Friday 19th, April 2024
canara news

ಅನೂಪ್ ಡಿಕೋಸ್ತಾ, ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ, ಪ್ರತಿಷ್ಟಿತ ಏಕಲವ್ಯ ಪುರಸ್ಕ್ರತ ಇವರ ಮನಪೂರ್ವಕವಾದ ಸಂದರ್ಶನ - ಬರ್ನಾಡ್ ಜೆ.ಕೋಸ್ತಾ

Published On : 20 Oct 2016


 ಬರ್ನಾಡ್ ಜೆ.ಕೋಸ್ತಾ

ಅನೂಪ್ ಡಿಕೋಸ್ತಾ, ವಾಲಿಬಾಲ್ ಆಟದಲ್ಲಿ ಅನ್ನುತ್ತಮವಾದ ಸಾಧನೆ ಗೈದು, ಕುಂದಾಪುರದಿಂದ, ತಾಲೂಕಿಗೆ, ತಾಲೂಕಿನಿಂದ ಜಿಲ್ಲೆಗೆ, ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ನೆಗೆದು, ರಾಜ್ಯದ ಪರವಾಗಿ ವಾಲಿಬಾಲ್ ಆಟಗಾರನಾಗಿ ಭಾಗವಹಿಸಿ, ಅಲ್ಲಿಂದ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿ, ಅಂತರಾಷ್ಟಿಯಾ ಪಂದ್ಯಗಳಲ್ಲಿ ಆಡಿ ಗಮನಾರ್ಹ ಸಾಧನೆ ಮಾಡಿ ರಾಜ್ಯದ ಪ್ರತಿಷ್ಟಿತ ಏಕಲವ್ಯ ಪ್ರಶಸ್ತಿ ತಮ್ಮದಾಗಿಸಿಕೊಂಡ ಹೆಮ್ಮೆಯ ಕುಂದಾಪುರ ಪುತ್ರ. ಇವರು ಅಂಟೋನಿ ಡಿಕೋಸ್ತಾ ಮತ್ತು ಗೀತಾ ಡಿಕೋಸ್ತಾ, ಈ ದಂಪತಿಗಳ ಪುತ್ರನಾಗಿ, 1993 ರ ಜನವರಿ 7 ರಂದು ಜನಿಸಿದರು. ಅವರ ತಂಗಿ ಅನುಮಿತ ಡಿಕೋಸ್ತಾ.

 

ಅನೂಪನ ತಂದೆ ಅಂಟೋನಿ ಡಿಕೋಸ್ತಾ ಕುಂದಾಪುರ ಕೆ.ಇ.ಬಿ. ಕಛೇರಿಯಲ್ಲಿ ಸುಮಾರು 20 ವರ್ಷದಿಂದ ಸೇವೆ ಸಲ್ಲಿಸುತಿದ್ದಾರೆ, ಇವರಿಗೂ ಮತ್ತು ನನಗೂ ಮೊದಲಿನಿಂದಲೂ ಪರಿಚಯ, ಅನೂಪರ ಸಂದರ್ಶನಕ್ಕೆ ಬರುವಾಗ ತಂದೆ ಕೂಡ ಇರಬೇಕೆಂದು ಬಯಸಿದ್ದೆ. ಹಾಗೆ ಅವರು ಇದ್ದ ಸಂದರ್ಭದಲ್ಲೆ ನನ್ನ ಪತ್ನಿಯ ಜೊತೆ ಭೇಟಿಗೆ ಹೊರಟೆ. ಅಲ್ಲಿ ಹೊದಾಗ ತಂಗಿ ತಾಯಿ ಇರಲಿಲ್ಲಾ, ಅವರು ಅಗತ್ಯವಾದ ಕೆಲಸಕ್ಕಾಗಿ ಹೋರ ಹೋಗಿದ್ದರು. ನಮ್ಮನ್ನು ಒಳಗೆ ಬರ ಮಾಡಿಕೊಂಡ ಕೂಡಲೆ ಅನೂಪ್, ಒಳಗೆ ನೆಡುದು ಬಿಟ್ಟ. ನಾವು ತಂದೆಯ ಹತ್ತಿರ ಮಾತಾಡುತ್ತಾ ಇರುವಾಗ ಸ್ವತ ಅನೂಪ್ ಶೆರ್ಬತ್‍ನ್ನು ತಾನೇ ಮಾಡಿ, ಅದನ್ನು ಗ್ಲಾಸಿನಲ್ಲಿ ತುಂಬಿಸಿಕೊಂಡು, ಟ್ರೇನಲ್ಲಿಟ್ಟು ತಂದು ಬಿಟ್ಟ. ಇಸ್ಟು ದೊಡ್ಡ ಆಟಗಾರಾನಾದರು, ಸಭ್ಯತೆ, ಅತಿಥಿ ಉಪಚಾರ ಮಾಡುವ ಸಂಸ್ಕ್ರತಿ ಇದೆಯೆಂದು ತಿಳಿದು ಅಭಿಮಾನ ಉಂಟಾಯಿತು. ನನ್ನ ಹೆಂಡತಿಗೆ ಮಜುಗರವಾಯಿತು.

ನಂತರ ನಾನು ಸಂದರ್ಶನಕ್ಕೆ ಮುಂದಾದೆ.


ನಾನು --: ನೀವು ಅಂತರಾಷ್ಠ್ರೀಯ ವಾಲಿಬಾಲ್ ಆಟಗಾರನಾಗಿ ಸಾಧನೆ ಮಾಡಿ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ, ನನ್ನ ವಯಕ್ತಿಕ, ನನ್ನ ಕುಟುಂಬದ ಪರವಾಗಿ, ಹಾಗೂ ಕೆನರಾ ನ್ಯೂಸ್ ಡಾಟ್.ಕಾಂ. ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಅನೂಪ್-: ಥೆಂಕ್ಸ್ (ಬಹಳ ಸಂತೋಷ ಪಟ್ಟು ನಗೆ ಬೀರಿದ)

ನಾನು--: ನಿಮಗೆ ವಾಲಿಬಾಲ್ ಆಟದಲ್ಲಿ ಆಸಕ್ತಿ ಹುಟ್ಟಿದ್ದು ಹೇಗೆ?

ಅನೂಪ್ -:ನಾನು ಕಲಿತ ಕುಂದಾಪುರದ ಸಂತ ಮೇರಿಸ್ ಹೈಸ್ಕೂಲುನಲ್ಲಿರುವಾಗ ವಾಲಿಬಾಲ್ ಅಡುತಿದ್ದೆ, ಆವಾಗ ಆವಾಗಿನ ದೈಹಿಕ ಶಿಕ್ಷಕರಾದ ಕುಶಲ್ ಶೆಟ್ಟಿ ನನಗೆ ಪೆÇ್ರೀತ್ಸಾಹಿಸಿದರು.

ನಾನು--: ನಿಮಗೆ ಈ ವಾಲಿಬಾಲ್ ಆಟ ಆಡಲು ಪ್ರೇರಣೆ ನೀಡಿದವರ್ಯಾರು ?

ಅನೂಪ್-: ನನಗೆ ಮೊದಲಿನಿಂದಲೂ, ಅಥ್ಲೆಟಿಕ್ಸ್‍ನಲ್ಲಿ ಬಹಳ ಆಸಕ್ತಿ ಇತ್ತು, ನಾನು ಹೈಸ್ಕೂಲ್ ಪರವಾಗಿ ಅಥ್ಲೆಟಿಕ್ಸ್‍ನಲ್ಲಿ ಭಾಗಿಯಾಗಿದ್ದೆ. ಲಾಂಗ್ ಜಂಪ್ ಮತ್ತು ಹೈ ಜಂಪ ನನಗೆ ಬಹಳ ಇಷ್ಟವಾಗಿತ್ತು. ಹಾಗೇ ವಾಲಿಬಾಲ್ ಕೂಡ ಆಡುತಿದ್ದೆ.

ನಾನು--: ನಿಮಗೆ ಈ ವಾಲಿಬಾಲ್ ಆಟದಲ್ಲಿ, ಕಾಲೇಜಿಗೆ ಸೇರಿಕೊಂಡ ಮೇಲೆ ಪೆÇ್ರೀತ್ಸಾಹ ಜಾಸ್ತಿ ಲಭಿಸಿತೆ ಹೇಗೆ?

ಅನೂಪ್-: ಹೈಸ್ಕೂಲು ಮುಗಿದ ನಂತರ ನಾನು ಉರಿನಲ್ಲೆ ಕಾಲೇಜು ಕಲಿಯ ಬೇಕೆಂಬ ಯೋಜನೆ ಇತ್ತು. ಆದರೆ ಆ ಸಮಯದಲ್ಲಿ ನನ್ನ ಎತ್ತರ ನೋಡಿ, ನನ್ನ ತಂದೆಯ ಮಿತ್ರರೊಬ್ಬರು, ಒಂದು ಸಲಹೆ ನೀಡಿದರು. ನಿನಗೆ ಉತ್ತಮವಾದ ಎತ್ತರವಿದೆ, ಬೆಂಗಳೂರಿನಲ್ಲಿ ಆಟಕ್ಕೆ ಆದ್ಯತೆ ನೀಡುವ ಎರಡು ಕಾಲೇಜುಗಳಿವೆ, ಆಲ್ಲಿ ನಿನಗೆ ಫ್ರಿ ಸೀಟು ಕೂಡ ಸಿಗುತ್ತದೆ, ಆದರೆ ನೀನು ‘ರಾಜ್ಯದ ಯುವ ಜನ ಕ್ರೀಡಾ ಮತ್ತು ಸಬಲೀಕರಣ ಇಲಾಖಾ ವತಿಯಿಂದ ನೆಡೆಯುವ ಅಹರ್ತಾ ಪರೀಕ್ಷೆಯಲ್ಲಿ ಉತೀರ್ಣನಾಗಬೇಕು. ಎಂದು ಅವರು ತಿಳಿಸಿದರು. ಆ ಪ್ರಕಾರ ಕುಂದಾಪುರದಲ್ಲಿ ನೆಡೆದ ಯುವ ಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯಿಂದ ನೆಡೆದ ಅಹರ್ತಾ ಪರೀಕ್ಷೆಯಲ್ಲಿ ನಾನು ಭಾಗವಹಿಸಿ, ಉತಿರ್ಣಾನಾದೆ (ಮೊದಲಿಗನಾಗಿ ಆಯ್ಕೆಯಾದ ) ಅನೂಪರ ತಂದೆ ಬಹಳ ಹೆಮ್ಮೆಯಿಂದ ಧ್ವನಿ ಗೂಡಿಸಿದರು.

ನಾನು-- : ಅಲ್ಲಿಂದ ಮುಂದೆ ಎನಾಯ್ತು.

ಅನೂಪ್-: ಅಲ್ಲಿಂದ ಯುವ ಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆ ಆಟಕ್ಕೆ ಪೆÇ್ರೀತ್ಸಾಹ ನೀಡುವ “ಅಲ್ ಅಮೀನ್” ಕಾಲೇಜಿನ ಹಾಸ್ಟೆಲ್‍ನಲ್ಲಿ ವಸತಿ ಸೌಕರ್ಯ ನೀಡಿ 20 ದಿನಗಳ ತರಬೇತಿ ನೀಡಿದ, ಬಳಿಕ ಪುನಹ ಅಹರ್ತಾ ಪರೀಕ್ಷೆ ಎದುರಿಸ ಬೇಕಾಯ್ತು, ಈ ಅಹರ್ತಾಪರೀಕ್ಷೆ ಭಾರಿ ಕಠಿಣವಿತ್ತು. ಅಲ್ಲಿ 600 ಅಭ್ಯರ್ಥಿಗಳ ಪಯ್ಕಿ ಕೆಲವೇ ಕೆಲವು ಅಭ್ಯರ್ಥಿಗಳ ಆಯ್ಕೆ ನೆಡೆಯಿತು, ಅದರಲ್ಲಿ ನಾನೊಬ್ಬ. ಇಲ್ಲಿ ಅರ್ಹತೆಯಲ್ಲಿ ಉತಿರ್ಣಾನಾದ ಮೇಲೆ ನನಗೆ ‘ಅಲ್ ಅಮೀನ್’ ಕಾಲೇಜಿನಲ್ಲಿ ಫ್ರೀ ಸೀಟು ಮತ್ತು ವಸತಿ ಸೌಕರ್ಯತೆ ಸಿಕ್ಕಿತು. ನಂತರ ವಿಧ್ಯಾಭಾಸದ ಜೊತೆಗೆ ನಮ್ಮ ವಸತಿ ಸೌಕರ್ಯದಿಂದ ಸಮೀಪದಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಯಿತು. ಬೆಳಿಗ್ಗೆ ಮತ್ತು ಸಾಯಂಕಾಲ ಅಂತ ದಿನವೂ ಸುಮಾರು 6 – 8 ಗಂಟೆಗಳಸ್ಟು ಅಭ್ಯಾಸ. ನಾನು ಮೊದಲ ವರ್ಷದಿಂದಲೆ, ಅಂದರೆ 16 ವರ್ಷದವನಿರುವಾಗಲೇ, ವಾಲಿಬಾಲ್ ಇಂಡಿಯಾ ಜೂನಿಯರ್ ಟೀಮ್‍ನ ಸದಸ್ಯನ ಸ್ಥಾನವನ್ನು ಪಡೆದುಕೊಂಡೆ ಮಾತ್ರವಲ್ಲಾ ಅದೇ ವರ್ಷ ವಾಲಿಬಾಲ್ ಟೀಮ್ ಇಂಡಿಯಾದ ಆಟಗಾರನಾಗಿ ಅರ್ಹತೆ ಪಡೆದುಕೊಂಡೆ (ಇವರಿಕ್ಕಿಂತ ಹಿರಿಯರು ಇದ್ದಾವಗಲೂ ಅನೂಪರಿಗೆ ಸ್ಥಾನ ಸಿಕ್ಕಿದ್ದು ಅವರ ಕೌಶ್ಯಕ್ಕೆ ಸಾಕ್ಷಿ)

ನಾನು --: ನಿಮ್ಮ ವಾಲಿಬಾಲ್ ಆಟದ ಮೊದಲ ಗುರು ಯಾರು.

ಅನೂಪ್-: ಹಸ್ಕೂಲು ದೈಹಿಕ ಶಿಕ್ಷಕ ಕುಶಲ ಶೆಟ್ಟಿಯವರು.

ನಾನು--: ಯುವ ಜನ ಕ್ರೀಡಾ ಮತ್ತು ಸಬಲೀಕರಣ ಇಲಾಖಾ ವತಿಯಿಂದ ಆಯ್ಕೆಯಾದ ನಂತರ ನಿಮಗೆ ತರಬೇತಿ ನೀಡಿದ ನೀಡಿದ ಗುರುಗಾಳ್ಯಾರು?

ಅನೂಪ್-: ನುರಿತ ತರಬೇತುದಾರರಾದ ಕ್ರಷ್ಣೆ ಗೌಡರು.

ನಾನು--: ಈ ವರೆಗೆ ದೇಶ ಮಟ್ಟದಲ್ಲಿ ಮತ್ತು ಅಂತರಾಷ್ಠ್ರಿಯ ಯಾವ್ಯಾವ ಪಂದ್ಯಗಳಲ್ಲಿ ನೀವು ಆಡಿದ್ದಿರಿ ?

ಅನೂಪ್- ನಾನೊಬ್ಬ ವಾಲಿಬಾಲ್ ಆಟದಲ್ಲಿ ಆಲ್ ರೌಂಡರ್ ಆಟಗಾರನಾಗಿ ಈ ಪಂದ್ಯಗಳಲ್ಲಿ ಆಡಿದ್ದೆನೆ. ಮುಖ್ಯ ಪಂದ್ಯಗಳ ವಿವರ ಹೀಗಿದೆ

ASIAN YOUTH BOYSCHAMPIONSHIP HELD IRAN (THERAN) : 13/05/2010 TO 21/05/2010
• TRAING MATCHES AT KELIBIA (TUNISIA) : 27 TO 30 JULY 2010
• Junior Asian Volley Ball Championship nhe;ld in Iran (URIMIYA )27 Sept to 5th oct .the team secured 4th position and qualified for world junior volleyball championship to be held at turkey during the month of August 2013.
• India in the Invitation Volleyball Tournament held at Tunisia from August 17th to 21st 2012.
• Played Maledives club matches 2010 to 2012 .
• Played Dubai club Mathes 2011.
• Played 23rd Asian championship held in mayanmar may 12 to 20th 2015.
• Played club mathes in Marutius 2014.
• Played senior India in south africa june 23rd to july 1st
Played : Nationals .
• 57 Senior Nationals Held in Vishakhapatnam : 19/12/2008 to 28/12/2008
• 58 Senior Nationals Held in Gwalior : 28/12/20009 to 06/01/2010
• 59 Senior Nationals Held in Chennai : 12/12/2010 to19/12/2010
• 60 Senior Nationals Held in Raipur Chatisgada: 04/01/2012 to 10/01/2012
• National Games 2011 Held in Jarkand

ನಾನು--: ನೀವು ಯಾವ್ಯಾವ ಪಂಗಡಗಳಲ್ಲಿ ಗುರುತಿಸಿ ಕೊಂಡಿರುವಿರಿ.

ಅನೂಪ್-: ನಾನೂ ನಮ್ಮ ಉರಿನ ಕುಂದಾಪುರ ಅಶೋಕ್ ಫ್ರೆಂಡ್ಸನ ಸದಸ್ಯ, ಇಲ್ಲಿ ನನಗೆ ಹೆಚ್ಚು ಪೆÇ್ರೀತ್ಸಾಹ ಸಿಕ್ಕಿದ್ದು. ಈ ಟೀಮಿನ ಪಂದ್ಯದಲ್ಲಿ ಆಡುತ್ತೇನೆ (ಉರಿನ ಟೀಮ್ ಆದ್ದರಿಂದ ಹೆಮ್ಮೆಯಿಂದ ಮೊದಲು ಈ ಟೀಮ್‍ನ ಹೆಸರು ಹೀಳಿಕೊಳ್ಳುತಾನೆ) ಕೇರಳದ ಕ್ಲಬ್, ಮಂಗಳೂರಿನ ಕ್ಲಬ್ ಮತ್ತು ರಾಜ್ಯದ ಹೊರಗಿನ ಕ್ಲಬ್‍ಗಳ ಪರವಾಗಿಯೂ ಆಡುತ್ತೇನೆ.

ನಾನು--:ನಿಮ್ಮ ಮನಸಲ್ಲಿ ಅಚ್ಚಳಿಯದೆ ಅವಿಸ್ಮರಣೀಯ ಇರುವಂತಹ ಪಂದ್ಯಗಳ್ಯಾವುವು ?

ಅನೂಪ್-: 2010 ರಲ್ಲಿ ನೆಡೆದ ಇರಾನ್ ಮತ್ತು ಭಾರತದ ನಡುವೆ ನೆಡೆದ ಪಂದ್ಯ, 2012 ರಲ್ಲಿ ಭಾರತ ಮತ್ತು ಕೊರಿಯಾ ನಡುವೆ ನೆಡೆದ ಪಂದ್ಯ, 2013 ರಲ್ಲಿ ಇಂಡಿಯಾ ಮತ್ತು ಇರಾನ್ ನೆಡೆದ ಪಂದ್ಯ.

ನಾನು-- : ನಿಮಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಸವಾಗಿ ಗುರುರಿಸಿಕೊಂಡ ಪಂದ್ಯ ಇದೆಯಾ?

ಅನೂಪ್-: ಹೌದು , 2013 ರಲ್ಲಿ ನೆಡೆದ ಜೂನಿಯರ್ ವಾಲಿಬಾಲ್ ಏಷ್ಯನ್ ಚಾಂಪಿಯೆನ್ ಶಿಪನಲ್ಲಿ ಇಂಡಿಯಾ ಟೀಮ್‍ನಲ್ಲಿ ಭಾಗವಹಿಸಿ, ಇಂಡಿಯಾ ನಾಲ್ಕನೇ ಸ್ಥಾನ ಪಡೆದುಕೊಂಡು, ಜೂನಿಯರ್ ವರ್ಲ್ಡ್ ಕಪ್‍ಗೆ ಅಹರ್ತೆ ಗಳಿಸಿಕೊಂಡಿದ್ದು, ಮಾತ್ರವಲ್ಲ ನಾನು ಏಷ್ಯಾದ ಉತ್ತಮ ಆಟಗಾನಾಗಿ ಮೂಡಿ ಬಂದಿದ್ದು ಅವಿಸ್ಮರಣೀಯ,

ನಾನು--: ನಿಮಗೆ ಯಾವ್ಯಾವ ಪ್ರಶಸ್ತಿಗಳು ದೊರಕಿವೆ.

ಅನೂಪ್-: ಬೇಶ್ಟ್ ಸ್ಕೋರ್ ಇನ್ 8ತ್ ಪ್ಲೆಸ್ – ಯುತ್ ಚಾಂಪಿಯೆನ್‍ಶಿಪ್ ಇರಾನ್-ಥೆಹರಾನ್: (2010-2011)

ಕರ್ನಾಟಕ ಒಲಿಪಿಂಕ್ ಅಸೋಸಿಯೆನ್ ಅವಾರ್ಡ್ (22-11-2012)
ಕೆಂಪೆ ಗೌಡ ಅವಾರ್ಡ್ (2015)
ಏಕಲವ್ಯ ಅವಾರ್ಡ್ (2015-2016)

ನಾನು --: ತಂದೆ ತಾಯಿಯ ಪ್ರೇರಣೆ ಹೇಗೆ ?

ಅನೂಪ್-: ತುಂಬ ಒಳ್ಳೆಯ ಪ್ರೇರಣೆ ಕೊಟ್ಟಿದ್ದಾರೆ, ತಂಗಿಯ ಮತ್ತು ಕುಟುಂಬದ ಪ್ರೇರಣೆ ಚೆನ್ನಾಗಿ ದೊರಕಿದೆ.

ಅಂಟೋನಿ ಡಿಕೋಸ್ತಾ -: ನಾನು ಕೂಡಾ ಕ್ರೀಡಾ ಪಟು, ನಾನು ಜಾವೆಲಿಂಗ್ ಮತ್ತು ಡಿಸ್ಕಸ್ ಜಿಲ್ಲಾ ಮಟ್ಟದಲ್ಲಿ ಆಡಿದ್ದೆನೆ, ಕೆ.ಇ.ಬಿ. ವತಿಯಿಂದ ನೆಡೆಯುವ ಕ್ರೀಡೋತ್ಸವದಲ್ಲಿ ಬಹಳ ಸಲ ಭಾಗವಹಿಸಿ, ಬಹುಮಾನಗಳನ್ನು ಪಡೆದುಕೊಂಡಿದ್ದೆನೆ, ನನ್ನ ಕುಟುಂಬವೂ, ಕ್ರೀಡೆಯಲ್ಲಿ ಮುಂದು, ನನ್ನ ಕುಟುಂಬದ ಕ್ರೀಡಾ ರಕ್ತಗುಣ ಅವನಿಗೂ ಬಂದಿದೆ, ನನ್ನ ಪತ್ನಿ ಮಗಳೂ ಕೂಡಾ ಕ್ರೀಡಾಳುಗಳು.

ನಾನು--: ಅನೂಪ್ ನಿಮ್ಮ ಯಶಸ್ಸಿನ ಗುಟ್ಟು ಹೇಳ್ತಿರಾ ?

ಅನೂಪ್-: ದೇವರ ಮೇಲೆ ಅಪಾರ ನಂಬಿಕೆ, ಅವಿರತ ಶ್ರಮ, ದಿನಾಲು ಹಲವು ಗಂಟೆಗಳಸ್ಟು ಅಭ್ಯಾಸ ಮತ್ತು ಆತ್ಮ ವಿಶ್ವಾಸ.

ನಾನು--: ನಿಮಗೆ ಇನ್‍ಕಂ ಟ್ಯಾಕ್ಸ್ ಸರಕಾರಿ ಡಿಪಾರ್ಟ್‍ಮೆಂಟ್‍ನಲ್ಲಿ ಉದ್ಯೋಗ ದೊರಕಿದೆಯೆಂದು ಕೇಳಿದ್ದೆನೆ, ನಿಮಗೆ ಕ್ರೀಡಾ ಖೋಟಾದಿಂದ ಉದ್ಯೋಗ ಸಿಕ್ಕಿದ್ದೊ ಹೇಗೆ?

ಅನೂಪ್-: ನಾನು ಯುವ ಜನ ಕ್ರೀಡಾ ಮತ್ತು ಸಬಲೀಕರಣ ಇಲಾಖಾ ವತಿಯಿಂದ ಅಲ್ ಅಮೀನ್ ಕಾಲೇಜಿನಲ್ಲಿ ಫ್ರೀ ಸೀಟು ಪಡೆದು ಕಲಿಯುವಾಗ, ಅಲ್ಲಿ ನಮಗೆ ಪಂದ್ಯಗಳಿಗೆ ತೆರಳ ಬೇಕಾಗುತಿತ್ತು, ಆವಾಗೆಲ್ಲಾ ನಮಗೆ ಕಾಲೇಜಿನ ಹಾಜರಿಗಳು ಸಿಗುತಿದ್ದವು, ಅದು ಕ್ರೀಡೆಗೆ ಸಹಕಾರ ನೀಡುವ ಕಾಲೇಜಾಗಿತ್ತು ಅಂತ ಮೊದಲೇ ಹೇಳಿದ್ದೆನೆ, ಅಲ್ಲಿ ಪದವಿ ಪಡೆದಿದ್ದರಿಂದ ಮತ್ತು ಕ್ರೀಡಾ ಖೋಟಾದಿಂದಾಗಿ ನನಗೆ ಸರಕಾರಿ ನೌಕರಿ ದೊರೆಯಿತು.

ನಾನು--: ನಿಮ್ಮ ಮುಂದಿನ ಗುರಿ ಏನು?

ಅನೂಪ್-: ಇನ್ನೂ 5 ವರ್ಷಗಳ ತನಕ ಇಂಡಿಯಾದ ಸೀನಿಯರ್ ಆಟಗಾರನಾಗಿ ಆಡ ಬೇಕೆಂಬ ಇಚ್ಚೆ. ಮುಂದೆ ಪೆÇ್ರ ಕಬಡಿ ಲೀಗ್‍ಗಳು ನೆಡೆಯುವಂತೆ, ಪೆÇ್ರ ವಾಲಿಬಾಲ್ ಪಂದ್ಯಾಟಗಳು ನೆಡೆಯಲಿವೆ, ಹಾಗೆ ಮುಂದಿನ ದಿನಗಳಲ್ಲಿ ವಾಲಿಬಾಲ್ ಆಟ ಜನಪ್ರೀಯವಾಗುತ್ತದೆ. ಅಲ್ಲಿ ಆಡಿ ಹೆಚ್ಚಿನ ಸಾಧನೆ ಮಾಡ ಬೇಕೆಂದಿದ್ದೆನೆ (ಅಸ್ಟರಲ್ಲಿ ಬಹಳ ತುರ್ತಿನ ಕೆಲಸಕ್ಕೆ ಹೊರಗೆಹೋದ ಅನೂಪನ ತಾಯಿ ಮತ್ತು ತಂಗಿ ನಮ್ಮ ಜೊತೆ ಸೇರಿಕೊಂಡರು)

ನಾನು--: ನಮ್ಮ ಭಾರತ ದೇಶ ವಿಜ್ಞಾನ, ವೈದ್ಯಕೀಯ, ಸೊಪ್ಟ್‍ವೇರ್ ಇನ್ನಿತರ ವಿಷಯಗಳಲ್ಲಿ ಭಾರಿ ಮುಂದೆ, ಆದರೆ ಕ್ರೀಡಾ ವಿಷಯದಲ್ಲಿ ಭಾರಿ ಹಿಂದೆ, ನನ್ನ ಅಂದಾಜಿನ ಪ್ರಕಾರ ಎಳೆವೆಯಲ್ಲಿರುವಾಗಲೇ, ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸದೆ ಇರುವುದು ಒಂದು ಕಾರಣ ಎಂದು, ಮತ್ತೊಂದು ಆಯಾಯ ಕ್ರೀಡೆಯ ನೀತಿ ನಿಯಮ, ಆಟಗಾರರಿಗೆ ಲಾಭವಾಗುಂತ ಪ್ರಾಥಮಿಕ ಗುಟ್ಟು, ಕ್ರಮ, ಪಟ್ಟುಗಳನ್ನು ಹೇಳದೆ ಇರುವುದು ಕಾರಣ ಎಂದು ನನ್ನ ಅನ್ನಿಸಿಕೆ, ನಿಮ್ಮ ಅನ್ನಿಸಿಕೆ ಏನು ?

ಅನೂಪ್--: ಹೌದೆಂದು ಭಾವಿಸುತ್ತೇನೆ, ಆದರೆ ನಮ್ಮಂತ್ತೆ ಅಹರ್ತಾ ಪರೀಕ್ಷೆಯಲ್ಲಿ ಉತಿರ್ಣಾದವರಿಗೆ, ಹಚ್ಚಿನ ನುರಿತ ತರಬೇತಿ ಪಡೆಂದಂತಹ ಕೋಚ್‍ಗಳಿಂದ ನಮಗೆ ತರಬೇತಿ ದೊರಕುತ್ತದೆ.

ನಾನು--: ಹೈಸ್ಕೂಲು ಮಟ್ಟದಲ್ಲಿ ಒಬ್ಬ ಒಳ್ಳೆಯ ಕ್ರೀಡಾ ಪಟು ಆಗುವನ ಅಥವ ಆಗುವಳ ಪ್ರತಿಭೆ ಪೆÇೀಷಿಸದಿದ್ದರೆ, ಆ ಪ್ರತಿಭೆ ಅಲ್ಲಿಯೆ ಕಮರಿ ಹೋಗುವುದಲ್ಲವೆ?

ಅಂಟೋನಿ ಡಿಕೋಸ್ತಾ-: ಹೌದು ನಮಗೆ ಅಂತಾ ಅನುಭವ ಆಗಿದೆ, ನಾನು ನನ್ನ ಮಕ್ಕಳಿಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ಕರೆದುಕೊಂಡು ಬಂದು, ಅವರ ಕ್ರೀಡೆಗೆ ಪೆÇ್ರೀತ್ಸಾಹ ನೀಡುತಿದ್ದೆ.

ನಾನು--: ಹೌದು, ನಾನೂ ಒಬ್ಬ ಕ್ರೀಡಾ ಪಟು, ನಾನು ಪತ್ರಕರ್ತನಾಗಿ ಇತ್ತಿಚೀನ ಕ್ರಿಡೋತ್ಸವದ ವರದಿಗೆ ತೆರಳಿದಾಗ, ಹೈ ಜಂಪ್, ಲಾಂಗ್ ಜಂಪ್ ಹಾರುವ ಪ್ರಾರ್ಥಮಿಕ ಪಟ್ಟುಗಳನ್ನೆ ಗೊತ್ತಿಲದ್ದನ್ನು ನನ್ನ ಗಮನಕ್ಕೆ ಬಂದಿದೆ (ನಿರಾಶೆಯ ಮೌನ)

ನಾನು--: ಇಂದಿನ ಮಕ್ಕಳಿಗೆ, ಆಟ, ಕ್ರೀಡೆಗಳಲ್ಲಿ ಮುಂದೆ ಬರಲು, ನಿಮ್ಮ ಸಂದೇಶವೇನು

ಅನೂಪ್-: ಮೊದಲು ಆತ್ಮ ವಿಶ್ವಾಸ, ಇಚ್ಚಾ ಶಕ್ತಿಯಿಂದ ಮುನ್ನಗಬೇಕು, ನಾನು ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದಾಗ ನನ್ನನ್ನೂ ಕೂಡ ಹಿರಿಯ ಆಟಗಾರರು ಚೆನ್ನಾಗಿ ಆಡುವುದಿಲ್ಲವೆಂದು ಪಂದ್ಯಗಳಿಂದ ಹೊರಗಿಡುತಿದ್ದರು, ನಾನು ಸಿಕ್ಕಿದ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು, ಒಳ್ಳೆಯ ಆಟಗಾರನಾಗಿ ಮೂಡಿಬಂದೆ. ಈಗ ಅದೇ ಹಿರಿಯ ಆಟಗಾರರು ನನ್ನ ಬೆನ್ನು ತಟ್ಟಿ ಚೆನ್ನಾಗಿ ಆಡುತ್ತಿಯ ಎಂದು ಇನ್ನಸ್ಟು ಹುರಿದುಂಬಿಸುತ್ತಾರೆ, ಹಾಗಾಗಿ ಯಾವತ್ತೂ ನಿರಾಶೆ, ಹತಾಶೆ ಎಂದಿಗೂ ಸಲ್ಲದು, ಸಮರ್ಪಣಾ ಮನೋಭಾವ ಆಡಿ ಆವಾಗ ಯಶಸ್ಸು ನಿಮ್ಮದಾಗುತ್ತದೆ.

ನಾವು ಅನೂಪನಿಗೆ ಇನ್ನೂ ಹೆಚ್ಚಿನದು ಸಾಧಿಸಿ, ಸಾಧಕನಾಗಿ ಕೀರ್ತಿವಂತನಾಗಿ ಹಾರೈಸಿ ನಿರ್ಗಮಿಸಿದೇವು. ನಮ್ಮ ಮಿತ್ರ ನಮ್ಮನ್ನು ಬೀಳ್ಕೊಡಲು ಅಂಗಳಕ್ಕೆ ಧಾವಿಸಿದರು.

Best score in 8th asian youth championship IRAN- THERAN :( 2010-2011) 

Karnataka Olympic association award : (22/11/2012).
Kempegowda award (2015)
Yekalavya award (2015-2016)

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here