Thursday 25th, April 2024
canara news

1 ಲಕ್ಷ ಮೌಲ್ಯದ ಸಿಮೆಂಟ್ ಶೀಟ್ ಕಳ್ಳತನ, ಆರೋಪಿಗಳ ಬಂಧನ

Published On : 02 Oct 2016   |  Reported By : Canaranews Network


ಮಂಗಳೂರು: ಮೂಡಬಿದಿರೆಯ ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಕಡಂದಲೆ-ಪಾಲಡ್ಕ ಎಜುಕೇಶನ್ ಸೊಸೈಟಿ ವಿದ್ಯಾ ಸಂಸ್ಥೆಗೆ ಸೇರಿದ ಫಾರ್ಮಸಿ ಕಾಲೇಜಿನ ಹಳೆ ಕಟ್ಟಡದ ಸುಮಾರು ರೂ 1ಲಕ್ಷ ಮೌಲ್ಯದ ಸಿಮೆಂಟ್ ಶೀಟ್, ದಾರಂದ, ಹಲಗೆ ಕಿಟಕಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ರತ್ನಾಕರ ಪೂಪಾಡಿಕಲ್ಲು, ಸುಭಾಷ್ ಕಕ್ಕುಂಜೆ ಹಾಗೂ ಶಿವಪ್ಪ ಕಡಂದಲೆ ಬಂಧಿತ ಆರೋಪಿಗಳು.

ಅ.23ರಂದು ಫಾರ್ಮಸಿ ಕಟ್ಟಡದ ವಸ್ತುಗಳು ಕಳವು ಆಗಿರುವ ಬಗ್ಗೆ ಕಾಲೇಜಿಗೆ ಸಂಬಂಧಪಟ್ಟ ಸುದರ್ಶನ ಶೆಟ್ಟಿ ಅವರು ದೂರು ನೀಡಿದ್ದರು. ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ದೇಜಪ್ಪ ಹಾಗೂ ಸಿಬಂಧಿಗಳು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here