Thursday 28th, March 2024
canara news

ಕಿರಿಯರೊಂದಿಗೆ ಬೆರೆದರೆ ಹಿರಿಯರ ನೊವೆಲ್ಲಾ ಮಾಯ; ವಿಲ್ಸನ್ ಡಿಸೋಜ

Published On : 21 Sep 2016   |  Reported By : Steevan Colaco


ತಂದೆ ತಾಯಿ ಎಷ್ಟೇ ವಿದ್ಯಾವಂತರಾಗಿದ್ದರೂ ಕಂದಮ್ಮಗಳು ಭಾಷೆ, ಸಂಸ್ಕ್ರತಿ, ಸಂಪ್ರದಾಯ, ಧರ್ಮದ ಬಗ್ಗೆ ತಿಳಿಯುವುದು ಅವರ ಅಜ್ಜ-ಅಜ್ಜಿಯರ ಮಡಿಲಲ್ಲಿ. ಮನೆಯಲ್ಲಿರುವ ಹಿರಿಯರು ತಮ್ಮ ಮೊಮ್ಮಕ್ಕಳೊಂದಿಗೆ ಹಾಡಿ, ಕುಣಿದು, ನಲಿದು ತಮ್ಮ ವೃದ್ದಪ್ಯಾದ ನೊವೆಲ್ಲಾ ಮರೆಯುತ್ತಾರೆ. ಅಜ್ಜ-ಅಜ್ಜಿಯರೊಂದಿಗೆ ಬಾಳುವ ಕಂದಮ್ಮಗಳು ಭಾಗ್ಯಶಾಲಿಗಳು ಆದರೆ ಆಧುನಿಕರಣದ ಭಾಷೆಯಲ್ಲಿ ಕಿರಿಯರು ಹಿರಿಯರಿಂದ ದೂರ ಬಾಳುವುದು ದುರದೃಷ್ಟಕರ ಎಂದು ಶಿರ್ವ ಚರ್ಚಿನ ಉಪಾಧ್ಯಕ್ಷ ಶ್ರೀ ವಿಲ್ಸನ್ ಡಿಸೋಜ ಹೇಳಿದರು.

ಅವರು, ಶಿರ್ವ ಡೊನ್ ಬೊಸ್ಕೋ ಆಂಗ್ಲ ಮಾಧ್ಯಮ ನರ್ಸರಿ ಮಕ್ಕಳ ಹಿರಿಯರದಿವಸದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ಶಿರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ|ಸ್ಟ್ಯಾನೀ ತಾವ್ರೋ ಮಾತನಾಡಿ ನಾವೆಲ್ಲಾ ನಮ್ಮ ಬಾಲ್ಯದ ದಿನಗಳಲ್ಲಿ ಅಜ್ಜ-ಅಜ್ಜಿಯರೊಂದಿಗೆ ಅವರ ಕಥೆ-ಹಾಡುಗಳನ್ನು ಕೇಳಿ, ಮನೆಮದ್ದನ್ನು ಸವಿದು ಬೆಳೆದದ್ದು ಇಂದಿನ ಕಂದಮ್ಮಗಳಿಗೆ ಈ ಸೌಭಾಗ್ಯ ವಂಚಿತವಾಗಿದೆ. ಮಕ್ಕಳ ಸುಸಂಸ್ಕ್ರತ ಬೆಳವಣಿಗೆಗೆ ಮನೆಯಲ್ಲಿ ಹಿರಿಯರ ಉಪಸ್ಥಿತಿ ಅಗತ್ಯವಾಗಿದೆ. ಎಂದರು.

ಎಲ್ಲಾ ಹಿರಿಯರ ಪರವಾಗಿ ವೇದಿಕೆಯಲ್ಲಿ ಶ್ರೀ ಸುಂದರ್ ಶೆಟ್ಟಿಗಾರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಫಾ|ಮಹೇಶ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿದರು. ಎಲ್ಲಾ ಹಿರಿಯರಿಗೆ ಆಲ್ವಿನ್‍ದಾಂತಿ ಮನೋರಂಜನಾ ಆಟಗಳನ್ನು ಆಡಿಸಿದರು. ಬಹುಮಾನಗಳನ್ನು ಹಂಚಲಾಯಿತು. ಯಾವಗಲು ಶಾಲೆಗೆ ಮಕ್ಕಳ ಹೆತ್ತವರು ಆಗಮಿಸುತ್ತಾರೆ. ಹಿರಿಯರಾದ ನಮಗೆ ನಮ್ಮ ಮೊಮ್ಮಕ್ಕಳ ಪ್ರತಿಭೆಗಳನ್ನು ವೀಕ್ಷಿಸಲು ಶಾಲೆಯು ಅನುಕೂಲ ಮಾಡಿ ಕೊಟ್ಟಿರುವುದು ಅಭಿನಂದನಾರ್ಹ ಎಂದು ಹಿರಿಯರ ಒಕ್ಕೊರಲ ಅಭಿಪ್ರಾಯವಾಗಿತ್ತು. ಬೆಂಗಳೂರು, ಚೆನೈ ಗೋವಾದಿಂದ ತಮ್ಮ ಮೊಮ್ಮಕ್ಕಳನ್ನು ನೋಡಲು ಅಜ್ಜ-ಅಜ್ಜಿಯರು ಬಂದಿದ್ದು ವಿಶೇಷವಾಗಿತ್ತು. ಶಿಕ್ಷಕಿಂಯರಾದ ಐರಿನ್ ರೊಡ್ರಿಗಸ್, ಎಮಿಲಿಯಾ, ಶಾಲೆಟ್, ಲೀನಾ, ಶನೋಯಾ ಉಪಸ್ಥಿತರಿದ್ದರು.

ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಸಾಧರಪಡಿಸಲಾಯಿತು. ಈಡೀ ಕಾರ್ಯಕ್ರಮ ಪುಟಾಣಿಗಳಾದ ವಿಯೋನಾ ಲೋಬೋ ಮತ್ತು ಜೊಹಾನ್ ನೊರೊನ್ನಾ ನಿರೂಪಿಸಿದರು. ಪುಟಾಣಿ ಜೆಸ್ವಿಟಾ ಡಿಸೋಜ ಸ್ವಾಗತಿಸಿ, ಪುಟಾಣಿ ಎಡ್ಲಿನ್ ಡಿಸೋಜ ವಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here