Thursday 28th, March 2024
canara news

ಬರಹಗಾರರ ಅಕ್ಷರ ಸಮ್ಮೇಳನಕ್ಕೆ ಸಿದ್ಧತೆ

Published On : 11 Oct 2016   |  Reported By : Bernard J Costa


ಕುಂದಪ್ರಭ ಆಶ್ರಯದಲ್ಲಿ ಯೋಜಿಸಿರುವ ಬರಹಗಾರರ ಅಕ್ಷರ ಸಮ್ಮೇಳನಕ್ಕೆ ಸರ್ವಸಿದ್ದತೆ ನಡೆದಿದ್ದು, ನೂರಕ್ಕೂ ಹೆಚ್ಚು ಹಿರಿಯ ಕಿರಿಯ ಬರಹಗಾರರು ಭಾಗವಹಿಸಲಿದ್ದಾರೆ.

ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಅಕ್ಟೋಬರ್ 23 ರಂದು ರವಿವಾರ ನಡೆಯುವ ಬರಹಗಾರರ ಸಮ್ಮೇಳನವನ್ನು ಹಿರಿಯ ಕಥೆಗಾರÀರಾದ ಮಾಧುರಿಕೃಷ್ಣ ಬೆಂಗಳೂರು ಉದ್ಘಾಟಿಸ ಲಿದ್ದಾರೆ. ಕವಿ ದುಂಡಿರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಬರಹಗಾರ, ಸಂಶೋಧಕ, ಪ್ರೊ.ಎ.ವಿ.ನಾವಡ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಐ.ಎಂ.ಎ. ಅಧ್ಯಕ್ಷೆ ಡಾ|ಭವಾನಿ ರಾವ್, ಸಾಹಿತಿ, ಜಾದೂಗಾರ ಓಂ ಗಣೇಶ್, ಡಾ|ಅಣ್ಣಯ್ಯ ಕುಲಾಲ್ ಮಂಗಳೂರು ಭಾಗವಹಿಸಲಿದ್ದಾರೆ.

ವೈವಿಧ್ಯಮಯ ಗೋಷ್ಠಿಗಳು ನಡೆಯ ಲಿದ್ದು, ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಸಾಹಿತ್ಯ ಮಿಡಿತ” ಗೋಷ್ಠಿಯಲ್ಲಿ ಪ್ರಗತಿ ಶೆಟ್ಟಿ, ಚೇತನಾ ಶ್ಯಾನುಭಾಗ್, ರಾಧಿಕಾ, ಕೀರ್ತಿ ಡಿ.ಕೆ, ಭಾಗವಹಿಸಲಿದ್ದಾರೆ. ಪ್ರೊ. ನಾರಾಯಣ ರಾವ್ ಸಮನ್ವಯಕಾರರಾಗಿ ಗೋಷ್ಠಿ ನಡೆಸಿಕೊಡಲಿದ್ದಾರೆ.

“ಕುಂದನಾಡು ವೈಶಿಷ್ಟ್ಯ” ಗೋಷ್ಠಿಯ ಅಧ್ಯಕ್ಷತೆಯನ್ನು ಡಾ|ಗಾಯತ್ರಿ ನಾವಡ ವಹಿಸಲಿದ್ದಾರೆ. ಡಾ. ಭಾರತಿ ಮರವಂತೆ, ಲತಾ ಶೆಟ್ಟಿ ಮೂಡ್ಲಕಟ್ಟೆ, ಮೂರೂರು ಚಂದ್ರ ಬೆಂಗಳೂರು, ಕೋಟೇಶ್ವರ ಸೂರ್ಯ ನಾರಾಯಣ ರಾವ್, ಮಾತನಾಡಲಿದ್ದಾರೆ. ಹಿರಿಯ ಪತ್ರಕರ್ತ ಎಸ್.ಜನಾರ್ಧನ್ ಸಮನ್ವಯಕಾರಕರಾಗಿ ಕಾರ್ಯನಿರ್ವಹಿಸಲಿ ದ್ದಾರೆ.

“ಯಕ್ಷ-ಕಾವ್ಯ-ಕಥೆ” ಗೋಷ್ಠಿಯ ಅಧ್ಯಕ್ಷತೆಯನ್ನು ಶಾರದಾ ಭಟ್ ಉಡುಪಿ ವಹಿಸಲಿದ್ದಾರೆ. ರಾಜೇಂದ್ರ ನಾಯಕ್, ಶುಭಾÀ ಮರವಂತೆ, ಬಸವರಾಜ್ ಶೆಟ್ಟಿಗಾರ್, ಸಂದೀಪ ಹೆಗ್ಗದ್ದೆ, ಪ್ರಕಾಶ್ ಹೆಬ್ಬಾರ್ ನಾಡಾ, ಪುಂಡಲೀಕ ನಾಯಕ್ ಮಾತನಾಡಲಿದ್ದಾರೆ. ಬೆಳಗೋಡು ರಮೇಶ್ ಭಟ್ ಸಮನ್ವಯಕಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಲಿದ್ದಾರೆ.

“ಬರಹ-ಪ್ರಕಟಣೆ-ಓದು-ವಿಮರ್ಶೆ” ವಿಷಯದಲ್ಲಿ ನಡೆಯುವ “ಪಟ್ಟಾಂಗ” ಸಂವಾದ ಗೋಷ್ಠಿಯಲ್ಲಿ ಉಪೇಂದ್ರ ಸೋಮಯಾಜಿ, ಮಾಲಿನಿ ಮಲ್ಯ, ಡಾ|ಉಮೇಶ್ ಪುತ್ರನ್, ಡಾ|ಭಾಸ್ಕರ ಆಚಾರ್ಯ, ಡಾ|ಎಚ್.ಆರ್.ಹೆಬ್ಬಾರ್,, ಕು.ಗೋಪಾಲ್ ಭಟ್, ಆನಂದ, ಅಶೋಕ್ ತೆಕ್ಕಟ್ಟೆ, ತಾರಾಭಟ್, ಸಂಧ್ಯಾ ಶೆಣೈ, ಇಂದಿರಾ ಹಾಲಂಬಿ, ಪೂರ್ಣಿಮಾ ಭಟ್, ಸತೀಶ ಕೆÉಮ್ಮಣ್ಣು, ವೈ.ಎನ್.ವೆಂಕಟೇಶ ಮೂರ್ತಿ ಭಟ್ಟ, ಬರ್ನಾಡ್ ಡಿ’ಕೋಸ್ತ, ಸುಬ್ರಹ್ಮಣ್ಯ ಶೆಟ್ಟಿ, ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ, ಡಾ.ಕೃಷ್ಣರಾಜ ಕರಬ, ಕೆ.ಕೆ.ಕಾಳಾವರ್. ಅಂಶುಮಾಲಿ, ಗಣಪತಿ ಹೋಬಳಿದಾರ್, ಚಂದ್ರ ಹೆಮ್ಮಾಡಿ, ಡಾ| ಕಿಶೋರ್ ಕುಮಾರ್, ಪಂಜು ಬಿಲ್ಲವ ಮುಂತಾದವರು ಭಾಗವಹಿಸಲಿದ್ದಾರೆ.

ಮುನಿಯಾಲ್ ಗಣೇಶ್ ಶೆಣೈ, ಆರ್ಗೋಡು ಸುರೇಶ್ ಶೆಣೈ ಸಮನ್ವಯಕ ರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕರುಣಾಕರ ಮೊಗಬೆಟ್ಟು ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ವೈದೇಹಿ ಸಮಾರೋಪ ಭಾಷಣ ಮಾಡಲಿದ್ದು ಆಗುಂಬೆ ನಟರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ|ಎಚ್.ರಾಮ ಮೋಹನ್, ಡಾ|ಎಚ್.ರಂಜಿತ್ ಕುಮಾರ್ ಶೆಟ್ಟಿ, ಡಾ.ಕನರಾಡಿ ವಾದಿರಾಜ ಭಟ್, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಕುಂದರ್ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ, ಕ.ಸಾ.ಪ. ಕುಂದಾಪುರ ತಾಲ್ಲೂಕು ಕಾರ್ಯಾಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್ ಭಾಗವಹಿಸಲಿದ್ದಾರೆ.

ದತ್ತಾನಂದ ಗಂಗೊಳ್ಳಿ, ಡಾ|ಎನ್.ಪಿ. ಕಮಲ್, ಕೆ.ಪಿ.ಶ್ರೀಶನ್, ಎಸ್.ಕೃಷ್ಣಾನಂದ ಚಾತ್ರ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದಲ್ಲಿ ವಾಗೀಶ್ ಭಟ್ ಅವರ ಭಾವಗೀತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಾಡುಗಾರ ಗಣೇಶ್ ಗಂಗೊಳ್ಳಿ ಕುಂದಕನ್ನಡ ಗೀತೆ ಹಾಡಲಿದ್ದಾರೆ.

ಕೆ.ನಾರಾಯಣ, ಕು.ಮಾನಸ ಹೊಳ್ಳ, ಕು.ಅನುಷಾ ಭಟ್, ಕು.ಮೇದಿನಿ, ಕು. ಭುವನ ಹೊಳ್ಳ, ಕು. ವಿಜಯಲಕ್ಷ್ಮೀ, ರಶ್ಮಿರಾಜ್ ಭಾವಗೀತೆ ಹಾಡಲಿದ್ದಾರೆ. ಪಿ.ಜಯವಂತ ಪೈ , ಎಚ್.ಸೋಮಶೇಖರ ಶೆಟ್ಟಿ, ದಿನೇಶ್ ಪ್ರಭು ಮದ್ದುಗುಡ್ಡೆ, ನಿರ್ವಹಿಸಲಿದ್ದಾರೆ. ಉಡುಪಿ ಜಿಲ್ಲೆಯ ನೂರಾರು ಸಾಹಿತಿಗಳು ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ.

ಕುಂದಾಪುರ ಭಾಷೆ ಸಂಸ್ಕøತಿಗೆ ಪ್ರಾಮುಖ್ಯತೆ ನೀಡುವ ಈ ಸಮ್ಮೇಳನದಲ್ಲಿ ತಾಲೂಕಿನ ಎಲ್ಲಾ ಬರಹಗಾರರು ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಸಮ್ಮೇಳನದ ಸಂಚಾಲಕ ಯು.ಎಸ್.ಶೆಣೈ ತಿಳಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here