Thursday 18th, April 2024
canara news

ತಪಾಸಣೆ ಬಿಗಿಗೊಳಿಸಲು ವಿ.ವಿ.ಗೆ ಕಮಿಷನರ್ ಸೂಚನೆ

Published On : 16 Sep 2016   |  Reported By : Canaranews Network   |  Pic On: Photo credit : The Hindu


ಮಂಗಳೂರು: ಮಂಗಳೂರು ವಿ.ವಿ. ಮಹಿಳಾ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕೆಮರಾ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ವಿ.ವಿ. ಕ್ಯಾಂಪಸ್ನಲ್ಲಿ ಸಾಕಷ್ಟು ಸಿ.ಸಿ. ಟಿವಿ ಅಳವಡಿಕೆ ಮತ್ತು ತಪಾಸಣಾ ವ್ಯವಸ್ಥೆ ಬಿಗಿಗೊಳಿಸಬೇಕೆಂದು ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಅವರು ವಿಶ್ವ ವಿದ್ಯಾನಿಲಯದ ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಸೆಕೆಂಡ್ ಹ್ಯಾಂಡ್ ಮೊಬೈಲ್ ಫೋನ್ ಸೆಟ್ ಖರೀದಿಸುವಾಗ ಸಾಕಷ್ಟು ಜಾಗ್ರತೆ ವಹಿಸಬೇಕು. ಮಾರಾಟ ಮಾಡುವವರ ಗುರುತು ಚೀಟಿ ಮತ್ತು ಇತರ ಸೂಕ್ತ ವಿವರ ಪಡೆದುಕೊಳ್ಳುವುದು ಅಗತ್ಯ.

ಅದೇ ರೀತಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸುವ ಅಂಗಡಿ ಮಾಲಕರು ಬಹಳಷ್ಟು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ನಕಲಿ ದಾಖಲೆ ಪತ್ರ ಸಲ್ಲಿಸಿ ಪಡೆಯುವ ಸಿಮ್ ಕಾರ್ಡ್ಗಳು ಅನಧಿಕೃತ ಸಿಮ್ಗಳಾಗಿರುತ್ತವೆ. ಈಗಾಗಲೇ ಕೆಲವು ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳ ಬಳಿ ಪತ್ತೆಯಾದ ಮೊಬೈಲ್ಗಳ ಪೈಕಿ ಶೇ. 90ರಷ್ಟು ಮೊಬೈಲ್ಗಳು ನಕಲಿ ಸಿಮ್ ಹೊಂದಿದ್ದವು ಎಂದು ಅವರು ಹೇಳಿದರು. ಮಂಗಳೂರು ಜೈಲಿನಲ್ಲಿ ಕಳೆದ ವಾರ ಪತ್ತೆಯಾದ 9 ಸಿಮ್ ಕಾರ್ಡ್ಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಅನಧಿಕೃತ ಸಿಮ್ ಕಾರ್ಡ್ ಮಾರಾಟಕ್ಕೆ ಸಂಬಂಧಿಸಿ ಮಂಗಳವಾರ 2 ಕೇಸು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. ನಕಲಿ ಸಿಮ್ ಕಾರ್ಡ್ ಹಾವಳಿ ತಡೆಗಟ್ಟುವ ಕುರಿತು ಟೆಲಿಕಾಂ ನೋಡಲ್ ಆಫೀಸರ್, ವಿಜಿಲೆನ್ಸ್ ಅಧಿಕಾರಿಗಳು ಮತ್ತು ಮೊಬೈಲ್ ಕಂಪೆನಿಗಳ ಪ್ರತಿನಿಧಿಗಳ ಸಭೆ ಕರೆದು ಕಂಪೆನಿಗಳು ನಕಲಿ ಸಿಮ್ ತಡೆಯಲು ಕೈಗೊಂಡಿರುವ ಸುರಕ್ಷಾ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here