Thursday 25th, April 2024
canara news

ಪಣಂಬೂರಿನಲ್ಲಿ ಪ್ರವಾಸಿ ಬೋಟ್‌ ಪಲ್ಟಿ: ಮಗು ನಾಪತ್ತೆ

Published On : 07 Oct 2016   |  Reported By : Canaranews Network


ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಪ್ರವಾಸಿ ಬೋಟ್‌ ಪಲ್ಟಿಯಾದ ಪರಿಣಾಮ ಮಗು ನಾಪತ್ತೆಯಾದ ಘಟನೆ ಬುಧವಾರ ಸಂಭವಿಸಿದೆ. ಮಹಮ್ಮದ್‌ ಸದಾನ್‌(2) ನಾಪತ್ತೆಯಾದ ಮಗು.ದುಬೈಯಲ್ಲಿ ಸ್ವಂತ ಉದ್ಯಮ ಹೊಂದಿರುವ ಶಮಿ ಇಲಾಯ್‌ ರಜೆ ನಿಮಿತ್ತ ಊರಿಗೆ ಬಂದಿದ್ದು ಬುಧವಾರ ಪತ್ನಿ ಮಗು ಜತೆ ಪಣಂಬೂರು ಬೀಚ್‌ಗೆ ಬಂದಿದ್ದರು.ಪ್ರವಾಸಿ ಬೋಟ್‌ನಲ್ಲಿ ಸುತ್ತಾಡುವ ವೇಳೆ ಬೋಟ್ ಬಂದ್‌ ಬಿದ್ದಿದ್ದು ಈ ಸಂದರ್ಭ ಸಮುದ್ರದ ಅಲೆಗೆ ಬೋಟ್‌ ಪಲ್ಟಿಯಾಯಿತು.

ತಕ್ಷಣ ಬೋಟ್‌ನಲ್ಲಿದ್ದವರನ್ನು ದಡಕ್ಕೆ ಕರೆದುಕೊಂಡು ಬರುವಲ್ಲಿ ಬೀಚ್‌ ರಕ್ಷಣಾ ದಳದವರು ಯಶಸ್ವಿಯಾದರೂ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬೀಚ್‌ ರಕ್ಷಣಾ ದಳ, ಮುಳುಗು ತಜ್ಞರು ಸಮುದ್ರದಲ್ಲಿ ಮಗುವಿನ ಪತ್ತೆಗೆ ಶ್ರಮಿಸಿದರೂ ಪತ್ತೆಯಾಗಲಿಲ್ಲ. ಎಸಿಪಿ ರಾಜೇಂದ್ರ ಅವರು ಸ್ಥಳಕ್ಕೆ ಆಗಮಿಸಿ ಮಗುವಿನ ಪತ್ತೆಗೆ ಮಾರ್ಗದರ್ಶನ ನೀಡಿದರು. ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here