Thursday 25th, April 2024
canara news

ಮಂಗಳೂರುನಲ್ಲಿ ಹ್ಯೂಮನ್ ಎಂಪಾವರ್‍ಮೆಂಟ್ ಎಂಡ್ ಲೈಫ್‍ಲೈನ್ ಸೊಸೈಟಿ ಅಸ್ತಿತ್ವಕ್ಕೆ

Published On : 15 Sep 2016   |  Reported By : Rons Bantwal


ಮಂಗಳೂರು, ಸೆ.15: ಸಮಾಜ ಸೇವೆಯಿಂದ ಸಿಗುವ ನೋವು ಅಪಾರ. ಅದರೆ ಸಮಾಜ ಸೇವೆಯು ಮಾನವ ವ್ಯಕ್ತಿತ್ವವನ್ನು ಕೊಂಡುಯ್ಯುತ್ತದೆ ಎಂದು ಮೂಲತವ ಫೌಂಡೇಶನ್‍ನ ಟ್ರಸ್ಟಿ ಕೆ.ಪ್ರಕಾಶ್ ಅಭಿಪ್ರಾಯ ಪಟ್ಟರು.

ಅವರು ಕಳೆದ ರವಿವಾರ ನಗರದ ಪಂಪ್‍ವೆಲ್‍ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾದ ಹ್ಯೂಮನ್ ಎಂಪಾವರ್‍ಮೆಂಟ್‍ಎಂಡ್ ಲೈಫ್‍ಲೈನ್ ಸೊಸೈಟಿ (ರಿ.) ಮಂಗಳೂರು (ಹೀಲ್) ಸಂಘಟನೆಯ ಸೇವಾರ್ಪ ಣೆ ಮತ್ತು ಸಹಾಯಧನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜ ಸೇವೆ ಎಲ್ಲರಿಂದಲೂ ಮಾಡಲು ಅಸಾಧ್ಯ. ಸಮಾಜ ಸೇವೆ ಮಾಡುವುದು ಸುಲಭದ ಕೆಲಸವಲ್ಲ ಸಮಾಜ ಸೇವೆ ದೇವರ ಸೇವೆ ಎಂದರಿತರೆ ನಿಸ್ವಾರ್ಥಸೇವೆ ಮಾಡಲು ಸಾಧ್ಯ ಎಂದು ಹೇಳಿದರು.

ಹ್ಯೂಮನ್ ರೈಟ್ಸ್‍ನ ಅಧ್ಯಕ್ಷ ಬಾಲಕೃಷ್ಣ ರೈ ಮಾತನಾಡಿ, ಜಾತಿ ಜಾತಿಗಳ ನಡುವೆ ಸಂಘರ್ಷ ನಡೆಸಲು ಮತ್ತು ಕರ್ನಾಟಕ ಬಂದ್ ಅದಾಗ ಅನಚಾರ ಮಾಡಲು ನಮ್ಮ ಯುವ ಜನತೆಗೆ ಸಮಯವಿದೆ ಆದರೆ ಇನ್ನು ಯುವ ಜನತೆ ಇವತ್ತು ಹುಟ್ಟು ಹಾಕಿದಂತಹ ಹೀಲ್ಸ್ ಸಂಸ್ಥೆಯ ಮೂಲಕ ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭ ತಲೆಸಿಮೀಯ ರಕ್ತಹೀನತೆಯಿಂದ ಬಳಲುತ್ತಿರುವ ಬಾಲಕಿ ಚಿಕ್ಸಿತೆ ಬೇಕಾಗುವ ವೆಚ್ಚಕ್ಕಾಗಿ ಮತ್ತು ಒಮಾನ್ ಬಿಲ್ಲವಸ್'ನ ಪ್ರತಿನಿಧಿ ಚಂದಿನಿ ಅವರು ಫಲನುಭವಿಗೆ ಚೆಕ್ ವಿತರಿಸಿ ಶ್ರೀಘ್ರವೇ ಗುಣಮುಖವಾಗಿ ರಾಷ್ಟ್ರದ ಸದ್ಪ್ರಜೆ ಆಗಿ ಮೆರೆಯುವಂತೆ ಹಾರೈಸಿದರು.

ಹೀಲ್ ಅಧ್ಯಕ್ಷ ರಾಮ್‍ಮೋಹನ್ ವಿದ್ಯಾಥಿರ್üನಿಯೋರ್ವಳ ಉನ್ನತ ಶಿಕ್ಷಣಕಾಗಿ 5000ರೂ ಚೆಕ್‍ನ್ನು ವಿತರಿಸಿದರು.

ಸ್ನೇಹದೀಪ್ ಆಶ್ರಮದ ಅಡಳಿತ ಟ್ರಸ್ಟಿ ತಬ್ಸೀಮ್, ಹ್ಯೂಮನ್ ರೈಟ್ಸ್ ಆಫ್ ಇಂಡಿಯಾ ಇದರ ಸದಸ್ಯ ಎಸ್.ಹನೀಫ್, ಮಂಗಳೂರು ಬಿಸಫ್ ಹೌಸ್‍ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಿರಾಕಲ್ ಮೋಂತೆರೊ, ಸಹಾನ ರೈ, ಸಾಯಿ ಗುರು ಚಾರಿಟೇಬಲ್ ಟ್ರಸ್ಟ್‍ನ ಕಾರ್ಯರ್ಶಿ ಜಯಾನಂದ್ ಉಪಸ್ಥಿತರಿದ್ದು ಹೀಲ್ ಸದಸ್ಯ ಸಂಕೇತ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಶೈಲೇಶ್ ಕುಮಾರ್ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here