Thursday 23rd, May 2019
canara news

ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆವರಣದಲ್ಲಿ

Published On : 16 Oct 2016   |  Reported By : Rons Bantwal


`ಅಂಬರ್ ಕೇಟರರ್ಸ್' ನೂತನ ತುಳು ಸಿನೇಮಾಕ್ಕೆ ಮುಹೂರ್ತ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಉಡುಪಿ, ಅ.16: ಮುಂಬಯಿ ಮಹಾನಗರದ ಭಂಡಾರಿ ಸಮಾಜದ ಧೀಮಂತ ನಾಯಕ, ಕೊಡುಗೈದಾನಿ, ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕಂಬೈನ್ಸ್ ಪ್ರಸ್ತುತಿಯ `ಅಂಬರ್ ಕೇಟರರ್ಸ್' ನೂತನ ತುಳು ಸಿನೇಮಾಕ್ಕೆ ಇಂದಿಲ್ಲಿ ಮುಹೂರ್ತ ನೆರವೇರಿಸಲಾಯಿತು.

ಯುವೋದ್ಯಮಿ, ಭಂಡಾರಿ ಸಮಾಜದ ಯುವ ನಾಯಕ, ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಇವರ ನಾಯಕ ನಟ ಅಭಿನಯದ `ಅಂಬರ್ ಕೇಟರರ್ಸ್' ಚಲನಚಿತ್ರಕ್ಕೆ ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಚಲನಚಿತ್ರದ ಯಶಸ್ವಿ ನಿರ್ದೇಶಕ ಎಂ.ಡಿ ಶ್ರೀಧರ್ ಕ್ಲಾಪ್ ಮಾಡಿ ಮುಹೂರ್ತ ನಡೆಸಿದರು. ವಿಶ್ವನಾಥ ಶಾಸ್ತ್ರಿ ಬಾರ್ಕೂರು ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಕಾರ್ಯಕ್ರಮದಲ್ಲಿ ಹೆಚ್.ವಾಸು, ಸುನೇತ್ರ ಪಂಡಿತ್, ಕಾರ್ಕಳ ಶೇಖರ ಭಂಡಾರಿ, ಸುಧಾಕರ ಬನ್ನಂಜೆ, ಮಾಧವ ಕೂಳೂರು, ಅರವಿಂದ್ ಬೋಳಾರ್, ಶೋಭಾ ಸುರೇಶ್ ಭಂಡಾರಿ, ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ ಡಾ| ಶಿವರಾಮ ಕೆ.ಭಂಡಾರಿ, ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಉಡುಪಿ ನಗರಸಭಾ ಸದಸ್ಯ, ಲೀಡ್ಸ್ ಬ್ಯೂಟಿ ಪಾರ್ಲರ್ಸ್‍ನ ಮಾಲೀಕ ಎನ್.ನವೀನ್ ಭಂಡಾರಿ, ಜೈಪ್ರಸಾದ್ ಬಜಾಲ್, ಸಂತೋಷ್ ರೈ ಪಾತಾಜೆ, ಬಾಳ ಜಗನ್ನಾಥ ಶೆಟ್ಟಿ, ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಗೌರವ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ, ಕೋಶಾಧಿಕಾರಿ ಬನ್ನಂಜೆ ಸಂಜೀವ ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಸಿನೇಮಾಕ್ಕೆ ಯಶ ಕೋರಿದರು.

ಜೈಪ್ರಸಾದ್ ಬಜಾಲ್ ರಚಿಸಿ, ನಿರ್ದೇಶನ ಹಾಗೂ ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣದಲ್ಲಿ ಚಿತ್ರೀಕರಿಸಲ್ಪಡುವ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಲಿದ್ದು, ಸೌರಭ್ ಎಸ್.ಭಂಡಾರಿ, ಸಿಂಧು ಲೋಕನಾಥ್, ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ತುಳು ನಾಟಕ-ಚಲನಚಿತ್ರಗಳ ಸೂಪರ್‍ಸ್ಟಾರ್‍ಗಳಾದ ನವೀನ್ ಡಿ.ಪಡೀಲ್, ಸುಂದರ್ ರೈ ಮಂದಾರ, ಭೋಜರಾಜ್ ವಾಮಂಜೂರು, ಸುನೇತ್ರ ಪಂಡಿತ್ ಅಭಿನಯಿಸಲಿರುವರು. ಹರೀಶ್ ಕೊಟ್ಟಾಡಿ, ದೇವಿಪ್ರಸಾದ್, ವಿಜಯಕುಮಾರ್ ಕೋಡಿಯಾಲ್‍ಬೈಲ್, ನಿತಿನ್ ಬಂಗೇರ ಚಿಲಿಂಬಿ, ಶಿವಾನಂದ ನಿಡಿಂಜ, ಪ್ರಶಾಂತ್ ಆಳ್ವ, ಅಭಿಷೇಕ್ ಡಿ.ಶೆಟ್ಟಿ, ಲತೀಶ್ ಪೂಜಾರಿ ಮಡಿಕೇರಿ ಮತ್ತಿತರರ ಸಹಕಾರದಲ್ಲಿ ಚಿತ್ರೀಕರಣ ಗೊಳ್ಳಲಿದ್ದು ಬರುವ ಎಪ್ರಿಲ್ ಮೊದಲ ವಾರದಲ್ಲಿ ಈ ಚಿತ್ರವು ತೆರೆಕಾಣಲಿದೆ.

 
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here