Thursday 25th, April 2024
canara news

ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ-2016: ಅರ್ಜಿ ಆಹ್ವಾನ

Published On : 04 Oct 2016   |  Reported By : Rons Bantwal


ಮುಂಬಯಿ, ಅ.04: ಕರ್ನಾಟಕ ಕರಾವಳಿಯ ಕನ್ನಡ ಸಾಪ್ತಾಹಿಕ ವಾರ್ಷಿಕವಾಗಿ ಕೊಡಮಾಡುವ 12ನೇ ವರುಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ-2016ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನವಂಬರ್.22 ಮಂಗಳೂರು ಪುರಭವನದಲ್ಲಿ ಅದ್ದೂರಿಯಾಗಿ ನಡೆಸಲು ಅಣಿಗೊಳಿಸಲಾಗಿದೆ. ಆಸಕ್ತರು ಸ್ವತಃ ಅಥವ ಸಾಧಕರ ಅಭಿಮಾನಿಗಳು ಅರ್ಜಿಯನ್ನು ಕಳುಹಿಸ ಬಹುದಾಗಿದೆ.

ದ.ಕ. ಉಡುಪಿ ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಸ್ಥಳೀಯವಾಗಿ ಅಥವ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ಯಾರೂ ಅರ್ಜಿಯನ್ನು ಹಾಕಬಹುದು. ಆಯ್ಕೆ ಸಮಿತಿಯ ತೀರ್ಮಾನ ಅಂತಿಮವಾಗಿದೆ. ಅರ್ಜಿಗಳನ್ನು ಪೂರಕ ದಾಖಲೆಗಳೊಂದಿಗೆ ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್.15 ಆಗಿರುತ್ತದೆ. ವಿಳಾಸ: ಕಾರ್ಯದರ್ಶಿ-ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2016. ಬಿಷಪ್'ಸ್ ಹೌಸ್ ಚರ್ಚ್ ಬಿಲ್ಡಿಂಗ್ 2ನೇ ಮಹಡಿ, ಕೊಡಿಯಾಲ್‍ಬೈಲ್ ಪೆÇೀಸ್ಟ್, ಮಂಗಳೂರು 575003. ದ.ಕ.
Email:pingaara@gmail.com


ಕಳೆದ ಸಾಲಿನಲ್ಲಿ ಪ್ರಶಸ್ತಿ ಪುರಸ್ಕøತರು: 1.ಬರಿಗಾಲ ಗ್ರಾಮಾಂತರ ಪತ್ರಕರ್ತ, ಕುಂಟಾಡಿ ದಯಾನಂದ ಪೈ ಕಾರ್ಕಳ ಕನ್ನಡ ಪ್ರಭ, 2.ಶಿಕ್ಷಣಕಾಶಿಯ ಪ್ರವರ್ತಕ ಡಾ| ಎಂ.ಮೋಹನ್ ಆಳ್ವ, 3.ತಿತಿತಿ. ದಾಯ್ಜಿವಲ್ಡ್‍ಡಾಟ್ ಕಾಂ, ಪ್ರವರ್ತಕ ವಾಲ್ಟರ್ ನಂದಳಿಕೆ 4.ಧರ್ಮಸ್ಥಳ ಗ್ರಾಮಾಂತರ ಅಭಿವೃದ್ಧಿಯ ಸಿರಿ ಮಹಿಳಾ ಸಬಲೀಕರಣಕ್ಕಾಗಿ ಡಾ| ಡಿ.ವೀರೇಂದ್ರ ಹೆಗ್ಗಡೆ, 5.ಶಿಕ್ಷಣ ಸಂಸ್ಥಾಪಕರು ಗ್ರೇಸ್ ಪಿಂಟೊ 6.ಕೊಂಕಣಿಗಾಗಿ ಸಂಸ್ಥೆ ಮಾಂಡ್‍ಸೊಬಾಣ್,7.ನೂರ ಒಂದು ಮನೆಕಟ್ಟಿ ದಾನ ಮಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು, 8.ಬಿಲ್ಲವ ಮಹಾಮಂಡಲ ರಚಿಸಿ ದುಡಿದ ಜಯ ಸಿ.ಸುವರ್ಣ, 9.98 ಮನೆಕಟ್ಟಿ ದಾನ ಮಾಡಿದ ಎರಿಕ್ ಕೊರೆಯಾ,10. ಕಥೋಲಿಕ್ ಸಭಾ ಮಂಗಳೂರ್ ಪ್ರದೇಶ (ರಿ.) ಇದರ ವಿಶಿಷ್ಟರ ತರಬೇತಿ ಕೇಂದ್ರ ಮಾನಸ ತರಬೇತಿ ಮತ್ತು ಪುನರ್ ವಸತಿ ಕೇಂದ್ರ, ಪಾಂಬೂರ್, 11.ಸ್ನೇಹಾಲಯ ಪ್ರವರ್ತಕರಾದ ಜೊಸೆಫ್‍ಕ್ರಾಸ್ತಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ಪ್ರತೀ ದಿನ ಒಂದಕ್ಕೆ 700 ಊಟ ನೀಡುವುದಕ್ಕಾಗಿ ಸಂಘಟನೆ.

ಆಯ್ಕೆ ಸಮಿತಿಯಲ್ಲಿ:
ಸಂಚಾಲಕರಾಗಿ ರೋಯ್‍ಕಾಸ್ತೆಲಿನೊ, ಅಧ್ಯಕ್ಷರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಜಂಟಿ ಸಂಚಾಲಕರು; ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಂಯೋಜಕರಾಗಿ ಫಾ| ವಿಲಿಯಂ ಮಿನೇಜಸ್, ಸಾರ್ವಜನಿಕ ಸಂಪರ್ಕಧಿಕಾರಿ ಬಿಷಪ್ ಹೌಸ್ ಮಂಗಳೂರು. ಜಂಟಿ ಸಂಯೋಜಕರಾಗಿ ಎಲಿಯಾಸ್ ಫೆರ್ನಾಂಡಿಸ್, ನಿರ್ದೇಕರು ಫೋರ್‍ವಿಂಡ್ಸ್, ಮಾಸ್ ಕಮ್ಯುನಿಕೇಶನ್ ಸರ್ವಿಸಸ್. ಸದಸ್ಯರಾಗಿ: ಸಿ.ಜಿ ಪಿಂಟೊ, ಪೂರ್ವ ಜನರಲ್ ಮ್ಯಾನೇಜರ್, ಕಾಪೆರ್Çೀರೇಶನ್ ಬ್ಯಾಂಕ್ ಡಾ| ಬಿ.ಜಿ ಸುವರ್ಣ, ಕುದ್ರೊಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ ಅಭಿವೃದ್ಧಿ ಸಮಿತಿ ಸದಸ್ಯರು. ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘ ದ.ಕ. ಜಿಲ್ಲೆ. ಕಾರ್ಯದರ್ಶಿಯಾಗಿ ಪತ್ರಕರ್ತ ರೇಮಂಡ್ ಡಿ'ಕುನ್ಹ್ಹಾ ಇದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here