Friday 19th, April 2024
canara news

ಡಾ. ಲೀಲಾ ಉಪಾಧ್ಯಾಯರಿಗೆ ಕಾರಂತ ಪ್ರಶಸ್ತಿ

Published On : 08 Oct 2016   |  Reported By : Rons Bantwal


ಕಲ್ಕೂರ ಪ್ರತಿಷ್ಠಾನದಿಂದ ವರ್ಷಂಪ್ರತಿ “ಕಾರಂತ ಹುಟ್ಟು ಹಬ್ಬ” ಸಂದರ್ಭ ನೀಡುವ ಕಾರಂತ ಪ್ರಶಸಿಗೆ ಈ ಬಾರಿಡಾ. ಲೀಲಾ ಉಪಾಧ್ಯಾಯರು ಆಯ್ಕೆಯಾಗಿದ್ದಾರೆ.

ಡಾ. ಲೀಲಾ ಉಪಾಧ್ಯಾಯರು ಎಂ.ಎಸ್.ಸಿ. ಪದವಿ ಪಡೆದು ಪ್ರೆಂಚ್ ಭಾಷೆಯಲ್ಲಿಡಿಪ್ಲೋಮಾ, ಧಾರವಾಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದು ಸೈಂಟ್ ಆನ್ಸ್ ಕಾಲೇಜಿನಲ್ಲಿ 37 ವರ್ಷಗಳ ಕಾಲ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ ಪ್ರತಿಭಾನ್ವಿತರು.

 

ಪತಿ ದಿ. ಕೆ.ಎಸ್. ಉಪಾಧ್ಯಾಯರ ಜೊತೆ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಬೊಂಬೆಯಾಟ ತಂಡವನ್ನು ಪ್ರಾನ್ಸ್, ಹೋಲೇಂಡ್, ಪ್ಯಾರೀಸ್, ಜರ್ಮನಿ, ಸ್ವಿಸರ್‍ಲ್ಯಾಂಡ್‍ಗೆ ಕೊಂಡೊಯ್ದಕೀರ್ತಿಇವರಿಗೆ ಸಲ್ಲುತ್ತದೆ. ಪತಿಯ ನಿಧನಾ ನಂತರ ಇವರು 1996ರಿಂದ 2010ರವರೆಗೆ ಬೊಂಬೆಯಾಟದ ತಂಡವನ್ನು ಪಾಕಿಸ್ತಾನ, ಥೈಲ್ಯಾಂಡ್, ಸಿಂಗಾಪುರ, ಲಂಡನ್ ಮುಂತಾದ ವಿದೇಶಗಳಿಗೆ ಕೊಂಡೊಯ್ದು ಭಾರತದ ಜಾನಪದ ಕಲೆಯಾz Àಯಕ್ಷಗಾನ ಬೊಂಬೆಯಾಟವನ್ನು ವಿಶ್ವದಾದ್ಯಂತ ಪರಿಚಯಿಸಿದ ಧೀರ ಮಹಿಳೆಯೆಂಬ ಖ್ಯಾತಿಗೆ ಪಾತ್ರರಾಗಿರುತ್ತಾರೆ. ಇವರು ಶಾರದಾ ಪದವಿ ಪೂರ್ವಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ, ವೈಚಾರಿಕ ಬರಹಗಾರರಾಗಿ, ಮಂಗಳೂರಲ್ಲಿ ರೇಡಿಯೋ ಸ್ಥಾಪನೆಯಾದಲ್ಲಿಂದ ಭಾಷಣ, ಚಿಂತನ, ಚರ್ಚಾಕೂಟದಲ್ಲಿ ಭಾಗವಹಿಸಿ ಅದಮ್ಯಚಿಂತನ ಪ್ರವೃತ್ತಿಯುಳ್ಳವರಾಗಿದ್ದಾರೆ.

ತನ್ನ ಪತಿ ದಿ. ಕೆ.ಎಸ್. ಉಪಾಧ್ಯಾಯರ ಹೆಸರಿನಲ್ಲಿಒಂದುಟ್ರಸ್ಟ್ ಸ್ಥಾಪಿಸಿ ಯಕ್ಷಗಾನ ಕಲಾವಿದರಿಗೆ ಗೌರವಧನ, ಅದೇರೀತಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿರುವಇವರಿಗೆ ದಿನಾಂಕ 13/10/2016ರಂದು ಸಂಜೆ 5ಕ್ಕೆ ಮಂಗಳೂರಿನ ಡಾನ್‍ಬಾಸ್ಕೋ ಹಾಲ್‍ನಲ್ಲಿಜರಗಲಿರುವ ಸಮಾರಂಭದಲ್ಲಿ ಆಡ್ಯಗಣ್ಯರ ಉಪಸ್ಥಿತಿಯಲ್ಲಿ ಕಾರಂತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here