Thursday 28th, March 2024
canara news

ಮೀನಿನ ತಲೆ ಭಾಗ ತಿಂದು ಅಸ್ವಸ್ಥ

Published On : 02 Oct 2016   |  Reported By : Canaranews Network


ಮಂಗಳೂರು: ಮೂರು ಜಾತಿಯ ಮೀನಿನ ತಲೆಯ ಪದಾರ್ಥ ಸೇವಿಸಿ ಒಂದೇ ಮನೆಯ ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಗೋಳ್ತಮಜಳು ಎಂಬಲ್ಲಿ ನಡೆದಿದ್ದು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಗೋಲಮಜಲು ನಿವಾಸಿ ಹಮೀದ್ ಎಂಬವರ ಪತ್ನಿ ತಾಯಿರಾ, ಪುತ್ರ ಅಹ್ರಾಝ್, ಪುತ್ರಿ ಅನಿನ ಹಾಗೂ ತಾಯಿರಾರ ಅಕ್ಕ ಆಯಿಷ ಅಸ್ವಸ್ಥಗೊಂಡವರು. ಅಹ್ರಾಝ್ ಶನಿವಾರ ಮಧ್ಯಾಹ್ನ ಮಂಗಳೂರು ದಕ್ಕೆಯಿಂದ ಮನೆಗೆ ತಂದಿದ್ದ ಅಮೂರು ಮೀನಿನ ತಲೆಯನ್ನು ಮನೆಯಲ್ಲಿ ಪದಾರ್ಥ ಮಾಡಲಾಗಿತ್ತು.

ಊಟದ ಕೆಲ ಸಮಯದ ಬಳಿಕ ಮನೆಮಂದಿ ವಾಂತಿ ಬೇಧಿಯಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡ ತಾಯಿರಾ, ಆಯಿಷಾ, ಅನಿನರನ್ನು ಕಲ್ಲಡ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಊಟ ಮಾಡಿದ ತಕ್ಷಣ ಮಂಗಳೂರಿಗೆ ತೆರಳಿದ್ದ ಅಹ್ರಾಝ್‍ಗೆ ಬಸ್ಸಿನಲ್ಲಿ ವಾಂತಿ ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಅಮೂರು ಜಾತಿಯ ಮೀನು ಸುಮಾರು 15ರಿಂದ 20 ಕೆ.ಜಿ. ಭಾರವಿದ್ದು ಅದರ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಮೀನಿನ ತಲೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವ ಕಂಪೆನಿಗಳು ಮೀನಿನ ತಲೆಗಳು ಬೇಗ ಕೆಟ್ಟು ಹೋಗದಂತೆ ರಸಾಯನಿಕ ಸಿಂಪಡಿಸುತ್ತದೆ. ಪದಾರ್ಥಕ್ಕೆ ಮೊದಲು ಮೀನನ್ನು ತೊಳೆಯುವಾಗ ರಸಾಯನಿಕ ಮೀನಿನಲ್ಲಿಯೇ ಬಾಕಿಯಾದರೆ ಪದಾರ್ಥ ಸೇವಿಸಿದವರು ಅಸ್ವಸ್ಥರಾಗುವ ಪ್ರಕರಣಗಳು ನಡೆಯುತ್ತದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here