Thursday 25th, April 2024
canara news

ಪರಿಸರ ಕಾಳಜಿಯೊಂದಿಗೆ ಸಂಭ್ರಮಿಸಲ್ಪಟ್ಟ ದಾಂಪತ್ಯ ರಜತ ಸಂಭ್ರಮ ಎರಡು ಕಿಲೋಮೀಟರ್ ವರೆಗೆ 150 ಗಿಡಗಳೊಂದಿಗೆ ವೃಕ್ಷಾರೋಹಣ

Published On : 09 Sep 2016   |  Reported By : Rons Bantwal


ಮುಂಬಯಿ, ಸೆ.09: ಪರಿಸರ ನಾಶದ ಬಗ್ಗೆ ವಿಶೇಷ ಕಾಳಜಿಯಿಂದ ಗಿಡನೆಟ್ಟು ಪೆÇೀಷಿಸುವ ಕಾರ್ಯ ಅಭಿನಂದನಿಯ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು ಅವರು ಉದ್ಯಮಿ ಸಮಾಜ ಸೇವಕ ನಲ್ಯಗುತ್ತು ಪ್ರಕಾಶ್ ಟಿ. ಶೆಟ್ಟಿ ದಾಂಪತ್ಯ ರಜತ ಸಂಭ್ರಮ ಪ್ರಯುಕ್ತ ಕಿನ್ನಿಗೋಳಿ ಪಕ್ಷಿಕೆರೆ ಅಲ್ಲಿನ ಪಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೃಕ್ಷಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಕಾಶ್ ಶೆಟ್ಟಿ ಅವರದ್ದು ಸಾಮಾಜಿಕ ಕಳಕಳಿ ಹೊಂದಿದ ಅಪ್ರತಿಮ ವ್ಯಕ್ತಿತ್ವ. ಕೇವಲ ತಮ್ಮ ಉದ್ಯಮದಲ್ಲಿ ಮಾತ್ರ ತೊಡಗಿಕೊಳ್ಳದೆ ಸಮಾಜ ಸೇವೆಯಲ್ಲೂ ತೊಡಗಿಕೊಂಡದ್ದು ಅಭಿನಂದನೀಯ ಎಂದರು.

ಬಾಲ್ಯದ ದಿನಗಳಲ್ಲಿ ಪರಿಸರದ ಮದ್ಯೆ ಬೆಳೆದವನು ಇಂದಿನ ದಿನದಲ್ಲಿ ಪರಿಸರ ನಾಶವಾಗುತ್ತಿದೆ ಪ್ರತಿಯೊಬ್ಬರು ಗಿಡ ನೆಟ್ಟು ಪೆÇೀಷಿಸಿದರೆ ಉತ್ತಮ ಎಂದು ಪ್ರಕಶ್ ಶೆಟ್ಟಿ ಹೇಳಿದರು.

ಸತೀಶ್ ಶೆಟ್ಟಿ ನಲ್ಯಗುತ್ತು ಪ್ರಸ್ತವನೆಗೈದರು, ಪಂಜದಿಂದ ಕೆಮ್ರಾಲ್ ಶಾಲೆವರೆಗೆ ರಸ್ತೆ ಬದಿ ಸುಮಾರು ಎರಡು ಕಿಲೋಮೀಟರ್ ವರೆಗೆ 150 ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಶಿಬರೂರು ಪಡುಮನೆ ಸದಾನಂದ ಶೆಟ್ಟಿ, ಕಾಪೆರ್Çರೇಶನ್ ಬ್ಯಾಂಕ್ ಪ್ರಬಂಧಕ ಪ್ರವೀಣ್ ಉಳ್ಳಾಲ್, ಅರಸು ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಶೆಟ್ಟಿ, ಉದ್ಯಮಿ ಧನಂಜಯ ಶೆಟ್ಟಿಗಾರ್, ಸೀತಾರಾಮ, ಸುಧಾಕರ ಪೂಂಜ, ಶಾಲಾ ಮುಖ್ಯ ಶಿಕ್ಷಕಿ ಐರಿನ್ ಡಿ'ಸೋಜ, ಪ್ರೌಡ ಶಾಲಾ ಮುಖ್ಯ ಶಿಕ್ಷಕಿ ಸಂದ್ಯಾ ಹೆಗ್ಡೆ ಕೆಮ್ರಾಲ್ ಪಂಚಾಯತ್ ಸದಸ್ಯ ಸುರೇಶ್ ಪಂಜ, ಕುಮಾರಿ ಆಶಾ, ಸುಮತಿ ಮತ್ತಿತರರು ಉಪಸ್ಥಿತರಿದ್ದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here