Saturday 20th, April 2024
canara news

ಪರಿಶ್ರಮವೇ ಸಫಲತೆಗೆ ದಾರಿ – ಜೆರಾಲ್ಡ್ ಐಸಾಕ್ ಲೋಬೊ

Published On : 14 Oct 2016   |  Reported By : Bernard J Costa


ಕುಂದಾಪುರದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಅನೂಪ್ ಡಿಕೋಸ್ತಾಗೆ ಸನ್ಮಾನ

ಕುಂದಾಪುರ:ಅ:14 ‘ಪ್ರತಿಯೊಬ್ಬರಲ್ಲಿಯೂ ಸುಪ್ತವಾಗಿರುವ ಪ್ರತಿಭೆಗಳಿರುತ್ತವೆ ಅದನ್ನು ಗುರುತಿಸುವ ಕೆಲಸವಾಗಬೇಕು. ಅವರನ್ನು ಪ್ರೋತ್ಸಾಹಿಸ ಬೇಕು, ಅಲ್ಲದೆ ಅಂತವರು ಕಠಿಣ ಪರಿಶ್ರಮ ಮಾಡ ಬೇಕು, ಪರಿಶ್ರಮವೇ ಸಫಲತೆಗೆ ದಾರಿ, ಪರಿಶ್ರಮ ಬಿಟ್ಟು ಸಫಲತೆಗೆ ಬೇರೆ ದಾರಿ ಇಲ್ಲಾ, ಅನುಪ್ ಡಿಕೋಸ್ತಾರ ಸಫಲತೆಯ ಗುಟ್ಟು ಅದೇ ಆಗಿದೆ. ಅವರು ದಿನವು 8 ಗಂಟೆಗಳ ಪರಿಶ್ರಮ ಪಟ್ಟು ಅಭ್ಯಾಸ ಮಾಡುತ್ತಾರೆ, ಆ ಮೂಲಕ ಇವತ್ತು ಅಂತರ್ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರನಾಗಿ ಮೂಡಿ ಬಂದಿದ್ದಾರೆ ಇವರು ನಮ್ಮ ಮಕ್ಕಳಿಗೆ ಆದರ್ಶ ಪ್ರಾಯರಾಗಿದ್ದಾರೆ’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೋ ನುಡಿದರು.

 ಅವರು ಏಕಲವ್ಯ ಪ್ರಶಸ್ತಿ ವಿಜೇತ ವಾಲೀಬಾಲ್ ಕ್ರೀಡಾಪಟು ಕುಂದಾಪುರದ ಅನೂಪ್ ಡಿ ಕೋಸ್ತಾ, ಅವರಿಗೆ ಉಡುಪಿ ಕೇಂದ್ರಿಯ ಕಥೊಲಿಕ್ ಸಭಾ ಹಾಗೂ ಉಡುಪಿ ಧರ್ಮಕ್ಷೇತ್ರದ ವತಿಯಿಂದ ಕುಂದಾಪುರದ ಸಂತ ಜೋಸೆಫ್ ಕಾನ್ವೆಂಟ್ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ ಪೇಟ ತೊಡಿಸಿ, ಫಲ ಪುಷ್ಪ ನೀಡಿ, ಫಲಕಗಳನ್ನು ನೀಡಿ ಸ್ನನ್ಮಾನಿಸಿದರು.


ಭಾರತ ಸಮೃದ್ಧವಾದ ದೇಶ. ದೇಶ ಪ್ರೇಮದ ಜೊತೆಗೆ ತಮ್ಮನ್ನು ತಾವು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಅಭಿರುಚಿಯ ಜೊತೆಗೆ ತಮ್ಮ ಆಸಕ್ತ ಕ್ಷೇತ್ರದಲ್ಲಿ ಮುನ್ನುಗ್ಗುವ ಮೂಲಕ ದೇಶಕ್ಕೆ, ನಮ್ಮ ಸಮಾಜಕ್ಕೆ ಹಾಗೂ ನಮ್ಮ ಪೋಷಕರಿಗೆ ಒಳ್ಳೆಯ ಹೆಸರು ತರುವಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಥೋಲಿಕ್ ಸಭಾದ ಉಡುಪಿ ಕೇಂದ್ರಾಧ್ಯಕ್ಷ ವೆಲೆರಿಯನ್ ಫೆರ್ನಾಂಡಿಸ್ ಅನೂಪ್ ಡಿಕೋಸ್ತಾ ಇವರಿಗೆ ಇನ್ನೂ ಹೆಚ್ಚಿನ ಯಶಸ್ಸನ್ನು ಲಭಿಸಲೆಂದು ಹಾರೈಸಿದರು. ಕುಂದಾಪುರ ವಲಯ ಪ್ರಧಾನ ಧರ್ಮಗುರು ವ|.ಅನಿಲ್ ಡಿಸೋಜಾ, ಈ ಸಂದರ್ಭದಲ್ಲಿ ಜೀವನ ಜ್ಯೋತಿ ಶಿಬಿರ ನೆಡೆಯುತಿದ್ದು, ಅದರ ನಿರ್ದೇಶಕ ಫಾ. ಸಂದೀಪ್ ಜೆರಾಲ್ಡ್ ಡಿಮೆಲ್ಲೊ ಮತ್ತು ವಾಲ್ಟರ್ ಸಿರಿಲ್ ಪಿಂಟೊ
ಸನ್ಮಾನ ಕಾರ್ಯದಲ್ಲಿ ಭಾಗಿಯಾದರು.

ರಾಜ್ಯ, ದೇಶದ ವತಿಯಿಂದ ವಾಲಿಬಾಲ್ ಆಟಗಾರಾನಾಗಿ, ರಾಜ್ಯ ವಿದೇಶದಲ್ಲಿ ಪ್ರತಿನಿಧಿಸಿ ಇವತ್ತು ಏಶ್ಯಾದಲ್ಲೆ ಉತ್ತಮ ನೆಗೆತಗಾರ ವಾಲಿಬಾಲ್ ಕ್ರೀಡಾಪಟು ಎಂದು ಕೀರ್ತಿ ಗಳಿಸಿದ ಅನೂಪ್ ಡಿಕೋಸ್ತಾ ಸನ್ಮಾನ ಸವೀಕರಿಸಿ ಮಾತನಾಡುತ್ತಾ, ‘ಶಿಕ್ಷಣದೊಂದಿಗೆ ಕ್ರೀಡೆಗಳಲ್ಲಿಯೂ ಆಸ್ಕತಿ ಬೆಳೆಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳೆನ್ನಿಸಿಕೊಂಡರೆ ನಮಗೆ ಉತ್ತಮ ಆರೋಗ್ಯಯವು ಲಭಿಸುತ್ತದೆ. ಅಲ್ಲದೆ ಕ್ರೀಡೆಯಿಂದ ನಮ್ಮ ಬೌದ್ಧಿಕ ಶಕ್ತಿಯನ್ನೂ ಹೆಚ್ಚುತ್ತದೆ ಎಂದು ತಿಳಿಸಿದರು

ಕೆಥೋಲಿಕ್ ಸಭಾದ ವಲಯಾಧ್ಯಕ್ಷ ಫ್ಲೈವನ್ ಡಿಸೋಜಾ ಸ್ವಾಗತಿಸಿದರು ಕುಂದಾಪುರ ಕಥೊಲಿಕ್ ಸಭಾ ಘಟಕದ ಕಾರ್ಯದರ್ಶಿ ಶೈಲಾ ಡಿ ಅಲ್ಮೇಡಾ, ಕಥೊಲಿಕ್ ಸಭಾದ ಕಿರಣ್ ಕ್ರಾಸ್ತಾ, ಆಲ್ವಿನ್ ಡಿಸೋಜಾ, ಪ್ರೆಸಿಲ್ಲಾ ಮಿನೇಜಸ್ ವಿನೋದ್ ಕ್ರಾಸ್ತಾ ಮುಂತಾದವರು ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಮೇಬಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಂದನೆಗಳನ್ನು ಸಲ್ಲಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here