Wednesday 24th, April 2024
canara news

ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಾಲಯ ದೊಡ್ಡಿಕಟ್ಟೆಯಲ್ಲಿ ನೈವೇದ್ಯ ಪಾಕಶಾಲೆ ಉದ್ಘಾಟನೆ

Published On : 10 Oct 2016   |  Reported By : Rons Bantwal


ಸಾಮಾಜಿಕ ಕಳಕಳಿಗೂ ಧಾರ್ಮಿಕ ಕೇಂದ್ರಗಳು ಸ್ಪಂದಿಸಬೇಕು-ಜಯ ಸಿ.ಸುವರ್ಣ

ಮುಂಬಯಿ, ಅ.10: ದೇಗುಳಗಳು ಅಭಿವೃದ್ಧಿಯಾದರೆ ಗ್ರಾಮಕ್ಕೆ ಸಕರಾತ್ಮಕ ಬೆಳವಣಿಗೆಯ ಸಂಕೇತ ಸಾಮಾಜಿಕ ಪಾಲ್ಗೋಳ್ಳುವಿಕೆ, ಮೂಲ ಸೌಕರ್ಯಗಳ ಅಭಿವೃದ್ಧಿ ಬಗೆಗೂ ಇಲ್ಲಿ ಚಿಂತನೆಗಳು ಆಗಬೇಕಿದೆ. ಧÀರ್ಮಜಾಗೃತಿ ಹಾಗೂ ಧಾರ್ಮಿಕ ಪರಿಕಲ್ಪನೆಯ ಚಟುವಟಿಕೆಗಳ ಜತೆಗೆ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳು ಧಾರ್ಮಿಕ ಕೇಂದ್ರಗಳು ಆದ್ಯತೆ ನೀಡಬೇಕು ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಹೇಳಿದರು.

ಬಜಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದಲ್ಲಿ ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಾಣಗೊಂಡ ಪಾಕಶಾಲೆ ಉದ್ಘಾಟಿಸಿ ಸುವರ್ಣ ಮಾತನಾಡಿದರು.

ದೇಗುಲದಲ್ಲಿ ನಿರಂತರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳನ್ನು ನಿರಂತರ ನಡೆಯುವ ಸದುದ್ದೇಶದ ಬಗ್ಗೆ ಇಷ್ಠರಲ್ಲೇ ಆಡಳಿತ ಸಮಿತಿ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗುವುದು. ಜತೆಗೆ ಮೂಲಸೌಕರ್ಯಗಳ ಅಭಿವೃದ್ಧಿ ರಸ್ತೆ ಕುಡಿಯುವ ನೀರು, ವಾಹನ ಸೌಕರ್ಯ ವ್ಯವಸ್ಥೆಗಳ ಬಗ್ಗೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಗಳ ಸಹಕಾರ ಪಡೆದು ಯೋಜನೆ ರೂಪಿಸಲಾಗುವುದು ಎಂದು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಎಲ್.ವಿ ಅವಿೂನ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಯ ಸಿ.ಸುವರ್ಣ ಹಾಗೂ ಲೋಕೇಶ್ ಕುಳವ ಹಾಗೂ ಅನೂಜ್ ಕುಮಾರ್ ಅವರುಗಳನ್ನು ಕ್ಷೇತ್ರದ ವತಿಯಿಂದ ಎಲ್.ವಿ ಅವಿೂನ್ ಸನ್ಮಾನಿಸಿ ಗೌರವಿಸಿದರು.

ಉದ್ಯಮಿ ಲಕ್ಷ್ಮಣ್ ಶೆಟ್ಟಿ ಕಾವೂರು, ಬಜಪೆ ಶ್ರೀ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷ ಶಿವರಾಮ ಪೂಜಾರಿ, ಬಜಪೆ ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಪೆರ್ಗಡೆ, ಬಜಪೆ ವ್ಯವಸಾಯ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ಸುಧಾಕರ ಕಾಮತ್, ಉದಯ ಕುಮಾರ್, ಸುಂದರ ಅವಿೂನ್ ದೊಡ್ಡಿಕಟ್ಟ, ವಿನಯ ಶಾಮಾತ, ಕರುಣಾಕರ ಎಂ, ಚಲನಚಿತ್ರ ನಿರ್ದೇಶಕ ರಾಜಶೇಖರ ಎಂ.ಕೋಟ್ಯಾನ್, ಎನ್.ಎಂ ಸನೀಲ್, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರÀ ಜೆ.ಪೂಜಾರಿ, ನಿಲೇಶ್ ಪೂಜಾರಿ ಪಲಿಮಾರು, ಚಂದಪ್ಪ ಕುಂದರ್, ಶರತ್ ಸುವರ್ಣ, ಸುಕುಮಾರ ಸಾಲ್ಯಾನ್, ಶೇಖರ ಅಮೀನ್, ದೀಪಕ್ ಕೋಟ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಾರಾಯಣ ಉಡುಪ ಹಾಗೂ ವಿಶ್ವನಾಥ ಭಟ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಹರಸಿದರು. ರಾಜೀವ್ ಪ್ರತಾಪ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಗೌರವ ಪ್ರಧಾನ ಕಾರ್ಯದರ್ಶಿ ಗೋಪಾಲ್ ಅವಿೂನ್ ಸಹಕರಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here