Thursday 25th, April 2024
canara news

ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ 18ನೇ ವಾರ್ಷಿಕ ಮಹಾಸಭೆ

Published On : 26 Sep 2016   |  Reported By : Rons Bantwal


ಯುವೋದ್ಯಮಿಗಳ ಉಗಮವಾಗಲಿ: ಬಿಷಪ್ ಹೆನ್ರಿ ಡಿ'ಸೋಜಾ
(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ಸೆ.26: ಇದು ಸಾಧಕರ ಪೆÇ್ರೀತ್ಸಹದ ವೇದಿಕೆಯಾಗಿದ್ದು ಅವರ ಸಾಧನೆ ನಮಗೆ ಮಾದರಿಯಾಗಿದೆ. ವ್ಯಕ್ತಿ ಯಶಸ್ವೀ ಉದ್ಯಮಿ ಜೊತೆಗೆ ಸಮಾಜಿಕ ಚಿಂತನೆಯ ವ್ಯಕ್ತಿಯಾದಾಗ ಆತನ ಜೀವನ ಪಾವನವಾಗುವುದು.

 

ವಿಧೇಯತೆ ಉದ್ಯಮಿಯ ಶಾಸ್ತ್ರವಾದಾಗ ಅವನ ಬದುಕು ಸಾರ್ಥಕವಾಗುತ್ತದೆ. ಯಾವೊತ್ತು ಉದ್ಯಮಿಗಳು ಆನಂದವನ್ನು ಉತ್ಪದಿಸುತ್ತಾಯೋ ಅದೇ ಅವನ ಯಶಸ್ವಿ ಉದ್ಯಮವಾಗುತ್ತದೆ. ಐಶ್ವರ್ಯವು ಎಂದೂ ನಿರ್ದಿಷ್ಟಸ್ಥಾನ ಆಗದು. ಅದು ಬರೇ ಗಳಿಕೆಯ ಮಾರ್ಗವಾಗಿದೆ. ಸಂಬಂಧಗಳೇ ಗಮ್ಯಸ್ಥಾನವಾಗಿದೆ. ಆದುದರಿಂದ ತಮ್ಮಲ್ಲಿನ ಜ್ಞಾನವನ್ನು ಇತರರಲ್ಲಿ ಹಂಚಿಕೊಂಡು ಧನ್ಯರೆಣಿಸಿರಿ. ಯುವ ಜನತ್ಯನ್ನು ವಿಶ್ವಾಸನೀಯರಾಗಿ ಸಲಹಿರಿ. ಆ ಮೂಲಕ ಯುವೋದ್ಯಮಿಗಳ ಉಗಮವಾಗಲಿ ಎಂದು ಬಳ್ಳಾರಿ ಧರ್ಮ ಪ್ರಾಂತ್ಯದ ಬಿಷಪ್ ರೈ| ರೆ| ಹೆನ್ರಿ ಡಿ'ಸೋಜಾ ಕರೆಯಿತ್ತರು.

ಇಂದಿಲ್ಲಿ ಶನಿವಾರ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್‍ನ ಸಭಾಗೃಹದಲ್ಲಿ ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ (ಸಿಸಿಸಿಐ) 18ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿದ್ದು ಬಿಷಪ್ ಹೆನ್ರಿ ಮಾತನಾಡಿದರು.

ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಜರುಗಿಸಲಾದ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯ ಪೆÇಲೀಸ್ ಉನ್ನತಾಧಿಕಾರಿ ನಿಧಿ ಚೌಧುರಿ ಐಪಿಎಸ್ ಉಪಸ್ಥಿತರಿದ್ದು ಪುರಸ್ಕಾರ ಪ್ರಾಯೋಜಕರನ್ನು ಒಳಗೊಂಡು ಸಿಸಿಸಿಐ 2015ರ ಸಾಲಿನ ವಾರ್ಷಿಕ ಪುರಸ್ಕಾರವನ್ನು ಸಾಧಕರಿಗೆ ಪ್ರದಾನಿಸಿ ಅಭಿನಂದಿಸಿದರು.

ಇಲೆಕ್ಟ್ರೋಪೆನೆಮೆಟಿಕ್ಸ್ ಎಂಡ್ ಹೈಡ್ರಾಲಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಉತ್ಕೃಷ್ಟ ಸಾಧಕ ಉದ್ಯಮಿ ಪುರಸ್ಕಾರವನ್ನು ಜಾಕೋಬ್ ಕ್ರಾಸ್ತಾ ಅವರಿಗೆ, ವೆಲ್‍ವಿನ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಸಮಾಜ ಸೇವಾ ಪುರಸ್ಕಾರವನ್ನು ಛೋಟೆಭಾಯಿ ಖ್ಯಾತಿಯ ಆಲೆನ್ ಡಿ.ನೊರೋನ್ಹಾ, ರೀಲಾಯಬಲ್ ಎಕ್ಸ್‍ಪೆÇೀರ್ಟ್ಸ್ ಪ್ರಾಯೋಜಕತ್ವದ ಉತ್ಕೃಷ್ಟ ಶೈಕ್ಷಣಿಕ ಸಾಧನಾ ಪುರಸ್ಕಾರವನ್ನು ಕು| ಆಲೈಯ್ನ್ ಚಾರ್ಲ್ಸ್, ಡೇನಿಯಲ್ ಎಂಡ್ ಸನ್ಸ್ ಪ್ರಾಯೋಜಕತ್ವದ ಸಾರ್ವಜನಿಕ ಸೇವಾ ಪುರಸ್ಕಾರವನ್ನು ಡಾ| ಕ್ರಿಸ್ಟೀ ಫೆರ್ನಾಂಡಿಸ್, ಪಟಥು ಬ್ರದರ್ಸ್ ಪ್ರಾಯೋಜಕ ತ್ವದ ಮಹಿಳಾ ಉದ್ಯಮಿ ಸಾಧಕ ಪುರಸ್ಕಾರವನ್ನು ಕು| ಝೆಲಿಯಾ ಕ್ವಾಡ್ರಸ್ ಮತ್ತು ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಪ್ರಾಯೋಜಕತ್ವದ ಯುವ ಉದ್ಯಮಿ ಸಾಧಕ ಪುರಸ್ಕಾರವನ್ನು ಸಂತೋಷ್ ಡಿ'ಸಿಲ್ವಾ ಕಾರ್ಕಳ ಅವರಿಗೆ ಪ್ರದಾನಿಸಿ ಪುರಸ್ಕೃತ ರನ್ನು ಶುಭಾರೈಸಿದರು.

ನಿಧಿ ಚೌಧುರಿ ಮಾತನಾಡಿಕ್ರಿಶ್ಚನ್ನರ ನೀತಿದಾಯಕ ಬದುಕು ಅರ್ಥಪೂರ್ಣವಾದದ್ದು. ನೆರೆಯವರನ್ನು ಪ್ರೀತಿಸಿ ಅವರ ಕಷ್ಟಕಾರ್ಪಣ್ಯಗಳ ಬಗ್ಗೆ ಚಿಂತಿಸಿ ಬಾಳುವ ನೀವುಗಳೇ ನಿಜವಾದ ಮಾನವತಾವಾದಿಗಳು. ಯುವ ಜನತೆಯೂ ಇಂತಹ ಸದ್ಗುಣಗಳನ್ನು ಮೈಗೂಡಿಸಬೇಕು. ಪರರ ಅನುಕಂಪ ನಿಮ್ಮ ಜೀವನವಾಗಿದೆ. ಅದಕ್ಕಾಗಿಯೇ ಜೀವನ ಮೀಸಲಾಗಿಟ್ಟ ಸಮಾಜ ನಿಮ್ಮದಾಗಿದೆ. ನೀವು ಉದ್ಯಮಗಳೊಂದಿಗೆ ಬೆಳೆಯುತ್ತಾ ಉದ್ಯೋಗವಕಾಶದ ಅವಶ್ಯಕತೆ ನೀಗಿಸಬೆಕು. ನಿರುದ್ಯೋಗ ನಿವಾರಣೆಗೆ ಇಂತಹ ಸಂಸ್ಥೆಗಳು ಪೂರಕವಾಗಿವೆ ಎಂದರು.

ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಮಾತನಾಡಿ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶಗಳ ಕನಸು ನನಸಾಗುತ್ತಿದೆ. ಸಿಸಿಸಿಐ ಸಂಸ್ಥೆ ಉದ್ಯಮಿಗಳ ಪಾಲಿಗೆ ಛತ್ರಿಯಂತಿದೆ. ಉದ್ದಿಮೆ ಮತ್ತು ಉದ್ಯೋಗಗಳಲ್ಲಿ ಸಕ್ರೀಯರಾಗಲು ಉತ್ತೇಜಿಸುತ್ತದೆ. ಆ ಮೂಲಕ ಸಮುದಾಯದ ಉದ್ಯಮಿಗಳನ್ನು ಪೆÇ್ರೀತ್ಸಹಿಸಲು ಸಹಕಾರಿಯಾಗಿದೆ. ಸದ್ಯ 610 ಸದಸ್ಯರುಗಳುಳ್ಳ ಈ ಸಂಸ್ಥೆ ಗತ ಸಾಲಿನಲ್ಲಿ ಅನೇಕ ಕಾರ್ಯಗಾರವನ್ನು ಹಮ್ಮಿಕೊಂಡು ಯುವ ಜನತೆಯನ್ನು ಉರಿದುಂಬಿಸಿದೆ. ಯುವೋದ್ಯಮಿಗಳಲ್ಲಿ ಸಂಪತ್ತು ಗಳಿಕೆಗೆ ಶಾಸ್ವತವಾದ ಅಭಿವೃದ್ಧಿ ಮತ್ತು ವ್ಯಕ್ತಿಗತ ಗುಣಾಧಿಕ್ಯ ಹಾಗೂ ಬಾಧ್ಯಸ್ಥಿಕಾ ಉಪಾಯ ಕಂಡಕೊಳ್ಳಲು ಸಲಹುತ್ತಿದೆ ಎಂದರು. ಹಾಗೂ ವಿಶೇಷ ಆಮಂತ್ರಿತರಾಗಿ ಉಪಸ್ಥಿತ ವಿವೇಕ್ ಮೆಂಡೋನಾ, ಫ್ರೆಡ್ಡಿ ಮೆಂಡೋನ್ಸಾ (ಡೈಮೆನ್ಶನ್), ಗಿಲ್ಬರ್ಟ್ ಡಿ'ಸೋಜಾ, ವಿಲಿಯಂ ಡಿ'ಸೋಜಾ ಪುತ್ತೂರು (ರಚನಾ ಮಂಗಳೂರು) ಅವರನ್ನು ಪುಷ್ಫಗುಪ್ಚಗಳನ್ನಿತ್ತು ಸತ್ಕರಿಸಿದರು.

ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಸಿಸಿಸಿಐ ಸೇವಾ ಕಾರ್ಯವೈಖರಿ ಪ್ರಶಂಸಿಸಿ ಶುಭಾರೈಸಿ ಕೊಡಲ್ಪಟ್ಟ ಗೌರವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಸಿಸಿಸಿಐ ಸಂಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಪುರಸ್ಕಾರ ಸಮಿತಿ ಸಂಚಾಲಕ ಜಾನ್ ಡಿ'ಸಿಲ್ವಾ, ಉಪ ಕಾರ್ಯಾಧ್ಯಕ್ಷ ಜೋನ್ ಮಾಥ್ಯು ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ವೆರ್ನನ್ ವಿ.ಮಥಾಯಸ್ ಯುವ ಉದ್ಯಮಿಗಳಿಗೆ ರಹಸ್ಯಮಾಹಿತಿ ನೀಡಿದರು.

ಸಮಾರಂಭದಲ್ಲಿ ಸಿಸಿಸಿಐ ನಿರ್ದೇಶಕರುಗಳಾದ ಲಾರೆನ್ಸ್ ಕುವೆಲ್ಲೊ, ವಾಲ್ಟರ್ ಬುಥೆಲ್ಲೋ, ಜಾನ್ಸನ್ ಥೆರಟ್ಟೀಲ್, ನ್ಯಾ| ಪಿಯುಸ್ ವಾಜ್ ಮತ್ತು ಗ್ರೆಗೋರಿ ಡಿ'ಸೋಜಾ ಹಾಗೂ ವಿವಿಧ ಉಪ ಸಮಿತಿಗಳ ಸಂಚಾಲಕರುಗಳು ಸೇರಿದಂತೆ ಇತರ ಪದಾಧಿಕಾರಿಗಳು ಮತ್ತು ಬಹುತೇಕ ಸದಸ್ಯರು ಹಾಜರಿದ್ದರು.

ನಿಕಟಪೂರ್ವ ಕಾರ್ಯಾಧ್ಯಕ್ಷ ಹೆನ್ರಿ ಲೋಬೊ ಮತ್ತು ಉಪ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ'ಸೋಜಾ ಅತಿಥಿüಗಳನ್ನು ಪರಿಚಯಿಸಿದರು. ಜೇನ್ ಎ.ಸಿಕ್ವೇರಾ ಮತ್ತು ಪ್ರಮೀಳಾ ವಿ.ಮಥಾಯಸ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಗ್ಲೆನ್ ಡಿ'ಸೋಜಾ ಮತ್ತು ತಾನಿಯಾ ಬುಥೆಲ್ಲೋ ಕಾರ್ಯಕ್ರಮ ನಿರೂಪಿಸಿದ ರು. ಆಗ್ನೇಲ್ಲೋ ರಾಜೇಶ್ ಅಥೈಡೆ ಅಭಾರ ಮನ್ನಿಸಿದರು.

ಪ್ರಶಸ್ತಿ ಸಮಾರಂಭದ ಆದಿಯಲ್ಲಿ ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಹದಿನೇಳನೇ ವಾರ್ಷಿಕ ಮಹಾಸಭೆ ಜರುಗಿಸಲ್ಪಟ್ಟಿತು. ಸಿಸಿಸಿಐ ಕಾರ್ಯನಿರತ ಕಾರ್ಯದರ್ಶಿ ಕ್ಲೇಮೆಂಟ್ ಸಿಕ್ವೇರಾ ವಾರ್ಷಿಕ ಚಟುವಟಿಕೆಗಳ ಮಾಹಿತಿನೀಡಿ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here