Thursday 23rd, May 2019
canara news

ಮೊಗವೀರ ಭವನದಲ್ಲಿ ಒಬಿಸಿ ಮಾನ್ಯತಾ ಅಭ್ಯುದಯ ಡಿವಿಡಿ ಬಿಡುಗಡೆ

Published On : 13 Oct 2016   |  Reported By : Rons Bantwal


ಸೌಲತ್ತು ಪಡೆಯಲು ಸಾಂಘಿಕ ತಾಕತ್ತು ಅಗತ್ಯ : ಎಂ.ಡಿ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ. ಅ.12: ಎಂಭತ್ತೊಂಬತ್ತರ ಹರೆಯದ ನಾನು ಮುಂಬಯಿ ಮಹಾನಗರದಲ್ಲಿ 60 ಸಂವತ್ಸರಗಳನ್ನು ಪೂರೈಸಿದ್ದೇನೆ. ಇಲ್ಲಿನ ತುಳು ಕನ್ನಡಿಗರೊಂದಿಗೆ ಮರಾಠಿಗರಲ್ಲೂ ಸಂಬಂಧ ಬೆಸೆದು ಬೆಳೆಸಿ ಯಶಸ್ವಿ ಉದ್ಯಮಿ, ಸಮಾಜಯಾಗಿ ನಿಮ್ಮೆಲ್ಲರ ಪ್ರೀಗೆ ಪಾತ್ರನಾಗಿ ದೊಡ್ಡಣ್ಣ ಅನಿಸಿಕೊಂಡಿದ್ದೇನೆ. ಅಂದು ಎಲ್ಲರಲ್ಲೂ ಬಡತನ ಕಾಡುತ್ತಿದ್ದರೂ, ಇಂದು ಎಲ್ಲರೂ ಅವರವರ ಮಟ್ಟಿಗೆ ಹಣವಂತರು . ಆದುದರಿಂದ ಜನತೆಗೆ ಹಣದ ತೊಂದರೆ ಕಾಡುತ್ತಿಲ್ಲ. ಮುಂಬಯಿವಾಸಿ ಜನರು ಸಹೋದರತ್ವ ಬಾಳಿನ ಪ್ರೇರಕರು ಮತ್ತು ಪೆÇೀಷಕರೂ ಹೌದು. ಒಟ್ಟಾಗಿ ಬಾಳಿದರೆ ಏನು ಸಾಧಿಸ ಬಹುದು ಎನ್ನುವುದನ್ನು ಕಂಡುಕೊಂಡವರಾಗಿದ್ದಾರೆ. ಅದಕ್ಕೆ ಒಂದು ಹೆಜ್ಜೆ ಮುಂದುವರಿದ ಜಯ ಸಿ.ಪೂಜಾರಿ ಹೊಸ ಆಶಯವನ್ನುಹೊತ್ತು ಹಿಂದುಳಿದ ವರ್ಗದ ಮಾನ್ಯತೆಗಾಗಿನ ಅಭ್ಯುದಯ ಡಿವಿಡಿ ರೂಪಿಸಿದ್ದು ಮತ್ತೊಂದು ಸಾಧನೆಯಾಗಿದೆ. ಇದು ನಮ್ಮಲ್ಲಿನ ಏಕತೆಯನ್ನು ಬಲಪಡಿಸಲು ಶಕ್ತಿ ತುಂಬಿದೆ. ಸೌಲತ್ತುಗಳನ್ನು ಪಡೆಯಲು ಸಾಂಘಿಕ ತಾಕತ್ತು ಅಗತ್ಯ. ಈ ಮೂಲಕ ನಮ್ಮಲ್ಲಿನ ಸಾಂಘಿಕತಾ ಶಕ್ತಿಗೆ ಪೆÇೀತ್ಸಹದಾಯಕವಾಗಿದೆ ಎಂದು ಬಂಟ್ಸ್ ನ್ಯಾಯ ಮಂಡಳಿ ಗೌರವಾಧ್ಯಕ್ಷ ಎಂ.ಡಿ ಶೆಟ್ಟಿ ನುಡಿದರು.

ನಗರದಲ್ಲಿನ ಯುವ ಸಮಾಜ ಸೇವಕ, ಪತ್ರಕರ್ತ ಪ್ರೆಸ್‍ಕ್ಲಬ್ ಜಯ ಹೆಸರಾಂತ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಜಯ ಸಿ.ಪೂಜಾರಿ ಸಾರಥ್ಯದ ಅಭ್ಯುದಯ ಅಭಿಮಾನಿ ಬಳಗ ಮುಂಬಯಿ ರೂಪಿಸಿದ ಇತರ ಹಿಂದುಳಿದ ವರ್ಗ (ಒಬಿಸಿ) ಮಾನ್ಯತೆಗಾಗಿನ ಅಭ್ಯುದಯ ಡಿವಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿ ಎಂ.ಡಿ ಶೆಟ್ಟಿ ಮಾತನಾಡಿದರು.

ಇಂದಿಲ್ಲಿ ಬುಧವಾರ ಅಪರಾಹ್ನ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಹಯೋಗದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆ ವಹಿಸಿ ಅಭ್ಯುದಯ ಡಿವಿಡಿ ಬಿಡುಗಡೆ ಗೊಳಿಸಿದರು.

ಅತಿಥಿಗಳಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಕೆ.ಎಲ್ ಬಂಗೇರ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಗೋಪಾಲ ಎಸ್.ಪುತ್ರನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ ಉಪಸ್ಥಿತರಿದ್ದು, ಒಬಿಸಿ ಸೇವೆಗಾಗಿ ಅವಿರತ ಶ್ರಮಿಸಿದ ಭಾರತ್ ಬ್ಯಾಂಕ್‍ನ ನಿರ್ದೇಶಕ ರೋಹಿತ್ ಎಂ.ಸುವರ್ಣ ಅವರಿಗೆ `ಸಮಾಜ ವತ್ಸಲ', ಅಭ್ಯುದಯ ಬ್ಯಾಂಕ್‍ನ ಆಡಳಿತ ನಿರ್ದೇಶಕ ಪುನೀತ್‍ಕುಮಾರ್ ಶೆಟ್ಟಿ ಅವರಿಗೆ `ಕಲಿಯುಗದ ಏಕಲವ್ಯ' ಮತ್ತು ದೇವದಾಸ್ ಶ್ರೀಯಾನ್ ಅವರಿಗೆ `ಕ್ರೀಯಾ ಶಿರೋಮಣಿ' ಬಿರುದು ಪ್ರದಾನಿಸಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಿತರು ಗೌರವಕ್ಕೆ ಉತ್ತರಿಸಿ ಅಭಿವಂದಿಸಿದರು.

ಸಮಗ್ರ ಸಮುದಾಯಗಳ ಅಭಿವೃದ್ಧಿ ಮತ್ತು ಗುರುತಿಸುವಿಕೆಗಾಗಿ ಸ್ವಾರ್ಥ ರಹಿತ ಸೇವೆಗೈದ ಜಯ ಪೂಜಾರಿ ಶ್ರಮ ಶ್ಲಾಘನೀಯ. ನಮ್ಮಲ್ಲಿನ ಎಲ್ಲಾ ಸಮುದಾಯದ ಜನತೆ ಇದರ ಫಲಾನುಭವಿಗಳಾದರೆ ಶ್ರಮ ಸಾರ್ಥಕವಾಗುವುದು ಎಂದು ಪ್ರಭಾಕರ ಶೆಟ್ಟಿ ಅಭಿಪ್ರಾಯ ಪಟ್ಟರು.

ಡಾ| ಶಿವ ಎಂ.ಮೂಡಿಗೆರೆ ಇದು ಮಹತ್ವಕಾಂಕ್ಷೆಯ ದೊಡ್ಡ ಯೋಜನೆ ಮತ್ತು ಸಾಧನೆಯಾಗಿದೆ. ಇನ್ನು ಇದನ್ನು ಮುನ್ನಡೆಸುವ ಜವಾಬ್ದಾರಿ ಪ್ರತೀಯೊಂದು ಸಂಘಸಂಸ್ಥೆಗಳದ್ದಾಗಿದೆ. ಆವಾಗಲೇ ಯೋಜನೆ ಫಲಪ್ರದಗೊಳ್ಳುವುದು ಎಂದರು.

ಯುವಕರ ಶ್ರಮದ ಮುತುರ್ವಜಿಯಲ್ಲಿ ಮೂಡಿಬಂದ ಡಿವಿಡಿ ಸಮಸ್ತ ತುಳುಕನ್ನಡಿಗರ ಮನೆ ಮಾತಾಗಲಿ ಎಂದು ಗೋಪಾಲ್ ಪುತ್ರನ್ ಆಶಯ ವ್ಯಕ್ತ ಪಡಿಸಿದರು.

ಕೆ.ಎಲ್ ಬಂಗೇರ ಮಾತನಾಡಿ ಮೊಗವೀರರು ಮೊತ್ತ ಮೊದಲು ಬೃಹನ್ಮುಂಬಯಿಗೆ ಸೇರಿದ ವಲಸೆಗಾರರು. ಕರ್ಮಭೂಮಿಗೆ ಸದಾ ಋಣಿಯಾದ ಈ ಸಮುದಾಯವು ತನ್ನದೇ ಅಸ್ತಿತ್ವವನ್ನು ರೂಪಿಸಿ ಕೊಂಡಿದೆ. ನಮ್ಮೆಲ್ಲರನ್ನು ವಿಶ್ವಾಸಕ್ಕೆ ಪಡೆದು ಯಾರೂ ಮಾಡದ, ಯೋಚಿಸದ ಚಿಂತನೆಯನ್ನು ಕಾರ್ಯರೂಪದಲ್ಲಿ ತಂದ ಸಾಧನೀಯ ಫಲ ಇದಾಗಿದೆ ಎಂದರು.

ನಮ್ಮಲ್ಲಿನ ಸಂಘಸಂಸ್ಥೆಗಳು ಯಾವಗನೋ ಮಾಡಬೇಕಾದ ಈ ಕೆಲಸವನ್ನು ಜಯ ಪೂಜಾರಿ ಸಂಘಟನಾ ಶಕ್ತಿಯಾಗಿ ಅಭ್ಯುದಯ ಡಿವಿಡಿ ರಚಿಸಿರುವುದು ಅಭಿನಂದನೀಯ. ಒಬಿಸಿ ನೆಲೆಯಲ್ಲಿ ನಮ್ಮವರಿಗೆ ಹುಟ್ಟೂರ ಕರ್ನಾಟಕದಲ್ಲಿ ಜಾತಿ ಆಧಾರಿತ ಮಾನ್ಯತಾಪತ್ರ ಸಿಗುವುದಾದರೆ ಕರ್ಮಭೂಮಿಯ ಮಹಾರಾಷ್ಟ್ರದಲ್ಲಿ ಯಾಕೆ ಸಿಗುತ್ತಿಲ್ಲ..? ನಾವು ಇಲ್ಲಿ ಭಾರತೀಯರಲ್ಲವೇ..? ಆದುದರಿಂದ ಕೇಂದ್ರ ಸರಕಾರಕ್ಕೆ ಎಚ್ಚರಿಸಲು ಈ ಡಿವಿಡಿ ಬಲವಾದ ಪುರಾವೆ ಆಗಿದೆ. ಸರ್ವ ಸಮುದಾಯದ ಸಂಸ್ಥೆಗಳ ಮುಖಂಡರು ಒಗ್ಗೂಡಿ ಇದನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸಿ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯುವಲ್ಲಿ ಶ್ರಮಿಸಬೇಕಾಗಿದೆ ಎಂದು ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಕರೆಯಿತ್ತರು.

ಅತಿಥಿsಗಳು ಉಪಸ್ಥಿತ ವಿವಿಧ ಸಮುದಾಯಗಳ ಮುಖ್ಯಸ್ಥರುಗಳಾದ ಸಂಜೀವ ಕೆ.ಸಾಲ್ಯಾನ್ (ಮೊಗವೀರ), ಹ್ಯಾರಿ ಸಿಕ್ವೇರಾ (ಕ್ರಿಶ್ಚನ್), ಶೇಖರ ಎಸ್.ದೇವಾಡಿಗ (ದೇವಾಡಿಗ), ಪ್ರೇಮನಾಥ ಬಿ.ಶೆಟ್ಟಿ (ಬಂಟ), ದಿನೇಶ ಕುಲಾಲ್ (ಕುಲಾಲ), ಸದಾಶಿವ ಕರ್ಕೇರ (ಬಿಲ್ಲವ), ಬಾಲಕೃಷ್ಣ ಶೆಟ್ಟಿಗಾರ್ (ಪದ್ಮಶಾಲಿ), ಅನಸೂಯ ಕೆಲ್ಲಪುತ್ತಿಗೆ (ಸಾಫಲ್ಯ), ರಾಜ್‍ಕುಮಾರ್ ಕರ್ನಾಡ್ (ರಾಮರಾಜ ಕ್ಷತ್ರೀಯ), ಬಾಬು ಬೆಳ್ಚಡ (ತೀಯಾ), ನಾರಾಯಣ ರಾವ್ (ವಿಶ್ವಕರ್ಮ), ಕರುಣಾಕರ ನಾೈಕ (ಗಂಗಡ), ರಂಗಪ್ಪ ಸಿ.ಗೌಡ (ಒಕ್ಕಲಿಗರ), ಮಂಜೇ ಗೌಡ (ಕುರುಬ), ಪ್ರಭಾಕರ್ ಪಲಿಮಾರು (ಭಂಡಾರಿ) ಸ್ಮರಣಿಕೆ ಮತ್ತು ಪುಷ್ಪಗುಪ್ಚಗಳನ್ನೀಡಿ ಗೌರವಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ಕೀರ್ತಿ ಬಾಸ್ಕರ ಮೂಲ್ಯ ತಂಡದ ದೇವಿಸ್ತುತಿಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಬಳಿಕ ಡಿವಿಡಿ ಮುಖ್ಯಾಂಶಗಳನ್ನು ಭಿತ್ತರಿಸಲಾಯಿತು. ನಗರದ ಕಲಾವಿದರು ವೈವಿಧ್ಯಮಯ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಅಭಿನಯ ಮಂಟಪ ಮುಂಬಯಿ ಕಲಾವಿದರು `ಮೂಲ್ ಎರ್ ಎಡ್ಡೆಂತ್ತಿನಕುಲು' ತುಳು ನಾಟಕ ಪ್ರದರ್ಶಿಸಿದರು.

ಹೇಮಚಂದ್ರ ಅಮೀನ್ ಪ್ರಾರ್ಥನೆಯನ್ನಾಡಿದರು. ಕಾರ್ಯಕ್ರಮ ಸಂಘಟಕ ಹಾಗೂ ಸುವರ್ಣ ಆರ್ಟ್ಸ್‍ನ ಮಾಲೀಕ ಸುವರ್ಣ ಉಮೇಶ್ ಕೆ.ಅಂಚನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ಸಂಘದ ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ಮತ್ತು ಜತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ ಪುರಸ್ಕೃತರನ್ನು ಪರಿಚಯಿಸಿದರು. ಜಯ ಸಿ.ಪೂಜಾರಿ, ಉಮೇಶ್ ಕೆ.ಅಂಚನ್, ಜಯರಾಮ ಪೂಜಾರಿ, ರಮೇಶ್ ಪೂಜಾರಿ ಮತ್ತಿತರರು ಅತಿಥಿüಗಳಿಗೆ ಸ್ಮರಣಿಕೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಪತ್ರಕರ್ತ ಸಂಘದ ಉಪಾಧ್ಯಕ್ಷ ದಯಾಸಾಗರ್ ಚೌಟ ಕಾರ್ಯಕ್ರಮ ನಿರ್ವಹಿಸಿದರು. ಅಭ್ಯುದಯ ಅಭಿಮಾನಿ ಬಳಗ ಮುಂಬಯಿ ಸಂಚಾಲಕ ಜಯ ಸಿ.ಪೂಜಾರಿ ಸ್ವಾಗತಿಸಿ ವಂದಿಸಿದರು.

 




More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here