Friday 29th, March 2024
canara news

`ಅಂಬರ್ ಕೇಟರರ್ಸ್' ನೂತನ ತುಳು ಸಿನೇಮಾ ಮೂಲಕ ಚಿತ್ರಲೋಕಕ್ಕೆ ನಾಯಕ ನಟನಾಗಿ ಹೆಜ್ಜೆಯನ್ನಿರಿಸುವ ಕಡಂದಲೆ ಸೌರಭ್ ಭಂಡಾರಿ

Published On : 13 Oct 2016   |  Reported By : Rons Bantwal


ಅ.16: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರುನಲ್ಲಿ ಸಿನೇಮಾ ಮುಹೂರ್ತ
(ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.13: ಸದ್ಯ ಜನನದಿಂದ ಮರಣದ ವರೆಗೂ ಅನಿವಾರ್ಯ ಮತ್ತು ಅವಶ್ಯವಾಗಿ ಬೇಕಾಗುವ ಊಟೋಪಚಾರ ಸರಬರಾಜು ಮಾಡುವ ಉದ್ಯಮವೇ ಕೇಟರರ್ ವ್ಯವಸ್ಥೆ. ಈ ಉದ್ಯಮದ ವ್ಯವಸ್ಥೆಯೊಳಗಿನ ಸೇವಾ ವ್ಯಾಪ್ತಿಯೊಳಗೆ ಅನುಭವ ಹಂಚುವ ರಸದೌತನದ ಚಲನಚಿತ್ರವೇ `ಅಂಬರ್ ಕೇಟರರ್ಸ್'. ಅಂಬರ್ ಕೇಟರರ್ಸ್ ಇದೊಂದು ವಿನೂತನ ಶೈಲಿಯ, ಹಾಸ್ಯ ಪ್ರಧಾನವಾಗಿ ಮೂಡಿಬರಲಿರುವ ತುಳು ಸಿನೇಮಾ ಎನ್ನುವುದರಲ್ಲಿ ಸಂಶಯವಿಲ್ಲ. ಅಂಬರ್ ಕೇಟರರ್ಸ್ ಮೂಲಕ ತುಳು ಚಿತ್ರಜಗತ್ತಿಗೆ ಹೆಜ್ಜೆಯನ್ನಿರಿಸುವ ಯುವ ಪ್ರತಿಭಾನ್ವಿತ ಕಲಾವಿದನೇ ಮುಂಬಯಿಯಲ್ಲಿನ ಕಡಂದಲೆ ಸೌರಭ್ ಸುರೇಶ್ ಭಂಡಾರಿ.

ಜೈಪ್ರಸಾದ್ ಬಜಾಲ್ ರಚಿತ ಕಥೆ ರಚಿತ, ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವ ಹಾಗೂ ನಾಗೇಶ್ವರ ಸಿನಿ ಕಂಬೈನ್ಸ್ ಪ್ರಸ್ತುತಿಯಲ್ಲಿ ಈ ನೂತನ ಕಲ್ಪನೆಯ ಈ ತುಳು ಚಲನಚಿತ್ರ ಮೂಡಿಬರಲಿದೆ. ಬಜಾಲ್ ಸಂಭಾಷಣೆಗೈದು ನಿರ್ದೇಶಿಸಲಿರುವ ಈ ಸಿನೇಮಾವನ್ನು ಸಂತೋಷ್ ರೈ ಪಾತಾಜೆ ತನ್ನ ಕ್ಯಾಮೆರಾ ಮೂಲಕ ಚಿತ್ರೀಕರಿಸಲಿದ್ದು,ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆಗೈಯಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಲಿದ್ದು, ತಾರಾಗಣದಲ್ಲಿ ನಾಯಕ ನಟನಾಗಿ ಪ್ರಧಾನ ಭೂಮಿಕೆಯಲ್ಲಿ ಸೌರಭ್ ಎಸ್.ಭಂಡಾರಿ, ನಾಯಕಿ ಪಾತ್ರದಲ್ಲಿ ಸಿಂಧು ಲೋಕನಾಥ್, ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಸುನೇತ್ರ ಪಂಡಿತ್ ನಟಿಸಲಿದ್ದಾರೆ.

ಇದೇ ಅಕ್ಟೋಬರ್ 16ನೇ ಆದಿತ್ಯವಾರ ಬೆಳಿಗ್ಗೆ 8.30 ಗಂಟೆಗೆ ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ `ಅಂಬರ್ ಕೇಟರರ್ಸ್' ತುಳು ಸಿನೇಮಾಕ್ಕೆ ಕನ್ನಡ ಚಲನಚಿತ್ರದ ಯಶಸ್ವಿ ನಿರ್ದೇಶಕ ಎಂ.ಡಿ ಶ್ರೀಧರ್ ಕ್ಲಾಪ್ ಮಾಡಲಿರುವರು. ಯಶಸ್ವಿ ನಿರ್ದೇಶಕರುಗಳಾದ ಕಾರ್ಯಕ್ರಮದಲ್ಲಿ ಹೆಚ್.ವಾಸು, ಆನಂದ್ ಪಿ.ರಾಜು, ಹ.ಸೂ ರಾಜಶೇಖರ್ ಹಾಗೂ üಗಣ್ಯರು ಉಪಸ್ಥಿತರಿದ್ದು ಶುಭಾರೈಸಲಿದ್ದಾರೆ.

ಮುಂಬಯಿ ಉಪನಗರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಫೆದರ್'ಸ್ ಹೈಜೀನ್ ಸಂಸ್ಥೆಯನ್ನು ಹೊಂದಿರುವ ಉದಯೋನ್ಮುಖ ಯುವ ಉದ್ಯಮಿ, ಭಂಡಾರಿ ಸಮಾಜದ ಯುವ ನಾಯಕ, ಸರಳ ವ್ಯಕ್ತಿತ್ವÀದ ಪ್ರತಿಭಾನ್ವಿತ ಕಲಾವಿದನೇ ಕಡಂದಲೆ ಸೌರಭ್ ಸುರೇಶ್ ಭಂಡಾರಿ. ಭಂಡಾರಿ ಸಮಾಜದ ಧೀಮಂತ ನಾಯಕರಾಗಿ ಸಮಾಜವನ್ನು ಸರ್ವೋಭಿವೃದ್ಧಿಯ ಪಥದತ್ತ ಒಯ್ಯುತ್ತಾ ಅಖಂಡ ಸಮಾಜದ ಧೀಶಕ್ತಿಯಾಗಿ ಮುನ್ನಡೆಯುತ್ತಿ ರುವ ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಶೋಭಾ ಎಸ್.ಭಂಡಾರಿ ದಂಪತಿ ಸುಪುತ್ರನೇ ಸೌರಭ್ ಭಂಡಾರಿ.

ಕಡಂದಲೆ ಸುರೇಶ್ ಎಸ್.ಭಂಡಾರಿ: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಮತ್ತು ಅಧ್ಯಕ್ಷರಾಗಿ, ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕರಾಗಿ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷರಾಗಿ, ಜಾಗತಿಕ ಭಂಡಾರಿ ಸಮಾಜ ಸಂಸ್ಥೆಗಳ ಒಕ್ಕೂಟ ಭಂಡಾರಿ ಮಹಾ ಮಂಡಲ, ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ (ನೋ.) ಕಪ್‍ಪರೇಡ್ ಮುಂಬಯಿ ಇದರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಉದಾರ ದಾನಿ (ಫಿಲಾಂಥ್ರಾಪಿಸ್ಟ್), ಸಮಾಜ ಸೇವಕ, ಕೊಡುಗೈದಾನಿ ಆಗಿ ಪ್ರಸಿದ್ಧರು.

ಸೌರಭ್ ಸುರೇಶ್ ಭಂಡಾರಿ: ಯುವ ನಾಯಕ, ಸರಳ ಸಜ್ಜನಿಕಾ ಮನೋಭಾವದ ಯುವೋದ್ಯಮಿ ಸೌರಭ್ ಭಂಡಾರಿ ಇತ್ತೀಚೆಗಷ್ಟೇ ಕರಾಟೆ `ಬ್ಲ್ಯಾಕ್ ಬೆಲ್ಟ್' ಚ್ಯಾಂಪಿಯನ್‍ನೊಂದಿಗೆ ಸ್ವರ್ಣ ಪದಕಕ್ಕೆ ಪಾತ್ರರಾಗಿರುವರು. ಸಿಂಗಾಪುರ, ಕೆನಡಾ, ಆಸ್ಟ್ರೇಲಿಯಾ, ದುಬಾಯಿ, ಹಾಂಕ್‍ಕಾಂಗ್, ಮಲೇಷಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಸ್ಪರ್ಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು 19 ಉದಾತ್ತ ಚ್ಯಾಂಪಿಯನ್‍ಶಿಪ್‍ಗಳೊಂದಿಗೆ ಭಾರತ ರಾಷ್ಟ್ರದ ಅಗ್ರಗಣ್ಯ ಮೊದಲ ಸ್ಥಾನದಲ್ಲಿನ ಏಕೈಕ ಕರಾಟೆ ಪಟು ವಸಂತ್ ಟಿ.ಶೆಟ್ಟಿ ಬಜ್ಪೆ ಹಾಗೂ ರಾಷ್ಟ್ರದ ದ್ವಿತೀಯ ಸ್ಥಾನದಲ್ಲಿನ ಕರಾಟೆ ಪರಿಣತ ವಿಜಯ್ ಪೂಜಾರಿ ಕೋಟ ಅವರಿಂದ ತರಬೇತಿ ಪಡೆದಿರುತ್ತಾರೆ. ಸುಮಾರು 16ವರ್ಷಗಳಿಂದ ಕರಾಟೆಯನ್ನು ಅಭ್ಯಾಸಿಸಿ ಆಸ್ಟ್ರೇಲಿಯಾ, ದುಬಾಯಿ, ಮಲೇಷಿಯಾ ಇತ್ಯಾದಿ ಹಲವು ರಾಷ್ಟ್ರಗಳಲ್ಲಿ ಭಾರತೀಯ ಪ್ರತಿನಿಧಿಯಾಗಿಸಿ ಸ್ಪರ್ಧಿಸಿ ಇದೀಗಲೇ 14 ಚಿನ್ನದ ಪದಕ, 25 ಬೆಳ್ಳಿ 28 ಕಂಚುಗಳ ಪದಕ ತನ್ನದಾಗಿಸಿರುವ ಸೌರಭ್ ಓರ್ವ ಅಪ್ರತಿಮ ಕಲಾವಿದನಾಗಿರುವ ಇವರು ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರಮಿಸುತ್ತಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here