Saturday 20th, April 2024
canara news

ಫೆಲಿಕ್ಸ್ ಎ.ಡಿ'ಸೋಜಾ ತಾಕೋಡೆ ಬಿಜೆಪಿ ಸೇರ್ಪಡೆ

Published On : 28 Sep 2016   |  Reported By : Rons Bantwal


ಮುಂಬಯಿ, ಸೆ.28: ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಳೆದ ಸೋವವಾರ ಬೆಂಗಳೂರುನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫೆಲಿಕ್ಸ್ ಎ.ಡಿ'ಸೋಜಾ ತಾಕೋಡೆ ಬಿಜೆಪಿ ಸೇರ್ಪಡೆ ಗೊಂಡರು.

ಬೆಂಗಳೂರು ಮಲ್ಲೇಶ್ವರಂ ಟೆಂಪಲ್ ಸ್ಟ್ರೀಟ್‍ನಲ್ಲಿನ ಬಿಜೆಪಿ ಅಧಿಕೃತ ಕಛೇರಿ ಜಗನ್ನಾಥ್ ಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಫೆಲಿಕ್ಸ್ ಡಿ'ಸೋಜಾ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಗೊಂಡರು. ಯಡಿಯೂರಪ್ಪ ಅವರು ಪಕ್ಷದ ಶಾಲುಧರಿಸಿ ಪುಷ್ಪಗುಪ್ಚವನ್ನಿತ್ತು ಪಕ್ಷಕ್ಕೆ ಬರಮಾಡಿ ಕೊಂಡಿದ್ದು ಪಕ್ಷವು ಅಲ್ಪಸಂಖ್ಯಾತರ ಕಡೆ ಹೆಚ್ಚುವರಿ ಗಮನ ಹರಿಸುವುದಾಗಿ ತಿಳಿಸಿ ಆ ಮೂಲಕ ಪಕ್ಷವನ್ನೂ ಬಲಪಡಿಸುವಂತೆ ತಿಳಿಸಿದರು. ಕೆಜೆಪಿ ರಚನೆಯ ವೇಳೆಯೂ ಫೆಲಿಕ್ಸ್ ಅವರು ಯಡಿಯೂರಪ್ಪ ಅವರ ನಿಕಟವರ್ತಿಯಾಗಿದ್ದು ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಸಿದ್ಧರಾಗಿದ್ದು ಕೊನೆಯಲ್ಲಿ ತಮ್ಮ ಸೀಟನ್ನು ಮತ್ತೋರ್ವರಿಗೆ ಹಸ್ತಾಂತರಿಸಿದ್ದರು.

ಮುಂಬಯಿಯಲ್ಲಿನ ಪ್ರಸಕ್ತ ರಿಲಾಯನ್ಸ್ (ಅಂದಿನ ಬೃಹನ್ಮುಂಬಯಿ ಇಲೆಕ್ಟ್ರಿಕ್ ಸಪ್ಲೈ ಎಂಡ್ ಟ್ರಾನ್ಸ್‍ಫೆÇೀರ್ಟ್-ಬಿಇಎಸ್‍ಟಿ) ಯೂನಿಯನ್ ನಾಯಕನಾಗಿ, ಬಾಂಬೇ ಇಲೆಕ್ಟ್ರಿಕ್ ವರ್ಕರ್ಸ್ ಯೂನಿಯನ್ ಅಧ್ಯಕ್ಷರಾಗಿ, ಆಲ್ ಇಂಡಿಯಾ ಫೆಡರೇಶನ್ ಆಫ್ ಇಲೆಕ್ಟ್ರಿಸಿಟಿ ವರ್ಕರ್ಸ್ ಯೂನಿಯನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸುಕಾನು ಸಮಿತಿ, ಮುಂಬಯಿ ಪ್ರದೇಶ ಕಾಂಗ್ರೇಸ್ ಸಮಿತಿ (ಎಂಆರ್‍ಸಿಐ) ಮತ್ತು ಸಾರ್ವಜನಿಕ ಗಣೇಶೋತ್ಸವ ಮಂಡಳ್ ಮರೋಲ್ ಹಾಗೂ ಸೌತ್ ಇಂಡಿಯನ್ ಗಣೇಶೋತ್ಸವ ಮಂಡಳ್ ಮರೋಲ್ ಇದರ ಕಾರ್ಯದರ್ಶಿ ಆಗಿದ್ದರು.

ಸದ್ಯ ಮಂಗಳೂರು ಮತ್ತು ಮುಂಬಯಿ ಉಪನಗರ ಅಂಧೇರಿ ಪೂರ್ವದ ಮರೋಲ್‍ನಲ್ಲಿ ವಾಸ್ತವ್ಯವಾಗಿರುವ ಡಿ'ಸೋಜಾ ಶೀಘ್ರವೇ ಬಿಜೆಪಿಯಲ್ಲಿ ಪ್ರಭಾವಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here