Thursday 25th, April 2024
canara news

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ-8ನೇ ವಾರ್ಷಿಕ ಮಹಾಸಭೆ

Published On : 24 Sep 2016   |  Reported By : Canaranews Network


ಮುಂಬಯಿ, ಸೆ.24: ಸದಸ್ಯರ ಮೆಚ್ಚುಗೆ ನಮ್ಮ ಸಂಸ್ಥೆಯ ಸಾರ್ಥಕತೆ ಮತ್ತು ಖುಷಿಯಾಗಿದೆ. ಸಂಘಕ್ಕಾಗಿ ಸಂಸ್ಥೆ ಬೇಡ ಬದಲಾಗಿ ಸದಸ್ಯರಿಗಾಗಿ ಮತ್ತು ಅವರ ಒಳಿತಿಗಾಗಿ ಸಂಸ್ಥೆಯ ಅಗತ್ಯವಿದೆ. ಕಪಸಮ ಈಗ ಖುಷಿ ಪಡುವ ಕಾಲ ಸನ್ನಿಹಿತವಾಗಿದೆ. ಅದಕ್ಕೆ ಮೂಲ ಕಾರಣ ಸದಸ್ಯರ ಸಮುಚ್ಚಯದ ಯೋಜನೆಗೆ ಪ್ರೇರಣೆಯಾಗಿದೆ. ಸದಸ್ಯರ ಈ ಕಾಳಜಿ ನಮ್ಮನ್ನು ಸಂತುಷ್ಟ ಪಡಿಸಿದೆ. ಇಂತಹ ಉದ್ದೇಶವೇ ನಮ್ಮ ಪ್ರಧಾನ ಧ್ಯೇಯವಾಗಿತ್ತು. ಇದನ್ನು ಶೀಘ್ರವೇ ಜಾರಿಗೊಳಿಸುವಲ್ಲಿ ಸರ್ವರೂ ಸಕ್ರೀಯರಾಗೋಣ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನುಡಿದರು.

ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಬಿಲ್ಲವರ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ 8ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಪಾಲೆತ್ತಾಡಿ ಮಾತನಾಡಿದರು.

`ಸಂಘವು ಕಳೆದ 8 ವರ್ಷಗಳಲ್ಲಿ ಪಾರದರ್ಶಕವಾಗಿಯೇ ಸೇವಾ ನಿರತವಾಗಿ ರಾಷ್ಟ್ರವ್ಯಾಪಿ ಮನ್ನಣೆಗೆ ಪಾತ್ರವಾಗಿದೆ. ಈ ತನಕ ಸಂಸ್ಥೆ ಯೋಚಿಸಿದ್ದು ಯೋಜನೆಯಾಗಿ ರೂಪಿಸಿದೆ. ಭವಿಷ್ಯತ್ತಿನ ದಿನಗಳಲ್ಲಿ ಸದಸ್ಯರ ಆರೋಗ್ಯನಿಧಿ, ಪತ್ರಕರ್ತರ ಭವನದ ಬಗ್ಗೆ ಚಿಂತಿಸಲಾಗುತ್ತಿದ್ದು ಸದಸ್ಯರ ಸ್ಪಂದನೆ ಇದಕ್ಕೆ ಅವಶ್ಯವಾಗಿದೆ' ಎಂದೂ ಪಾಲೆತ್ತಾಡಿ ತಿಳಿಸಿದರು ಹಾಗೂ ಲೆಕ್ಕಪರಿಶೋಧಕರಾಗಿ ಅನನ್ಯ ಸೇವೆಗೈಯುತ್ತಿರುವ ಮಹಾನಗರದಲ್ಲಿನ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಮತ್ತು ನೌಕರವೃಂದ ಸೇವೆ ಮನವರಿಸಿ ಅಭಿವಂದಿಸಿದರು.

ಸಲಹಾ ಸಮಿತಿ ಸದಸ್ಯರುಗಳಾದ ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌ| ಪ್ರ| ಕೋಶಾಧಿಕಾರಿ ಮಹೇಶ್ಸಿ.ಕಾರ್ಕಳ ಹಾಗೂ ಕಲಾಜಗತ್ತು ತೋನ್ಸೆ ವಿಜಯಕುಮಾರ್ ಶೆಟ್ಟಿ, ಹರೀಶ್ ಮೂಡಬಿದ್ರೆ ವಿಶೇಷವಾಗಿ ಉಪಸ್ಥಿತರಿದ್ದು, ಅವರಿಗೆ ಅಧ್ಯಕ್ಷರು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು.

ಡಾ| ಸುನೀತಾ ಶೆಟ್ಟಿ ಮಾತನಾಡಿ `ನಿವೇಶನ ಎಲ್ಲರಿಗೂ ಅವಶ್ಯವಾದದ್ದೇ. ಆ ನಡುವೆ ಸರಕಾರದಿಂದ ರಚಿಸಲ್ಪಡುವ ನವಿ ಮುಂಬಯಿ ಕನ್ನಡ ಭವನದಲ್ಲೂ ಸಂಘಕ್ಕೆ ಕಛೇರಿ ತನ್ನದಾಗಿಸಿ. ನಿಮ್ಮ ಅಖಿಲ ಭಾರತ ಪತ್ರಕರ್ತರ ಸಮ್ಮೇಳನದ ಕನಸು ಒಂದು ವಿಶಿಷ್ಟ ಮತ್ತು ವೈಶಿಷ್ಟ್ಯಪೂರ್ಣವಾದ ಚಿಂತನೆಯಾಗಿದೆ. ನಾಲ್ಕು ದಿನ ವಿವಿಧ ಸ್ಥಳ ಸಂದರ್ಶನದ ಜೊತೆ ಮೌಲಿಕ ವಿಚಾರಿತ ಚರ್ಚೆ, ರಾಷ್ಟ್ರದಾದ್ಯಂತದ ಪತ್ರಕರ್ತರ ಒಗ್ಗೂಡಿಸುವಿಕೆ ಅಭಿನಂದನಾರ್ಹ. ಪತ್ರಕರ್ತರು ಸಾಮಾಜಿಕ ಕ್ರಾಂತಿ ತರುವಲ್ಲಿ ಪ್ರಯತ್ನಿಸಿದಾಗ ಸ್ವಸ್ಥ ್ಯ ಸಮಾಜದ ನಿರ್ಮಾಣ ಸಾಧ್ಯವಾಗುವುದು. ಆ ನಿಟ್ಟಿನಲ್ಲಿ ಪತ್ರಿಕೆಗಳ ಪಾತ್ರವೂ ಪ್ರಮುಖವಾಗಿವೆ. ಮುಂಬಯಿಯಲ್ಲಿನ ಪತ್ರಿಕೆಗಳು ಜನರ ಅಪೇಕ್ಷೆ ಮೇರೆಗೆ ಶ್ರಮಿಸುತ್ತಿರುವುದು ಸ್ತುತ್ಯರ್ಹ' ಎಂದರು.

ನ್ಯಾ| ಮೋಹಿದ್ಧೀನ್ ಮಾತನಾಡಿ `ಬಾಡಿಗೆ ಮನೆಕ್ಕಿಂತ ಸ್ವಂತ ಮನೆ ಎಲ್ಲರ ಆಶಯ ಮತ್ತು ಉದ್ದೇಶವಾಗಿರುತ್ತದೆ. ಸಂಘದ ಸದಸ್ಯರಿಗೆ ಸ್ವಂತ ಮನೆ ಯೋಜನೆ ಸಾಧನೀಯ ಹೆಜ್ಜೆಯಾಗಿದೆ. ಅಖಿಲ ಭಾರತ ಪತ್ರಕರ್ತರ ಸಮ್ಮೇಳನ ಮೂಲಕ ಐತಿಹಾಸಿಕ ಸಾಧನೆಗೈದ ಈ ಸಂಘವು ಯಶಸ್ವೀಯಾಗಿ ಮುನ್ನಡೆಯಲಿ ಎಂದು ಅಭಿನಂದಿಸುವೆ' ಎಂದರು.

` ಈ ಸಂಸ್ಥೆ ಎಲ್ಲಾ ಸಂಘಸಂಸ್ಥೆಗಳಿಗೆ ಮಾದರಿ ಸಂಸ್ಥೆ, ಸೇವಾ ವೈಖರಿ, ಸಮಯಪ್ರಜ್ಞೆ , ಸಮಾಜದ ಕಾಳಜಿ, ಸದಸ್ಯರ ಪ್ರಯೋಜನಾತ್ವದ ಚಿಂತನೆ ಒಳ್ಳೆಯ ವಿಚಾರ. ಸಂಘದ ವಸತಿ ನಿರ್ಮಾಣದ ಯೋಜನೆ ಬಹಳ ಒಳ್ಳೆಯದು ಈ ಎಲ್ಲವುಗಳನ್ನು ರೂಪಿಸಿ ಬಲಶಾಲಿ ಸಂಘಟನೆಯಾಗಿ ಸಂಘವು ಬೆಳೆಯಲಿ ' ಎಂದÀು ನ್ಯಾ| ಪ್ರಕಾಶ್ ಶೆಟ್ಟಿ ತಿಳಿಸಿದರು.

ಸಂಘವು ಸದ್ಯ ಭವನಕ್ಕಿಂತ ನಿವೇಶನಕ್ಕೆ ಮಹತ್ವ ನೀಡದ್ದಲ್ಲಿ ಸದಸ್ಯರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದೇವೆ. ಸದಸ್ಯರು ಒಂದಾಗಿ ಮುನ್ನಡೆದರೇ ಸಂಘಕ್ಕೆ ಮತ್ತು ಸದಸ್ಯರಿಗೆ ಅನುಕೂಲ ಸಾಧ್ಯತೆ ಹೆಚ್ಚಾಗಿರುತ್ತದೆ. ಅವಾಗಲೇ ಸಾಂಘಿಕತೆಗೆ ಬಲ ಬರುವುದು. ಯಾವುದೇ ಸಂಸ್ಥೆಯಲ್ಲಿ ಮನಸ್ತಾಪ ಮರೆಯಾದಾಗ ಉತ್ಸುಕತೆಯ ಮನೋಬಲ ಹೆಚ್ಚುವುದು. ಈ ಮೂಲಕ ಸಂಸ್ಥೆ ಬಲಾಢ್ಯತೆ ಹೊಂದಲು ಸಾಧ್ಯ ಎಂದು ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ ನುಡಿದರು.

ಸಂಘದ 2016-2016ರ ಸಾಲಿನ ಲೆಕ್ಕಪರಿಶೋಧಕರನ್ನಾಗಿ ನಗರದ ಸುಪ್ರಸಿದ್ಧ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಎಂಡ್ ಕಂಪೆನಿ ಅವರನ್ನೇ ಮರು ನೇಮಕಗೊಳಿಸಲಾಯಿತು. ಸಭಿಕ ಸದಸ್ಯರ ಪರವಾಗಿ ನವೀನ್ ಕೆ.ಇನ್ನಾ, ಜನಾರ್ದನ ಎಸ್.ರೈ.ಪುರಿಯಾ, ಮಮತಾ ರಮೇಶ್ ನಾೈಕ್, ಅಶೋಕ್ ಆರ್.ದೇವಾಡಿಗ, ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು, ಡಾ| ದಿನೇಶ್ ಶೆಟ್ಟಿ ರೆಂಜಾಳ ಮಾತನಾಡಿ ಸಂಘದ ಸಾಧನೆ ಪ್ರಶಂಸಿಸಿ ಭವಿಷ್ಯತ್ತಿನ ಉನ್ನತಿಗಾಗಿ ಸಲಹೆ-ಸೂಚನೆಗಳನ್ನಿತ್ತು ಸಲಹಿ ಶುಭಾರೈಸಿದರು.

ಸಭೆಯ ಆದಿಯಲ್ಲಿ ಗತ ಸಾಲಿನಲ್ಲಿ ಅಗಲಿದ ಎಲ್ಲಾ ಪತ್ರಕರ್ತರಿಗೆ ಮೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ವೇದಿಕೆಯಲ್ಲಿ ಆಸೀನರಾಗಿದ್ದರು. ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ಯಾಮ್ ಎಂ.ಹಂಧೆ, ವಿಶ್ವನಾಥ್ ವಿ.ಪೂಜಾರಿ ನಿಡ್ಡೋಡಿ, ಸುಜಾನ್ಹಾ ಲಾರೆನ್ಸ್ ಕುವೆಲ್ಲೋ, ವಿಶೇಷ ಆಮಂತ್ರಿತ ಸದಸ್ಯ ಶ್ರೀಧರ್ ಉಚ್ಚಿಲ್ ಸೇರಿದಂತೆ ಬಹುಸಂಖ್ಯೆಯ ಸದಸ್ಯರು ಹಾಜರಿದ್ದರು.

ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ಗತ ವಾರ್ಷಿಕ ಹಣಕಾಸು ಆಯವ್ಯಯ ಪಟ್ಟಿ ಮಂಡಿಸಿದರು. ಜತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತರು. ಉಪಾಧ್ಯಕ್ಷ ದಯಾಸಾಗರ್ ಚೌಟ ಸಭಾ ಕಲಾಪ ನಡೆಸಿದರು. ಜತೆ ಕೋಶಾಧಿಕಾರಿ ಅಶೋಕ್ ಎಸ್.ಸುವರ್ಣ ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here