Saturday 20th, April 2024
canara news

ವಲೈಂಟನ್ ಡಿ’ಸೋಜಾ ಡಿವೈಎಸ್‍ಪಿ ಪದೋನ್ನತಿ

Published On : 10 Sep 2016   |  Reported By : Rons Bantwal


ಮಂಗಳೂರು, ಸೆ.09: ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳದಾದ್ಯಂತ ದಕ್ಷ ಪೊಲೀಸ್  ಅಧಿಕಾರಿಯಾಗಿದ್ದು ಸದ್ಯ ಮಂಗಳೂರು ಕಮಿಶನರೇಟ್‍ನ ಸಿಟಿ ಕ್ರೈಂ ಬ್ರ್ಯಾಂಚ್‍ನಲ್ಲಿ (ಸಿಸಿಬಿ) ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ವಲೈಂಟನ್ ಡಿ’ಸೋಜಾ ಅವರನ್ನು ರಾಜ್ಯ ಗೃಹ ಇಲಾಖೆಯು ಇದೀಗ ಡೆಪ್ಯೂಟಿ ಸೂಪರಿನ್‍ಟ್ನೆಡಂಟಲ್ ಆಫ್ ಪೆÇಲೀಸ್ (ಡಿವೈಎಸ್‍ಪಿ) ಮಂಗಳೂರು ಪದೋನ್ನತಿ ನೀಡಿದೆ.

ಮೂಲತಃ ಉಡುಪಿ ಜಿಲ್ಲೆಯ ಕಲ್ಯಾಣ್ಪುರ ಸಂತೆಕಟ್ಟೆ ನಿವಾಸಿ ಆಗಿರುವ ವಲೈಂಟನ್ ಅವರು ಪೊಲೀಸ್  ಇಲಾಖೆಯಲ್ಲಿ ವಿವಿಧ ಹುದ್ದೆಗಳೊಂದಿಗೆ ಸೇವೆ ಸಲ್ಲಿಸಿ ಭೂಗತ ಮತ್ತು ಕ್ರೈಂ ಲೋಕದ ಪಾತಕಿಗಳ ಸದೆಬಡಿದು ಎಂಟೆದೆಬಂಟರೆಂದೇ ಪ್ರಸಿದ್ಧಿಯಲ್ಲಿರುವರು. ಸದ್ಯ ಮಂಗಳೂರು ವಲಯ ಪೆÇಲೀಸ್ ಅಧಿಕಾರಿಯಾಗಿ ಸೇವಾನಿರತರಾಗಿದ್ದಾರೆ. ಸಮಾಜ ವಿರೋಧಿಗಳಿಗೆ ನಿಜ ಅರ್ಥದ ಸಿಂಹಸಪ್ನರೆಣಿಸಿದ್ದ ಇವರು ತನ್ನ ನಿಷ್ಠಾವಂತಿಕೆಯ ವರ್ಚಸ್ಸಿನ ಮೂಲಕ ವಿಶ್ವಾಸಾರ್ಹತೆಯನ್ನು ತುಂಬಿದ ದಕ್ಷ ಅಧಿಕಾರಿಯಾಗಿದ್ದಾರೆ. ಅವರ ಮಹತ್ವದ ಕಾರ್ಯಾಚರಣಾ ಸೇವೆ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಪೂರಕವಾಗಿದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here