Tuesday 23rd, April 2024
canara news

ಕೃಷಿ ಸಂಸ್ಕೃತಿ ಭಾರತ ದೇಶದ ಉಸಿರು:ಜಗನ್ನಾಥ ಗೌಡ ಅಡ್ಕಾಡಿ

Published On : 20 Oct 2016   |  Reported By : Prakash VK


ಅರಸಿನಮಕ್ಕಿ: ಇಂದಿನ ಯುವಕರು ಪೇಟೆಯ ಐಶಾರಾಮಿ ಜೀವನಕ್ಕೆ ಮಾರು ಹೋಗಿ, ತಾವೂ ಬೆಳೆದ ಊರು ಮರೆಯುತ್ತಿದ್ದು. ಊರಿನ ಕೃಷಿ ಭೂಮಿಗಳು ಹಡೀಲು ಬೀಳುವಂತಾಗಿದೆ. ದೇಶದಲ್ ನೀರಾವರಿ, ಜಾಗತಿಕ ತಾಪಾಮಾನ ಸೇರಿದಂತೆ ಹಲವು ಜಾಗತಿಕ ಸಮಸ್ಯೆಗಳಿಗೆ ಕೃಷಿ ಪರಿಹಾರವಾಗಬಲ್ಲದು, ಹಿಂದೆ ಗದ್ದೆಯಲ್ಲಿ ಬೆಳೆ-ಬೆಳೆಯುವ ಸಂದರ್ಭ ಗದ್ದೆಯಲ್ಲಿ ನೀರು ನಿಲ್ಲಿಸುವ ಕ್ರಮವಿದ್ದು, ಅಂರ್ತಜಲ ಹೆಚ್ಚಳಕ್ಕೆ ಕಾರಣವಾಗಿತ್ತು, ಆದರೆ ಇಂದು ನಾವು ಅದರಿಂದ ವಿಮುಖರಾಗಿತ್ತಿದ್ದೇವೆ. ಕೃಷಿ ಸಂಸ್ಕೃತಿ ಭಾರತ ದೇಶದ ಉಸಿರಾಗಿದ್ದು ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ದ.ಕ ಜಿಲ್ಲಾ ಜೆಡಿಎಸ್ ಮತ್ತು ಅರಸಿನಮಕ್ಕಿ ಗ್ರಾ.ಪಂ ಉಪಾಧ್ಯಕ್ಷ ಜಗನ್ನಾಥ ಗೌಡ ನುಡಿದರು.

ಅವರು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಬೂಡುಮುಗೇರು ದೇವಳದ ಸಮೀಪದ ಗದ್ದೆಯಲ್ಲಿ ನವಶಕ್ತಿ ಆಟೋ ಚಾಲಕ ಮಾಲಕರ ಸಂಘದ ದಶಮಾನೋತ್ಸವದ ಪ್ರಯುಕ್ತ ನಡೆದ ಕೆಸರ್ ಡೊಂಜಿ ದಿನ ತುಳುನಾಡ ಪೊರ್ಲು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ರವಿರಾಜ್ ಜೈನ್ ಪರಪ್ಪು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಉಧ್ಯಮಿ ಚಂದ್ರಹಾಸ ಶೆಟ್ಟಿ, ಬೆಳ್ತಂಗಡಿ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ್, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಹರಿಪ್ರಸಾದ್ ಉಪಸ್ಥಿತರಿದ್ದರು,

ಸಮಾರಂಭಕ್ಕೂ ಮೊದಲು ಅರಸಿನಮಕ್ಕಿ ಪೇಟೆಯಿಂದ ತುಳುನಾಡ ಸಾಂಸ್ಕೃತಿಕ ದಿಬ್ಬಣ ಕಾರ್ಯಕ್ರಮ ನಡೆಯಿತು, ಮಂಗಲುರಿನ ತುಳುನಾಡ ಟೈಗರ್ಸ್ ಹುಲಿಕುಣಿತ ವಿವಿಧ ಕಲಾತಂಡಗಳು, ಕಂಬಳದ ಎತ್ತುಗಳು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಕಲಾವಿದ ಎಚ್.ಕೆ. ನಯನಾಡು, ಪ್ರವೀಣ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು, ಸಂಘದ ಕಾರ್ಯದರ್ಶಿ ಯು.ಸಿ ಕುಲಾಲ್ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here