Thursday 28th, March 2024
canara news

ತುಳುವೆರೆ ಆಯನೊದಲ್ಲಿ ಸಾಹಿತ್ಯಯಾಣ ಶ್ಲಾಘನೀಯ- ಡಾ.ವಸಂತ ಕುಮಾರ್ ಪೆರ್ಲ

Published On : 13 Oct 2016   |  Reported By : Rons Bantwal


ವಿಶ್ವ ತುಳುವೆರೆ ಆಯನೊದ ಅಂಗವಾಗಿ ಡಿ.12,13ರಂದು ತುಳು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಬದಿಯಡ್ಕದ ಸಹಕಾರಿ ಕಾಲೇಜಿನ ಸಭಾಂಗಣದಲ್ಲಿ ಸಮಾಲೋಚನ ನಡೆಯಿತು.ಸಭೆ ಅಧ್ಯಕ್ಷತೆಯನ್ನು ಮಂಗಳೂರು ಆಕಾಶವಾಣಿಯ ಡಾ.ವಸಂತ ಕುಮಾರ್ ಪೆರ್ಲವಹಿಸಿ ಮಾತನಾಡುತ್ತಾ ವಿಶ್ವಕ್ಕೆ ತುಳು ಸಾಹಿತ್ಯದ ಮೆರುಗನ್ನು ಪಸರಿಸಲು ತುಳುವೆರೆ ಆಯನೊದಲ್ಲಿ ವೈವಿಧ್ಯಮಯ ಸಾಹಿತ್ಯಗಳನ್ನು ಸಂಕ್ರಮಿಸಿ ಸಾಹಿತ್ಯಯಾಣ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಸಭೆಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ,ಪತ್ರಕರ್ತ ಮಲಾರ್ ಜಯರಾಮ ರೈ ಮಾತನಾಡುತ್ತಾ ತುಳುನಾಡಿನ ನೀರು ಸೇವಿಸುವ ಪ್ರತಿಯೊಬ್ಬರೂ ತುಳುವರೆಂಬ ಭಾವನೆಯಿಂದ ಸಮ್ಮೇಳನ ಸಂಘಟಿಸಿರುವುದು ತುಳುನಾಡಿನ ಐಕ್ಯತೆಗೆ ನಾಂದಿಯಾಗಲಿದೆ ಎಂದರು.ಡಾ.ಕಿಶೋರ್ ಕುಮಾರ್ ರೈ ಶೇಣಿ,ಶ್ರೀಕೃಷ್ಣಯ್ಯ ಅನಂತಪುರ, ಎಂ.ಕೆ.ಕುಕ್ಕಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ.ವಿ.ಎಸ್.ಉಳ್ಳಾಲ್,ರಾಜಶ್ರೀ ರೈ ಪೆರ್ಲ,ಜಯಶ್ರೀ ಅನಂತಪುರ,ಪ್ರಭಾವತಿ ಕೆದಿಲಾಯ,ಅಕ್ಷತರಾಜ್ ಪೆರ್ಲ,ಜ್ಯೋತ್ಸಾ ಕಡಂದೇಲು,ಗೋಪಾಲಕೃಷ್ಣ ಕುಲಾಲ್,ಪದ್ಮಾವತಿ ಏದಾರು, ಸುಂದರ ಬಾರಡ್ಕ, ಭಾಸ್ಕರ ಕುಂಬಳೆ ಮೊದಲಾದವರು ಸಭೆಯಲ್ಲಿ ಸಲಹೆ ಸೂಚನೆ ನೀಡಿದರು.ತುಳು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ವಿಚಾರಗೋಷ್ಠಿ,ಕವಿಗೋಷ್ಠಿ, ಮಕ್ಕಳ ಗೋಷ್ಠಿ ವಿವಿಧ ಸಾಹಿತ್ಯಿಕ ಸ್ಪರ್ಧೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಬಳಿಕ ತುಳು ಸಾಹಿತ್ಯ ಸಮ್ಮೇಳನ ಸಮಿತಿ ರಚಿಸಲಾಯಿತು. ಸನ್ನಿಧಿ ಟಿ.ರೈ ಪ್ರಾರ್ಥನೆ ಹಾಡಿದರು. ಡಾ.ರಾಜೇಶ್ ಆಳ್ವ ಪ್ರಸ್ತಾವನೆಗೈದರು. ಹರೀಶ್ ಸುಲಾಯ ಒಡ್ಡಂಬೆಟ್ಟು ಸ್ವಾಗತಿಸಿ ನಿರಂಜನ ರೈ ಪೆರಡಾಲ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here