Wednesday 24th, April 2024
canara news

ಕೈಗಾರಿಕೋದ್ಯಮಿಗಳ ಸಾಮಾಜಿಕ ಜವಾಬ್ದಾರಿC.S.Rಮಾಹಿತಿ ಶಿಬಿರ – 2016

Published On : 13 Sep 2016   |  Reported By : Bernard J Costa


ಬೃಹತ್ ಉದ್ಯಮ ಸಂಸ್ಥೆಗಳು ತಮ್ಮ ಲಾಭದಲ್ಲಿ ಶೇಕಡಾ 2% ಹಣವನ್ನು C.S.R ಅಡಿ ಎತ್ತಿಡುತ್ತಿವೆ. ಈ ಮೂಲಕ ಉದ್ಯಮಗಳು ಸಮಾಜದ ಋಣವನ್ನು ತೀರಿಸುತ್ತಾ ಇದನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಪ್ರಕ್ರಿಯೆಯಲ್ಲಿ ತಮ್ಮ ಜವಾಬ್ದಾರಿಯನ್ನು ಸದ್ದಿಲ್ಲದೇ ನಿರ್ವಹಿಸುತ್ತಿದೆ. ಆದರೆ, ನಮ್ಮ ಉಭಯ ಜಿಲ್ಲೆಯಲ್ಲಿ ಇದು ಅಷ್ಟೊಂದು ಪರಿಣಾಮವಾಗಿ ನಿರ್ವಹಣೆ ಆಗುತ್ತಿಲ್ಲ. ಇದನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಹಿತಿ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ಅವರು ಮುಂದಿನ ದಿನಗಳಲ್ಲಿ ಜವಾಬ್ದಾರಿಯನ್ನು ಹೊತ್ತು ಸಮುದಾಯಕ್ಕೆ ಸೌಲಭ್ಯ ಒದಗಿಸಬೇಕು ಇಲ್ಲದೇ ಹೋದರೆ ಹಳ್ಳಿ- ಪಟ್ಟಣಕ್ಕೆ ಹೋಲಿಕೆಯಿಂದಾಗಿ ತಾರತಮ್ಯ ಹೆಚ್ಚಾಗುತ್ತದೆ. ವಲಸೆ ಪ್ರಯಾಣ ಅಧಿಕವಾಗುತ್ತದೆ ಎಂದು ಉದ್ಯಮಿ ಶ್ರೀ ಸುದರ್ಶನ ಹೆಗ್ಡೆ ಬ್ರಹ್ಮಾವರ ಕರೆ ನೀಡಿದರು.

ಅವರು ಇತ್ತೀಚೆಗೆ ಬಾಳ್ಕುದ್ರು ಹಂಗಾರಕಟ್ಟೆಯ ಅಭಿವೃದ್ಧಿ ಸಂಸ್ಥೆ (ರಿ.) ಮತ್ತು ಬ್ರಹ್ಮಾವರ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಕೈಗಾರಿಕೋದ್ಯಮಿಗಳ ಸಾಮಾಜಿಕ ಜವಾಬ್ದಾರಿ C.S.R ಎಂಬ ಮಾಹಿತಿ ಶಿಬಿರ ಉದ್ಘಾಟಿಸಿ ಮಾತಾಡಿದರು. ಅಲ್ಲದೆ ಔದ್ಯಮಿಕ ಸಂಸ್ಥೆಗಳು ಸರಕಾರವು ಕಡ್ಡಾಯಗೊಳಿಸಿರುವ ಶೇಕಡಾ 2% ಮಿತಿಯನ್ನು ಮೀರಿ ಇನ್ನು ಹೆಚ್ಚು ಹಣ ಅ.S.ಖ ಯೋಜನೆಯಡಿ ವಿನಿಯೋಗಿಸುತ್ತಿದೆ ಎಂದರು.

ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಬ್ರಹ್ಮಾವರ ಇದರ ಅಧ್ಯಕ್ಷರಾದ ರೋ| ಅಲ್ವಿನ್ ಅಂದ್ರಾದೆ ಮಾತನಾಡುತ್ತಾ C.S.R ಒಂದು ಉದಾತ್ತ ಯೋಜನೆಯಾಗಿದ್ದು ದೊಡ್ಡ ದೊಡ್ಡ ಕೈಗಾರಿಕೆಗಳು ಸಮಾಜದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮೂಲಭೂತ ಸೌಕರ್ಯವನ್ನು ನೀಡಿ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವ ಒಂದು ಮನೋಭೂಮಿಕೆಯಾಗಿದೆ. ಎಂದರು.

ಮುಖ್ಯ ಅತಿಥಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಾಯನ ಕೇಂದ್ರ ತೆಂಕನಿಡಿಯೂರು ಇದರ ಉಪನ್ಯಾಸಕಿ ಶ್ರೀಮತಿ ಅರ್ಚನಾ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು ಇಲ್ಲಿನ ಉಪನ್ಯಾಸಕಿ ಸಲೋರ ಡಿ’ಸಿಲ್ವ, ಉದ್ಯಮಿ ಶ್ರೀ ಉದಯ ಕುಮಾರ್ ಶೆಟ್ಟಿ ಹಾಗೂ ನಿವೃತ್ತ ಆಡಳಿತಾಧಿಕಾರಿ (ಆರೋಗ್ಯ ಇಲಾಖೆ)ಯ ಕಾರ್ಕಡ ಶ್ರೀ ಮಹಾಬಲೇಶ್ವರ ಆಚಾರ್ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಮೇಶ್ ವಕ್ವಾಡಿ ಸಂಪನ್ಮೂಲ ವ್ಯಕ್ತಿ ಡಾ|| ಜಗದೀಶ ಜೋಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಉಡುಪಿ ಶ್ರೀಮತಿ ಅನಿತ ನಿರೂಪಿಸಿ, ಶ್ರೀ ರಮೇಶ್ ವಕ್ವಾಡಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಕು|| ಶ್ವೆತಾ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಡಾ|| ಜಗದೀಶ್ ಜೋಗಿ ಉಪನ್ಯಾಸ ನೀಡಿದರು. ಸುಮಾರು 149 ವಿದ್ಯಾರ್ಥಿಗಳು ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here