Thursday 25th, April 2024
canara news

ಮುಂಬಯಿ ಚೆಂಬೂರುನಲ್ಲೊಂದು ಚೈನಾನಾಡು ಸೃಷ್ಠಿಸಿದ ಗಣೇಶೋತ್ಸವ

Published On : 07 Sep 2016   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.7: ಮುಂಬಯಿಯಾದ್ಯಂತ ಗಣೇಶ ಚತುಥಿರ್ü ಸಂಭ್ರಮವು ಶಾಸ್ತ್ರೋಕ್ತವಾಗಿ ಆಚರಿಸಲಾಗು ತ್ತಿದ್ದು, ಮಹಾನಗರದಲ್ಲಿನ ತುಳುಕನ್ನಡಿಗರ ಸಾಮರಸ್ಯದ ಬಾಳ್ವೆಗೆ ಚೆಂಬೂರು ತಿಲಕನಗರದಲ್ಲಿನ ಸಹ್ಯಾದ್ರಿ ಕ್ರೀಡಾ ಮಂಡಲ (ರಿ.) ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಕೈಗನ್ನಡಿಯಂತಿದೆ.

ಛೋಟಾ ರಾಜನ್ ಮಂಡಳಿ ಎಂದೇ ಜನಜನಿತ ಈ ಸಹ್ಯಾದ್ರಿ ಕ್ರೀಡಾ ಮಂಡಲವು 2002ರಲ್ಲಿ ಮೈಸೂರು ಪ್ಯಾಲೇಸ್ ನಿರ್ಮಿಸಿ ಗಣೇಶೋತ್ಸವ ಸಂಭ್ರಮಿಸಿ ಬಾರೀ ಜನಸ್ತೋಮ ಸೇರಿ ದಾಖಲೆ ರೂಪಿಸಿತ್ತು. ಈ ಬಾರಿ 40ನೇ ವಾರ್ಷಿಕ ಗಣಪತಿ ಉತ್ಸವದ ನಿಮಿತ್ತ ಧರ್ಮಶ್ರದ್ಧೆಯಿಂದ ದೂರಸರಿಯುವ ಭವಿಷ್ಯತ್ತಿನ ಪ್ರಜೆಗಳಲ್ಲಿ ಧಾರ್ಮಿಕ ಅರಿವು ಮೂಡಿಸುವ ಉದ್ದೇಶವನ್ನಿರಿಸಿ ಮಕ್ಕಳ ಚಿತ್ತಾಕರ್ಷಣೆಗೈಯುವ ಚೈನಾ ರಾಷ್ಟ್ರದ ಪಾಂಡ ವಿಲೇಜ್ ಸೃಷ್ಠಿಸಿ ವಿಶೇಷತೆ ಮೆರೆದಿದೆ. ಉತ್ಸವವನ್ನು ಬಹಳ ವಿಜೃಂಭನೆಯಿಂದ ನಡೆಸಲ್ಪಡುತ್ತಿದ್ದು, ಪ್ರತಿವರ್ಷವು ಮಂಡಲದ ಸಭಾಂಗಣ ಹೊರ, ಒಳ ವಲಯ ಮತ್ತು ಅದರ ಅಲಂಕಾರವನ್ನು ವಿವಿಧ ರೀತಿಯಲ್ಲಿ ಶೃಂಗಾರಿಸಿ ಮನಸ್ಸೆಳೆಯುವಂತೆ ನಿರ್ಮಿಸಲಾಗಿದೆ.

ಸಾವಿರಾರು ಅಡಿ ವಿಸ್ತೀರ್ಣದ ಜಾಗದೊಳಗೆ ಪಾಂಡ ವಿಲೇಜ್ ರಚಿಸಿ ಅದರೊಳಗೆ ಐಸ್‍ಲ್ಯಾಂಡ್‍ನಲ್ಲಿ ತೊರೆಯಂತೆ ಧಾರೆಗಟ್ಟಿ ಕೆರೆಗೆ ಹಾರಿಯುವ ನೀರಿನ ಕಲರವ ನೋಡುಗರನ್ನು ಪುಳಕಿತ ಗೊಳಿಸುವಂತಿದೆ. ಬಿದಿರಿನ ಸಂಕದ ಬದಿಗಿನ ನೀರಗಲ್ಲು ಗುಡ್ಡದ ಪರಿಸರವನ್ನಾವರಿಸಿದ ಹಿಮದ ಪ್ರಾಕೃತಿಕ ನೋಟದ ಸುತ್ತ ಹುಲ್ಲುಗಾವಲಿನ ಸುತ್ತಾ ಮನಾಕರ್ಷಕ ಪುಷ್ಫಗಿಡಗಳ ಪಕ್ಕದೊಳು ತಂಪು ನೆರಳನ್ನು ಹಾಯಿಸುವ ಮರಗಳ ಮಧ್ಯೆ ಆಗಸದಲ್ಲಿ ಮಿನುಗುವ ತಾರೆಗಳ ಚಿತ್ರಣವೆಲ್ಲವೂ ಒಂದೆಡೆ ಎಲ್ಲರ ಚಿತ್ತಾಕರ್ಷಿಸಿದರೆ, ಮುದ್ದುಮುದ್ದಾದ ಹಿಮಪ್ರಾಣಿಗಳು ಮಕ್ಕಳನ್ನು ಮೋಹಕಗೊಳಿಸುವಂತಿದೆ. ಕಳೆದ ಎರಡು ತಿಂಗಳಿಂದ ಪ್ರಸನ್ನಜೀತ್ ಚಂದ ಮತ್ತು ಅವರ ಕಲಾಕಾರರು ಈ ಪಾಂಡ ವಿಲೇಜ್ ರಚಿಸುವಲ್ಲಿ ಶ್ರಮಿಸಿದ್ದರು.

ಸ್ಥಾನೀಯ ನಿವಾಸಿ ಛೋಟ ರಾಜನ್ (ನಿಕಾಳ್ಜೆ) ಅವರ ಸಾರಥ್ಯದ ಮಂಡಳಿ ಎಂದೇ ಪ್ರಸಿದ್ಧಿಯೊಂದಿಗೆ ಕಳೆದ ಸುಮಾರು ನಾಲ್ಕು ದಶಕಗಳಿಂದ ಅತೀ ವಿಜೃಂಭನೆಯಿಂದ ಇಲ್ಲಿ ಮಹಾಗಣಪತಿಯನ್ನು ಆರಾಧಿಸಲ್ಪಡುತ್ತದೆ. ಈ ಭಾರಿ ಆರುವರೆ ಅಡಿ ಎತ್ತರದ ವಿಷ್ಣು ರೂಪಿತ ಗಣಪತಿಯನ್ನು ಪೂಜಿಸಲ್ಪಡುತ್ತಿದ್ದು ಪುರೋಹಿತ ರಾಮಚಂದ್ರ ನಾರಾಯಣ ವಾಟ್‍ವೇ ತಮ್ಮ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಗಣಪತಿಯನ್ನು ಆರಾಧಿಸುತ್ತಿದ್ದಾರೆ. ಪ್ರತಿಷ್ಠಾಪನೆಯಲ್ಲಿ ಮಂಡಳದ ಅಧ್ಯಕ್ಷ ರಾಹುಲ್ ಜಿ.ವಾಳಂಜೆ ಮತ್ತು ಮನೀಷಾ ವಾಳಂಜೆ, ಉಪಾಧ್ಯಕ್ಷ ಜಯ ಎ.ಶೆಟ್ಟಿ ಮತ್ತು ಛಾಯಾ ಜೆ.ಶೆಟ್ಟಿ, ಕಾರ್ಯದರ್ಶಿ ಅಶೋಕ್ ಸಾತಡೇಕರ್, ಸುಜಾತಾ ಆರ್.ನಿಕಾಳ್ಜೆ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ತೂಗು ಸೇತುವೆ, ಹೊಳೆಯ ಜಲ, ಐಸ್‍ಲ್ಯಾಂಡ್ ಗುಡ್ಡದ ಸುತ್ತ ಕಣ್ಸೆಳೆಯುವ ನಾಸೂಕು ಎಲೆಗಳ ಮರಗಿಡಗಳ ಅರಣ್ಯವನ್ನೊಳಗೊಂಡು ಪರಿಸರಸಯ್ಯ ವಾತಾವರಣ ನಿರ್ಮಿತ ಗಣಪತಿ ಮಂಡಳಕ್ಕೆ ದಿನಂಪ್ರತಿ ಸುಮಾರು 25,000ಕ್ಕೂ ಅಧಿಕ ಭಕ್ತರು ಆಗಮಿಸಿ ಗಣಪತಿ ದರ್ಶನ ಪಡೆಯುತ್ತಿದ್ದು, ಈ ಬಾರಿ ನಗರದಾದ್ಯಂತದ ಹಲವು ಶಾಲೆಗಳ ಸುಮಾರು ನಾಲ್ಕು ಸಾವಿರ ಮಕ್ಕಳು ಆಗಮಿಸಿ ಪಾಂಡ ವಿಲೇಜ್ ವೀಕ್ಷಿಸಿ ಆನಂದವನ್ನು ಆಸ್ವಾದಿಸಲಿದ್ದ್ದಾರೆ. ಸದಾ ವಾಟ್ಸ್‍ಆ್ಯಪ್, ಮೊಬಾಯ್ಲ್, ಇಂಟರ್‍ನೆಟ್, ಆ್ಯಪ್, ಕಂಪ್ಯೂಟರ್‍ಗಳಿಗೆ ಬದುಕನ್ನು ಮೀಸಲಾಗಿಸಿ ಬಣ್ಣದ ಲೋಕದಲ್ಲಿ ಧರ್ಮದ ಅರಿವಿನಿಂದ ದೂರಸರಿಯುವ ಮಕ್ಕಳಲ್ಲಿ ಶಾರೀರಿಕ ಚಲನವಲನಕ್ಕೆ ಅವಕಾಶ ಒದಗಿಸುತ್ತಾ ಧರ್ಮದತ್ತ ಮಕ್ಕಳ ಚಿತ್ತ ಉದ್ದೇಶವಾಗಿರಿಸಿ ಈ ಬಾರಿ ಸಹ್ಯಾದ್ರಿ ಸಂಸ್ಥೆ ಗಣೇಶೋತ್ಸವ ಸಂಭ್ರಮಿಸುತ್ತಿದ್ದೆ. ಹಿಂದೂ ಪರಂಪರೆ ಅಂತೆಯೇ ಭವ್ಯ ಮೆರವಣಿಗೆಯೊಂದಿಗೆ ಧರ್ಮಾನಿಷ್ಠತೆ ಯೊಂದಿಗೆ ಅನಂತ ಚತುರ್ಧಶಿ ದಿನ ಗಣಪನನ್ನು ವಿಸರ್ಜಿಸಲಾಗುವುದು. ನ್ಯಾಯಲಯ, ಸರಕಾರ, ಗೃಹಖಾತೆಯ ನಿಯಮಾನುಸಾರವೇ ಗಣೇಶೋತ್ಸವ ನಡೆಸಲಾಗುವುದು.ಎಂದು ಉಪಾಧ್ಯಕ್ಷ ಜಯ ಎ.ಶೆಟ್ಟಿ ವರ್ಲಿ ತಿಳಿಸಿದರು.

ಇಂದಿಲ್ಲಿ ಮಧ್ಯಾಹ್ನ ನಡೆಸಲ್ಪಟ್ಟ ಮಹಾರತಿಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸುರೇಂದ್ರ ಶೆಟ್ಟಿ, ಸುನಂದಾ ಎಸ್.ಶೆಟ್ಟಿ, ವಿಶ್ವ ಶಾಂತಿ ಸಂಸ್ಥೆಯ ಕನೂರು ಕಲತಂತ್ರಿ, ಎಸ್.ಪಾರ್ಥೊ ಭಾಗವಹಿಸಿ ಗಣಪತಿ ಸ್ತುತಿಗೈದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here