Tuesday 16th, April 2024
canara news

ವಿದ್ಯಾ ಪ್ರಸಾರಕ ಮಂಡಳದ ವಿ.ಪಿ.ಎಂ ಶಾಲೆಯಲ್ಲಿ ಶಿಕ್ಷಕ ದಿನಾಚರಣೆ

Published On : 28 Sep 2016   |  Reported By : Rons Bantwal


ಶಿಕ್ಷಕರು ದೇಶದಭವಿಷ್ಯದ ಕೀರ್ತಿ ಕಳಸಕ್ಕೆ ದಿವ್ಯ ದೀವಿಗೆ-ಡಾ| ಮಿಲಿಂದ ಸಾವಂತ

ಮುಂಬಯಿ,ಸೆ.28: ಸಮೃದ್ಧಮಯವಾದ, ಸುವ್ಯವಸ್ಥಿತವಾದ, ಸರ್ವತೋಮಯವಾದ ರಾಷ್ಟ್ರದ ನಿರ್ಮಾಣ ದ ದೃಷ್ಟಿಯಿಂದ ಆದರ್ಶ ನಾಗರಿಕರ, ಸಮಾಜದ ಜೀವನದಲ್ಲಿ ಶಿಸ್ತುಬದ್ಧವಾದ ಕ್ಷಮತೆಯನ್ನು, ನಯ ವಿನಯವನ್ನು ಪ್ರಜ್ವಲಗೊಳಿಸುವುದೇ ಶಿಕ್ಷಣ. ಶಿಕ್ಷಣವು ಸ್ವ-ಸಾಮಥ್ರ್ಯದ, ವಿಶ್ವ ಜ್ಞಾನದ ಚಿಂತನ ಮಂಥನ, ವಿಚಾರ-ವಿಮರ್ಶೆಯ ಸೃಜನಶೀಲತೆಯ ಪ್ರಕ್ರಿಯೆಯನ್ನು ವ್ಯಕ್ತಿಗತವಾಗಿ ವಿಕಾಸ ಆಗುವಂತಿರಬೇಕು. ಶಿಕ್ಷಕರು ರಾಷ್ಟ್ರೀಯ ಸಂಪನ್ಮೂಲ. ಅವರು ವಾಸ್ತವವಾದಿ ಆಗಿರಬೇಕು. ಇಂದಿನ ವಿಜ್ಞಾನ ತಂತ್ರಜ್ಞಾನದಲ್ಲಿ ಆಗುವ ಸಂಶೋಧನೆಯ ಹರವು ಮತ್ತು ಕುರುಹುಗಳ ಜ್ಞಾನಶೀಲರಾಗಿರಬೇಕು. ವರ್ಗಕೋಣೆಯಿಂದ ಜಗತ್ತಿನವರೆಗೆ, ಪಠ್ಯಕ್ರಮದಿಂದ-ವಿಶ್ವ ಅಧ್ಯಯನದವರೆಗಿನ ವಿವಿಧ ವಿಷಯಗಳ ಜ್ಞಾನವಂತಿಕೆಯನ್ನು ಸಮೃದ್ಧಮಯ ಗೊಳಿಸಿ ಕೊಳ್ಳಬೇಕು. ರಾಷ್ಟ್ರೀಯ-ಅಂತರಾಷ್ಟ್ರೀಯ ನಡುವಿನ ವಿವಿಧ ಕ್ಷೇತ್ರಗಳಾದ ಶೈಕ್ಷಣಿಕ, ರಾಜಕೀಯ, ಆಥಿರ್üಕ, ಕ್ರೀಡಾತ್ಮಕ, ಸಾಮಾಜಿಕ, ಸಂಶೋಧನಾತ್ಮಕ, ವೈಜ್ಞಾನಿಕ, ಸಾಹಿತಿಕ, ಸಂಶೋಧನಾತ್ಮ ಕ ಹೀಗೆ ಎಲ್ಲಾ ವಿಷಯಗಳ ಕಲ್ಪವೃಕ್ಷಾತ್ಮಕ ಮತ್ತು ವೈಶಾಲ್ಯಪೂರ್ಣ ಜ್ಞಾನ ಪರಿಪಾಲಕರಾಗಿರಬೇಕು. ನೈಸರ್ಗಿಕವಾಗಿ ಸಂಪನ್ಮೂಲವು ಪ್ರಖರತೆಯನ್ನು ಪಡೆದುಕೊಂಡ ಹಾಗೆ ಮಾನವನ ಜ್ಞಾನಸಾಗರದಲ್ಲಿ ಶಿಕ್ಷಕರು ಪ್ರತಿಬಿಂಬಿಸಬೇಕು. ಸ್ಫೂರ್ತಿದಾಯಕವಾದ ವಿಷಯಗಳ ಮೇಲೆ ಚರ್ಚಿಸುವುದರಿಂದ ಮಾನಿಸಿಕ, ಪರಿವರ್ತನೆ, ವಾಶಲತೆಯಲ್ಲಿ ಸದೃಡವನ್ನು ಬಲಗೊಳಿಸಬಹುದು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ವಿಶ್ವ ನಾಗರಿಕರನ್ನಾಗಿ ಮಾಡುವ ಶಕ್ತಿ-ಯುಕ್ತಿಯ ಕೇಂದ್ರಬಿಂದು ಆಗಬೇಕು ಹೆಸರಾಂತ ವೈದ್ಯಾಧಿಕಾರಿ ಡಾ| ಮಿಲಿಂದ ಸಾವಂತ ಶುಭ ಹಾರೈಸಿದರು.

ವಿದ್ಯಾ ಪ್ರಸಾರಕ ಮಂಡಳವು ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದ ಡಾ| ಮಿಲಿಂದ ಅವರು ದೀಪ ಪ್ರಜಲ್ವನೆ ಮಾಡುತ್ತಾ, ಮೊಳಕಾಲಿನ ಕೀಲುಗಳ ಸಮಸ್ಯೆಗಳಿಗೆ ಕಾರಣಗಳಾವುವು, ಅವುಗಳ ಸಮಸ್ಯೆಯಿಂದ ಮುಕ್ತಿದಾಯಕವಾಗುವುದು ಹೇಗೆ ಎಂಬುದನ್ನು ಮಂಡಳವು ಹಮ್ಮಿಕೊಂಡಿದ್ದ ಚರ್ಚಾಕೂಟದಲ್ಲಿ ವಿವರಿಸುತ್ತಾ ತಿಳಿಸಿದರು.

ವಿದ್ಯಾ ಪ್ರಸಾರಕ ಮಂಡಳದ ಗೌ| ಪ್ರ| ಕಾರ್ಯದರ್ಶಿ ಡಾ| ಪಿ.ಎಂ ಕಾಮತ್ ದೀಪ ಪ್ರಜ್ವಲಿಸಿ, ಅತಿಥಿಗಳಿಗೆ ಪುಷ್ಪಗುಚ್ಛವಿತ್ತು ಗೌರವಿಸಿ ಮಾತನಾಡಿ ವೃತ್ತಿಯ ಅನುಭವದಲ್ಲಿಯ ಅಮೃತವೇ ಹೊತ್ತಿಗೆ. ಸಂಸ್ಥೆಯ ವಿಕಾಸ ಮತ್ತು ಬೆಳವಣಿಗೆಯಲ್ಲಿ ಶಿಕ್ಷಕರ ಶ್ರಮ ಅಡಗಿದೆ. ನಿರಂತರವಾದ ಅಧ್ಯಯನವು ಪರಿಪೂರ್ಣ ಭೌದ್ಧಿಕ ವಿಕಾಸಕ್ಕೆ ಹಾಗೂ ಸಂಶೋಧನಾ ಪ್ರವೃತ್ತಿಯ ದಾಹಕ್ಕೆ ಕಾರಣವಾಗುತ್ತೆ. ವಿದ್ಯಾಥಿರ್üಗಳ ಸರ್ವಾಂಗೀಣ ಸಬಲೀಕರಣವಾಗಬೇಕಿದೆ. ಶಿಕ್ಷಕರ ಬೋಧನೆಯು ಪ್ರಬುದ್ಧತೆಯಿಂದ ಕೂಡಿರಬೇಕು. ಕಂಠ ಪಾಠದ ಬದಲಾಗಿ ವಿಷಯದ ವಿವರಣೆಯು ಅರ್ಥವಂತಿಕೆ, ಗ್ರಹಿಕಾ ಅಭಿವ್ಯಕ್ತಿಯ ಸಾಮಥ್ರ್ಯವನ್ನು ವಿಶಾಲಮಯಗೊಳಿಸುವಂತಿರಬೇಕು. ಚರ್ಚಾಕೂಟದ ಪ್ರವೃತ್ತಿಯಿಂದ ವಿಷಯದ ಮನವರಿಕೆಯು ಪ್ರಬಲಗೊಳ್ಳುತ್ತದೆ. ಬೋಧನೆಯು ಯಾವಾಗಲು ಸೃಜನಶೀಲ ಕ್ರಿಯೆಯಿಂದ ಕೂಡಿರಬೇಕೆಂದು ಎಲ್ಲಾ ಶಿಕ್ಷರಿಗೆ ಶುಭಾಶಯ ಸಲ್ಲಿಸಿದರು.

ಮಂಡಳದ ಉಪಾಧ್ಯಕ್ಷ ಡಾ| ಕೆ.ಮೋಹನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿ.ಪಿ.ಎಂ ಪ್ರತಿಜ್ಞೆಯನ್ನು ಎಲ್ಲಾ ಶಿಕ್ಷಕ ವೃಂದಕ್ಕೆ ಬೋಧಿಸುತ್ತಾ ವಿದ್ಯಾಥಿರ್üಗಳಲ್ಲಿ ಸೃಜನಶೀಲ, ಕ್ರೀಯಾಶೀಲ, ಸರ್ವಾಂಗೀಣ ಜ್ಞಾನ ಕೌಶಲ್ಯ ಪರಿಮಳದ ಪರಿಪಕ್ವತೆಯು ಶೋಭಿಸಬೇಕಾದರೆ ಅದು ಕೇವಲ ಗುರುವರ್ಯರಿಂದ.ಶಿಕ್ಷಕ ವೃತ್ತಿಯು ಅಪಾರವಾದ ಜವಾಬ್ದಾರಿಯನ್ನು ಮತ್ತು ಉಜ್ವಲ ಭವಿಷ್ಯದ ಹೊಣೆಗಾರಿಕೆಯನ್ನು ಬಿತ್ತರಿಸುದರ ಮೂಲಕ ಪ್ರತಿ ಬಿಂಬಿಸುತ್ತದೆಂದು ಅವರೇ ಆದರ್ಶ ರಾಷ್ಟ್ರದ ಪ್ರವರ್ತಕರೆಂದು ಪ್ರಶಂಸಿಸಿದರು.

ಶ್ಲೋಕದ ಮೂಲಕ ಪ್ರಾರಂಭಗೊಂಡಿತು. ಬಿ. ಹೆಚ್ ಕಟ್ಟಿ ಉಪಸ್ಥಿತರಿದ್ದು, ಸಭೆಯಲ್ಲಿ ಮುಲುಂಡ್ ಮತ್ತು ಐರೋಳಿ ಶಾಲೆಯ ಬಾಲವಾಡಿಯಿಂದ ಮಹಾವಿದ್ಯಾಲಯದವರೆಗಿನ ಪ್ರಾಂಶುಪಾಲರು, ಮುಖ್ಯೋಪಾಧ್ಯಾ ಯರು, ಪರಿವೀಕ್ಷರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿಕ್ಷಕಿ ಎಸ್.ವಿದ್ಯಾ ಅತಿಥಿ ಪರಿಚಯಿಸಿದರು. ಪರಿವೀಕ್ಷಕಿ ಲಕ್ಷ್ಮೀ ರಾಮಲಿಂಗಮ್ ಕಾರ್ಯಕ್ರಮ ನಿರ್ವಹಣೆಗೈದರು. ಶಿಕ್ಷಕರಿಗಾಗಿ ಏರ್ಪಡಿಸಿದ ನಿಬಂಧ ಸ್ಪರ್ಧೆಯಲ್ಲಿ ಸುಂದರಬಾಯಿ ಮಂಜುನಾಥ್ ಕಾಮತ್, ಕನ್ನಡ ಪ್ರಾಥಮಿಕ ಶಾಲೆಯ ಪರಿವೀಕ್ಷಕಿ ಗೌರಿ ಉಮೇಶ್ ದೇಶಪಾಂಡೆ ಮತ್ತು ಸಂಗಡಿಗರು, ಆಂಗ್ಲ ಮಾಧ್ಯಮದಲ್ಲಿ ಚಿನ್ಮಯಾ ಜೋಷಿ ಸಂಗಡಿಗರು, ವಿ.ಪಿ.ಎಂನ ಸುಂದರಬಾಯಿ ಮಂಜುನಾಥ್ ಕಾಮತ್ ಪ್ರಾಥಮಿಕ ಕನ್ನಡ ಶಾಲೆಯ ಪರಿವೀಕ್ಷಕಿ ಗೌರಿ ದೇಶಪಾಂಡೆ ಸಂಗಡಿಗರು, ವಿಪಿಎಂ, ಎನ್‍ಐಓ ಎಸ್ ಐರೋಳಿಯಿಂದ ಗಣೇಶ್ ಗುಪ್ತ ಸಂಗಡಿರು, ಜ್ಯೂನಿಯರ್ ಕಾಲೇನ ಜಯಶ್ರೀ ದಾಮಣೆ, ಡಿಗ್ರಿ ಕಾಲೇಜ್‍ನ ಕೆ.ವಿಜಯಲಕ್ಷ್ಮೀ ಸಂಗಡಿಗರು ಸ್ಪರ್ಧಾ ಬಹುಮಾನ ವಿಜೇತರಾದರು. ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here