Friday 29th, March 2024
canara news

ವಿಘ್ನಾಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲ ನಡೆಸಿದ ದಶವಾರ್ಷಿಕ ಮಹಾಸಭೆ, ಸಾರಸ್ವತೋತ್ಸವ `ಮಿಸ್-ಮಿಸ್ಟರ್ ಆರ್‍ಸಿಬಿ' ಸ್ಪರ್ಧೆ

Published On : 28 Sep 2016   |  Reported By : Rons Bantwal


ಮುಂಬಯಿ, ಸೆ.28: ವಿಘ್ನಾಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲ 10ನೇ ವಾರ್ಷಿಕ ಮಹಾಸಭೆ ಮತ್ತು ಸಾರಸ್ವತೋತ್ಸವನ್ನು ಕಳೆದ ರವಿವಾರ (ಸೆ.25) ದಹಿಸರ್ ಪೂರ್ವದಲ್ಲಿನ ಶ್ರೀ ವಿಠಲ ರುಖುಮಯಿ ದೇವಸ್ಥಾನದ ಸಭಾಗೃಹದಲ್ಲಿ ನೇರವೇರಿಸಿತು.

ಮಂಡಲದ ಅಧ್ಯಕ್ಷ ವಸಂತ ಆರ್.ನಾಯಕ್, ಗೌರವಾಧ್ಯಕ್ಷ ಗೋಪಾಲಕೃಷ್ಣ ಆರ್. ನವೆಲ್ಕರ್, ಕಾರ್ಯದರ್ಶಿ ಶ್ರೀನಿವಾಸ ನಾಯಕ್, ಕೋಶಾಧಿಕರಿ ಭರತ್ ಕಾವಂತ್, ಭಜನಾ ಮಂಡಳಿ ಅಧ್ಯಕ್ಷೆ ಮೀರಾ ನಾವೆಲ್ಕರ್ ಮತ್ತು ಜೀವನ ಸಾಥಿs ಸಂಚಾಲಕ ರಮೇಶ್ ಪ್ರಭುÀ ವೇದಿಕೆಯಲ್ಲಿ ಆಸೀನರಾಗಿದ್ದು ಸಭೆಯಲ್ಲಿ ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಪಿ.ಡಿ ಬೋರ್ಕಾರ್ ಮತ್ತು ಕೆ.ಸದಾನಂದ ನಾಯಕ್ ಉಪಸ್ಥಿತರಿದ್ದರು.

ಬೋರ್ಕಾರ್ ಮಾತಾಡುತ್ತಾ ಈಗೀನ ಕಾರ್ಯಕಾರಿ ಸಮಿತಿಯ ಕಾರ್ಯ ವೈಖರಿ ಹಾಗೂ ಮಂಡಲದ ಅಭಿವೃದ್ಧಿ ಪರ ಯೋಜನೆಗಳು ತುಂಬಾ ಉತ್ತಮವಾಗಿದೆ ಆದುದರಿಂದ ಇನ್ನೂ 3 ವರ್ಷ ಕಾಲ ಇದೇ ಸಮಿತಿ ವಸಂತ ನಾಯಕ್ ಅವರ ಮುಂದಾಳತ್ವದಲ್ಲಿ ನಡೆಯಬೇಕು ಎಂಸು ಸೂಚಿಸಿದ್ದು ಸಭಿಕರು ಅನುಮೊದಿಸಿದರು. ಅಂತೆಯೇ ಸೇವಾ ಮಂಡಲದ ಮುಂದಿನ 2 ವರ್ಷಕ್ಕೆ ವಸಂತ ಆರ್.ನಾಯಕ್ ಅಧ್ಯಕ್ಷರಾಗಿ ಪುನಾರಾಯ್ಕೆಗೊಂಡರು.

ಗೀತಾ ನಾಯಕ್ ತಮ್ಮ ಜೀವನ ಕುರಿತು ಮಾತನಾಡಿ ಪ್ರಸಕ್ತ ಸಮಾಜದಲ್ಲಿ ಹೆಣ್ಣು ಕೂಡ ಗಂಡಿನಷ್ಟೇ ಪ್ರಧಾನ ಜವಾಬ್ದಾರಿಯುತಳಾಗಿ ಗಂಡಿಗೆ ಸಹಪಾಠಿಯಾಗಿದ್ದಾಳೆ. ಆದರೆ ಸಮಾಜ ಮಾತ್ರ ಹೆಣ್ಣಿಗೆ ಆ ಉತ್ತುಂಗದ ಅದ್ಯತೆ ನೀಡುತ್ತಿಲ್ಲ ಎನ್ನುತ್ತಾ ಮದುವೆ ಸಮಯದಲ್ಲಿ ಕೂಡ ಗಂಡಿನ ಕಡೆಯವರು ಹೆಣ್ಣು ಖರ್ಚು 50% ಹೊತ್ತು ಹೆಣ್ಣಿನ ಹೆತ್ತವರಿಗೆ ಸಹಕರಿಸಿ ಸಹ ಭಾಳ್ವೆಯ ನೀತಿಯನ್ನು ಅನುಸರಿಸಿಬೇಕು ಎಂದು ಸಭಿಕರಲ್ಲಿ ಅನುಮೊದಿಸಿದರು.

ನೇರವೇರಿಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಸಮಾಜ ಸೇವಕ, ನರಿಕೆ ಶ್ರೀ ಮಹಾಲಕ್ಷಿ ್ಮೀ ದೇವಸ್ಥಾನ ಇದರ ಮಾಜಿ ಆಡಳಿತ ಮೋಕ್ತೆಸರ ಬಾಬಣ್ಣ ಕೆ.ವಾಗ್ಲೆ ಉಪಸ್ಥಿತರಿದ್ದು ಮಾತನಾಡಿ ಜನಸೇವೆಯೇ ಜನಾರ್ಧನ ಸೇವೆ. ಸಮಾಜದ ಎಲ್ಲರೂ ಕೂಡ ತಮ್ಮ ತಮ್ಮ ಶಕ್ತಿನೂಸರವಾಗಿ ಸಮಾಜದ ಎಳಿಗೆಗೆ ಶ್ರಮಿಸಿದರೆ ಖಂಡಿತ ಆ ಸಮಾಜ ಪ್ರ್ರಗತಿ ಹೊಂದುತ್ತದೆ ಎಂದರು.

ಗೌರವ ಅತಿಥಿsಯಾಗಿ ಪ್ರಕಾಶ್ ನಾಯಕ್ ಉಪಸ್ಥಿತರಿದ್ದು ತಮ್ಮ ವೃತ್ತಿ ರಂಗದ ಅನುಭವವನ್ನು ಉತ್ತಮ ರೀತಿಯಲ್ಲಿ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಡಲ ಸದಸ್ಯ ಮಕ್ಕಳು ವಿವಿಧ ನೃತ್ಯಾವಳಿಗಳನ್ನು ಸಾದರ ಪಡಿಸಿದರು. ನಂತರ ನೇರವೇರಿದ `ಮಿಸ್ ಆರ್‍ಸಿಬಿ' ಮತ್ತು `ಮಿಸ್ಟರ್ ಆರ್‍ಸಿಬಿ' ಸ್ಪರ್ಧೆ ಏರ್ಪಾಡಿಸಲಾಗಿ ದ್ದು, ಮಿಸ್ ಆರ್‍ಸಿಬಿ ಕು| ಶ್ರುತಿ ಪ್ರಭು (ಪ್ರಥಮ), ಕು| ಮನಾಲಿ ನಾಯಕ್ (ದ್ವಿತೀಯ ಸ್ಥಾನ), ಮಿಸ್ಟರ್ ಆರ್‍ಸಿಬಿ ಸ್ಪರ್ಧೆಯಲ್ಲಿ ಮಿಸ್ಟರ್ ಆಗಿ ಶಿವಾನಂದ್ ನಾಯಕ್ (ಪ್ರಥಮ), ಮಿಸ್ಟರ್ ವೀರಾಜ್ ಕಾಮತ್ ದ್ವಿತೀಯ ಸ್ಥಾನ ಪಡೆದÀರು. `ಬೆಸ್ಟ್ ಆರ್‍ಸಿಬಿ ದಂಪತಿ' ಸ್ಪರ್ಧೆಯಲ್ಲಿ ವಸಂತ ಆರ್.ನಾಯಕ್ ಮತ್ತು ಗುಲಾಬಿ ವಿ.ನಾಯಕ್ ದಂಪತಿ (ಪ್ರಥಮ ಸ್ಥಾನ), ರಾಜೇಶ್ ಪಿ.ನಾಯಕ್ ಮತ್ತು ಅರ್ಚನಾ ಆರ್.ನಾಯಕ್ ದಂಪತಿ ದ್ವಿತೀಯ ಸ್ಥಾನದೊಂದಿಗೆ ವಿಜೇರಾದರು.

ಗೀತಾ ನಾಯಕ್, ರೇಖಾ ನಾವೆಲ್ಕರ್ ಮತ್ತು ಶ್ರೀಲತಾ ಸೇವ್ಡೆ ಪ್ರಾರ್ಥನೆಗೈದರು. ನಾರಾಯಣ ನಾಯಕ್, ನವೀನ್ ನಾಯಕ್ ಮತ್ತು ಹರಿದಾಸ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ್ ನಾಯಕ್, ಮಾದವಿ ನಾಯಕ್, ಸುಶಾಂತ್ ನಾಯಕ್, ಪ್ರವೀಣ್ ನಾಯಕ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದು ಭರತ್ ಕಾಮತ್ ಧನ್ಯವಾದಗೈದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here