Thursday 25th, April 2024
canara news

ಯಕ್ಷ ಸಂಭ್ರಮ

Published On : 13 Sep 2016   |  Reported By : Bernard J Costa


ಯಕ್ಷಗಾನವು ಮನೋರಂಜನೆಯೊಂದಿಗೆ ಬೋದಪ್ರದವು ಮತ್ತು ಆರಾಧನೆ ಕಲೆಯಾಗಿದ್ದು ಸಾಹಿತ್ಯ, ಸಂಗೀತ, ನೃತ್ಯ, ಅಭಿನಯ, ಮಾತುಗಾರಿಕೆಯಲ್ಲಿ ಹರಿದು ಬರುತ್ತದೆ. ಅಲ್ಲದೆ ಭಾರತದ ಪೌರಾಣಿಕ ಕಥಾನಕಗಳ ವಿವರಣೆಯ ಮಹಾಪುರುಷರ ವ್ಯಕ್ತಿತ್ವ ತ್ಯಾಗ, ಬಲಿದಾನ, ನ್ಯಾಯ ನೀತಿ ಸದಾಚಾರಗಳ ಮಹಾಪೂರವೇ ಆಗಿದೆ. ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಕಲಿಸುವುದು ಒಂದು ಅನೌಪಚಾರಿಕ ಶಿಕ್ಷಣ ಎಂದರೆ ತಪ್ಪಾಗಲಾರದು, ಇದರಿಂದ ಒಳತು ಕೆಡುಕುಗಳ ಬಗ್ಗೆ ಜಾಗೃತಿಯಾಗುತ್ತದೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಂತಾಗುತ್ತದೆ ಎಂದು ಶ್ರೀ ಗೋಪಾಲಕೃಷ್ಣ ಶೆಟ್ಟಿ ಮಾಜಿ ಆಡಳಿತ ಧರ್ಮದರ್ಶಿಗಳು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ ಇವರು ಹೇಳಿದರು.

 

ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ(ರಿ.) ಬಾಳ್ಕುದ್ರು ಹಂಗಾರಕಟ್ಟೆಯ ಸಾರಥ್ಯದಲ್ಲಿ ಗ್ರಾಮ ವಿಕಾಸ ಪ್ರತಿಷ್ಠಾನ ಕೋಟ ಹಂದಟ್ಟು ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ ಯಕ್ಷ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಲ್ಲದೆ ಯಕ್ಷಗಾನ ಕಲಿಕೆಯಿಂದ ಭಾಷಾ ಬೆಳವಣಿಗೆ, ಧÉೈರ್ಯ, ವ್ಯಕ್ತಿತ್ವ ನಿರ್ಮಾಣದಲ್ಲಿ ಪರಿಣಾಮಕಾರಿಯಾಗಿದೆ ಮತ್ತು ಅಭಿವೃದ್ಧಿ ಸಂಸ್ಥೆ ಏರ್ಪಡಿಸುತ್ತಿರುವ ಮಕ್ಕಳ ಯಕ್ಷಗಾನ ಪ್ರಪ್ರಥಮ ಪ್ರಯೋಗ ಎಂದರು.

ಸಭಾಧ್ಯಕ್ಷತೆಯನ್ನು ಸೂಪರ್‍ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಹಾಗೂ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಕುಂದಾಪುರ ಶ್ರೀ ಕೆ.ಆರ್.ನಾೈಕ್ ಮಾತನಾಡುತ್ತಾ ಯಕ್ಷ ಸಂಭ್ರಮ ಸ್ಥಳೀಯ ಕಾರ್ಯಕ್ರಮವಾಗಿದ್ದು ಮಕ್ಕಳಲ್ಲಿ ಪೌರಾಣಿಕ ಜ್ಞಾನ, ಸ್ಥಳನಾಮಕ್ಕೆ ಪೂರಕವಾಗಿದ್ದು ಅದರ ಅಭಿರುಚಿ ಹೆಚ್ಚಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು. ಇಂತಹ ಪ್ರಯತ್ನಕ್ಕೆ ನಾವೆಲ್ಲಾ ಉದಾತ್ತ ಮನೋಭಾವನೆಯಿಂದ ಸಹಕರಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಶ್ರೀ ನಾಗರಾಜ ರಾವ್ ಮಾಲಕರು ಕಾಮಧೇನು ಕೋಕನಟ್ ಇಂಡಸ್ಟ್ರೀಸ್ ಕೋಟೇಶ್ವರ ಹಾಗೂ ಬಂಡಿಮಠ ಶ್ರೀಧರ ಆಚಾರ್ಯ, ಮಾಲಕರು ಶ್ರೀ ಮೂಕಾಂಬಿಕಾ ವುಡ್ ಇಂಡಸ್ಟ್ರೀಸ್ ಬ್ರಹ್ಮಾವರ ಮತ್ತು ಶ್ರೀ ಸುರೇಶ್ ಹುಲ್ಲುಕುತ್ರೆ ಮನೆ ಅಧ್ಯಕ್ಷರು ರಾಮ ಕ್ಷತ್ರೀಯ ಯುವ ಸಂಘ ಸಾಸ್ತಾನ ಘಟಕ ಶ್ರೀ ಮಂಜುನಾಥ ಎಸ್.ಕೆ ನ್ಯಾಯವಾದಿ, ಹಾಗೂ ಅಧ್ಯಕ್ಷರು ಗ್ರಾಮ ವಿಕಾಸ ಪ್ರತಿಷ್ಠಾನ ಕೋಟ ಹಂದಟ್ಟು, ಶ್ರೀಮತಿ ಹಾಗೂ ಬೇಬಿ ಸಾಲಿಯಾನ್ ಉಪಾಧ್ಯಕ್ಷರು ಐರೋಡಿ ಗ್ರಾಮ ಪಂಚಾಯತ್ ಮತ್ತು ಶ್ರೀ ರಮೇಶ್ ವಕ್ವಾಡಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ಅನಿತ ಉಡುಪಿ ನಿರೂಪಿಸಿದರು ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವಿಕ ಮಾತಾಡಿ ಸ್ವಾಗತಿಸಿ ಶ್ರೀಮತಿ ಲತ ಉಡುಪಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಬಾಲಕಲಾವಿದರಿಂದ “ಸುಧನ್ವ ಮೋಕ್ಷ” ಎಂಬ ಯಕ್ಷಗಾನ ನಡೆಯಿತು. ಸುಮಾರು 190 ಪೋಷಕರು, ವಿದ್ಯಾರ್ಥಿಗಳು, ಪಂಚಾಯತ್ ಸದಸ್ಯರು ಮತ್ತು ಸಮುದಾಯದವರು ವೀಕ್ಷಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here