Thursday 25th, April 2024
canara news

ವಿೂರಾರೋಡ್ ಪೂರ್ವದ ಸಂತ ಜೋಸೆಫ್ ಇಗರ್ಜಿಯಲ್ಲಿ ಕನ್ಯಾ ಮೇರಿ ಜನ್ಮೋತ್ಸವ

Published On : 08 Sep 2016   |  Reported By : Richard D'Souza


ಮಾತೆಯ ಮನಾಕರ್ಷಕ ಮಕ್ಕಳಾಗೋಣ: ಫಾ| ಜೋಸೆಫ್ ಮಾರ್ಟಿಸ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.08: ಮುಂಬಯಿ ಉಪನಗರದ ಮಿನಿ ಮಂಗಳೂರು ಪ್ರಸಿದ್ಧಿಯ ವಿೂರಾರೋಡ್ ಪೂರ್ವದ ಸೀತಲ್ ನಗರದಲ್ಲಿನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಇಂದಿಲ್ಲಿ ಗುರುವಾರ ಬೆಳಿಗ್ಗೆ ಕನ್ಯಾ ಮೇರಿ ಜನ್ಮೋತ್ಸವವನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು.

ಸಂತ ಜೋಸೆಫ್ ಸೆಮಿನರಿ ಜೆಪ್ಪು ಮಂಗಳೂರು ಇದರ ಮುಖ್ಯಾಧಿಕಾರಿ (ರೆಕ್ಟರ್) ರೆ| ಫಾ| ಜೋಸೆಫ್ ಮಾರ್ಟಿಸ್ ಅವರು ಸಂಭ್ರಮಿಕ ಕೃತಜ್ಞತೆ ಬಲಿಪೂಜೆ ನೆರವೇರಿಸಿ ಪ್ರಸಂಗವನ್ನಿತ್ತರು. ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಮೆಲ್ವಿನ್ ಡಿ'ಕುನ್ಹಾ (ಒಸಿಡಿ) ಹೊಸ ಭತ್ತದ ತೆನೆಗಳನ್ನು, ಕೃಷಿಕರಿಂದ ಅರ್ಪಿಸಲ್ಪಟ್ಟ ದವಸ-ಧಾನ್ಯ ಬೆಳೆ, ತರಕಾರಿಗಳನ್ನು ಆಶೀರ್ವಾದಿಸಿ ತೆನೆಹಬ್ಬ ಸಂಭ್ರಮಕ್ಕೆ ಮೆರುಗು ನೀಡಿದರು.

ಫಾ| ಮಾರ್ಟಿಸ್ ನೀತಿಬೋಧಕ ಪ್ರಸಂಗವನ್ನೀಡಿ ಕನ್ಯಾ ಮರಿಯಮ್ಮ ದೇವರ ರಕ್ಷಣಾ ಯೋಜನೆಯ ಪ್ರಥಮ ಫಲವಾಗಿರುವ ಕಾರಣವೇ ಈ ಸಂಭ್ರಮವನ್ನು ಪ್ರಕೃತಿ ಸಂಭ್ರಮವನ್ನಾಗಿ ಆಚರಿಸುತ್ತಾರೆ. ಕನ್ಯಾ ಮರಿಯಳ ಜನ್ಮೋತ್ಸವ ಸಡಗರವು ಇಡೀ ಲೋಕಕ್ಕೆ ಆನಂದದಾಯಕ. ಆದುದರಿಂದ ಪ್ರಕೃತಿಯ ಪ್ರಥಮ ಫಲಗಳು ಭಗವಂತನ ಔದಾರ್ಯತಾ ಉತ್ಪನ್ನಗಳಾಗಿದ್ದು ಇದನ್ನು ನಾವು ಜಾಗರೂಕತೆಯಿಂದ ಬಳಸಿ ಪರರ ಹಸಿವಿನ ಬಗ್ಗೆಯೂ ಚಿಂತಿಸಿ ಅವರಿಗಾಗಿಯೂ ಮೀಸಲಿಟ್ಟಾಗ ಸರ್ವರ ಒಳಿತಾಗುವುದು. ಸರ್ವರ ಉದ್ದೇಶಗಳನ್ನು ಪೂರೈಸುವ ಕನ್ಯಾ ಮೇರಿ ಜನ್ಮೋತ್ಸವ ಕ್ರೈಸ್ತರ ರಕ್ತ ಸಂಬಂಧತೆಯ ಹಬ್ಬವಾಗಿದೆ. ಆದುದರಿಂದ ಇದು ಚಾರಿತ್ರಿಕ ಮಾನ್ಯತೆ ಹೊಂದಿದೆ. ಮುಕ್ತಿಯನ್ನೀಡುವ ಈ ಸುದಿನ ಇತಿಹಾಸ ಸಾರುತ್ತಿದ್ದು ದಯಾಳುತ್ವದ ಮೇರಿಯಮ್ಮ ವಿಶ್ವದ ಜನನಿಯಾಗಿದ್ದಾರೆ. ಪ್ರಕೃತಿಮಾತೆಯ ಸ್ಮರಣೆಯ ದಿನಾಚರಣೆ ಮೊಂತಿಹಬ್ಬ ಆಗಿದೆ. ದೇವಮಾತೆಯನ್ನು ಹರಸುವ ಸುದಿನವೂ ಹೌದು. ನಿರಾಳ ಅನುಭವ ನೀಡುವ ಹಿತಕರ ಕಾಲದಲ್ಲಿ ಸಮೃದ್ಧಿ ಒದಗಿಸಿದ ಭಗವಂತನನ್ನು ಮಾತೆಯ ಮುಖೇನ ವಂದಿಸುವ ಸಕಾಲಕ್ಕೆ ಸಿದ್ಧವಾದ ಜನತೆಗೆ ಹೊಸ ಬದುಕಿನ ಜೀವಕಳೆ ತುಂಬುವ ಸುದಿನ ಇದಾಗಿದೆ. ನೆಲದ ಸಂಸ್ಕೃತಿ ಪೆÇೀಷಿಸುವ ಕ್ರೈಸ್ತರು ಮಾತೆಯ ಮೂಲಕ ಜಗತ್ತನ್ನೇ ಗೌರವಿಸುವ ಇಂದು ಪ್ರಕೃತಿ ಮಾತೆಯನ್ನು ಪೂಜಿಸುವ ಕ್ರೈಸ್ತರ ಶುಭದಿನವೇ ಮೊಂತಿ ಹಬ್ಬದ ವಿಶೇಷತೆ ಎನ್ನುತ್ತಾ ನೆರೆದ ಸಮಸ್ತ ಮಾತೆ ಮೇರಿ ಭಕ್ತಾಭಿಮಾನಿಗಳನ್ನು ಅನುಗ್ರಹಿಸಿದರು.

ಫಾ| ಜೋಕಿಂ ರೋಡ್ರಿಗಸ್, ಫಾ| ಡೈಗೋ ಪೆÇ್ರಯೆನ್ಕ, ಫಾ| ಡೆನಿಸ್ ಮಿಸ್ಕಿತ್ ಪೂಜೆಯಲ್ಲಿ ಸಹಭಾಗಿಗಳಾಗಿದ್ದು, ಫಾ| ಡೇನಿಯಲ್ ಕ್ರಿಶ್ಚನ್, ಫಾ| ಲ್ಯಾನ್ಸಿ ಡಿ'ಸೋಜಾ ಧಾರ್ಮಿಕ ವಿಧಿಗಳಲ್ಲಿ ಸಹಭಾಗಿಗಳಾಗಿದ್ದರು. ಕ್ಯಾಜಿಟನ್ ಡಾಯಸ್ ಸಂಗೀತದ ಕಾರ್ಮೆಲಿತ್ ಧರ್ಮಿಷ್ಟರಿಂದ ರಚಿತ ತುಜಿ ದಯಾಲ್ ದೀಶ್ಟ್ ಭಕ್ತಿಗಾಯನದ ಸಿಡಿ ಫಾ| ಮಾರ್ಟಿಸ್ ಬಿಡುಗಡೆ ಗೊಳಿಸಿದ್ದು, ಫಾ| ಮೆಲ್ವಿನ್ ಮಾನ್ಯರಿಗೆ ಗೌರವಾರ್ಥ ಮೇಣದ ಬತ್ತಿ ನೀಡಿ ಗೌರವಿಸಿದರು. ಅರುಣ್ ನೋರೋನ್ಹಾ ದಾನಿಗಳ ಯಾದಿ ವಾಚಿಸಿದರು.

ಪೂಜೆಯ ಬಳಿಕ ಅಲಂಕೃತ ವೆಲಂಕಣಿ ಮಾತೆಯ ಪುಸ್ಥಳಿಯನ್ನು ಭವ್ಯ ಮೆರವಣಿಗೆಯಲ್ಲಿ ಸ್ಥಾನೀಯ ಬೀದಿಗಳಲ್ಲಿ ಕೊಂಡೊಯ್ದು ಹಬ್ಬದ ಸಂಭ್ರಮವನ್ನು ನಗರದಾದ್ಯಂತ ಪಸರಿಸುತ್ತಾ ಶುಭಹಾರೈಸಿದರು. ಸೈಂಟ್ ಜೋಸೆಫ್ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್‍ನ ಆಧ್ಯಾತ್ಮಿಕ ನಿರ್ದೇಶಕ ಫಾ| ಮೆಲ್ವಿನ್ ಡಿ'ಕುನ್ಹಾ ನಿರ್ದೇಶನದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಡೈಗೋ ರೋಡ್ರಿಗಸ್, ಉಪಾಧ್ಯಕ್ಷ ವಿಲ್ಸನ್ ಡಿ'ಸೋಜಾ, ಕಾರ್ಯದ ರ್ಶಿ ಸೋಫಿ ಡೆ'ಸಾ, ಕೋಶಾಧಿಕಾರಿ ಲಾರೇನ್ಸ್ ಮಥಾಯಸ್, ಜತೆ ಕಾರ್ಯದರ್ಶಿ ಜೆರಾಲ್ಡ್ ಡಿ'ಸೋಜಾ, ಜತೆ ಕೋಶಾಧಿಕಾರಿ ಜೋನ್ ಕೊರೆಯಾ, ಸಾಂಸ್ಕೃತಿಕ ಕಾರ್ಯದರ್ಶಿ ಜೊಸ್ಸಿ ಗೋನ್ಸಾಲ್ವಿಸ್, ಜತೆ ಕಾರ್ಯದರ್ಶಿ ವಿಕ್ಟರ್ ಮಸ್ಕರೇನ್ಹಾಸ್, ಮಾಜಿ ಪದಾಧಿಕಾರಿಗಳಾದ ಜೋನ್ ಕ್ರಾಸ್ತ, ವೈಲೇಟ್ ಮಸ್ಕರೇನ್ಹಾಸ್, ಜೋಯ್ ಪಾಲಡ್ಕ, ಸೇರಿದಂತೆ ಇತರೇ ಪದಾಧಿಕಾರಿಗಳು ಮತ್ತು ಸದಸ್ಯರು ಕರ್ನಾಟಕ ಕರಾವಳಿ ಕೊಂಕಣಿ ಕ್ರೈಸ್ತ ಜನತೆ ರೂಢಿಸಿರುವ ಸಂಪ್ರದಾಯಿಕ ಹಬ್ಬವನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಆಚರಿಸಿ ಮಾತೆ ಮೇರಿ, ಸ್ತ್ರೀಯರು ಹಾಗೂ ಪ್ರಕೃತಿಯನ್ನು ಸ್ತುತಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here