Friday 19th, April 2024
canara news

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಶಿಕ್ಷಣ ಸಂಕುಲದಲ್ಲಿ ವೈಭವದ ಶಿಕ್ಷಕರ ದಿನಾಚರಣೆ

Published On : 11 Oct 2016   |  Reported By : Rons Bantwal


ಮುಂಬಯಿ, ಅ.11: ಮಹಾನಗರದಲ್ಲಿ 115 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಆಮೋಘ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಹಿರಿಯ ಪ್ರತಿಷ್ಟಿತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಸಂಚಾಲಿತ ಅಂಧೇರಿಯ ಶಿಕ್ಷಣ ದೇಗುಲದಲಿ ಇತ್ತೀಚೆಗೆ ಶಿಕ್ಷಕ-ಶಿಕ್ಷಕಿಯರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಎಂ.ವಿ.ಎಂ ಶಾಲೆಯ ಬಾಲ್ವಾಡಿ ಕ್ಲಾಸಿನಿಂದ ಹಿಡಿದು ಕಾಲೇಜಿನ ಪದವಿ ವಿಭಾಗೀಯ ಶಿಕ್ಷಕ, ಶಿಕ್ಷಕಿಯರು, ಮಂಡಳಿಯ ದೊಂಬಿವಲಿ ಶಾಖೆಯಲ್ಲಿರುವ `ಅಂಕುರ್' ಶಾಲೆಯ ಶಿಕ್ಷಕಿಯರೊಳಗೊಂಡು ಎಲ್ಲಾ ಶಿಕ್ಷಕ ಶಿಕ್ಷಕಿಯರು ಒಗ್ಗೂಡಿ ವಿವಿಧ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಭಾಗವಹಿ -ಶಿಕ್ಷಕಿಯರ ದಿನಾಚರಣೆ ಆಚರಿಸಿದರು.

ಶಿಕ್ಷಕ ವೃಂದದವರು ಭಗವಹಿಸಿರುವ ಮೆಹಂದಿ, ಕೆಶ ವಿನ್ಯಾಸ, ನೈಲ್ ಆರ್ಟ್, ಸಲಾಡ್ ಡ್ರೆಸ್ಸಿಂಗ್ ಮೊದಲಾದ ಸ್ಪರ್ಧೆಗಳು ಒಂದು ಸಂಭ್ರಮದ ವೇದಿಕೆಯಾಯಿತು. ಅಲ್ಲದೆ ಶಿಕ್ಷಕರಿಂದ ಅಭಿನಯಿಸಲ್ಪಟ್ಟ ಛದ್ಮವೇಷ, ಮಿಮಿಕ್ರಿ, ಶಿಕ್ಷಕಿಯವರಿಂದ ಸಂಗೀತ ಸ್ಪರ್ಧೆ, ಜನಪದ, ಸಾಂಪ್ರದಾಯಕ ಮತ್ತು ಪಾಶ್ಚಿಮಾತ್ಯ ನೃತ್ಯ ರೂಪಕಗಳು ಸಭಿಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತು. ಮಧು ಅಜಿತ್ ಸುವರ್ಣ, ಪ್ರೀತಿ ಹರೀಶ್ ಶ್ರೀಯಾನ್ ಮತ್ತು ಕುಮಾರಿ ಹೇತಲ್ ಇವರು ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿ, ತಮ್ಮ ಆಯ್ಕೆಗಳನ್ನು ಮಂಡಿಸಿರುವರು.

ಮಂಡಳಿಯ ಶಾಲೆಗಳಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸಿರುವ ಪ್ರೌಢ ಶಲೆಯ ಶಿಕ್ಷಕಿಯರಾದ ಶ್ರೀಮತಿ ಸುಮಂಗಳಾ ಉಚ್ಚಿಲ್ ಮತ್ತು ಶ್ರೀಮತಿ ಸುನಂದಾ ಚವನ್ ಅಲ್ಲದೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕರ್ಕೇರ ಇವರೆಲ್ಲರನ್ನೂ ಶಾಲೆಯ ಪೋಷಕ ಶಿಕ್ಷಕರ ಸಂಘದವರು ಗೌರವಿಸಿ, ಸನ್ಮಾನಿಸಿದರು.

ಶಿಕ್ಷಕರ ಬೋಧನಾ ವೃತ್ತಿಯಿಂದಲೇ ದೇಶದ ಭವಿಷ್ಯವು ಎದ್ದು ನಿಂತಿದೆ; ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು. ಶಿಕ್ಷಕರಿಲ್ಲದ ಸಮಾಜವನ್ನು ಕಲ್ಪಿಸಲಿಕ್ಕೆ ಸಾಧ್ಯವಿಲ್ಲ. ಅವರ ಶ್ರಮ, ನಿಷ್ಟೆ ಮತ್ತು ತ್ಯಾಗಕ್ಕೆ ಮಾನ್ಯತೆಯನ್ನು ನೀಡುವುದೇ ಶಿಕ್ಷಕರ ದಿನಾಚರಣೆಯ ಮುಖ್ಯ ಉದ್ದೇಶವೆಂದು ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಕಷ್ಣಕುಮಾರ್ ಎಲ್. ಬಂಗೇರರವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

ಮಂಡಳಿಯ ಶ್ರೀಮತಿ ಶಾಲಿನಿ ಜಿ. ಶಂಕರ್ ಕನ್‍ವ್‍ನೆಶನ್ ಸೆಂಟರ್ ಸಭಾಗೃಹದಲ್ಲಿ ಜರಗಿರುವ ಶಿಕ್ಷಕರ ದಿನಾಚರಣೆಯ ನಿಮಿತ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಮಂಡಳಿಯ ಇಂಟರ್‍ನೆಶನಲ್ ಶಾಲೆಯ ಶಿಕ್ಷಕ-ಶಿಕ್ಷಕಿಯರು ಅತೀ ಹೆಚ್ಚು ಬಹುಮಾನ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರಲ್ಲದೆ ಮಂಡಳಿಯ ಪಾರುಪತ್ಯದಾರರಾದ ಅಜಿತ್ ಜಿ.ಸುವರ್ಣ ಮತ್ತು ಅಧ್ಯಕ್ಷರಾದ ಕೃಷ್ಣ ಕುಮಾರ್ ಎಲ್.ಬಂಗೇರ ರವರ ಸಂಯೋಜಕತ್ವದಲ್ಲಿ ಕೊಡ ಮಾಡಲ್ಪಟ್ಟ ಪ್ರಶಸ್ತಿಯನ್ನು ಬಾಚಿಕೊಂಡರು. ಅದಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕ ಬಳಗದವರಿಗೆ ಮಂಡಳಿಯ ಆಡಳಿತ ಸಮಿತಿ ಸದಸ್ಯರ ಮತ್ತು ಮಹಿಳಾ ವಿಭಾಗದ ಸಮಿತಿ ಸದಸ್ಯರ ಹಸ್ತದಿಂದ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಅಜಿತ್ ಸುವರ್ಣರವರ ಮುಂದಾಲುತನದಲ್ಲಿ ಏರ್ಪಡಿಸಲಾದ ಶಿಕ್ಷಕರ ದಿನಾಚರಣೆಯ ಅಭೂತಪುರ್ನ ಯಶಸುಗಳಿತಲ್ಲದೆ ಅವರಿಗೆ ಈ ಕಾರ್ಯಕ್ರಮದಲ್ಲಿ ಸಹಾಯ ಸಹಕಾರ ನೀಡಿರುವ ಮನು ಕರ್ಕೇರ, ಮೋಹನ್ ಸಾಲ್ಯಾನ್ ಮತ್ತು ಪ್ರಿಯದರ್ಶಿನಿ ಸುವರ್ಣ ಇವರೆಲ್ಲರಿಗೂ ಅಭಾರ ಮನ್ನಿಸಲಾಯಿತು. ಅಜಿತ್ ಸುವರ್ಣರು ಮಾತಾನಾಡುತ್ತಾ ಇನ್ನು ಮುಂದೆ ಪ್ರತೀ ವರ್ಷವೂ ಇಂತಹ ಸಮಾರಂಭವನ್ನು ಏರ್ಪಡಿಸುವ ಭರವಸೆಯನ್ನು ನೀಡುತ್ತಾ ಶಿಕ್ಷಕರ ನಿಷ್ಟೆಯ ಮನೋಭಾವ ಮತ್ತು ಪೆÇ್ರೀತ್ಸಾಹದಾಯಕ ಉತ್ಸಾಹವು ಇನ್ನು ಮುಂದಿನ ಶಿಕ್ಷಕರಿಗೆ ಮಾರ್ಗದರ್ಶನವಾಗಬೇಕೆಂದು ಸ್ಪೂರ್ತಿದಾಯಕ ಮಾತುಗಳನ್ನಾಡಿ ಹುರಿದುಂಬಿಸಿದರು.

ಸಮಾರಂಭದಲ್ಲಿ ಮಂಡಳಿಯ ಪಾರುಪತ್ಯಗಾರರಾದ ಜಿ.ಕೆ ಕರ್ಕೇರ, ಪಿ.ಎಸ್ ಸುವರ್ಣ, ಅಜಿತ್ ಜಿ. ಸುವರ್ಣ, ಅಧ್ಯಕ್ಷರಾದ ಕೃಷ್ಣಾ ಕುಮಾರ್ ಎಲ್.ಬಂಗೇರ, ಉಪಾಧ್ಯಕ್ಷರಾದ ಶ್ರೀನಿವಾಸ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ.ಸಾಲ್ಯಾನ್, ಜೊತೆ ಕಾರ್ಯದರ್ಶಿ ಲಕ್ಷ್ಮಣ ಶ್ರೀಯಾನ್, ಸಮಿತಿ ಸದಸ್ಯರಾದ ಹರೀಶ್ ಪುತ್ರನ್, ಪ್ರಶಾಂತ್ ತಿಂಗಳಾಯ, ಪರೇಶ್ ಅಮೀನ್, ದೇವರಾಜ್ ಬಂಗೇರ, ಚಂದ್ರಶೇಖರ್ ಕರ್ಕೇರ ಮತ್ತು ಮಂಡಳಿಯ ಮೀರಾ ಭಯಂದರ್ ಶಾಖೆಯ ಕಾರ್ಯದರ್ಶಿ ಜಯಶೀಲ ತಿಂಗಳಾಯ, ಅತಿಥಿüಯಾದ ಹರೀಶ್ ಶ್ರೀಯಾನ್ ಅದಲ್ಲದೆ ಮಹಿಳಾ ವಿಭಾಗದ ಸಮಿತಿ ಸದಸ್ಯರೆಲ್ಲರೂ ಸಮಾರಂಭದಲ್ಲಿ ಉಪಸ್ಥಿತರಿದ್ದು, ಸಮಾರಂಭವು ಕೊನೆಗೊಂಡಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here