Friday 29th, March 2024
canara news

ಪ್ರಸಿದ್ಧ ಸಂಗೀತಗಾರ ವಿಕ್ಟರ್ ಕೊನ್ಸೆಸೋ ನಿಧನ

Published On : 30 Sep 2016   |  Reported By : Rons Bantwal


ಮುಂಬಯಿ, ಸೆ.30: ಪ್ರಸಿದ್ಧ ಕೊಂಕಣಿ ಸಂಗೀತಗಾರ ಕಲಾ ಕಿರಣ, ಸಂಗೀತ ರತ್ನ ಬಿರುದಾಂಕಿತ ವಿಕ್ಟರ್ ಕೊನ್ಸೆಸೋ (65.) ಅವರು ಇಂದಿಲ್ಲಿ ಶುಕ್ರವಾರ (30.09.2016) ಅಲ್ಪಕಾಲದ ಅನಾರೋಗ್ಯದಿಂದ ಅಂಧೇರಿ ಪೂರ್ವದ ಹೋಲಿ ಸ್ಪೀರಿಟ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ವಿಕ್ಟರ್ ಕೊನ್ಸೆಸೊ ಅವರು ಸುಮಾರು 1200 ಕ್ಕಿಂತ ಅಧಿಕ ಪಂದ್ಯಗಳನ್ನು ಸ್ವಂತ ರಚಿಸಿ ಅದಕ್ಕೆ ಸ್ವರ ನೀಡಿದ್ದು, ಸುಮಾರು 95 ಸಂಗೀತ ಕಾರ್ಯಕ್ರಮಗಳನ್ನು ಸಾದರಪಡಿಸಿದ್ದಾರೆ. ಕೊಂಕಣಿ ಫಿಲ್ಮ್ ತಿಸ್ರಿ ಚೀಟ್‍ಗೂ ಅವರು ಸಂಗೀತವನ್ನು ನೀಡಿದ್ದರು. 9 ವರ್ಷಗಳ ಹಿಂದೆ ಮಾಂಡ್ ಸೊಬಾಣ್ ಮಂಗಳೂರಿನಲ್ಲಿ ಅಯೋಜಿಸಿದ ನಿರಂತರ ಸಂಗೀತ ಗಿನ್ನಿಸ್ ರೆಕಾರ್ಡ್‍ನಲ್ಲಿ ಸುಮಾರ್ 19 ಪಂದ್ಯಗಳನ್ನು ಮುಂಬಯಿಯ 52 ಕಲಾವಿದರಿಗೆ ತರಬೇತಿ ನೀಡಿ ಭಾಗವಹಿಸಿದ್ದರು. ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರಕಿದ್ದು, ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಅವರು ನೀಡಿದ ಸೇವೆಗೆ ದಿವೊ ಕೊಂಕಣಿ ಪತ್ರಿಕೆ ಅವರಿಗೆ ದಿವೊ ಜೀವನ ಸಾಧನ ಪುರಸ್ಕಾರ ನೀಡಿ ಗೌರವಿಸಿತ್ತು. ಮೃತರು ಮೂಲತ ಮಂಗಳೂರಿನ ದರೆಬೈಲ್ ಮೂಲದ ಮೃತರು ಪತ್ನಿ ಗ್ರೇಸಿ ಕೊನ್ಸೆಸೋ ಎರಡು ಹೆಣ್ಣು ವಿವೆಟ್ ಮತ್ತು ವೆಲಿಟಾ ಸೇರಿದಂತೆ ಅಭಿಮಾನ ಬಳಗ ಮತ್ತು ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ (03.10.2016) ಸಂಜೆ 3.30ಕ್ಕೆ ಅಂಧೇರಿ ಪೂರ್ವದ ಮಹಾಕಾಳಿ ಕೇವ್ಸ್ ರೋಡ್‍ನಲ್ಲಿರುವ ಸೆಕ್ರೆಡ್ ಆರ್ಟ್ ಚರ್ಚಿನಲ್ಲಿ ನೇರವೆರಲಿದೆ.


Contact : 9819962640 / 022 28250327




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here