Thursday 23rd, May 2019
canara news

ಡಾ| ಬಿ.ಎಂ.ಹೆಗ್ಡೆ, ಪಿ ಜಯರಾಮ ಭಟ್‍ರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ

Published On : 19 Oct 2016   |  Reported By : Bernard J Costa


ಖ್ಯಾತ ವೈದ್ಯಕೀಯ ತಜ್ಞ , ಲೇಖಕ ,ವಿಮರ್ಶಕ , ವಾಗ್ಮಿ, ಡಾ| ಬಿ.ಸಿ.ರಾಯ್ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಡಾ| ಬಿ.ಎಂ.ಹೆಗ್ಡೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ಪಿ.ಜಯರಾಮ ಭಟ್ ಅವರಿಗೆ 2016ನೇ ಸಾಲಿನ ಕೀರ್ತಿ ಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯನವರ 103ನೇ ಜನ್ಮಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 26ರಂದು ನಡೆಯಲಿದೆ. ಮಾಜಿ ಮುಖ್ಯಮಂತ್ರಿ , ಮಾಜಿ ಕೇಂದ್ರ ಸಚಿವ, ಸಂಸದ, ಎಂ. ವೀರಪ್ಪ ಮೊೈಲಿಯವರು ಸಮಾರಂಭದ ಉದ್ಘಾಟನೆ ನಡೆಸಲಿದ್ದಾರೆ.

ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್‍ನ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಹಿರಿಯ ಉದ್ಯಮಿ ಆರ್.ಎನ್.ಶೆಟ್ಟಿ, ಮಾಜಿ ಶಾಸಕ ಎ.ಜಿ.ಕೊಡ್ಗಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ನಿಟ್ಟೆ.ವಿ.ವಿ.ಯ ಸಹಕುಲಾಧಿಪತಿ ಡಾ.ಎಂ. ಶಾಂತಾರಾಮ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ , ಪ್ರೊ.ಎಂ.ಸುಬ್ಬಣ್ಣ ಶೆಟ್ಟಿ, ಡಾ| ವೈ.ಎಸ್.ಹೆಗ್ಡೆ, ಯು.ಟಿ.ಆಳ್ವ, ಡಾ| ಎಂ.ಲಕ್ಷ್ಮೀನಾರಾಯಣ ಶೆಟ್ಟಿ , ಯು.ಸೀತಾರಾಮ ಶೆಟ್ಟಿ ಉಪ್ಪುಂದ ಉಪಸ್ಥಿತರಿರುತ್ತಾರೆ.

ಡಾ ಎಚ್.ವಿ. ನರಸಿಂಹ ಮೂರ್ತಿ ಪ್ರಸ್ತಾವನೆ, ಕೊ.ಶಿವಾನಂದ ಕಾರಂತ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರಿಂದ "ಕೃಷ್ಣ ಸಂಧಾನ" ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಟ್ರಸ್ಟ್‍ನ ಪರವಾಗಿ ಬಿ.ಅಪ್ಪಣ್ಣ ಹೆಗ್ಡೆ ಹಾಗೂ ಬಿ.ಜಗನ್ನಾಥ ಶೆಟ್ಟಿ ವಿನಂತಿಸಿದ್ದಾರೆ.

 ಗೋವಿನ ಆರೋಗ್ಯದ ಕಾಳಜಿ ಡಾ| ಬಿ.ಎಂ.ಹೆಗ್ಡೆಯವರ ಸಹೃದಯತೆ

ಪದ್ಮಭೂಷಣ ಡಾ| ಬಿ.ಎಂ.ಹೆಗ್ಡೆಯವರು ಕೋಟತಟ್ಟು ಡಾ|ಕಾರಂತ ಕಲಾಭವನದಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ಬಂದಿದ್ದರು. ಹಿಂದಿರುಗುವಾಗ ಕತ್ತಲಾಗಿತ್ತು. ಸಾಸ್ತಾನ ಟೋಲ್‍ಗೇಟ್ ಬಳಿ ಕಾರು ಸಾಗುತ್ತಿದ್ದಾಗ ಹಠಾತ್ತಾನೆ ದನವೊಂದು ರಸ್ತೆ ದಾಟಲು ಧಾವಿಸಿ ಅದು ಕಾರಿನ ಬಾನೆಟ್‍ಗೆ ಬಡಿಯಿತು. ಕಾರಿಗೆ ಹಾನಿ ಆದರೂ ಡಾ|ಬಿ.ಎಂ.ಹೆಗ್ಡೆಯವರಿಗೆ ದನಕ್ಕೆ ಏನಾಗಿದೆ ಎಂಬ ಗಾಬರಿ, ಕಾಳಜಿ. ದನ ಸುಧಾರಿಸಿಕೊಂಡು ಹೋದಂತೆ ಕಂಡರೂ ಬಿ.ಎಂ.ಹೆಗ್ಡೆಯವರಿಗೆ ಮನ ಕೇಳದು. ಕೂಡಲೇ ಕಾರ್ಯಕ್ರಮ ಸಂಘಟಕರಿಗೆ ಕರೆ ಮಾಡಿದರು. ದನಕ್ಕೆ ಏನಾಗಿದೆ ಎಂದು ತಕ್ಷಣ ನೋಡಬೇಕು. ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಬೇಕು. ಅದರ ವೆಚ್ಚ ನಾನು ಕೊಡುತ್ತೇನೆ. ಕೋಟ ಶ್ರೀನಿವಾಸ ಪೂಜಾರಿಯವರು ಭರವಸೆ ಕೊಟ್ಟ ಮೇಲೆ ಮಂಗಳೂರಿಗೆ ಹೋದರು.

ಮೂರು ನಾಲ್ಕು ದಿನ ಆ ದನದ ಬಗ್ಗೆ ವಿಚಾರಿಸುತ್ತಾ ಪಶು ವೈದ್ಯರ ಚಿಕಿತ್ಸೆ, ಸಂಘಟಕರ ಕಾಳಜಿಗೆ ಆ ದನ ಆರೋಗ್ಯವಾಗಿದೆ ಎಂದು ತಿಳಿದ ಮೇಲೆ ಅವರು ನಿಟ್ಟುಸಿರು ಬಿಟ್ಟರು. ಎಲ್ಲರಿಗೂ ಕರೆಮಾಡಿ ಕೃತಜ್ಞತೆ ಹೇಳಿದರು.

“ಅದು ಪ್ರಾಣಿ, ಮಾತನಾಡಲಿಕ್ಕೆ ಗೊತ್ತಿಲ್ಲ, ಕಂಪ್ಲೈಂಟ್ ಕೊಡಲಿಕ್ಕೆ ಗೊತ್ತಿಲ್ಲ, ಅಂತ ನಾವು ನಿರ್ಲಕ್ಷ್ಯ ಮಾಡಬಾರದು. ನಮ್ಮ ಹಾಗೆ ದನಕ್ಕೂ ಜೀವವಿದೆÀ ” ಎಂದು ಮಾನವೀಯತೆ, ಸಹೃದಯತೆ ಮೆರೆದವರು ಡಾ| ಬಿ.ಎಂ.ಹೆಗ್ಡೆಯವರು.
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here