Saturday 20th, April 2024
canara news

ಬಹುಭಾಷಾ ಸಂಗಮ ತುಳುವರ ಹೃದಯ ವೈಶಾಲ್ಯಕ್ಕೆ ಮಾದರಿ- ಸಿಎಂ ಸಿದ್ದರಾಮಯ್ಯ

Published On : 12 Oct 2016   |  Reported By : Rons Bantwal


ವಿಶ್ವ ತುಳುವೆರೆ ಆಯನೊದ ಅಂಗವಾಗಿ ಕಾಸರಗೋಡಿನಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗುವ ಬಹುಭಾಷಾ ಸಂಗಮ ಕಾರ್ಯಕ್ರಮ ತುಳುವರ ಹೃದಯ ವೈಶಾಲ್ಯತೆಗೆ ಮಾದರಿಯಾಗಿದ್ದು ತನ್ನ ಭಾಷೆ ಸಂಸ್ಕøತಿಯನ್ನು ಉಳಿಸುವುದಲ್ಲದೆ ಇತರ ಭಾಷೆಗಳಿಗೂ ಮನ್ನಣೆಯ ಮಣೆ ಕಲ್ಪಿಸಿದ ತುಳುವೆರೆ ಆಯನೊ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಅವರು ಬಂಟ್ವಾಳ ಅತಿಥಿಗೃಹದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ವಿಶ್ವತುಳುವೆರೆ ಆಯನೊದ ಪದಾಧಿಕಾರಿಗಳಿಗೆ ಶುಭ ಹಾರೈಸಿದ್ದಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿಯೂ ಭರವಸೆ ನೀಡಿದರು. ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತುಳುವೆರೆ ಆಯನೊದ ಗೌರವಾಧ್ಯಕ್ಷರಾದ ಸಚಿವ ಬಿ.ರಾಮನಾಥ ರೈ,ಮಹಿಳಾ ಸಮಿತಿ ಅಧ್ಯಕ್ಷರಾದ ಶಾಸಕಿ ಶಕುಂತಳಾ ಶೆಟ್ಟಿ ಪುತ್ತೂರು, ಶಾಸಕ ಮೊಯ್ದಿನ್ ಬಾವ,ವಿಶ್ವ ತುಳುವೆರೆ ಆಯನೊದ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಆಳ್ವ ಬದಿಯಡ್ಕ,ಮಂಗಳೂರು ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ,ದೈವರಾಧಕ ಸಂಚಾಲಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು,ತುಳುನಾಡ ತಿರ್ಗಾಟ ಸಂಚಾಲಕ ಹರ್ಷ ರೈ ಪುತ್ರಕಳ,ಸೇಸು ಏತಡ್ಕ,ನಿಶಾಂತ್ ಪಾಟಾಳಿ ನೀರ್ಚಾಲು,ಭಾಸ್ಕರ ಪೂಜಾರಿ ಕುಂಬಳೆ ಮೊದಲಾದವರು ಈ ಸಂದರ್ಭದಲ್ಲಿ ಭೇಟಿ ಮಾಡಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here