Thursday 28th, March 2024
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯುವಾಭ್ಯುದಯ ಆಶ್ರಯದಲ್ಲಿ ನಡೆಸಲ್ಪಟ್ಟ ಕಾಂತಾಬಾರೆ ಬೂದಾಬಾರೆ ಒಳಾಂಗಣ ಕ್ರೀಡಾಕೂಟ

Published On : 05 Oct 2016   |  Reported By : Rons Bantwal


ಮುಂಬಯಿ, ಅ.05: ಪ್ರತಿಷ್ಠಿತ ಸಂಸ್ಥೆಯಾದ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಯುವಾಭ್ಯುದಯ ಉಪಸಮಿತಿಯ ಆಶ್ರಯದಲ್ಲಿ ಕಳೆದ ರವಿವಾರ ಬಿಲ್ಲವ ಭವನದಲ್ಲಿ ಕಾಂತಾಬಾರೆ ಬೂದಾಬಾರೆ ಒಳಾಂಗಣ ಕ್ರೀಡೆಗಳಾದ ಕ್ಯಾರಂ, ಚೆಸ್, ಟೇಬಲ್ ಟೆನ್ನಿಸ್, ರಂಗೋಲಿ ಹಾಗೂ ಡ್ರಾಯಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ವಾಶಿಯ ಯುವೋದ್ಯಮಿ ಪ್ರಮೋದ್ ಕರ್ಕೇರ ಇವರು ಮುಖ್ಯ ಅತಿಥಿüಯಾಗಿ ಆಗಮಿಸಿದ್ದು ಅಸೋಸಿಯೇಶನಿನ ಉಪಾಧ್ಯಕ್ಷ ಡಾ| ಯು.ಧನಂಜಯಕುಮಾರ್ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌರವ ಅತಿಥಿüಯಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಸೂರ್ಯಕಾಂತ್ ಜೆ.ಸುವರ್ಣ, ಮಲಾಡ್ ಸ್ಥಳೀಯ ಸಮಿತಿಕಾರ್ಯಾಧ್ಯಕ್ಷ ಸಂತೋಷ ಪೂಜಾರಿ ಉಪಸ್ಥಿತರಿದ್ದು ಕ್ಯಾರಂ ಪಂದ್ಯಾಟಕ್ಕೆ ಚಾಲನೆ ನೀಡಿದರು. ದಿನ ಪೂರ್ತಿ ಜರುಗಿದ ಕ್ರೀಡಾ ಸ್ಪರ್ಧೆಯಲ್ಲಿ ಸ್ಥಳೀಯ ಸಮಿತಿಗಳ ಯುವ ಸದಸ್ಯರುಗಳು ಭಾಗವಹಿಸಿದ್ದು ತೀರ್ಪುಗಾರರಾಗಿ ಜಯ ಪೂಜಾರಿ ಹಾಗೂ ಹರೀಶ್ ಪೂಜಾರಿ ಸ್ಪರ್ಧೆ ನಡೆಸಿದರು.

ಸಾಯಂಕಾಲ ಜರುಗಿದ ಪ್ರಶಸ್ತಿ ವಿತರಣ ಸಮಾರಂಭವು ಉಪಾಧ್ಯಕ್ಷರಾದ ಶ್ರೀ ಡಾ| ಯು ಧನಂಜಯ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ್ದು ಅತಿಥಿüಯಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಗಂಗಾಧರ ಜೆ. ಪೂಜಾರಿ ಹಾಗೂ ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ಶಂಕರ್ ಡಿ.ಪೂಜಾರಿ ಗೌ. ಪ್ರ. ಕೋಶಾಧಿಕಾರಿ ಮಹೇಶ ಸಿ ಪೂಜಾರಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಯುವಾಭ್ಯುದಯ ಉಪಸಮಿತಿಯ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಜಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧಾ ವಿಜೇತರ ಯಾದಿ ಜಯಶ್ರೀ ಕೋಡಿ, ಅನುಶಾ ಪೂಜಾರಿ ವಾಚಿಸಿದರು. ಕ್ಯಾರಂ, ಚೆಸ್, ಟೇಬಲ್ ಟೆನಿಸ್ ಪಂದ್ಯಾಟಗಳು ಉಸ್ತುವಾರಿ ರವಿ ಸನಿಲ್ ನಿರ್ವಹಿಸಿದರು. ಡ್ರಾಯಿಂಗ್ ಮತ್ತು ರಂಗೋಲಿ ಸ್ಪರ್ಧೆಯ ಉಸ್ತುವಾರಿ ಖ್ಯಾತ ಚಿತ್ರಗಾರ ಜಯ ಪೂಜಾರಿ ನಿರ್ವಹಿಸಿದರು. ಜೊತೆ ಕೋಶಾಧಿಕಾರಿ ಹಾಗೂ ಯುವಾಭ್ಯುದಯ ಉಪಸಮಿತಿ ಸದಸ್ಯ ಸದಾಶಿವ ಎ.ಕರ್ಕೇರ ಧನ್ಯವಾದ ನೀಡಿದರು.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here