Wednesday 24th, April 2024
canara news

ಭಾವನೆಗಳನ್ನು ವ್ಯಾಪಾರವಾಗಿಸುವ ಮನೋಧರ್ಮಿಗಳಿಗೆ ಒಲ್ಲದ ಮಾತೆ ಕಲಾಭಿಮಾನಿಗಳಿಗೆ ಸಾಮಾಜಿಕ ನೀತಿ ಉಣ್ಣಿಸಿದ ನಾಟಕ `ಮಣ್ಣಿ'

Published On : 12 Sep 2016   |  Reported By : Rons Bantwal


(ರೋನ್ಸ್ ಬಂಟ್ವಾಳ್)

ಮಾನವನ ಭಾವನೆಗಳ ಅತ್ಯಂತ ಸೂಕ್ಷ ್ಮ ಅಂಶಗಳನ್ನು ಸಮಯೋಚಿತವಾಗಿ ಒಂದು ನಿರ್ಧಿಷ್ಟ ಅಗತ್ಯವನ್ನು ವೈಯಕ್ತಿಕ ಲಾಭಕ್ಕಾಗಿ ಪಡೆಯಲೆತ್ನಿಸುವ ಮಕ್ಕಳಿಲ್ಲದ ಅನಿವಾಸಿ ಭಾರತೀಯ ಶ್ರೀಮಂತ ದಂಪತಿಗೆ ಮನಕಲುಕು ವ ರೀತಿಯಲ್ಲಿ ಬದುಕು ನಿರ್ವಹಿಸಿ ಮಹಿಳೆಯೊಬ್ಬಳು ದಿಟ್ಟತನ, ಸ್ಥೈರ್ಯದಿಂದ ಉತ್ತರಿಸುವ ನೀತಿ ಸಾರುತ್ತಿದೆ ಈ ನಾಟಕ. ಮಾನವ ಭಾವನೆಗಳನ್ನು ವ್ಯಾಪಾರವಾಗಿಸುವ ಮನೋಧರ್ಮಿಗಳಿಗೆ ಒಲ್ಲದ ಮಾತೆಯೊರ್ವಳು ಬಾಡಿಗೆ ತಾಯಿಯಾಗಿ ಅನುಭವಿಸುವ ಮಾನಸಿಕ ಹಿಂಸೆಯೇ ಈ ನಾಟಕದ ಪ್ರಧಾನ ಭೂಮಿಕೆ ಆಗಿದೆ.

ಮಾನವನ ಭಾವನೆಗಳ ಅತ್ಯಂತ ಸೂಕ್ಷ್ಮ ಸಂಗತಿಗಳು ಮತ್ತು ಒಬ್ಬ ವ್ಯಕ್ತಿ ಕೆಲವು ಅವಶ್ಯಕ ನಿರ್ಧಿಷ್ಟ ವ್ಯಯುಕ್ತಿಕ ಲಾಭಕ್ಕಾಗಿ ಭಾವನೆಗಳೊಂದಿಗೆ ಹೇಗೆ ವ್ಯವರಿಸಬಹುದು ಎಂಬ ಅಂಶಗಳನ್ನು ಮತ್ತು ಸಮಾಜದ ಇತರ ಕೆಲವು ಗಂಭೀರ ವಿಷಯಗಳನ್ನು ತುಳು ನಾಟಕ `ಮಣ್ಣಿ' ಸ್ಪರ್ಶಿಸಿದೆ. ಈ ನಾಟಕವು ಕಥಾನಾಯಕಿ ಬಿಜುಲು ಮತ್ತು ಆಕೆಯ ಮಾನಸಿಕ ಅಸ್ವಸ್ಥ ಮಗಳು ಚಿಲ್ಮಿ ಅವಳ ಸುತ್ತ ಸುತ್ತುತ್ತದೆ. ಕಡು ಬಡತನ ಎದುರಿಸುತ್ತಿರುವ ಬಿಜುಲು ತನ್ನ ಮಗಳು ಚಿಲ್ಮಿಯನ್ನು ವಿಶೇಷ ಶಾಲೆಗೆ ಸೇರಿಸುವುದಕ್ಕಾಗಿ ಹಣ ಹೊಂದಾಣಿಸಲು ಅನಿವಾಸಿ ಭಾರತೀಯ ದಂಪತಿಗೆ ಬಾಡಿಗೆ ತಾಯಿಯಾಗಲು ನಿರ್ಧರಿಸುತ್ತಾಳೆ. ಈ ಮೂಲಕ ಆ ತಾಯಿ ತನ್ನ ಮಗಳಿಗೆ ಉತ್ತಮ ಭವಿಷ್ಯ ನೀಡಲು ಹಂಬಲಿಸುತ್ತಾಳೆ. ಆದರೆ ಅದು ಪರಿಪೂರ್ಣವಾಗದೆ ಉಳಿಯುತ್ತದೆ. ಆ ತಾಯಿ ಕೆಚ್ಚೆದೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾಳೆ. ಒಟ್ಟಿನಲ್ಲಿ ಮಣ್ಣಿ ನಾಟಕ ಸಮಾಜದ ವಿಚಾರಗಳನ್ನು ಸ್ಪರ್ಶಿಸುವುದರೊಂದಿಗೆ ತಾಯ್ತನ, ಪ್ರೀತಿ, ಮಹತ್ವಾಕಾಂಕ್ಷೆ, ಪ್ರಾಮುಖ್ಯತೆ ಮತ್ತು ಆದ್ಯತೆಗಳನ್ನು ಒಳಗೊಂಡಿದೆ.

ಬುದ್ಧಿಮಾಂಧ್ಯ ಮಗುವನ್ನು ಹೆತ್ತ ಕಾರಣಕ್ಕಾಗಿ ಪತಿಯಿಂದ ಹಿಂಸಾತ್ಮಕ ಶಿಕ್ಷೆಗೊಳಪಟ್ಟ ಮಹಿಳೆಯೊಬ್ಬಳು ಕುಡುಕ ಗಂಡನಿಂದ ಬೇರ್ಪಟ್ಟು ತನ್ನ ಅನಾಥಮಗುವಿಗೆ ಸಮಾಜದಲ್ಲಿ ಶ್ರೇಷ್ಠ ನಾಗರೀಕನನ್ನಾಗಿಸುವ ಉದ್ದೇಶವಿತ್ತು ತನ್ನ ಮಗುವನ್ನು ವೈದ್ಯನನ್ನಾಗಿಸುವ ಕನಸನ್ನು ಹೊತ್ತು ಬಾಳುತ್ತಿರುವಂತೆಯೇ ತನ್ನ ಮಗುವಿನ ಭವಿಷ್ಯಕ್ಕಾಗಿ ಹಣಕಾಸು ಗಳಿಕೆಯ ಉದ್ದೇಶದಿಂದ ವೈದ್ಯಲೋಕದ ಭರವಸೆಯ ಮೇರೆಗೆ ದಾಂಪತ್ಯ ಜೀವನದಲ್ಲಿ ಒಂದು ಕುಡಿಯನ್ನೂ ಪಡೆಯಲಾಗದ ಅನಿವಾಸಿ ಭಾರತೀಯ ಶ್ರೀಮಂತ ದಂಪತಿಗೆ ಮಗುವೊಂದನ್ನು ಹುಟ್ಟಿಸಿ ಕೊಡುವ ನಿರ್ಧಾರ ಪೂರೈಸುತ್ತಾಳೆ. ಹುಟ್ಟು ಪಡೆಯುವ ಮಗು ಗಂಡಾದರೆ `ಶೀರಾ' (ಉಪಹಾರದಲ್ಲಿ ತಿನ್ನುವ ತಿಂಡಿ) ಆಗಿಯೂ ಹೆಣ್ಣಾದರೆ `ಮಣ್ಣಿ' (ತುಳುನಾಡಿನ ತಿಂಡಿ) ಎಂಬುವುದಾಗಿ ಅಲೋಚಿಸಿರುತ್ತಾಳೆ. ಆದರೆ ದುರದೃಷ್ಟತ್‍ವಶ: ಮತ್ತೆ ಬುದ್ಧಿಮಾಂಧ್ಯಯುಳ್ಳದ್ದೇ ಮಗು ಹುಟ್ಟಿದ ಪರಿಣಾಮ ಶ್ರೀಮಂತ ದಂಪತಿ ಕೆಂಡಾಮಂಡಲವಾಗಿ ಮಗುವನ್ನು ಈಕೆಗೆನೇ ಬಿಟ್ಟು ತಮ್ಮ ಪಾಡಿಗೆ ವಿದೇಶಕ್ಕೆ ಹೊರಡುತ್ತಾರೆ. ಈಕೆಗೆ ಮಗು ಹೊರೆಯ ಮೇಲೊಂದು ಹೊರೆಯಾಗಿ ಕಾಡಿದರೂ ತನ್ನ ಉದರದಲಿ ಜನಿಸಿದ ಮಗುವನ್ನು ದೇವರ ಸರ್ವೋತ್ಕೃಷ್ಟ ಕೊಡುಗೆ ಎಂದೆಣಿಸಿ ಭಾವನೆಗಳ ಕಟ್ಟೆಯೊಡೆಯದೆ ಇಬ್ಬರೂ ಮಕ್ಕಳನ್ನು ಮುದ್ದಾಗಿ ಸಾಕÀುತ್ತಾ ತಾಯ್ತನ ಮೆರೆಯುತ್ತಾಳೆ.

ನೌಶೀಲ್ ಮೆಹ್ತಾ ಮತ್ತು ಲತೇಶ್ ಎಂ. ಪೂಜಾರಿ ರಚಿತ ಈ ನಾಟಕದಲ್ಲಿ ಅನುಶಾ, ಕೃತಿಕ ಕೋಟ್ಯಾನ್, ಬ್ರಿಜೇಶ್ ಪೂಜಾರಿ, ನಿಶ್ಮಿತಾ ಕೋಟ್ಯಾನ್, ಅನೀಶ್ ಪೂಜಾರಿ, ತಕ್ಷಕ್ ಸುವರ್ಣ, ಉತ್ಪ್ರೇಕ್ಷಾ ಸುವರ್ಣ, ಕವಿತಾ ಪೂಜಾರಿ, ಸ್ನೇಹ ಸಾಲ್ಯಾನ್, ದೀಕ್ಷಿತ್ ಪೂಜಾರಿ, ಸಿದ್ಧೇಶ್ ಸಾಲ್ಯಾನ್ ತಮ್ಮ ವಿಭಿನ್ನ ಪ್ರತಿಭೆಗಳೊಂದಿಗೆ ನಾಟಕದಲ್ಲಿ ಅಭಿನಯಿಸಿದ್ದಾರೆ. ಯುವ, ಉದಯೋನ್ಮುಖ, ಪ್ರತಿಭಾನ್ವಿತ ಕಲಾಕಾರ ಲತೇಶ್ ಮೋಹನ್‍ದಾಸ್ ಪೂಜಾರಿ ಸಂಗೀತ ಮತ್ತು ನಿರ್ದೇಶನದಲ್ಲಿ ರಂಗಭೂಮಿಯಲ್ಲಿ ಪ್ರದರ್ಶಿಸಲ್ಪಟ್ಟು ಕಲಾಭಿಮಾನಿಗಳ ಮನಾಕರ್ಷಣೆಗೈದು ನೀತಿಬೋಧಕ ರಸದೌತನ ಉಣಿಸಿದ ನಾಟಕವೇ `ಮಣ್ಣಿ' ಆಗಿದೆ. ಇತ್ತೀಚೆಗೆ ಮುಂಬಯಿಯಲ್ಲಿ ಜರುಗಿಸಲಾಗಿದ್ದ ಗುರುನಾರಾಯಣ ತುಳು ನಾಟಕೋತ್ಸವ-2016ರಲ್ಲಿ ಪ್ರಥಮ ಬಹುಮಾನ ಸ್ಥಾನಕ್ಕೆ ಪಾತ್ರವಾದ `ಮಣ್ಣಿ' ತುಳು ನಾಟಕವು ಸ್ಪರ್ಧಾ ತೀರ್ಪುಗಾರರಲ್ಲಿ ಮತ್ತು ಕಿಕ್ಕಿರಿದು ತುಂಬಿದ ಸಭಿಕ ಕಲಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿರುವುದೇ ಈ ನಾಟಕದ ವಿಶೇಷತೆ ಆಗಿದೆ. ಪಾತ್ರವಾಗಿ ಕಳೆದ ಭಾನುವಾರ ಮತ್ತೆ ಪ್ರದರ್ಶನ ಕಂಡ ಪ್ರೇಕ್ಷಕರ ಭಾರೀ ಬೇಡಿಕೆಯ ಮೇರೆಗೆ ಈ ನಾಟಕವು ಕಳೆದ ಭಾನುವಾರ ಮತ್ತೆ ಪ್ರದರ್ಶನ ಕಾಣುವಂತಾಗಿರುವುದೇ ನಾಟಕದ ಹಿರಿಮೆಯಾಗಿದೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comments

shekhar Sasihithlu, mumbai    13 Sep 2016

really it is wonderful story n direction by Latesh Pujari is very good I congratulate him n his team

Uday poojary , Mumbai goregaon 9768749136    12 Sep 2016

Jakaas


Comment Here