: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೋರೆಗಾಂವ್ ಸ್ಥಳೀಯ ಸಮಿತಿ ತನ್ನ 14ನೇ ವಾರ್ಷಿಕೋತ್ಸವವನ್ನು ಬರುವ ಶನಿವಾರ (ಸೆ.11) ಅಪರಾಹ್ನ 3.00 ಗಂಟೆಯಿಂದ 7.30 ಗಂಟೆಯ ವರೆಗೆ ಶ್ರೀ ನಾರಾಯಣ ಗುರು ಸಭಾಗೃಹ, ಬಿಲ್ಲವ ಭವನ, ಸಾಂತಾಕ್ರೂಜ್ ಪೂರ್ವ, ಮುಂಬಯಿ ಇಲ್ಲಿ ಅದ್ದೂರಿಯಾಗಿ ಆಚರಿಸಲಿದೆ.

Jaya C.Suvarna

 Nitynand D.Kotyan

N T Poojary

Krishna Y.Shetty

Jagannath V.Kotyan

ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮೂಲ್ಕಿ ಇದರ ಅಧ್ಯಕ್ಷ ಮತ್ತು ಭಾರತ್ ಕೋ.ಅಪರೇಟಿವ್ ಬ್ಯಾಂಕ್(ಮುಂಬಯಿ) ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ವಾರ್ಷಿಕೋತ್ಸವಕ್ಕೆ ಉದ್ಘಾಟಿಸಲಿದ್ದಾರೆ.ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರಗಲಿರುವ ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಕೃಷ್ಣ ಪ್ಯಾಲೇಸ್ ರೆಸಿಡೆನ್ಸಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಕೃಷ್ಣ ವೈ. ಶೆಟ್ಟಿ ಆಗಮಿಸಲಿದ್ದು ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಹಾಗೂ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಅವರು ಗೋರೆಗಾಂವ್ ಸ್ಮರಣಿಕೆ `ಶತಜ್ಯೋತಿ' ಬಿಡುಗಡೆ ಗೊಳಿಸಲಿದ್ದಾರೆ.

ಗೌರವ ಅತಿಥಿsಗಳಾಗಿ ಹಿರಿಯ ಹೊಟೇಲು ಉದ್ಯಮಿ ರಘುರಾಮ ಕೆ.ಶೆಟ್ಟಿ (ಹೊಟೇಲ್ ರಾಮ್‍ದೇವ್, ಬೆಳಗಾಂ), ಸಾಯಿ ಹೊಟೇಲು ಸಮೂಹದ ನಿರ್ದೇಶಕ ರವಿ ಎಸ್.ಶೆಟ್ಟಿ, ಉದ್ಯಮಿ ಚಂದ್ರಶೇಖರ್ ಎಸ್.ಪೂಜಾರಿ, ದಿ. ಮೊಗವೀರ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಉಪ ಕಾರ್ಯಾಧ್ಯಕ್ಷ ಸುರೇಶ್ ಆರ್.ಕಾಂಚನ್ ಉಪಸ್ಥಿತರಿರುವರು.

ಗೋರೆಗಾಂವ್ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ವಿ.ಕೋಟ್ಯಾನ್, ಕಾರ್ಯಾಧ್ಯಕ್ಷ ಸಚ್ಚೀನೇಂದ್ರ ಕೆ.ಕೋಟ್ಯಾನ್, ಉಪಾಧ್ಯಕ್ಷರುಗಳಾದ ಮೋಹನ್‍ದಾಸ್ ಹೆಜ್ಮಾಡಿ, ರಮೇಶ್ ಎಸ್.ಸುವರ್ಣ, ಗೌ| ಕೋಶಾಧಿಕಾರಿ ಮೋಹನ್ ಬಿ.ಅಮೀನ್, ಕೇಂದ್ರ ಕಚೇರಿ ಪ್ರತಿನಿಧಿಗಳಾದ ಶಂಕರ ಡಿ.ಪೂಜಾರಿ, ಮೋಹನ್ ಜಿ.ಪೂಜಾರಿ, ವಿಶ್ವನಾಥ ತೋನ್ಸೆ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ವಾರ್ಷಿಕೋತ್ಸವ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಧ್ಯಾಹ್ನ 3.00 ಗಂಟೆಯಿಂದ ಸ್ಥಳೀಯ ಸಮಿತಿಯ ಸದಸ್ಯರಿಂದ ನೃತ್ಯ, ಆ ಬಳಿಕ ಲತೀಶ್ ಮೋಹನ್ ಪೂಜಾರಿ ನಿರ್ದೇಶನದಲ್ಲಿ ಗುರುನಾರಾಯಣ ತುಳು ನಾಟಕೋತ್ಸವ-2016ರ ಪ್ರಥಮ ಬಹುಮಾನ ವಿಜೇತ ಸ್ಥಳೀಯ ಸಮಿತಿ ಸದಸ್ಯರಿಂದ ಸ್ಥಳೀಯ ಸಮಿತಿ ಸದಸ್ಯರಿಂದ `ಮಣ್ಣಿ' ತುಳು ನಾಟಕ ಸ್ಥಳೀಯ ಸಮಿತಿ ಸದಸ್ಯರು ಪ್ರದರ್ಶಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಪ್ರಮಿತ್ ಬರೊಟ್ ರಚಿಸಿ ಲತೀಶ್ ಮೋಹನ್ ಪೂಜಾರಿ ನಿರ್ದೇಶಿಸಿರುವ `ಲಗೋರಿ' ಹಿಂದಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಜಿ.ಅಂಚನ್ ಹಾಗೂ ಗೋರೆಗಾಂವ್ ಸ್ಥಳೀಯ ಸಮಿತಿ ಗೌ| ಕಾರ್ಯದರ್ಶಿ ಶಶಿಧರ್ ಆರ್.ಬಂಗೇರ ತಿಳಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here