Thursday 18th, April 2024
canara news

ಕಟೀಲು ಪ್ರಕರಣದ ತನಿಖೆ ಮುಂದುವರಿದಿದೆ; ದ.ಕ.ಜಿಲ್ಲಾಧಿಕಾರಿ

Published On : 02 Oct 2016   |  Reported By : Canaranews Network

ಮಂಗಳೂರು: ಅಪರಾಧಿಗಳು ಎಲ್ಲೆಲ್ಲಿಯೂ ಇದ್ದಾರೆ. ಸಮಾಜದಲ್ಲಿ ಅಶಾಂತಿಯನ್ನು ಸೃಷ್ಠಿಸುವುದು ಅವರ ಕೆಲಸ. ಕಟೀಲು ದೇವಿಯ ಬಗ್ಗೆ ಅವಹೇಳನಕಾರಿ ಸ್ಟೇಟಸ್‌ ದಾಖಲಿಸದವರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಅವರು ಹೇಳಿದರು.

ಕಟೀಲು ದೇವಿಯ ಬಗ್ಗೆ ಅವಹೇಳನಕಾರಿ ಸ್ಟೇಟಸ್‌ ಬರೆದಿರುವ ಪ್ರಕರಣದ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸ್‌ ಇಲಾಖೆ ಈಗಾಗಲೇ ವಿಚಾರಣೆಗಳನ್ನು ಕೂಡಾ ನಡೆಸಿದ್ದಾರೆ. ಸ್ಟೇಟಸ್‌ ಹಾಕಿದ್ದ ಆರೋಪಿ ಬಳಿಕ ತನ್ನ ಖಾತೆಯನ್ನು ಸ್ಥಗಿತಗೊಳಿಸಿದ್ದ. ಇದರಿಂದ ಆರೋಪಿಯನ್ನು ಹಿಡಿಯಲು ಸ್ಪಷ್ಟ ಕಷ್ಟವಾಗಿತ್ತು. ಈ ರೀತಿಯಲ್ಲಿ ಅಶಾಂತಿ ಸೃಷ್ಠಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಅಂತವರ ಉದ್ದೇಶಕ್ಕೆ ಬಲಿಯಾಗದೆ ಶಾಂತಿ ಕಾಪಾಡಬೇಕು ಎಂದರು.

More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here