Thursday 25th, April 2024
canara news

ಜೀವನ ಜ್ಯೋತಿ ಶಿಬಿರದ ಸಮಾರೋಪದಲ್ಲಿ ಬಿಶಪರ ಸಂದೇಶ

Published On : 13 Oct 2016   |  Reported By : Bernard J Costa


ಕುಂದಾಪುರ, ಅ.13: ‘ನಾವು ನಿಮ್ಮಲ್ಲಿರುವ ಪ್ರತಿಭೆಗಳನ್ನು ಇನ್ನೂ ಉರ್ಜಿತಗೊಳಿಸಲಿಕ್ಕಾಗಿ ಇಂತಹ ಶಿಬಿರಗಳನ್ನು ಎರ್ಪಡಿಸುತ್ತೇವೆ, ಆದರೆ ಜೀವನದಲ್ಲಿ ಸಫಲನಾಗಲು ಬಹಳಸ್ಟು ಶ್ರಮ ಪಡ ಬೇಕು, ಶ್ರಮ ಪಟ್ಟರೆ ಮಾತ್ರ ಸಾಧನೆ ಮಾಡಲು ಸಾಧ್ಯ, ಅದಸ್ಟು ಮಂದಿ ಸರಕಾರಿ ಹುದ್ದೆಗಳನ್ನು ಪಡೆದುಕೊಂಡು ಸೇವೆ ಮಾಡಿ, ಆದರೆ, ಒಬ್ಬ ಧರ್ಮಗುರುವಿನ ದೀಕ್ಷೆಯನ್ನು ಪಡೆದರೆ ಸೇವೆ ಮಾಡಲು ಇದಕ್ಕಿಂತ ಒಳ್ಳೆ ಆಯ್ಕೆ ಬೇರಿಲ್ಲಾ, ಈ ಮಾತು ನನ್ನವಲ್ಲಾ, ಹಿಂದೆ ಸೇವೆ ಸಲ್ಲಿಸಿದ ಎಸ್.ಪಿ ಅಣ್ಣಾ ಮಲೈ ಅವರ ಮಾತನೆತ್ತಾ, ತಮ್ಮನ್ನು ಸನ್ಮಾರ್ಗದಲ್ಲಿ ತೊಡಗಿಸಿ ಕೊಳ್ಳ ಬೇಕೆಂದು’ ಹತ್ತನೇ ತರಗತಿಯ ಕಥೋಲಿಕ್ ಮಕ್ಕಳಿಗಾಗಿ ಆಯೋಜಿಸಿದ್ದ ಐದು ದಿನಗಳ ಜೀವನ ಜ್ಯೋತಿ ಶಿಬಿರದ ಸಮಾರೋಪದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಉಡುಪಿ ಧರ್ಮಪ್ರಾಂತ್ಯದ ಅತಿ|ವ| ಬಿಶಪ್ ಡಾ| ಜೆರಾಲ್ಡ್ ಐಸಾಕ್ ಲೋಬೊ ಶಿಬಿರಾರ್ಥಿಗಳಿಗೆ ಅವರು ಸಂದೇಶ ನೀಡಿದರು.

 

ವಲಯ ಪ್ರಧಾನ ಧರ್ಮಗುರು “ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಇಲ್ಲಿಯೆ ಮರೆತು ಬಿಡಲಿಕ್ಕಲ್ಲಾ, ಅವಗಳನ್ನು ನಮ್ಮ ಹ್ರದಯದಲ್ಲಿ ಜೋಪಾನ ಮಾಡಿಕೊಂಡು, ಅದರಂತೆ ಜೀವನದಲ್ಲೂ ನೀವು ಅದಕ್ಕೆ ತಕ್ಕನಾಗಿ ನೆಡೆದುಕೊಳ್ಳ ಬೇಕು’ ಎಂದು ತಿಳಿಸಿದರು. ಶಿಬಿರದ ಮೇಲ್ವಿಚಾರಕ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಶಿಬಿರಕ್ಕೆ ಸಹಕಾರ ನೀಡಿದವರಿಗೆಲ್ಲ ಕ್ರತ್ಜತೆಗಳನ್ನು ಸಲ್ಲಿಸಿದರು. ಧರ್ಮಗುರು ವ|ರಾಯನ್ ಪಾಯ್ಸ್ ಶಿಬಿರದ ಗುಂಪುಗಳ ಸಾಧನ ಅಂಕಗಳನ್ನು ಪ್ರಕಟಿಸಿದರು.

ವೇದಿಕೆಯಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವಿಭಾ, ಕುಂದಾಪುರ ಇಗರ್ಜಿಯ ಉಪಾಧ್ಯಕ್ಷ ಜಾನ್ಸನ್ ಆಲ್ಮೇಡಾ, ವಲಯ ಧರ್ಮ ಕೇಂದ್ರಗಳ ಕಾರ್ಯದರ್ಶಿ ಲೀನಾ ತಾವ್ರೊ ಉಪಸ್ಥಿತರಿದ್ದರು. ಸ್ತ್ರೀ ಸಂಘಟನೆ ಸದಸ್ಯರು, ಶಿಬಿರಾರ್ಥಿಗಳಿಗೆ ಐದು ದಿನಗಳು ಅಡುಗೆಯನ್ನು ಸಿದ್ದಪಡಿಸಿದ್ದ ಕಾರ್ಯ ಶ್ಲಾಘನೆಗೆ ಪಾತ್ರವಾಯಿತು. ಸಮಾರೋಪ ಸಮಾರಂಭವನ್ನು ಶಿಬಿರಾರ್ಥಿಗಳೆ ನೆಡೆಸಿಕೊಟ್ಟರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here