Saturday 20th, April 2024
canara news

ಬಿಎಸ್‍ಕೆಬಿ ಎಸೋಸಿಯೇಶನ್‍ನ `ಆಶ್ರಯ'ದ ವಾರ್ಷಿಕೋತ್ಸವ-ಫನ್-ಫೇರ್

Published On : 27 Sep 2016   |  Reported By : Rons Bantwal


`ಭಾರತ್ ಉತ್ಸವ್' ಸಾಂಸ್ಕೃತಿಕ ಕಾರ್ಯಕ್ರಮ-ರತ್ನಾ ಆಚಾರ್ಯ ಸ್ಟಾರ್‍ಅವಾರ್ಡ್ ಪ್ರದಾನ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.27: ಬಿಎಸ್‍ಕೆಬಿ ಎಸೋಸಿಯೇಶನ್ (ಗೋಕುಲ) ಸಾಯನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಇವುಗಳ ಸಂಚಾಲಕತ್ವದ ಉಪನಗರ ನವಿ ಮುಂಬಯಿಯ ನೆರೂಳ್ ಇಲ್ಲಿನ ಸೆಕ್ಟರ್-19ರಲ್ಲಿನ ಸೀವುಡ್ಸ್‍ನಲ್ಲಿ ಸ್ಥಾಪಿಸಿದ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ'ದ ವಾರ್ಷಿಕೋತ್ಸವ ಹಾಗೂ ಕಟ್ಟಡದ ವಿಸ್ತರಣೆಗಾಗಿ ಧನ ಸಂಗ್ರಹ ಕಾರ್ಯಕ್ರಮಕ್ಕಾಗಿ ಫನ್‍ಫೇರ್ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ `ಆಶ್ರಯ' ತಾಣದಲ್ಲಿ ಕಳೆದ ಕಳೆದ ರವಿವಾರ ಅಪರಾಹ್ನ ಜರುಗಿಸಲ್ಪಟ್ಟಿತು.

ಮೊದಲಿಗೆ ಕರ್ನಾಟಕ ಬ್ಯಾಂಕ್‍ನ ಪ್ರಾದೇಶಿಕ ಪ್ರಬಂಧಕ ಬಿ.ನಾಗರಾಜ್ ರಾವ್ ಉತ್ಸವದ ಉದ್ಘಾಟನೆಗೈದರು. ಹೆಚ್‍ಡಿಎಫ್‍ಸಿ ಸಸಂಜಯ್ ನಾಂಚೆ, ರಿಲೈನ್ಚ್ ಇಂಡಸ್ಟ್ರೀಸ್‍ನ ಆಡಳಿತ ನಿರ್ದೇಶಕ ಬಿ.ನಾರಾಯಣ್, ಐಒಬಿ ಸಂಸ್ಥೆಯ ನಿವೃತ್ತ ಆಡಳಿತ ನಿರ್ದೇಶಕ ಎಂ.ನರೇಂದ್ರ, ಐಡಿಎಫ್‍ಸಿ ಆಡಳಿತ ನಿರ್ದೇಶಕ ಸದಾಶಿವ್ ರಾವ್, ಲಯನೆಸ್ ಜಿಲ್ಲಾಧಕ್ಷೆ ಉಜ್ವಲ ಖೋಬ್ರೇಕರ್, ಕನ್ನಡ ಸಾಹಿತ್ಯ ಪರಿಷತ್ತು ದ.ಕ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅತಿಥಿüಗಳಾಗಿ ಉಪಸ್ಥಿತರಿದ್ದು, ದೀಪ ಪ್ರಜ್ವಲನೆಗೈದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮಾತನಾಡಿ ಮಹಾನಗರದಲ್ಲಿ ಸೇವಾ ನಿರತ ಕರ್ನಾಟಕ ಕರಾವಳಿ ಪ್ರಾಂತ್ಯದ ಬ್ರಾಹ್ಮಣ ಸಮೂದಾಯದ ಪ್ರತಿಷ್ಠಿತ ಸಂಸ್ಥೆ ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಯೋವೃದ್ಧ, ನಿವೃತ್ತಿ ಜೀವನದ ಹೊಸ್ತಿಲಲ್ಲಿರುವ ಹಿರಿಯ ನಾಗರಿಕರ ಕನಸುಗಳಿಗೆ ಸಾಂತ್ವನ ತುಂಬಿ ನವಚೈತನ್ಯ ತುಂಬುವ `ಆಶ್ರಯ' ಹಿರಿಯ ನಾಗರಿಕರ ಬಾಳಿಗೆ ಬೆಳಕು ತುಂಬಿದೆ ಎಂದರು. ಹಾಗೂ ಗೋಕುಲದ ಯೋಜನೆಗಳ ಬಗ್ಗೆ ತಿಳಿಸುತ್ತಾ `ಶ್ರೀ ಕೃಷ್ಣ ಮಂದಿರವನ್ನೊಳಗೊಂಡ ಗೋಕುಲದ ಪುನ:ರ್ ನಿರ್ಮಾಣದೊಂದಿಗೆ, ಆಶ್ರಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಆಶ್ರಯದ ಕಟ್ಟಡ ವಿಸ್ತಾರದ ಬಗ್ಗೆ ಆಡಳಿತ ಮಂಡಳಿ ಚಿಂತಿಸುತ್ತಿದೆ. ಈಗಾಗಲೇ ಹಲವಾರು ದಾನಿಗಳು ತಮ್ಮ ಅಮೂಲ್ಯ ದೇಣಿಗೆಗಳನ್ನು ಇತ್ತು ಪೆÇ್ರೀತ್ಸಾಹಿಸುತ್ತಿದ್ದಾರೆ. ಆಶ್ರಯ ವರ್ಷಂಪ್ರತಿ ಹಿರಿಯ ನಾಗರಿಕರ ದಿನ ಹಾಗೂ ವಾರ್ಷಿಕೋತ್ಸವ ಆಚರಿಸುತ್ತಿದೆ. ಈ ಬಾರಿ ಇದರೊಂದಿಗೆ ಧನ ಸಂಗ್ರಹವನ್ನೂ ಹಮ್ಮಿ ಕೊಂಡಿದೆ' ಎಂದರು. ಹಾಗೂ ಶ್ರೀ ಲಕ್ಷ್ಮೀಶ್ ಆಚಾರ್ಯ ತನ್ನ ಮಾತೃಶ್ರೀ ರತ್ನಾ ಆಚಾರ್ಯ ಅವರ ಹೆಸರಿನಲ್ಲಿ ಸ್ಥಾಪಿಸಿದ ಸ್ಟಾರ್‍ಅವಾರ್ಡನ್ನು ಆಶ್ರಯ ನಿವಾಸಿ ಅನ್ನಪೂರ್ಣ ರಾವ್ ಅವರಿಗೆ ಪ್ರದಾನಿಸಿ ಗೌರವಿಸಿದರು ಹಾಗೂ ಪ್ರವೇಶ ಪತ್ರಗಳ ಅದೃಷ್ಟ ಸಂಖ್ಯೆಗಳ ಅದೃಷ್ಟ ಆಯ್ಕೆ ಪ್ರಕ್ರಿಯೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿಂಧು ನಾಯರ್ ಮತ್ತು ಕೃತಿ ಚಡಗರವರ ನೃತ್ಯ ಸಂಯೋಜನೆ ಹಾಗೂ ಪ್ರಶಾಂತ್ ಹೆರ್ಲೆ, ಚಿತ್ರಾ ಮೇಲ್ಮನೆ ಮತ್ತು ಪಿ.ಸಿ ಎನ್ ರಾವ್ ಅವರ ನಿರ್ದೇಶನದಲ್ಲಿ ಹಿರಿಯ ನಾಗರಿಕರು `ಭಾರತ್ ಉತ್ಸವ್' ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹದಿಂದ 65 ರಿಂದ 98 ವರ್ಷದ ಹಿರಿಯರು ಭಾಗವಹಿಸಿದ ಮನೋರಂಜನಾ ಕಾರ್ಯಕ್ರಮವು ಪ್ರೇಕ್ಷಕರ ಕರತಾಡನದ ಮೆಚ್ಚುಗೆಯನ್ನು ಪಡೆಯಿತು. ನಂತರ ಖ್ಯಾತ ನಿರೂಪಕ ಪ್ರಶಾಂತ್ ರಾವ್ ನಿರೂಪಣೆಯಲ್ಲಿ ಪ್ರಸಿದ್ಧ ಗಾಯಕರಾದ ವಿನೋದ್ ಶೇಷಾದ್ರಿ, ಪ್ರಮೋದ್ ತಲವಡೆಕರ್, ಅನುಷ್ಕಾ ಛೆಡ್ದಾ ಹಾಗೂ ಸ್ವಾತಿ ಚೌಧರಿಯವರಿಂದ ಹಿಂದಿ ಚಿತ್ರ ಗೀತೆಗಳ `ಸಂಗೀತ ರಸಮಂಜರಿ' ಸಾದರ ಪಡಿಸಿದರು. ಉಮಾ ನಾಗಪಾಲ್ ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಪದಾಧಿಕಾರಿಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಹರಿದಾಸ್ ಭಟ್, ಪಿ.ಸಿ ಎನ್ ರಾವ್, ವೈ. ಗುರುರಾಜ್ ಭಟ್, ಅವಿನಾಶ್ ಶಾಸ್ತ್ರಿ, ಕುಸುಮ್ ಶ್ರೀನಿವಾಸ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಉಪಸ್ಥಿತರಿದ್ದು, ಆಶ್ರಯ ನಿವಾಸಿ ಧರ್ಮಾ0ಬಲ್ ಪ್ರಾರ್ಥನೆಗೈದರು. ಕಾರ್ಯದರ್ಶಿ ಅನಂತ ಪದ್ಮನಾಭ ಪೆÇೀತಿ ಗಣ್ಯರು ಹಾಗೂ ಪ್ರೇಕ್ಷಕರಿಗೆ ಸ್ವಾಗತ ಕೋರಿದರು. ಅಧ್ಯಕ್ಷ ಡಾ| ಸುರೇಶ್ ರಾವ್ ಅತಿಥಿü ಅಭ್ಯಾಗತರಿಗೆ ಪುಷ್ಪಗುಪ್ಚ ನೀಡಿ ಗೌರವವನ್ನಿತ್ತರು. ಚಿತ್ರಾ ಮೇಲ್ಮನೆ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here