Friday 29th, March 2024
canara news

ಕಟೀಲು ಶ್ರೀದುರ್ಗಾಪರಮೇಶ್ವರೀದೇವಿ ಅವಹೇಳನ-ಮುಂಬಯಿಯಲ್ಲಿ ಸಭೆ

Published On : 10 Sep 2016   |  Reported By : Rons Bantwal


ಕಟೀಲು ತಾಯಿ ಕಾಮಧೇನು ಪ್ರತಿರೂಪ : ಮಾಣಿಲ ಮೋಹನದಾಸ ಸ್ವಾಮೀಜಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.10: ಕಟೀಲಿನ ತಾಯಿ ಜಗತ್ತಿನ ತಾಯಿ ಕಾಮಧೇನು ಪ್ರತಿರೂಪ. ಸಾಧು ಸಂತರೂ ಕೇವಲ ಮಠ ಮಂದಿರ ಕಟ್ಟಲೂ ಮಾತ್ರವಲ್ಲ ಸಮಾಜದ ರಕ್ಷಣಾ ಸೇವೆ ಮಾಡಬೇಕು. ಯಾರನ್ನು ವಿರೋಧ ಪ್ರತಿರೋಧ ಮಾಡುವ ಉದ್ದೇಶ ನಮ್ಮದಲ್ಲ, ಆದರೆ ಇಂತಹ ಘಟನೆ ಆಗದಿರುವ ಜಾಗೃತಿ ಚಿಂತನೆ ಬಹಳ ಅಗತ್ಯ. ಇದಕ್ಕಾಗಿ ಇಡೀ ಸಂಘಟನೆಗಳ ಒಗ್ಗಟ್ಟಿನಲ್ಲಿ ನಮ್ಮ ಮನಸ್ಸು ಭಾವನೆಗಳು ಒಂದಾಗಬೇಕು. ಈ ದೇಶ ಬಹುಮತೀಯರ ನಾಡಾಗಿದ್ದು ಧರ್ಮೀಯ ಕಳಂಕತೆ, ಇಂತಹ ಘಟನೆಗೆ ಕಾರಣ. ಆದುದರಿಂದ ಪ್ರತಿಯೊಬ್ಬರು ಯೋಚನೆ ಮಾಡುವ ಪರಿಸ್ಥಿತಿ ಇದಾಗಿದೆ. ಇಂದು ವಿದ್ಯಾವಂತರೇ ಹಾಳಾಗುತ್ತಿದ್ದು ನಮ್ಮ ದುರದೃಷ್ಟ. ಇಂತಹ ಅಹಿತಕರ ಘಟನೆಯಿಂದ ತಾಯಿಗೆ ಅವಮಾನವಾದಾÀಗ ಆಕೆಯ ಮಕ್ಕಳಿಗೆ ಆಗುವ ನೋವು ಅಷ್ಟುಇಷ್ಟಲ್ಲ. ಧರ್ಮ ಕ್ಷೇತ್ರಗಳಲ್ಲಿ ಪೂಜೆ ಮಾಡುವಾಗ ಮುಕ್ತ ಮನಸ್ಸಿನಿಂದ ಪೂಜಿಸÀಬೇಕು. ಪ್ರತಿಯೊಂದು ಸಮಾಜ ಧಾರ್ಮಿಕ ಧಿಶಕ್ತಿಯಾಗಿದೆ. ಇದು ಖಂಡನಾ ಸಭೆ ಮಾತ್ರವಲ್ಲ ಧರ್ಮ ಜಾಗೃತಿಯ ನೆಲೆಯೂ ಹೌದು. ಸಮಾಜದ ಪರಿವರ್ತನೆಗೆ ಸಂಘಿಕತೆಯ ಅವಶ್ಯವಿರಬೇಕೇ ಹೊರತು ಸಮಾಜ ವ್ಯಕ್ತಿಗೋಸ್ಕರ ಆಗಬೇಕೇ ಹೊರತು ಜಾತಿಗೋಸ್ಕರ ಅಲ್ಲ. ಹಿಂದೂ ದೇಶದಲ್ಲಿ ನಮ್ಮದೇ ಆಚಾರ ವಿಚಾರಗಳ ಭದ್ರತೆ ಉಳಿಸಲು ನಾವೂ ಪ್ರಯತ್ನಿಸೋಣ ಎಂದು ಬಂಟ್ವಾಳ ಅಲ್ಲಿನ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ತಿಳಿಸಿದರು.

ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಿ, ಹಿಂದು ದೇವರುಗಳ ಬಗ್ಗೆ ಅಶ್ಲೀಲ ಮತ್ತು ಅವಹೇಳನಕಾರಿ ನಿಂದನೆ ಮತ್ತು ಶ್ರೀ ಕ್ಷೇತ್ರಕ್ಕೆ ಅಪಮಾನ ನಡೆಸಿರುವುದನ್ನು ಖಂಡಿಸಿ ಬಂಟ್ಸ್ ಸಂಘ ಮುಂಬಯಿ ಮತ್ತು ಮಹಾನಗರದಲ್ಲಿನ ಕಟೀಲು ಶ್ರೀದೇವಿ ಭಕ್ತವೃಂದವು ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮುಂದಾಳುತ್ವದಲ್ಲಿ ಇಂದಿಲ್ಲಿ ಶುಕ್ರವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಗೆ ಚಾಲನೆಯನ್ನೀಡಿ ನೆರೆದ ಕಟೀಲು ಮಾತೆಯ ಭಕ್ತಾಭಿಮಾನಿಗಳ ನ್ನು ಉದ್ದೇಶಿಸಿ ಮಾಣಿಲಶ್ರೀ ಮಾತನಾಡಿದರು.

ಕಿಡಿಗೇಡಿಗಳ ಇಂತಹ ದುಷ್ಕೃತ್ಯಗಳಿಂದ ಸಮಗ್ರ ಸಮಾಜದ ಸೌಖ್ಯ ಹಾಳಾಗುತ್ತದೆ. ಪರಿಣಾಮ ಸರ್ವರೂ ಎದುರಿಸಿ ಅನುಭವಿಸುವುದು ಅನಿವಾರ್ಯ. ಇದೊಂದು ಮನುಕುಲದ ಮನಾಸ್ವಸ್ಥ ್ಯ ಕೆಡಿಸುವ ತಂತ್ರವೇ ಹೊರತು ಬೇರೇನೂ ಸಾಧಿಸುವಂತಿಲ್ಲ. ಸೃಷ್ಠಿಕರ್ತೆ ದೇವಮಾತೆಗೆ ಅಪಚಾರವೆಸಗಿ ನಾಸ್ತಿಕತೆ ತೋರುತ್ತಾರೋ ಅಥವಾ ಮತಾಂಧತೆ ತೋರ್ಪಡಿಸುವರೋ ತಿಳಿಯದು ಇದು ಅವಹೇಳನಕಾರರ ದುರದೃಷ್ಟ ಎಂದೂ ಸ್ವಾಮೀಜಿ ನುಡಿದರು.


ಕಟೀಲು ದೇವಿ ತಾಯಿ ಶಾಂತಿಯ ಪ್ರೇರಣೆಯಾಗಿದ್ದಾರೆ. ಆದುದರಿಂದ ನಾವೂ ಶಾಂತಿಯಿಂದ ಹೋರಾಟ ಮಾಡುತ್ತಿದ್ದೇವೆ. ಬೇರೆ ಯಾವ ಧರ್ಮದಲ್ಲಿ ಇಂತಹದೊಂದು ಆಗಿದ್ದರೆ ಗಲಾಟೆಯಾಗುತ್ತಿದ್ದು ಆದರೆ ನಾವೂ ಶಾಂತಿಯುತವಾಗಿ ಹೋರಾಟ ನಡೆಸೋಣ. ಮುಂಬಯಿಯ ಎಲ್ಲಾ ಸಂಘ ಸಂಸ್ಥೆಗಳು ಒಂದೂಗೂಡಿ ಒಂದು ವೇದಿಕೆಯಲ್ಲಿ ಬಂದು ಸೇರಿದ್ದೇವೆ. ಇನ್ನೂ ಮುಂದೆಯೂ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಸ್ಪಂದಿಸಬೇಕು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಪ್ರಭಾಕರ್ ಶೆಟ್ಟಿ ನುಡಿದರು.

ವೇದಿಕೆಯಲ್ಲಿ ಸಭೆಯಲ್ಲಿ ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಿ.ಎಸ್.ಕೆ.ಬಿ.ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ದೇವಾಡಿಗರ ಸಂಘ ಮುಂಬಯಿ ಅಧ್ಯಕ್ಷ ವಾಸು ಎಸ್.ದೇವಾಡಿಗ, ಕುಲಾಲ ಸುಧಾರಕ ಸಂಘ ಮುಂಬಯಿ ಇದರ ಅಧ್ಯಕ್ಷ ಗಿರೀಶ್ ಜಿ.ಸಾಲ್ಯಾನ್, ತೀಯಾ ಸಮಾಜ, ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ಥಾಣೆ ಬಂಟ್ಸ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಅಧ್ಯಕ್ಷ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಬಾಂಬೇ ಬಂಟ್ಸ್ ಎಸೋಸಿಯೇಶನ್ ಇದರ ಅಧ್ಯಕ್ಷ ನ್ಯಾ| ಉಪ್ಪೂರು ಶೇಖರ್ ಶೆಟ್ಟಿ, ಬಿಲ್ಲವರ ಜಾಗ್ರತಿ ಬಳಗ ಮುಂಬಯಿ ಇದರ ಅಧ್ಯಕ್ಷ ಎನ್.ಟಿ.ಪೂಜಾರಿ, ಬಿಲ್ಲವ ಧುರೀಣ ಎಲ್.ವಿ ಅವಿೂನ್, ಮಣಿಕಂಠ ಸೇವಾ ಸಂಘಂ ನೆರೂಳ್ ಇದರ ಅಧ್ಯಕ್ಷ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ), ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಮಾತೃಭೂಮಿ ಸೊಸೈಟಿಯ ಸಿಎ| ಶಂಕರ್ ಬಿ.ಶೆಟ್ಟಿ, ಹಿರಿಯ ಸಮಾಜ ಸೇವಕ ಅತ್ತೂರು ಬಾಬು ಎನ್.ಶೆಟ್ಟಿ, ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ಘನ್ಸೋಲಿ ವೇದಿಕೆಯಲ್ಲಿ ಅಸೀನರಾಗಿದ್ದರು.

ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದು ಶ್ರೀ ದುರ್ಗೆಯ ಪೂಜೆ ಆರಾಧಾನೆ ಇದಾಗಿದೆ. ದುರ್ಗೆಯ ಅವಮಾನ ಸಹಿಸುವುದು ಸರಿಯಲ್ಲ. ನಾವೆಲ್ಲರೂ ಹಿಂದು, ಮುಸ್ಲಿಂ, ಕ್ರೈಸ್ತ, ಜೈನರ ಪ್ರೀತಿ ಬಾಂಧÀವ್ಯದಿಂದ ಬೆಸೆದÀು ಸಾಮರಸ್ಯದಿಂದ ಬಾಳಿದವರು. ಇದು ಯಾವುದೇ ಧಾರ್ಮಿಕ ಸಭೆಯಲ್ಲ. ವ್ಯಕಿಯ ಆಸ್ತಿಕ ನಾಸ್ತಿಕ ವಿಚಾರದ ಸಭೆ ಇದÀಲ್ಲ. ದುಷ್ಟರÀ ನಿರ್ಣಾಮದ ಚಿಂತನೆ ನಮ್ಮದಾಗಬೇಕು. ಹುಟ್ಟು ನೀಡಿದ ತಾಯಿ ಮತ್ತು ಭೂದೇವಿಗೆ ಇಂತಹ ಅವಮಾನ ನಾವು ಸಹಿಸ ಬಾರÀದು. ಮತ್ತೊಮ್ಮೆ ಇಂತಹ ದುರ್ಘಟನೆ ಮರುಕಳಿಸದೆರಲಿ ಎನ್ನುವ ಉದ್ದೇಶ ಈ ಸಭೆಯದ್ದಾಗಿದೆ ಎಂದರು.

ಬಂಟ್ಸ್ ಸಂಘದ ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ ಮತ್ತಿತರ ಪದಾಧಿಕಾರಿಗಳನ್ನೊಳಗೊಂಡು ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ ಸ್ವಾಮೀಜಿ ಅವರನ್ನು ಗೌರವಿಸಿದರು. ಗುಣವತಿ ವೈ.ಶೆಟ್ಟಿ ಪ್ರಾರ್ಥನೆಗೈದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಬಂಟ್ಸ್ ಸಂಘದ ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ವಂದಿಸಿದರು.

 

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here